ಜೈಪುರ್(ಜ.15): ದೀಪಿಕಾ ಪಡುಕೋಣೆ ಅಭಿನಯದ ಬಹು ನಿರೀಕ್ಷಿತ ಪದ್ಮಾವತಿ ಚತ್ರಕ್ಕೆ ಮತ್ತೆ ಕಂಟಕ ಎದುರಾಗುವ ಸಾಧ್ಯತೆ ಇದೆ. ಒಂದೊಮ್ಮೆ ಸಿನಿಮಾ ಬಿಡುಗಡೆಯಾದರೆ ಬೆಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಜೈಪುರದ ಚಿತ್ತೋರ್ ಗಢದ ಕ್ಷತ್ರಿಯ ಮಹಿಳೆಯರು ಎಚ್ಚರಿಕೆ ನೀಡಿದ್ದಾರೆ.
ಚಿತ್ತೋರ್ ಗಢದಲ್ಲಿ ನಡೆದ ಸರ್ವ ಸಮಾಜದ ಸಭೆಯಲ್ಲಿ ಪದ್ಮಾವತಿ ಚಿತ್ರ ಬಿಡುಗಡೆ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. 500 ಮಂದಿ ಭಾಗವಹಿಸಿದ್ದ ಈ ಸಭೆಯಲ್ಲಿ ಸಮಾಜದ ದೊಡ್ಡಮನೆತನಗಳಿಗೆ ಸೇರಿದ 100 ಮಂದಿ ಮಹಿಳೆಯರಿದ್ದರು.
ಈ ಬಗ್ಗೆ ಸುದ್ದಿ ಸಂಸ್ಥೆ ಜೊತೆ ಮಾತನಾಡಿರುವ ರಜಪೂತ್ ಕಾರ್ಣಿ ಸೇನಾ ವಕ್ತಾರ ವೀರೇಂದ್ರ ಸಿಂಗ್. ಪದ್ಮಾವತಿ ಬಿಡುಗಡೆ ಖಂಡಿಸಿ ಜನವರಿ 17ರಂದು ಚಿತ್ತೂರ್ ಗಢದಲ್ಲಿ ಹೆದ್ದಾರಿಗಳು ಮತ್ತು ರೈಲು ಸಂಚಾರ ಬಂದ್ ಮಾಡುವುದಾಗಿ ಘೋಷಿಸಿದ್ದಾರೆ.
ಕೇಂದ್ರ ಸೆನ್ಸಾರ್ ಮಂಡಳಿಯಿಂದ ಗ್ರೀನ್ ಸಿಗ್ನಲ್ ಪಡೆದಿರುವ ಪದ್ಮಾವತಿ ಚಿತ್ರದ ಹೆಸರನ್ನ ಪದ್ಮಾವತ್ ಎಂದು ಬದಲಿಸಿ ಜನವರಿ 25ಕ್ಕೆ ದೇಶಾದ್ಯಂತ ಬಿಡುಗಡೆ ಮಾಡಲು ನಡೆದಿದೆ. ಇವತ್ತು ರಜಪೂತ್ ಸೇನಾ ನಿಯೋಗ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನ ಭೇಟಿ ಮಾಡಲಿದ್ದು, ಸಿನಿಮಾ ಬಿಡುಗಡೆ ಮಾಡದಂತೆ ಮನವಿ ಸಲ್ಲಿಸಲಿದೆ. ಸಂಘದ ಅಧ್ಯಕ್ಷ ವೀರೇಂದ್ರ ಸಿಂಗ್ ಹೇಳುವ ಪ್ರಕಾರ, ನಾಳೆ ಪ್ರಧಾನಮಂತ್ರಿ ನರೇಂದ್ರಮೋದಿಯವರನ್ನೂ ಭೇಟಿ ಮಾಡುವ ಸಾಧ್ಯತೆ ಇದೆ.
ಎಲ್ಲ ಮನವಿಗಳನ್ನೂ ತಿರಸ್ಕರಿಸಿ ಪದ್ಮಾವತ್ ಚಿತ್ರ ಬಿಡುಗಡೆಗೆ ಮುಂದಾಗಿದ್ದೇ ಆದಲ್ಲಿ ಚಿತ್ರ ಬಿಡುಗಡೆಗೆ ಒಂದು ದಿನ ಮುಂಚೆ ಜ.24ರಂದು ಬೆಂಕಿ ಹಂಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರಜಪೂತ್ ಮಹಿಳೆಯರು ಎಚ್ಚರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ