• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Bollywood Actors: ನಟ ಹೃತಿಕ್, ಶಾರುಖ್ ಮತ್ತು ರಣಬೀರ್ ಅವರ ಕೂದಲಿನ ಬಗ್ಗೆ ಟ್ವೀಟ್:‌ ಕೆಆರ್‌ಕೆ ಹೇಳಿದ್ದೇನು ಗೊತ್ತೇ?

Bollywood Actors: ನಟ ಹೃತಿಕ್, ಶಾರುಖ್ ಮತ್ತು ರಣಬೀರ್ ಅವರ ಕೂದಲಿನ ಬಗ್ಗೆ ಟ್ವೀಟ್:‌ ಕೆಆರ್‌ಕೆ ಹೇಳಿದ್ದೇನು ಗೊತ್ತೇ?

ಕೆಆರ್​ಕೆ, ಹೃತಿಕ್ ರೋಷನ್ ಮತ್ತು ರಣಬೀರ್ ಕಪೂರ್

ಕೆಆರ್​ಕೆ, ಹೃತಿಕ್ ರೋಷನ್ ಮತ್ತು ರಣಬೀರ್ ಕಪೂರ್

ಬಾಲಿವುಡ್​ ಚಿತ್ರರಂಗದ ನಟ, ನಿರ್ಮಾಪಕ ಮತ್ತು ಬರಹಗಾರರಾದ ಕಮಲ್ ಆರ್ ಖಾನ್ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಇದೀಗ ತನ್ನ ಟ್ವೀಟ್‌ನಲ್ಲಿ, ಹೃತಿಕ್ ರೋಷನ್ ಮತ್ತು ರಣಬೀರ್ ಕಪೂರ್ ಹೇರ್ ಪ್ಯಾಚ್‌ಗಳನ್ನು ಬಳಸುತ್ತಾರೆ ಎಂದು ಹೇಳಿದ್ದಾರೆ.

  • Share this:

ಹಿಂದಿ ಮತ್ತು ಭೋಜ್‌ಪುರಿ ಚಿತ್ರರಂಗದ ನಟ, ನಿರ್ಮಾಪಕ ಮತ್ತು ಬರಹಗಾರರಾದ ಕಮಲ್ ಆರ್ ಖಾನ್ (Kamaal R Khan) ಅಲಿಯಾಸ್ ಕೆಆರ್‌ಕೆ (KRK) ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಈ ನಟ ಚಲನಚಿತ್ರಗಳ (Cinema) ವಿಮರ್ಶೆ ಮಾಡುವುದಲ್ಲದೆ, ದೊಡ್ಡ ದೊಡ್ಡ ನಟರ ಬಗ್ಗೆ ಯಾರಿಗೂ ಗೊತ್ತಿರದ ಸುದ್ದಿಗಳನ್ನು ತಿಳಿಸುವುದು ಮತ್ತು ಕೆಲವೊಮ್ಮೆ ಈ ರೀತಿಯಾಗಿ ದೊಡ್ಡವರ ತಂಟೆಗೆ ಹೋಗಿದ್ದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಸಖತ್ತಾಗಿ ಟ್ರೋಲ್ ಆಗಿದ್ದನ್ನು ನಾವು ಈ ಹಿಂದೆ ನೋಡಿದ್ದೆವು. ಇತ್ತೀಚೆಗೆ, ಅಲ್ಲು ಅರ್ಜುನ್ (Allu Arjun) ಅವರ ಪುಷ್ಪ 2 ಚಿತ್ರದ ತಯಾರಕರು ನಟನ ಮೊದಲ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ಆ ಪೋಸ್ಟರ್ (Pushpa Poster) ನೋಡಿ ಅನೇಕರು ಚಿತ್ರ ನೋಡಲು ಕಾತುರತೆಯಿಂದ ಕಾಯುತ್ತಿದ್ದಾರೆ.


ಆದರೆ ಕೆಆರ್‌ಕೆ ಈ ಚಿತ್ರದ ಫಸ್ಟ್​​ಲುಕ್​​ನಿಂದ ಅಷ್ಟೊಂದು ಪ್ರಭಾವಿತರಾಗಿಲ್ಲ. ಈ ಪೋಸ್ಟರ್ ಬಗ್ಗೆ ಟ್ವೀಟ್ ಮಾಡಿರುವ ಕೆಆರ್‌ಕೆ “ಈ ಪೋಸ್ಟರ್ ನೋಡಿ ನಾನು ಕನ್ಫ್ಯೂಸ್ ಅಗಿದ್ದೇನೆ. ಇದು ಲಕ್ಷ್ಮಿ 2 ಅಥವಾ ಕಾಂಚನಾ ಥರ ಕಾಣ್ತಿದೆ, ಇದು ಪುಷ್ಪಾ ಸೀಕ್ವೆಲ್ ಥರ ಕಾಣ್ತಿಲ್ಲ” ಎಂದು ಬರೆದಿದ್ದರು. ಇದಕ್ಕೆ ನೆಟ್ಟಿಗರು ಕೆಆರ್‌ಕೆ ಅವರನ್ನು ಸಖತ್ತಾಗಿ ಟ್ರೋಲ್ ಮಾಡಿದ್ದರು.


ಬಾಲಿವುಡ್ ನಟರ ಕೂದಲಿನ ಬಗ್ಗೆ ಕಾಮೆಂಟ್ ಮಾಡಿದ ಕೆಆರ್‌ಕೆ


ಕೆಆರ್‌ಕೆ ಯಾವುದೇ ಕಾರಣವಿಲ್ಲದೆ ಬಾಲಿವುಡ್ ಸೆಲೆಬ್ರಿಟಿಗಳನ್ನು ಅವಮಾನಿಸುವಲ್ಲಿ ತುಂಬಾನೇ ಎತ್ತಿದ ಕೈ. ಇದೇ ಕಾರಣಕ್ಕಾಗಿ, ಅವರು ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಫಾಲೋವರ್ ಗಳನ್ನು ಸಹ ಹೊಂದಿದ್ದಾರೆ. ಬಾಲಿವುಡ್ ಅನ್ನು ಇಷ್ಟಪಡದವರಿಗೆ ಇವರ ಹೇಳಿಕೆಗಳು ಒಂದು ರೀತಿ ಮಸಾಲಾ ಮತ್ತು ಮನರಂಜನಾ ಸುದ್ದಿಗಳು ಇದ್ದಂತೆ. ಈಗ ಕೆಆರ್‌ಕೆ ನಟರಾದ ಹೃತಿಕ್ ರೋಷನ್ ಮತ್ತು ರಣಬೀರ್ ಕಪೂರ್ ಇಬ್ಬರು ಹೇರ್ ಪ್ಯಾಚ್ ಗಳನ್ನು ಬಳಸ್ತಾರೆ. ಇನ್ನೂ ಬೇಕಾದರೆ ನಟ ಶಾರುಖ್ ಖಾನ್ ಅವರ ಕೂದಲು ಚೆನ್ನಾಗಿವೆ ನೋಡಿ ಅಂತ ಹೇಳಿದ್ದಾರೆ.


ಇದನ್ನೂ ಓದಿ: ಈದ್ ದಿನವೇ ಸಿನಿಮಾ ರಿಲೀಸ್ ಮಾಡೋದ್ಯಾಕೆ ಸಲ್ಮಾನ್ ಖಾನ್? ಭರ್ಜರಿ ಕಲೆಕ್ಷನ್ ಆಗೋದು ನಿಜಾನಾ?


ಈ ಹಿಂದೆ ಸಹ ಅನೇಕ ಬಾರಿ ಕಮಲ್ ಬಾಲಿವುಡ್ ನಟರ ಬಗ್ಗೆ ಕೆಲವು ಅಸಹ್ಯ ಮತ್ತು ವೈಯಕ್ತಿಕ ಟೀಕೆಗಳನ್ನು ಮಾಡಿದ್ದಾರೆ. ಈಗ, ಅವರು ಬಾಲಿವುಡ್ ನ ಈ ಇಬ್ಬರು ನಟರಾದ ಹೃತಿಕ್ ಮತ್ತು ರಣಬೀರ್ ಅವರ ಹಿಂದೆ ಬಿದ್ದಿದ್ದಾರೆ. ಹಿಂದಿ ಚಲನಚಿತ್ರೋದ್ಯಮದ ಬಹುತೇಕ ಎಲ್ಲಾ ದೊಡ್ಡ ನಟರು ತಮ್ಮ ಮುಖ ಇನ್ನಷ್ಟು ಸುಂದರವಾಗಿ ಕಾಣಲು ಹೇರ್ ಪ್ಯಾಚ್ ಗಳನ್ನು ಅಥವಾ ವಿಗ್ ಗಳನ್ನು ಬಳಸುತ್ತಾರೆ ಅನ್ನೋ ಸುದ್ದಿಗಳು ತುಂಬಾನೇ ಕೇಳಿರುತ್ತೇವೆ. ಆದರೆ ಕೆಲವರು ಇದು ಶುದ್ದ ಸುಳ್ಳು ಅಂತ ಸಹ ಹೇಳ್ತಾರೆ.



ನಟ ಶಾರುಖ್ ಅವರ ಕೂದಲ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ ಕೆಆರ್‌ಕೆ


ಅಷ್ಟಕ್ಕೇ ನಿಲ್ಲದ ಕೆಆರ್‌ಕೆ ಅವರು ಶಾರುಖ್ ಖಾನ್ ಅವರು ನೈಸರ್ಗಿಕ ಕೂದಲನ್ನು ಹೊಂದಿರುವುದಕ್ಕೆ ಶ್ಲಾಘಿಸಿದ್ದಾರೆ. ಆದಾಗ್ಯೂ, ಅದೇ ಟ್ವೀಟ್ ನಲ್ಲಿ ಹೃತಿಕ್ ರೋಷನ್ ಮತ್ತು ರಣಬೀರ್ ಕಪೂರ್ ಹೇರ್ ಪ್ಯಾಚ್ ಗಳನ್ನು ಬಳಸುತ್ತಾರೆ ಎಂದು ಅವರು ಹೇಳಿದ್ದಾರೆ. "ಎಸ್‌ಆರ್‌ಕೆ ಅವರು ಹೃತಿಕ್ ಮತ್ತು ರಣಬೀರ್ ಅವರ ಹಾಗೆ ಹೇರ್ ಪ್ಯಾಚ್ ಗಳನ್ನು ಬಳಸುವುದಿಲ್ಲ, ಏಕೆಂದರೆ ಅವರು ಒಳ್ಳೆಯ ಕೂದಲನ್ನು ಹೊಂದಿದ್ದಾರೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.


ಕೆಆರ್​ಕೆ, ಹೃತಿಕ್ ರೋಷನ್ ಮತ್ತು ರಣಬೀರ್ ಕಪೂರ್


ಈ ಟ್ವೀಟ್​​ಗೆ ಪ್ರತಿಕ್ರಿಯಿಸಿದ ಹಲವಾರು ನೆಟ್ಟಿಗರು ಕೆಆರ್‌ಕೆ ಅವರ ನಕಲಿ ಕೂದಲಿನ ಬಗ್ಗೆ ಟ್ರೋಲ್ ಮಾಡಿದ್ದಾರೆ. "ಇವರ ಜೊತೆ ತನ್ನ ಹೆಸರು ಏಕೆ ತೆಗೆದುಕೊಳ್ಳಲಿಲ್ಲ ನೀವು” ಅಂತ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು "ಇವರೇ ನಕಲಿ ಕೂದಲನ್ನು ಹಚ್ಚಿಕೊಂಡಿದ್ದಾರೆ, ಮತ್ತೊಬ್ಬರ ಬಗ್ಗೆ ಏನ್ ಮಾತಾಡ್ತಾರೆ” ಅಂತ ಬರೆದಿದ್ದಾರೆ.




ಶಾರುಖ್ ಖಾನ್ ಅವರ ಪಠಾಣ್ ಚಿತ್ರ ಭಾರಿ ಯಶಸ್ಸನ್ನು ಗಳಿಸಿದ ನಂತರ ಇದೇ ಕೆಆರ್‌ಕೆ ತಮ್ಮ ಮಾತನ್ನು ಬದಲಾಯಿಸಿದ್ದಕ್ಕಾಗಿ ಇತ್ತೀಚಿನ ದಿನಗಳಲ್ಲಿ ತುಂಬಾನೇ ಟ್ರೋಲ್ ಆಗಿದ್ದರು. ಈ ಹಿಂದೆ ಚಿತ್ರ ಬಿಡುಗಡೆಯಾಗುವ ಮೊದಲು, ಅವರು ಪಠಾಣ್ ಚಿತ್ರವನ್ನು ‘ಡಿಸಾಸ್ಟರ್​’ ಅಂತ ಕರೆದಿದ್ದರು. ಈಗ, ಅವರು ಶಾರುಖ್ ಅವರ ಪಠಾಣ್ ಚಿತ್ರವನ್ನು ಹೊಗಳುತ್ತಿದ್ದಾರೆ.

top videos
    First published: