KRK Trailer: ಡಿವೋರ್ಸ್ ನಂತರ ಸಮಂತಾ ಮೊದಲ ಸಿನಿಮಾ KRK ಟ್ರೇಲರ್! ವಿಜಯ್ ಸೇತುಪತಿ, ನಯನತಾರಾ ಕಮಾಲ್

ಚಿತ್ರದಲ್ಲಿ ವಿಜಯ್ ಸೇತುಪತಿ, ನಯನತಾರಾ ಮತ್ತು ಸಮಂತಾ ಅವರ ಹೆಸರುಗಳು ಕ್ರಮವಾಗಿ ರಾಂಬೋ, ಕಣ್ಮಣಿ ಮತ್ತು ಕತೀಜಾ. ರಾಂಬೋ ಹೇಗೋ ಒಬ್ಬರಿಗೊಬ್ಬರು ತಿಳಿಯದಂತೆ ಕಣ್ಮಣಿ ಮತ್ತು ಖತಿಜಾ ಇಬ್ಬರನ್ನೂ ಒಲಿಸಿಕೊಳ್ಳುತ್ತಾರೆ.

ಟೈಟಾನಿಕ್ ಸಿನಿಮಾ ದೃಶ್ಯ ಅಲ್ಲ!

ಟೈಟಾನಿಕ್ ಸಿನಿಮಾ ದೃಶ್ಯ ಅಲ್ಲ!

  • Share this:
    ಡಿವೋರ್ಸ್ ಪಡೆದ ನಂತರ ಸಮಂತಾ ನಟನೆಯ ಮೊದಲ ಚಿತ್ರ ಕಣ್ಮಣಿ ರಾಂಬೋ ಖತೀಜದ ಟ್ರೇಲರ್ (KRK Trailer) ಬಿಡುಗಡೆಯಾಗಿದೆ. ಕಣ್ಮಣಿ ರಾಂಬೋ ಖತೀಜದ ಸಿನಿಮಾ ಸಹ ಮದುವೆ ಕುರಿತೇ ಇದೆ ಎಂಬುದು ಬಹಳ ಕುತೂಹಲ ಹುಟ್ಟಿಸಿದೆ. ಅದರಲ್ಲೂ ಸಿನಿಮಾದಲ್ಲಿ ವಿಜಯ್ ಸೇತುಪತಿ ಅವರೊಬ್ಬರನ್ನೇ ಸಮಂತಾ (Samantha) ಮತ್ತು ನಯನತಾರಾ (Nayanthara) ಇಬ್ಬರೂ ಮದುವೆಯಾಗೋಕೆ ಪೈಪೋಟಿಗೆ ಬೀಳ್ತಾರೆ. ಇಬ್ಬರು ಹೆಂಡಿರ ಜಗಳದಲ್ಲಿ ಮುದ್ದಿನ ಗಂಡನ ಪಾತ್ರದಲ್ಲಿ ವಿಜಯ್ ಸೇತುಪತಿ (Vijay Sethupathi) ಟ್ರೇಲರ್​ನ ಕೆಲವೊಂದು ದೃಶ್ಯಗಳಲ್ಲಿ ಮುದ್ದು ಮುದ್ದಾಗಿಯೂ ಕಾಣುತ್ತಾರೆ. ಇದೇ ಸಿನಿಮಾವನ್ನು ತುದಿಗಾಲಲ್ಲಿ ಕೂರಿಸುತ್ತದೆ ಎಂಬುದು ಟ್ರೇಲರ್​ನ ಆಕರ್ಷಕ ಅಂಶಗಳಲ್ಲೂ ಒಂದಾಗಿದೆ.

    ಏಪ್ರಿಲ್ 28 ರಂದು ಗಾಯತ್ರಿ ದೇವಿ ಫಿಲಂಸ್​ ಅಡಿಯಲ್ಲಿ ಬಿಡುಗಡೆಯಾಗಲಿರುವ ಚಿತ್ರದ ಟ್ರೈಲರ್  ತುಂಬಾ ಲವಲವಿಕೆಯಿಂದ ಕೂಡಿದೆ.

    ಭರಪೂರ ಕಚಗುಳಿ ಉಂಟು
    ಗಂಭೀರವಾದ ವಿಷಯಗಳನ್ನು ಸಹ ಹಗುರವಾದ ಧಾಟಿಯಲ್ಲಿ ಪ್ರಸ್ತುತಪಡಿಸಿ ಪ್ರೇಕ್ಷಕರಿಗೆ ನಗಲು ಸಾಕಷ್ಟು ಅವಕಾಶಗಳನ್ನು ನೀಡುವ ಮೂಲಕ ಕಚಗುಳಿಯ ಡೈಲಾಗ್ ಮತ್ತು ಕಥಾ ಹಂದರವನ್ನು ಸಿನಿಮಾ ಹೊಂದಿದೆ ಎಂಬುದು ಟ್ರೇಲರ್ ಮೂಲಕ ಪಕ್ಕಾ ಆಗಿದೆ.  ಸಿನಿಮಾ ಸಹ ಸಾಕಷ್ಟು ತಮಾಷೆಯ ಕ್ಷಣಗಳನ್ನು ಹೊಂದಿರಲಿದೆ ಎಂಬ ಭರವಸೆಯನ್ನು ಟ್ರೇಲರ್ ಮೂಡಿಸುತ್ತದೆ.


    ರಾಂಬೋ, ಕಣ್ಮಣಿ ಮತ್ತು ಖತೀಜಾ ಯಾರಿಗೆ ಯಾವ ಪಾತ್ರ?
    ಕಣ್ಮಣಿ ರಾಂಬೋ ಖತೀಜದಲ್ಲಿ ವಿಜಯ್ ಸೇತುಪತಿ, ನಯನತಾರಾ ಮತ್ತು ಸಮಂತಾ ನಿರ್ವಹಿಸಿದ ಪಾತ್ರಗಳ ನಡುವಿನ ಸಂಘರ್ಷವನ್ನು ಟ್ರೇಲರ್‌ನಲ್ಲಿ ನೋಡಿದ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.

    ಚಿತ್ರದಲ್ಲಿ ವಿಜಯ್ ಸೇತುಪತಿ, ನಯನತಾರಾ ಮತ್ತು ಸಮಂತಾ ಅವರ ಹೆಸರುಗಳು ಕ್ರಮವಾಗಿ ರಾಂಬೋ, ಕಣ್ಮಣಿ ಮತ್ತು ಕತೀಜಾ. ರಾಂಬೋ ಹೇಗೋ ಒಬ್ಬರಿಗೊಬ್ಬರು ತಿಳಿಯದಂತೆ ಕಣ್ಮಣಿ ಮತ್ತು ಖತಿಜಾ ಇಬ್ಬರನ್ನೂ ಒಲಿಸಿಕೊಳ್ಳುತ್ತಾರೆ.

    ಇದನ್ನೂ ಓದಿ: Athiya Shetty KL Rahul: ಆತಿಯಾ ಶೆಟ್ಟಿ- ಕೆ.ಎಲ್.ರಾಹುಲ್ ಮನೆ ಬಾಡಿಗೆ ಕೇಳಿದ್ರೆ ಅಬ್ಬಬ್ಬಾ ಅನಿಸುತ್ತೆ!

    ಒಂದು ಒಳ್ಳೆಯ ದಿನ ವಿಜಯ್ ಸೇತುಪತಿ ಕಣ್ಮಣಿ ಮತ್ತು ಕತಿಜಾ ಇಬ್ಬರನ್ನೂ ಒಟ್ಟಿಗೆ ಎದುರಿಸುತ್ತಾರೆ. ನಂತರ ಏನಾಗುತ್ತದೆ ಎಂಬುದೇ ಕಣ್ಮಣಿ ರಾಂಬೋ ಖತೀಜ ಚಲನಚಿತ್ರದ ತಿರುಳು ಎಂದು ಅನಿಸುವಂತಿದೆ ಚಿತ್ರದ ಟ್ರೇಲರ್.  ತಮಿಳಿನಲ್ಲಿ ಕಾತುವಾಕ್ಕುಲ ರೆಂದು ಕಾದಲ್ ಎಂಬ ಹೆಸರಿನಲ್ಲಿ ಕಣ್ಮಣಿ ರಾಂಬೋ ಖತೀಜ ಚಿತ್ರ ಬಿಡುಗಡೆಯಾಗುತ್ತಿದೆ.

    ಯಾವಾಗ ಬಿಡುಗಡೆ?
    ವಿಘ್ನೇಶ್ ಶಿವನ್ ಬರೆದು ನಿರ್ದೇಶಿಸಿದ ಕಣ್ಮಣಿ ರಾಂಬೋ ಖತಿಜಾವನ್ನು ವಿಘ್ನೇಶ್ ಶಿವನ್ ಮತ್ತು ನಯನತಾರಾ ಒಡೆತನದ ರೌಡಿ ಪಿಕ್ಚರ್ಸ್ ಸಹಭಾಗಿತ್ವದಲ್ಲಿ 7 ಸ್ಕ್ರೀನ್ ಸ್ಟುಡಿಯೋ ಬ್ಯಾನರ್‌ನಲ್ಲಿ ಲಲಿತ್ ಕುಮಾರ್ ನಿರ್ಮಿಸಿದ್ದಾರೆ. ಏಪ್ರಿಲ್ 28 ರಂದು ಚಿತ್ರಪ್ರೇಮಿಗಳಿಗೆ ದರ್ಶನ ನೀಡಲು ಕಣ್ಮಣಿ ರಾಂಬೋ ಖತೀಜ ಸಜ್ಜಾಗುತ್ತಿದೆ.

    2 ನಿಮಿಷದ 25 ಸೆಕೆಂಡ್ ಟ್ರೇಲರ್ ಚಿತ್ರಕ್ಕಾಗಿ ಕಾಯುತ್ತಿರುವ ಅಭಿಮಾನಿಗಳನ್ನು ರೋಮಾಂಚನಗೊಳಿಸುವುದು ಖಚಿತ. ಕೆಆರ್ ಕೆ ಎಸ್ ಆರ್ ಕತೀರ್ ಮತ್ತು ವಿಜಯ್ ಕಾರ್ತಿಕ್ ಕಣ್ಣನ್ ಅವರ ಕ್ಯಾಮೆರಾ ವರ್ಕ್ ಮತ್ತು ಶ್ರೀಕರ್ ಪ್ರಸಾದ್ ಸಂಕಲನವಿದೆ.

    ಇದನ್ನೂ ಓದಿ: Dr. Rajkumar Birthday: 'ಮುತ್ತುರಾಜ'ನ ಹುಟ್ಟುಹಬ್ಬಕ್ಕೆ ಸಿದ್ಧವಾಯ್ತು ಸ್ಟಾರ್‌ ಸುವರ್ಣದ 'ದೃಶ್ಯ ನಮನ'

    ಇದೇ ಮೊದಲ ಬಾರಿಗೆ ಸಮಂತಾ ಮತ್ತು ನಯನತಾರಾ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ವಿಘ್ನೇಶ್ ಶಿವನ್ ಅವರ ನಾಲ್ಕನೇ ಚಿತ್ರ  ಇದಾಗಿದ್ದು ಮೊಹಮ್ಮದ್ ಮೊಬಿ ಪಾತ್ರದಲ್ಲಿ ಕ್ರಿಕೆಟಿಗ ಶ್ರೀಶಾಂತ್ ನಟಿಸಿದ್ದಾರೆ. ಶ್ರೀಶಾಂತ್ ತಮಿಳು ಚಿತ್ರದಲ್ಲಿ ನಟಿಸುತ್ತಿರುವುದು ಸಹ ಇದೇ ಮೊದಲು.
    Published by:guruganesh bhat
    First published: