ಬಾಲಿವುಡ್ನ ಖ್ಯಾತ ನಿರ್ದೇಶಕ ಓಂ ರಾವತ್ ತಾನಾಜಿ ನಂತರ ನಿರ್ದೇಶಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಆದಿಪುರುಷ್. ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಬಹುನಿರೀಕ್ಷಿತ ಸಿನಿಮಾ ಇದಾಗಿದೆ. ಸದ್ಯ ಪ್ರಭಾಸ್ ಕೈತುಂಬ ಸಿನಿಮಾಗಳಿವೆ. 'ಸಾಹೋ' ಟಾಲಿವುಡ್ನಲ್ಲಿ ನೆಲಕಚ್ಚಿದರೂ, ಹಿಂದಿ ಬಾಕ್ಸಾಫಿಸ್ನಲ್ಲಿ ಹಿಟ್ ಎಂದು ಹೇಳುವಷ್ಟು ಕಲೆಕ್ಷನ್ ಮಾಡಿತ್ತು. ಸದ್ಯ ಟಾಲಿವುಡ್ ಡಾರ್ಲಿಂಗ್ ಕೈಯಲ್ಲಿ ಮೂರು ಪ್ಯಾನ್ ಇಂಡಿಯಾ ಸಿನಿಮಾಗಳಿವೆ. ಈ ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲಾಕ್ಡೌನ್ ಸಡಿಲಗೊಳ್ಳತ್ತಿದ್ದಂತೆಯೇ ನಿರ್ದೇಶಕ ಓಂ ರಾವತ್ ಸಿನಿಮಾದ ಟೈಟಲ್ ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದು, ಇದರಲ್ಲಿ ಪ್ರಭಾಸ್ ಬಿಲ್ಲು ಬಾಣ ಹಿಡದು ನಿಂತಿದ್ದಾರೆ. ಇದರಿಂದಲೇ ತಿಳಿಯುತ್ತದೆ ಡಾರ್ಲಿಂಗ್ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಂದು. ಈ ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಪ್ರಭಾಸ್ ಅವರು ರಾಮನ ಲುಕ್ನಲ್ಲಿರುವ ಫ್ಯಾನ್ ಮೇಡ್ ಪೋಸ್ಟರ್ಗಳು ವೈರಲ್ ಆಗುತ್ತಿವೆ. ದಿನಕ್ಕೊಂದು ಹೊಸ ಪೋಸ್ಟರ್ಗಳನ್ನು ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಇನ್ನು ಈ ಚಿತ್ರದ ಕುರಿತಾಗಿ ಈಗ ಮತ್ತೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ರಾಮನಾಗಿ ಪ್ರಭಾಸ್ ಕಾಣಿಸಿಕೊಂಡರೆ, ಸೀತೆಯಾಗಿ ಯಾರು ನಟಿಸಲಿದ್ದಾರೆ ಅನ್ನೋ ಪ್ರಶ್ನೆ ಅಭಿಮಾನಿಗಳನ್ನು ಕಾಡಿತ್ತು. ಆದರೆ ಈಗ ಅದಕ್ಕೂ ಉತ್ತರ ಸಿಕ್ಕಂತಿದೆ. ಹೌದು, ಸೀತೆಯ ಪಾತ್ರಕ್ಕೆ ನಿರ್ದೇಶಕ ಓಂ ರಾವತ್ ಕೃತಿ ಸನೋನ್ ಅವರನ್ನು ಆಯ್ಕೆ ಮಾಡಿದ್ದಾರಂತೆ. ತಾಜಾನಿ ಸಿನಿಮಾದಲ್ಲಿ ನಾಯಕಿಯಾಗಿ ಕೃತಿ ನಟಿಸಿದ್ದು, ಅವರು ಪೌರಾಣಿಕ ಪಾತ್ರಕ್ಕೂ ಕೃತಿ ಸರಿ ಹೊಂದುತ್ತಾರೆಂದು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
View this post on Instagram
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ