Sushant-Kriti Sanon: ರಾತ್ರಿ ಕೈಯಲ್ಲಿ ವೈನ್ ಬಾಟಲಿ​ ಹಿಡಿದು ಸಿನಿಮಾ ಸೋಲಿಗೆ ಕಾರಣ ಹುಡುಕಿದ್ದರಂತೆ ಸುಶಾಂತ್​: ಕಹಿ ಘಟನೆ ನನೆದ ನಟಿ!

ಬಾಲಿವುಡ್‍ನ ಹಲವಾರು ಜನಪ್ರಿಯ ನಟರ ಜೊತೆ ತೆರೆ ಹಂಚಿಕೊಂಡಿರುವ ಕೃತಿ, ದಿವಂಗತ ನಟ ಸುಶಾಂತ್ ಸಿಂಗ್(Sushant Singh) ಅವರ ಒಳ್ಳೆಯ ಸ್ನೇಹಿತೆಯಾಗಿದ್ದರು. ಇತ್ತೀಚೆಗೆ ಅವರು ಸಂದರ್ಶನವೊಂದರಲ್ಲಿ ಸುಶಾಂತ್ ಸಿಂಗ್ ಜೊತೆಗಿನ ಒಂದು ನೆನಪ(Memory)ನ್ನು ಮೆಲುಕು ಹಾಕಿದ್ದಾರೆ.

ಸುಶಾಂತ್​ ಸಿಂಗ್​ ರಜಪೂತ್​, ಕೃತಿ ಸನನ್​

ಸುಶಾಂತ್​ ಸಿಂಗ್​ ರಜಪೂತ್​, ಕೃತಿ ಸನನ್​

  • Share this:
ಕೃತಿ ಸನನ್ (Kriti Sanon) ಈಗ ಬಾಲಿವುಡ್‍ (Bollywood)ನಲ್ಲಿ ಬಿಡುವಿಲ್ಲದ ನಟಿಯರ ಪೈಕಿ ಒಬ್ಬರು. ಒಂದಲ್ಲ ಒಂದು ಸಿನಿಮಾದ ಮೂಲಕ ಅವರು ಸುದ್ದಿಯಲ್ಲಿರುತ್ತಾರೆ. ಬಾಲಿವುಡ್‍ನ ಹಲವಾರು ಜನಪ್ರಿಯ ನಟರ ಜೊತೆ ತೆರೆ ಹಂಚಿಕೊಂಡಿರುವ ಕೃತಿ, ದಿವಂಗತ ನಟ ಸುಶಾಂತ್ ಸಿಂಗ್ (Sushant Singh) ಅವರ ಒಳ್ಳೆಯ ಸ್ನೇಹಿತೆಯಾಗಿದ್ದರು. ಇತ್ತೀಚೆಗೆ ಅವರು ಸಂದರ್ಶನವೊಂದರಲ್ಲಿ ಸುಶಾಂತ್ ಸಿಂಗ್ ಜೊತೆಗಿನ ಒಂದು ನೆನಪ (Memory)ನ್ನು ಮೆಲುಕು ಹಾಕಿದ್ದಾರೆ. ‘ರಬ್ತಾ’(Raabta)ಸಿನಿಮಾ ಪ್ರದರ್ಶನ ಕಳಪೆ ಆರಂಭವನ್ನು ಕಂಡಿದ್ದ ದಿನಗಳ ಭೇಟಿಯ ನೆನಪದು. ದಿನೇಶ್ ವಿಜಾನ್(Dinesh Vijan) ಅವರ ಚೊಚ್ಚಲ ನಿರ್ದೇಶನದ ಸಿನಿಮಾ ‘ರಾಬ್ತಾ’, ಪ್ರಣಯ ಮತ್ತು ಫ್ಯಾಂಟಸಿ ಅಂಶಗಳುಳ್ಳ ಕಥೆಯನ್ನು ಒಳಗೊಂಡಿತ್ತು. ಆದರೆ, ವಿಮರ್ಶಾತ್ಮಕ ಮತ್ತು ಕಮರ್ಷಿಯಲ್‌ ಆಗಿ ವೈಫಲ್ಯ ಕಂಡಿತ್ತು. ಈ ಸಂದರ್ಭದಲ್ಲಿ, ಒಂದು ಸಂಜೆ ನಟಿ ಕೃತಿ ಸನನ್, ಸುಶಾಂತ್ ಸಿಂಗ್ ಮತ್ತು ನಿರ್ದೇಶಕ ದಿನೇಶ್ ವಿಜಾನ್ ಭೇಟಿಯಾಗಿದ್ದರಂತೆ.

ಸಿನಿಮಾ ಸೋಲಿನ ಬಗ್ಗೆ ಯೋಚಿಸಿದ್ದರಂತೆ ಸುಶಾಂತ್​-ಕೃತಿ!

ಆ ಸಿನಿಮಾ ಕೆಟ್ಟ ವಿಮರ್ಶೆಗಳನ್ನು ಎದುರಿಸಿದಾಗ ಮತ್ತು ಗಲ್ಲಾ ಪೆಟ್ಟಿಗೆಯಲ್ಲಿ ನೀರಸ ಪ್ರತಿಕ್ರಿಯೆ ಕಂಡಾಗ, ಈ ಮೂವರು ಭೇಟಿಯಾಗಿ, ಎಲ್ಲಿ ತಪ್ಪಾಗಿದೆ ಎಂಬುದನ್ನು ಚರ್ಚಿಸಲು ನಿರ್ಧರಿಸಿದ್ದರು. ಸಿನಿಮಾ ಮಾಡುತ್ತಿದ್ದ ಸಂದರ್ಭದಲ್ಲೇ, ಅದರಲ್ಲಿನ ಫ್ಲಾಶ್‍ಬ್ಯಾಕ್‍ಗಳು ಅಷ್ಟೊಂದು ಪರಿಣಾಮಕಾರಿ ಆಗಿಲ್ಲ ಎಂಬುದರ ಕುರಿತು, ಕೃತಿ ದಿನೇಶ್ ಮತ್ತು ಸುಶಾಂತ್‍ಗೆ ಎಚ್ಚರಿಸಿದ್ದಂತೆ. ಆದರೆ ಆಕೆಯ ಅಭಿಪ್ರಾಯ ಕೇಳಿ ಅವರಿಬ್ಬರು, ‘ಇವಳಿಗೆ ಏನೂ ಗೊತ್ತಿಲ್ಲ’ ಎಂಬಂತೆ ಆಕೆಯನ್ನು ನೋಡಿದ್ದರಂತೆ. “ಏನಾಗಿದೆ ಎಂಬುದನ್ನು ನೀವು ಒಪ್ಪಿಕೊಳ್ಳಲೇಬೇಕು. ನೀವು ಸಿನಿಮಾಗಳನ್ನು ಮಾಡುವುದು ಪ್ರೇಕ್ಷಕರಿಗಾಗಿ, ಅವರಿಗೆ ಅರ್ಥ ಆಗಲಿಲ್ಲ ಎಂದು ನೀವು ಹೇಳುವ ಹಾಗಿಲ್ಲ. ಒಂದು ವೇಳೆ ಅವರಿಗೆ ಅರ್ಥ ಆಗಿಲ್ಲ ಎಂದರೆ ಅದು ನಿಮ್ಮ ತಪ್ಪು. ‘ನಾವು ಸಮಯಕ್ಕಿಂತ ಮುಂದೆ ಇದ್ದೇವೆ’ ಎಂದು ನೀವು ಹೇಳುವ ಹಾಗಿಲ್ಲ. ಇಲ್ಲ, ನೀವು ಆ ಕಾಲಕ್ಕೆ ಸಿನಿಮಾ ಮಾಡುತ್ತಿದ್ದೀರಿ, ನೀವು ಪ್ರೇಕ್ಷಕರಿಗೆ ಕನೆಕ್ಟ್ ಆಗಲೇಬೇಕು. ನೀವು ಎಲ್ಲಿ ವಿಫಲರಾಗಿದ್ದೀರಿ? ನೀವು ಅದನ್ನು ಲೆಕ್ಕ ಹಾಕಬೇಕು” ಎಂದು ಕೃತಿ ಸನನ್ ಹೇಳಿದ್ದಾರೆ.

ಇದನ್ನು ಓದಿ: Arjun Kapoor-Malaika Arora ನಡುವೆ ಬ್ರೇಕಪ್​? ಅಂತೆ-ಕಂತೆ ಪುರಾಣ ಜಾಸ್ತಿಯಾಗೋದು ಬೇಡ ಎಂದಿದ್ಯಾಕೆ ಈ ಜೋಡಿ?

ಕೈಯಲ್ಲಿ ವೈನ್​ ಬಾಟೆಲ್​ ಹಿಡಿದ ಸೋಲಿನ ಕಾರಣ ಹುಡುಕಿದ್ರಂತೆ!

“ಅದೊಂದು ತಮಾಷೆಯ ರಾತ್ರಿ. ನಾವೆಲ್ಲರೂ ಬೇಸರದಲ್ಲಿದ್ದೆವು, ಖಿನ್ನರಾಗಿದ್ದೆವು. ನಾವು ನಿಜವಾಗಿಯೂ ಕೆಟ್ಟ ವಿಮರ್ಶೆಗಳನ್ನು ಎದುರಿಸಿದ್ದೆವು. ನಮಗೆ ಏನು ಹೇಳಬೇಕೆಂದು ತಿಳಿದಿರಲಿಲ್ಲ. ದಿನೇಶ್ ‘ ಸ್ನೇಹಿತರೆ ಬನ್ರೋ, ನಾನು ಕೆಟ್ಟ ಮನಸ್ಥಿತಿಯಲ್ಲಿದ್ದೇನೆ’ ಎಂದಿದ್ದರು. ನಾವು ಅಲ್ಲಿ ಹೋದೆವು ಮತ್ತು ಒಂದು ವೈನ್ ಬಾಟಲಿಯನ್ನು ಓಪನ್ ಮಾಡಿದೆವು. ‘ಇದಕ್ಕೆ ಫ್ಲಾಶ್‍ಬ್ಯಾಕ್‍ಗಳೇ ಕಾರಣ ಅನಿಸುತ್ತಿದೆ, ನಾನು ಅದನ್ನು ಸರಳವಾಗಿ ಮಾಡಬೇಕಿತ್ತು. ನಾವೇಕೆ ಟ್ರೈಬಲ್‍ಗೆ ಹೋದೆವು?’ ಎಂದರು ದಿನೇಶ್​.

ಇದನ್ನು ಓದಿ : ಮಾಲ್ಡೀವ್ಸ್​ನಲ್ಲಿ ಮೈಚಳಿ ಬಿಟ್ಟು ಮೈಮಾಟ ತೋರಿದ ಸನ್ನಿ.. ಕೊಲ್ಲೇ ನನ್ನನ್ನೇ ಅಂತಿದ್ದಾರೆ ಫ್ಯಾನ್ಸ್​!

ಚಿತ್ರಗಳ ಸೋಲು ಮತ್ತು ಸಾಮಾನ್ಯ ಸೋಲುಗಳಿಂದ ತಾನು ಬಹಳಷ್ಟು ಕಲಿತಿದ್ದೇನೆ ಎಂದು ಕೃತಿ ಹೇಳಿದ್ದಾರೆ. ರಾಬ್ತಾದ ಪರಂಪರೆಯು, 2020ರಲ್ಲಿ ಸಾವನ್ನಪ್ಪಿದ ಸುಶಾಂತ್ ಸಿಂಗ್ ಅವರ ಜೊತೆ ಎಂದಿಗೂ ಸಂಪರ್ಕ ಹೊಂದಿದೆ. ಸುಶಾಂತ್ ಸಿಂಗ್ ಅವರು ತಮ್ಮ ಸ್ಕ್ರಿಪ್ಟ್‌ಗಳ ಟಿಪ್ಪಣಿಯನ್ನು ಹೇಗೆ ಮಾಡಿಕೊಳ್ಳುತ್ತಿದ್ದರು ಎಂಬುದನ್ನು ಕೂಡ ಕೃತಿ ಇದೇ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ. ರಾಬ್ತಾ ಸಿನಿಮಾದ ಬಳಿಕ ತಾನು ಕೂಡ ಅದೇ ಪ್ರಕ್ರಿಯೆ ಅನುಸರಿಸಲು ಆರಂಭಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಈಗಾಗಲೇ ಕೃತಿ ಸನನ್ ಕೈಯಲ್ಲಿ ಬಹಳಷ್ಟು ಚಿತ್ರಗಳಿವೆ. ಕಾರ್ತಿಕ್ ಆರ್ಯನ್ ಜೊತೆ ‘ಶೆಹಜಾ’ದದಲ್ಲಿ, ಅಕ್ಷಯ್ ಕುಮಾರ್ ಜೊತೆ ‘ಬಚ್ಚನ್ ಪಾಂಡೆ’ಯಲ್ಲಿ, ಟೈಗರ್ ಶ್ರಾಫ್‍ಗೆ ನಾಯಕಿಯಾಗಿ ‘ಗಣಪತ್‍’ನಲ್ಲಿ ಅಭಿನಯಿಸುತ್ತಿದ್ದಾರೆ.
Published by:Vasudeva M
First published: