Kriti Sanon: ಸಿನಿಮಾಗಾಗಿ 15 ಕೆ.ಜಿ. ತೂಕ ಹೆಚ್ಚಿಸಿಕೊಂಡ ಕೃತಿ ಸನೋನ್​: ಫೋಟೋ ವೈರಲ್​..!

Mimi Movie: 'ದಂಗಲ್'​ ಸಿನಿಮಾಗಾಗಿ ಅಮೀರ್​ಖಾನ್​ ಹೆಚ್ಚಿಸಿಕೊಂಡಿದ್ದರು. ನಂತರ ಕೆಲವೇ ತಿಂಗಳಿನಲ್ಲಿ ಅದೇ ಸಿನಿಮಾಗಾಗಿ ತೂಕವನ್ನು ಇಳಿಸಿಕೊಂಡಿದ್ದರು. ಇನ್ನೂ 'ಧಮ್​ ಲಗಾಕೆ ಹೈಯ್ಯಾ ...' ಸಿನಿಮಾಗಾಗಿ ಭೂಮಿ ಪೆಡ್ನೆಕರ್​ ಸಹ ತೂಕ ಹೆಚ್ಚಿಸಿಕೊಂಡಿದ್ದರು. ಅದರಲ್ಲೂ ಅದು ಭೂಮಿ ನಟಿಸಿದ್ದ ಮೊದಲ ಚಿತ್ರವಾಗಿತ್ತು. ಈಗ ಇಂತಹದ್ದೇ ಸಾಹಸಕ್ಕೆ ನಟಿ ಕೃತಿ ಸನೋನ್ ಕೈ ಹಾಕಿದ್ದಾರೆ.

ಕೃತಿ ಸನೋನ್​

ಕೃತಿ ಸನೋನ್​

  • Share this:
ಸಿನಿಮಾಗಳಲ್ಲಿ ನಟಿಸುವ ಕಲಾವಿದರಲ್ಲಿ ಕೇವಲ ಬೆರಳೆಣಿಕೆಯಷ್ಟು ಸ್ಟಾರ್​ಗಳು ಮಾತ್ರ ಕತೆ ಬೇಡುವಂತೆ ತಮ್ಮನ್ನು ತಾವು ಸಿದ್ಧಗೊಳಿಸಿಕೊಳ್ಳುತ್ತಾರೆ. ಸಿನಿಮಾಗಾಗಿ ದೇಹದ ತೂಕ ಹೆಚ್ಚಿಸಿಕೊಳ್ಳುವ ಹಾಗೂ ಇಳಿಸಿಕೊಳ್ಳುವ ವಿಷಯಕ್ಕೆ ಬಂದರೆ ಸಾಕಷ್ಟು ಮಂದಿ ಸಿಗುತ್ತಾರೆ.

'ದಂಗಲ್'​ ಸಿನಿಮಾಗಾಗಿ ಅಮೀರ್​ಖಾನ್​ ಹೆಚ್ಚಿಸಿಕೊಂಡಿದ್ದರು. ನಂತರ ಕೆಲವೇ ತಿಂಗಳಿನಲ್ಲಿ ಅದೇ ಸಿನಿಮಾಗಾಗಿ ತೂಕವನ್ನು ಇಳಿಸಿಕೊಂಡಿದ್ದರು. ಇನ್ನೂ 'ಧಮ್​ ಲಗಾಕೆ ಹೈಯ್ಯಾ ...' ಸಿನಿಮಾಗಾಗಿ ಭೂಮಿ ಪೆಡ್ನೆಕರ್​ ಸಹ ತೂಕ ಹೆಚ್ಚಿಸಿಕೊಂಡಿದ್ದರು. ಅದರಲ್ಲೂ ಅದು ಭೂಮಿ ನಟಿಸಿದ್ದ ಮೊದಲ ಚಿತ್ರವಾಗಿತ್ತು. ಈಗ ಇಂತಹದ್ದೇ ಸಾಹಸಕ್ಕೆ ನಟಿ ಕೃತಿ ಸನೋನ್ ಕೈ ಹಾಕಿದ್ದಾರೆ.

kriti sanon gains 15 kg weight for her upcoming film mimi
ಕೃತಿ ಸನೋನ್​


ಬಳುಕುವ ಬಳ್ಳಿಯಂತಹ ದೇಹಕ್ಕೆ ಹೆಸರಾಗಿರುವ ಕೃತಿ ಈಗ ಸಿಕ್ಕಾಪಟ್ಟೆ ದಪ್ಪಗಾಗಿದ್ದಾರೆ. ಅದೂ ಸಹ ಅವರ ಹೊಸ ಸಿನಿಮಾಗಾಗಿ. 'ಮಿಮಿ' ಚಿತ್ರಕ್ಕಾಗಿ ಅವರು 15 ಕೆ.ಜಿ. ತೂಕ ಹೆಚ್ಚಿಸಿಕೊಂಡಿದ್ದಾರೆ.

Exclusive- @kritisanon from the sets of Mimi !ಲಕ್ಷ್ಮಣ್​ ಉಟೇಕರ್​ ಅವರ ನಿರ್ದೇಶನದಲ್ಲಿ ನಿರ್ಮಾಣವಾಗುತ್ತಿರುವ 'ಮಿಮೀ'ಯಲ್ಲಿ ಕೃತಿ ಬಾಡಿಗೆ ತಾಯಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅವರು ಗರ್ಭಿಣಿಯಾಗಿ ನಟಿಸುತ್ತಿರುವ ದೃಶ್ಯದ ಚಿತ್ರವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೈರಲ್​ ಆಗುತ್ತಿದೆ.

ಇದನ್ನೂ ಓದಿ: Blenders Pride Fashion Tour 2020: ಅಮ್ಮನಿಗೆ ಲೆಹೆಂಗಾ ವಿನ್ಯಾಸ ಮಾಡಿದ್ದ ವಸ್ತ್ರ ವಿನ್ಯಾಸಕರಿಂದಲೇ ಸಿದ್ಧವಾದ ಧಿರಿಸು ತೊಟ್ಟು ಮಿಂಚಿದ ಸಾರಾ ಅಲಿ ಖಾನ್​..!

ಸಿನಿಮಾದ ನಾಯಕಿಯರು ದೇಹದ ತೂಕ ಹೆಚ್ಚಿಸಿಕೊಳ್ಳುವುದು ಸುಲಭವಾದರೂ, ಹೆಚ್ಚಿಸಿಕೊಂಡ ತೂಕವನ್ನು ಇಳಿಸಿಕೊಳ್ಳುವುದು ತುಂಬಾ ಕಷ್ಟ. ಈ ಹಿಂದೆ ಅನುಷ್ಕಾ ಶೆಟ್ಟಿ ಸಹ ಈ ಹಿಂದೆ ತೆಲುಗಿನ ಚಿತ್ರಕ್ಕಾಗಿ ದೇಹದ ತೂಕ ಹೆಚ್ಚಿಸಿಕೊಂಡಿದ್ದರು. ಆದರೆ ಸಮಯಕ್ಕೆ ಸರಿಯಾಗಿ ಅವರು ಹೆಚ್ಚಿಕೊಂಡಿದ್ದ ತೂಕವನ್ನು ಇಳಿಸಿಕೊಳ್ಳಲಾಗದೆ ಪರದಾಡಿದ್ದೂ ಇದೆ. ನಂತರ ವಿದೇಶದಲ್ಲಿ ಚಿಕಿತ್ಸೆ ಪಡೆದು ತೂಕ ಇಳಿಸಿಕೊಂಡರು.

ಇದನ್ನೂ ಓದಿ: Ranbir Alia Wedding: ರಣಬೀರ್​ ಕಪೂರ್ ಜೊತೆ ಮದುವೆ ಬಗ್ಗೆ ಸ್ಪಷ್ಟನೆ ಕೊಟ್ಟ ಆಲಿಯಾ ಭಟ್​..!

 

ಹಾಲಿವುಡ್​ಗಾಗಿ ಬೋಲ್ಡ್​ ಆಗುತ್ತಿದ್ದಾರಾ ರಶ್ಮಿಕಾ ಮಂದಣ್ಣ: ಮುಂದಿನ ವಂಡರ್​ ವುಮನ್​ ಕಿರಿಕ್​ ಬೆಡಗಿನಾ?
First published: