ಕಾಲವೊಂದಿತ್ತು... ಆಗ ಬಾಲಿವುಡ್ನಲ್ಲಿ ಕಪೂರ್ ಕುಟುಂಬದ ಕುಡಿ ಕರಿಷ್ಮಾರ ಹೆಸರು ಬಿಟ್ಟರೆ ಮತ್ತಾವೂದೂ ಕೇಳಿಸುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಕರಿಷ್ಮಾ ಫೇಮಸ್ ಆಗಿದ್ದರು. ಬಿಡುವಿಲ್ಲದಂತೆ ದಿನಕ್ಕೆ ಮೂರು-ನಾಲ್ಕು ಶಿಫ್ಟ್ಗಳಲ್ಲಿ ಸಿನಿಮಾಗಳ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದರಂತೆ.
ಇಂತಹ ನಾಯಕಿ ಕರಿಷ್ಮಾ ಅವರೂ ಕಿಸ್ಸಿಂಗ್ ದೃಶ್ಯವನ್ನು ಮಾಡಿದ್ದಾರೆ. ಅದು ಬಾಲಿವುಡ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ನಟನೆಯ 'ರಾಜ ಹಿಂದೂಸ್ತಾನಿ' ಸಿನಿಮಾದಲ್ಲಿ. ಹೌದು, ಕರಿಷ್ಮಾ ಅದೇ ಮೊದಲ ಬಾರಿಗೆ ಇಂತಹ ದೃಶ್ಯಗಳಲ್ಲಿ ತೆರೆ ಮೇಲೆ ಕಾಣಿಸಿಕೊಂಡಿದ್ದು.
![Armaan Jain and Annisa Malhotra wedding pictures Kareena Kapoor Karisma Kapoor Taimur]()
ತಮ್ಮನ ವಿವಾಹದಲ್ಲಿ ಕರಿಷ್ಮಾ ಕಪೂರ್
ನ್ಯೂಸ್ 18ಗೆ ಕೊಟ್ಟಿರುವ ಸಂದರ್ಶನದಲ್ಲಿ ಕರಿಷ್ಮಾ ಕಪೂರ್ ಆ ಸಿನಿಮಾದ ಕಿಸ್ಸಿಂಗ್ ದೃಶ್ಯದ ಚಿತ್ರೀಕರಣದ ಬಗ್ಗೆ ಮೌನ ಮುರಿದಿದ್ದಾರೆ. ಈ ಸಿನಿಮಾ ಬಿಡುಗಡೆಯಾಗಿ 24 ವರ್ಷಗಳಾಗಿವೆ.
ಇದನ್ನೂ ಓದಿ: ರಾಮಾಯಣದಲ್ಲಿ ನಟಿಸಿದ್ದಕ್ಕೇ ಬೋಲ್ಡ್ ಫೋಟೋಶೂಟ್ ಅವಕಾಶ ಅರಸಿ ಬಂದಿತ್ತಂತೆ ಇವರಿಗೆ..!
ಈಗ ಕರಿಷ್ಮಾ ಅಂದು ಆ ದೃಶ್ಯಕ್ಕಾಗಿ ಅವರು ಪಟ್ಟಿದ್ದ ಕಷ್ಟವನ್ನು ಹೇಳಿಕೊಂಡಿದ್ದಾರೆ. ಕಿಸ್ಸಿಂಗ್ ದೃಶ್ಯವೊಂದನ್ನು ಚಿತ್ರೀಕರಿಸಲು ಸತತ 3 ದಿನಗಳ ಕಾಲ ತೆಗೆದುಕೊಂಡಿದ್ದರಂತೆ. ಅದರಲ್ಲೂ ಅದು ಫೆಬ್ರವರಿ ತಿಂಗಳು. ಕೊರೆಯುವ ಚಳಿ ಅದರಲ್ಲೂ ಮಳೆಯಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಬೇಕಿತ್ತಂತೆ. ಆ ಚಳಿಯಲ್ಲಿ ಎಷ್ಟೇ ಮಾಡಿದರೂ ಆ ಟೇಕ್ ಓಕೆ ಆಗುತ್ತಲೇ ಇರಲಿಲ್ಲವಂತೆ. ಯಾವಾಗ ಮುಗಿಯುತ್ತೋ ಇದು ಎಂದೆನಿಸಿತ್ತಂತೆ.
12:29 to 13:30 (ಕಿಸ್ಸಿಂಗ್ ದೃಶ್ಯ)
ಈ ಸಿನಿಮಾದಲ್ಲಿನ ಕಿಸ್ಸಿಂಗ್ ಸೀನ್ ತುಂಬಾ ದೀರ್ಘವಾಗಿದ್ದು, ಈಗಲೂ ದೀರ್ಘಸಮಯದ ಚುಂಬನದ ದೃಶ್ಯಗಳ ಸಾಲಿನಲ್ಲಿ ನಿಲ್ಲುತ್ತದೆ. ಯಾವುದೇ ನಟ-ನಟಿಯರು ಇಂತಹ ದೃಶ್ಯಗಳಲ್ಲಿ ಅಭಿನಯಿಸುವಾಗ ಖುಷಿಯಾಗಿರುವುದಿಲ್ಲ. ಬದಲಿಗೆ ತುಂಬಾ ಕಷ್ಟದ ಪರಿಸ್ಥಿತಿಯಲ್ಲಿರುತ್ತಾರೆ ಎಂದಿದ್ದಾರೆ ಕರಿಷ್ಮಾ.
Sara Ali Khan: ಬಿಕಿನಿ ತೊಟ್ಟು ಸಹೋದರನ ಜೊತೆ ಪೋಸ್ ಕೊಟ್ಟ ಸಾರಾ ಅಲಿಖಾನ್: ಟ್ರೋಲ್ ಮಾಡಿದ ಟ್ರೋಲಿಗರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ