HOME » NEWS » Entertainment » KRG STUDIOS PLANNED TO REMOVE ROBERRT MOVIE IN SANTHOSH THEATER TO PREVIEW VAKEEL SAAB HTV AE

Roberrt: ರಾಬರ್ಟ್‍ಗೆ ಗೇಟ್‍ಪಾಸ್, ಅಭಿಮಾನಿಗಳ ಕ್ಲಾಸ್: `ಸಂತೋಷದಲ್ಲಿ ಡಿಬಾಸ್ ದರ್ಶನ್ ಫ್ಯಾನ್ಸ್!

ಇತ್ತೀಚೆಗಷ್ಟೇ ಕೆಜಿ ರಸ್ತೆಯ ಪ್ರಮುಖ ಚಿತ್ರಮಂದಿರ ಸಂತೋಷ್ ಥಿಯೇಟರ್​ನಿಂದಲೇ ರಾಬರ್ಟ್ ಚಿತ್ರವನ್ನು ಎತ್ತಂಗಡಿ ಮಾಡಲು ಮಾತುಕತೆ ನಡೆದಿತ್ತು. ರಾಬರ್ಟ್ ಬದಲು ಯಾವುದಾದರೂ ಕನ್ನಡ ಸಿನಿಮಾ ಹಾಕಿದ್ದರೆ ಡಿಬಾಸ್ ದರ್ಶನ್ ಅಭಿಮಾನಿಗಳೂ ಸುಮ್ಮನಿರುತ್ತಿದ್ದರೇನೋ? ಆದರೆ ರಾಬರ್ಟ್ ಬದಲಿಗೆ ಕನ್ನಡ ಸಿನಿಮಾಗಳ ಮುಖ್ಯ ಸೆಂಟರ್ ಆಗಿದ್ದ ಸಂತೋಷ್ ಥಿಯೇಟರ್​ನಲ್ಲಿ ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ವಕೀಲ್ ಸಾಬ್ ಸಿನಿಮಾ ರಿಲೀಸ್‍ಗೆ ಪ್ಲ್ಯಾನ್ ಆಗಿತ್ತು.

news18-kannada
Updated:April 6, 2021, 2:46 PM IST
Roberrt: ರಾಬರ್ಟ್‍ಗೆ ಗೇಟ್‍ಪಾಸ್, ಅಭಿಮಾನಿಗಳ ಕ್ಲಾಸ್: `ಸಂತೋಷದಲ್ಲಿ ಡಿಬಾಸ್ ದರ್ಶನ್ ಫ್ಯಾನ್ಸ್!
ರಾಬರ್ಟ್​ ಸಿನಿಮಾದಲ್ಲಿ ದರ್ಶನ್​
  • Share this:
ಸ್ಯಾಂಡಲ್‍ವುಡ್‍ನ ಅತಿ ದೊಡ್ಡ ಸೂಪರ್​ ಸ್ಟಾರ್ ಯಾರು ಅಂದ್ರೆ ಬಹುತೇಕರು ಹೇಳುವ ಮೊದಲ ಹೆಸರು ಚಾಲೆಂಜಿಂಗ್ ಸ್ಟಾರ್  ಡಿಬಾಸ್ ದರ್ಶನ್. ಆದರೆ ನಟ ದರ್ಶನ್ ನಟಿಸಿರುವ ಲೇಟೆಸ್ಟ್ ಸಿನಿಮಾ ರಾಬರ್ಟ್​ ಅನ್ನೇ, ತೆಲುಗು ಚಿತ್ರಕ್ಕಾಗಿ ಕೆಜಿ ರಸ್ತೆಯ ಪ್ರಮುಖ ಚಿತ್ರಮಂದಿರದಿಂದ ಎತ್ತಂಗಡಿ ಮಾಡಲು ವೇದಿಕೆ ಸಿದ್ಧವಾಗಿತ್ತು. ಆಗ ಎಚ್ಚೆತ್ತ ಡಿಬಾಸ್ ಫ್ಯಾನ್ಸ್ ಅದಕ್ಕೆ ಬ್ರೇಕ್ ಹಾಕಿದ್ದಾರೆ. ಹೌದು, ಸ್ಯಾಂಡಲ್‍ವುಡ್ ಚಾಲೆಂಜಿಂಗ್ ಸ್ಟಾರ್ ಡಿಬಾಸ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಈಗಾಗಲೇ ಬಾಕ್ಸಾಫಿಸ್‍ನಲ್ಲಿ ಧೂಳೆಬ್ಬಿಸಿದೆ. ಮಾರ್ಚ್ 19ರಂದು ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ರಿಲೀಸ್ ಆದ ರಾಬರ್ಟ್ ಕೇವಲ 4 ದಿನಗಳಲ್ಲಿ ಐವತ್ತು ಕೋಟಿ ಕಲೆಕ್ಷನ್ ಮಾಡಿಕೊಂಡಿತ್ತು. ಹಾಗೇ 20 ದಿನಗಳಲ್ಲಿ ಬರೋಬ್ಬರಿ 102 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿಕೊಂಡು ಹೊಸ ದಾಖಲೆ ಬರೆದಿದೆ. ಇಂತಹ ರಾಬರ್ಟ್ ಸದ್ಯ ಯಶಸ್ವಿಯಾಗಿ ನಾಲ್ಕನೇ ವಾರಕ್ಕೆ ಎಂಟ್ರಿ ಕೊಟ್ಟಿದೆ. 

ಆದರೆ, ಇತ್ತೀಚೆಗಷ್ಟೇ ಕೆಜಿ ರಸ್ತೆಯ ಪ್ರಮುಖ ಚಿತ್ರಮಂದಿರ ಸಂತೋಷ್ ಥಿಯೇಟರ್​ನಿಂದಲೇ ರಾಬರ್ಟ್ ಚಿತ್ರವನ್ನು ಎತ್ತಂಗಡಿ ಮಾಡಲು ಮಾತುಕತೆ ನಡೆದಿತ್ತು. ರಾಬರ್ಟ್ ಬದಲು ಯಾವುದಾದರೂ ಕನ್ನಡ ಸಿನಿಮಾ ಹಾಕಿದ್ದರೆ ಡಿಬಾಸ್ ದರ್ಶನ್ ಅಭಿಮಾನಿಗಳೂ ಸುಮ್ಮನಿರುತ್ತಿದ್ದರೇನೋ? ಆದರೆ ರಾಬರ್ಟ್ ಬದಲಿಗೆ ಕನ್ನಡ ಸಿನಿಮಾಗಳ ಮುಖ್ಯ ಸೆಂಟರ್ ಆಗಿದ್ದ ಸಂತೋಷ್ ಥಿಯೇಟರ್​ನಲ್ಲಿ ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ವಕೀಲ್ ಸಾಬ್ ಸಿನಿಮಾ ರಿಲೀಸ್‍ಗೆ ಪ್ಲ್ಯಾನ್ ಆಗಿತ್ತು.


ವಿಶೇಷ ಅಂದ್ರೆ ಕನ್ನಡದ ಸಂಸ್ಥೆಯ ಕೆಆರ್​ಜಿ​ ಸ್ಟುಡಿಯೋಸ್‍ನವರೇ ವಕೀಲ್ ಸಾಬ್ ಚಿತ್ರದ ಕರ್ನಾಟಕದ ರೈಟ್ಸ್ ಪಡೆದು ರಿಲೀಸ್ ಮಾಡಲು ರೆಡಿಯಾಗಿದ್ದರು. ತೆಲುಗು ಚಿತ್ರಕ್ಕಾಗಿ ಕನ್ನಡ ಸಿನಿಮಾಗಳಿಂದಲೇ ಹೆಸರುವಾಸಿಯಾದ ಸಂತೋಷ್ ಥಿಯೇಟರ್​ನಿಂದ ರಾಬರ್ಟ್‍ಗೆ ಯಾಕೆ ಗೇಟ್‍ಪಾಸ್ ಕೊಡಬೇಕು ಅಂತ ಡಿಬಾಸ್ ದರ್ಶನ್ ಅಭಿಮಾನಿಗಳು ರೊಚ್ಚಿಗೆದ್ದರು. ರಾಬರ್ಟ್ ನಿರ್ಮಾಪಕ ಉಮಾಪತಿ ಹಾಗೂ ಕೆಆರ್​ಜಿ​ ಸ್ಟುಡಿಯೋಸ್ ಕಾರ್ತಿಕ್ ಗೌಡ ಇಬ್ಬರ ವಿರುದ್ಧ ಟ್ವಿಟರ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಕ್ಷಣ ಎಚ್ಚೆತ್ತುಕೊಂಡ ರಾಬರ್ಟ್ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಹಾಗೂ ಕೆಆರ್​ಜಿ​ ಸ್ಟುಡಿಯೋಸ್‍ನ ಕಾರ್ತಿಕ್ ಗೌಡ, ಮತ್ತೆ ಇಬ್ಬರೂ ಚರ್ಚಿಸಿದ್ದಾರೆ. ರಾಬರ್ಟ್ ಚಿತ್ರವನ್ನು ಸಂತೋಷ್ ಥಿಯೇಟರ್​ನಲ್ಲೇ ಮುಂದುವರಿಸಲು ನಿರ್ಧರಿಸಿದ್ದಾರೆ. ಹಾಗೇ ಇದೇ ಏಪ್ರಿಲ್ 9ರಂದು ತೆರೆಗೆ ಬರಲಿರುವ ಪವನ್ ಕಲ್ಯಾಣ್ ಅವರ ವಕೀಲ್ ಸಾಬ್ ಚಿತ್ರವನ್ನು ಕೆಜಿ ರಸ್ತೆಯ ಭೂಮಿಕಾ ಚಿತ್ರಮಂದಿರದಲ್ಲಿ ರಿಲೀಸ್ ಮಾಡಲು ತೀರ್ಮಾನಿಸಿದ್ದಾರೆ. ಈ ಬೆಳವಣಿಗೆಯಿಂದ ಡಿಬಾಸ್ ಅಭಿಮಾನಿಗಳೇನೋ ತುಂಬಾ ಖುಷಿಯಾಗಿದ್ದಾರೆ.ಆದರೆ, ಡಿಬಾಸ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಕೆಆರ್​ಜಿ​ ಸ್ಟುಡಿಯೋಸ್‍ನ ಕಾರ್ತಿಕ್ ಗೌಡ ಅವರಿಗೆ ಬೇಸರ ಉಂಟು ಮಾಡಿದೆ. ಹೀಗಾಗಿಯೇ ಪ್ರೇಕ್ಷಕರು ಹಾಗೂ ಅಭಿಮಾನಿಗಳ ಜೊತೆ ಟ್ವಿಟರ್​ನಲ್ಲಿ ನೇರ ಸಂಪರ್ಕದಲ್ಲಿದ್ದ ಅವರು, ಇನ್ನುಮುಂದೆ ನಾನು ನನ್ನ ಟ್ವಿಟರ್ ಖಾತೆಯನ್ನು ಹ್ಯಾಂಡಲ್ ಮಾಡುವುದಿಲ್ಲ, ನನ್ನ ಟೀಮ್ ನನ್ನ ಅಕೌಂಟ್ ಮೂಲಕ ಮಾಹಿತಿ ನೀಡಲಿದೆ ಎಂದು ಟ್ವೀಟ್ ಮಾಡಿದ್ದಾರೆ.
Published by: Anitha E
First published: April 6, 2021, 2:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories