ಕಿಚ್ಚ ಸುದೀಪ್ ಇಂದು 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸುಸಮಯದಲ್ಲಿ ಅವರ ಅಭಿನಯದ ಕೋಟಿಗೊಬ್ಬ 3 ಚಿತ್ರತಂಡ ಕಿಚ್ಚನ ಅಭಿಮಾನಿಗಳಿಗಾಗಿ ಒಂದು ಉಡುಗೊರೆ ನೀಡಿದ್ದಾರೆ. ಕೋಟಿಗೊಬ್ಬ ಚಿತ್ರತಂಡದ ಕಡೆಯಿಂದ ಹೊಸ ಟೀಸರ್ ರಿಲೀಸ್ ಮಾಡಿದ್ದಾರೆ.
ಕೋಟಿಗೊಬ್ಬ 3 ಚಿತ್ರದ ಲಿರಿಕಲ್ ವಿಡಿಯೋ ಹಾಗೂ ಪೋಸ್ಟರ್ಗಳು ಈಗಾಗಲೇ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಹೆಚ್ಚಿಸಿದೆ. ಇನ್ನು ನಿನ್ನೆಯಷ್ಟೆ ಇದೇ ಚಿತ್ರತಂಡ ಹೊಸ ಪೋಸ್ಟರ್ ಸಹ ರಿಲೀಸ್ ಮಾಡಿತ್ತು. ಇದರಲ್ಲಿ ಸುದೀಪ್ ಶ್ರೀಕೃಷ್ಣನಂತೆ ನಿಂತಿದ್ದು, ಹಣೆಗೆ ಬಂದನಾ ಧರಿಸಿದ್ದು, ಜೋಕರ್ ಟೀ ಶರ್ಟ್, ಅದರ ಮೇಲೊಂದು ದೊಗಲೆ ಶರ್ಟ್ ತೊಟ್ಟು, ಸ್ಟೈಲಿಶ್ ಆಗಿ ಪೋಸ್ ಕೊಟ್ಟಿದ್ದಾರೆ.
ಶಿವಕಾರ್ತಿಕ್ ನಿರ್ದೇಶನದ ಕೋಟಿಗೊಬ್ಬ 3 ಚಿತ್ರವನ್ನು ಸೂರಪ್ಪ ಬಾಬು ನಿರ್ಮಿಸಿದ್ದು, ಈಗಷ್ಟೆ ಈ ಚಿತ್ರದ ಹೊಸ ಟೀಸರ್ ಬಿಡುಗಡೆಯಾಗಿದೆ. ಆದರೆ ಚಿತ್ರತಂಡ ಬೆಳಿಗ್ಗೆ 11ಕ್ಕೆ ಟೀಸರ್ ರಿಲೀಸ್ ಮಾಡುವುದಾಗಿ ಹೇಳಿತ್ತು. ಆದರೆ, ಅದು ಅರ್ಧ ಗಂಟೆ ತಡವಾಗಿ ಆಗಿದೆ. ಇದರಿಂದಾಗಿ ಅಭಿಮಾನಿಗಳು ಗರಂ ಆಗಿ ಕಮೆಂಟ್ ಮಾಡಲಾರಂಭಿಸಿದ್ದರು.
![Kotigobba 3 Movie team released new teaser on Kichcha Sudeeps Birthday]()
ಸಿಟ್ಟಿನಿಂದ ಕಮೆಂಟ್ ಮಾಡುತ್ತಿರುವ ಅಭಿಮಾನಿಗಳು
ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ನಲ್ಲಿ ಕಡೆಗೂ ಕೋಟಿಗೊಬ್ಬ 3 ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಇದರಲ್ಲಿ ಸುದೀಪ್ ಲುಕ್ ಹಾಗೂ ಮ್ಯಾನರಿಸಂ ಅಭಿಮಾನಿಗಳನ್ನು ಹುಚ್ಚೆಬ್ಬಿಸುತ್ತಿದೆ. ಇನ್ನು ಟೀಸರ್ನಲ್ಲಿರುವ ಪಟಾಕಿ ಪೋರಿ ಹಾಡು ಸಹ ಸಖತ್ ಸ್ಪೈಸಿಯಾಗಿದೆ.
ಲಾಕ್ಡೌನ್ ಆರಂಭವಾದಾಗ ಕಿಚ್ಚ ಸುದೀಪ್, ತಮ್ಮ ಹೊಸ ಸಿನಿಮಾ ಫ್ಯಾಂಟಮ್ ಕುರಿತಾಗಿ ಸಾಕಷ್ಟು ಅಪ್ಡೇಟ್ ನೀಡಿದ್ದರು. ಆದರೆ ಈಗ ಅಭಿಮಾನಿಗಳು ಕೋಟಿಗೊಬ್ಬ 3 ಚಿತ್ರದ ಕುರಿತಾಗಿ ಮಾಹಿತಿ ನೀಡುವಂತೆ ಮನವಿ ಮಾಡಿದ್ದರು. ಆಗ ಕಿಚ್ಚ ಚಿತ್ರದ ಚಿತ್ರೀಕರಣ ಮುಗಿದಿದ್ದು, ಸ್ವಲ್ಪ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಇವೆ ಎಂದಿದ್ದರು.
ಇದನ್ನೂ ಓದಿ: Happy Birthday Kiccha Sudeep: ಹುಟ್ಟುಹಬ್ಬದ ಸಂಭ್ರಮದಲ್ಲಿ ಕಿಚ್ಚ ಸುದೀಪ್: ಶುಭಕೋರಿದ ಸೆಲೆಬ್ರಿಟಿಗಳು..!
ಆದರೆ, ಇತ್ತೀಚೆಗೆ ಮತ್ತೆ ಈ ಚಿತ್ರದ ಐಟಂ ಸಾಂಗ್ನ ಶೂಟಿಂಗ್ ಬಾಕಿ ಇರುವುದಾಗಿ ಸುದ್ದಿ ಹೊರ ಬಿದ್ದಿತ್ತು. ಈ ಹಾಡಿನಲ್ಲಿ ಸನ್ನಿ ಲಿಯೋನ್ ಹೆಜ್ಜೆ ಹಾಕಲಿದ್ದಾರೆ ಎಂದೂ ಹೇಳಲಾಗಿತ್ತು. ಈ ಸಿನಿಮಾದ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ನಡೆಯುವಾಗ ಕಿಚ್ಚ ಸುದೀಪ್ ತಾವು ಉಳಿದುಕೊಂಡಿದ್ದ ಹೋಟೆಲ್ನಿಂದ ಸೈಕಲ್ ಹತ್ತಿ ಸ್ಟುಡಿಯೋಗೆ ಹೋಗಿದ್ದ ವಿಡಿಯೋ ವೈರಲ್ ಆಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ