HOME » NEWS » Entertainment » KORANGU KRISHNA A REAL VILLAIN WHO ACTED IN SHIVA RAJKUMAR OM MOVIE DIED RMD

ಶಿವರಾಜ್​ಕುಮಾರ್​ ಜೊತೆ ತೆರೆ ಹಂಚಿಕೊಂಡಿದ್ದ ನಿಜವಾದ ರೌಡಿ ಕೊರಂಗು ಕೃಷ್ಣ ಸಾವು!

90ರ ದಶಕದಲ್ಲಿ ಬೆಂಗಳೂರಲ್ಲಿ ಕೊರಂಗು ಕೃಷ್ಣ ಭಾರೀ ಸದ್ದು ಮಾಡಿದ್ದ. ಕೊಲೆ, ಸುಲಿಗೆ, ಜೀವ ಬೆದರಿಕೆ ಹಾಕುವುದರಲ್ಲಿ ಈತನದ್ದು ಎತ್ತಿದ ಕೈ. ಈತನನ್ನು ಬೆಂಗಳೂರಿನಿಂದ ಗಡೀಪಾರು ಮಾಡಲಾಗಿತ್ತು. ನಂತರ ಈತ ಚಿತ್ತೂರಿನಲ್ಲಿ ಹೋಗಿ ನೆಲೆಸಿದ್ದ ಎನ್ನಲಾಗಿದೆ.

news18-kannada
Updated:June 20, 2020, 10:44 AM IST
ಶಿವರಾಜ್​ಕುಮಾರ್​ ಜೊತೆ ತೆರೆ ಹಂಚಿಕೊಂಡಿದ್ದ ನಿಜವಾದ ರೌಡಿ ಕೊರಂಗು ಕೃಷ್ಣ ಸಾವು!
ಶಿವರಾಜ್​ಕುಮಾರ್ ಮತ್ತು ಕೊರಂಗು ಕೃಷ್ಣ
  • Share this:
ಸ್ಯಾಂಡಲ್​ವುಡ್​ನಲ್ಲಿ ಹೊಸ ಅಲೆ ಸೃಷ್ಟಿಸಿದ್ದ ಸಿನಿಮಾ ‘ಓಂ’. ಈ ಚಿತ್ರದಲ್ಲಿ ರೌಡಿ ಪಾತ್ರ ಮಾಡಿದ್ದ ಬಹುತೇಕರು ನಿಜವಾದಿ ರೌಡಿಗಳು. ಹೀಗೊಂದು ಪ್ರಯತ್ನ ಮಾಡಿ ನಿರ್ದೇಶಕ ಉಪೇಂದ್ರ ಎಲ್ಲರ ಗಮನ ಸೆಳೆದಿದ್ದರು. ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ರೌಡಿ ಕೊರಂಗು ಕೃಷ್ಣ ಮೃತಪಟ್ಟಿದ್ದಾನೆ.

90ರ ದಶಕದಲ್ಲಿ ಬೆಂಗಳೂರಲ್ಲಿ ಕೊರಂಗು ಕೃಷ್ಣ ಭಾರೀ ಸದ್ದು ಮಾಡಿದ್ದ. ಕೊಲೆ, ಸುಲಿಗೆ, ಜೀವ ಬೆದರಿಕೆ ಹಾಕುವುದರಲ್ಲಿ ಈತನದ್ದು ಎತ್ತಿದ ಕೈ. ಈತನನ್ನು ಬೆಂಗಳೂರಿನಿಂದ ಗಡೀಪಾರು ಮಾಡಲಾಗಿತ್ತು. ನಂತರ ಈತ ಚಿತ್ತೂರಿನಲ್ಲಿ ಹೋಗಿ ನೆಲೆಸಿದ್ದ ಎನ್ನಲಾಗಿದೆ.

ಈತನಿಗೆ ಅನೇಕ ವರ್ಷಗಳಿಂದ ಕರುಳುಬೇನೆ ಬಿಟ್ಟು ಬಿಡದೆ ಕಾಡುತ್ತಿತ್ತು. ಇತ್ತೀಚೆಗೆ ಆಸ್ಪತ್ರೆಗೆ ಕೂಡ ದಾಖಲಾಗಿದ್ದ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಈತ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಖಡಕ್ ಖಳನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಡಲಿದ್ದಾರಾ ಕಾಲಿವುಡ್​ನ ಖ್ಯಾತ ನಟ..!

1995ರಲ್ಲಿ ಓಂ ಸಿನಿಮಾ ತೆರೆಗೆ ಬಂದಿತ್ತು. ಉಪೇಂದ್ರ ನಿರ್ದೇಶನದ ಈ ಚಿತ್ರದಲ್ಲಿ ಶಿವರಾಜ್​ಕುಮಾರ್​ ಹಾಗೂ ಪ್ರೇಮಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಂಸಲೇಖ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಈ ಸಿನಿಮಾದಲ್ಲಿ ನೈಜ ರೌಡಿಗಳ ಬಳಕೆ ಆಗಿತ್ತು.
First published: June 20, 2020, 10:44 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories