• Home
  • »
  • News
  • »
  • entertainment
  • »
  • Actor Yash: ಉಕ್ಕಿ ಹರಿಯಿತು ಯಶ್ ದಂಪತಿ ಅಭಿವೃದ್ಧಿಪಡಿಸಿದ ತಲ್ಲೂರು ಕೆರೆ!

Actor Yash: ಉಕ್ಕಿ ಹರಿಯಿತು ಯಶ್ ದಂಪತಿ ಅಭಿವೃದ್ಧಿಪಡಿಸಿದ ತಲ್ಲೂರು ಕೆರೆ!

ಯಶ್ ದಂಪತಿ ಅಭಿವೃದ್ಧಿಪಡಿಸಿದ ತಲ್ಲೂರು ಕೆರೆ

ಯಶ್ ದಂಪತಿ ಅಭಿವೃದ್ಧಿಪಡಿಸಿದ ತಲ್ಲೂರು ಕೆರೆ

Actor Yash: ಕೆಜಿಎಫ್ ನಟ ಯಶ್ ಅವರ ಯಶೋಮಾರ್ಗ ಯೋಜನೆಯಲ್ಲಿ ಅಭಿವೃದ್ಧಿಪಡಿಸಲಾದ ಕೆರೆ ತುಂಬಿ ಉಕ್ಕಿ ಹರಿದಿದೆ. ತುಂಬಿದ ಕೆರೆ ನೋಡಿ ಗ್ರಾಮಸ್ಥರ ಮುಖದಲ್ಲಿ ನಗು ತುಂಬಿದೆ.

  • Share this:

ಕೊಪ್ಪಳ(ಸೆ.30): ಸ್ಯಾಂಡಲ್​ವುಡ್ ರಾಕಿಂಗ್​ ಸ್ಟಾರ್ ನಟ ಯಶ್ (Rocking Star Yash) ಅಭಿವೃದ್ಧಿ ಪಡಿಸಿದ ಕೆರೆ ಕೋಡಿ ಬಿದ್ದಿದೆ. ಅಧಿಕ ಮಳೆಯ (Heavy Rain) ಪರಿಣಾಮವಾಗಿ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆ (Thalluru lake) ಭರ್ತಿಯಾಗಿದ್ದು ಕೆರೆ ತುಂಬಿ ಉಕ್ಕಿ ಹರಿದಿದೆ. 2016ರಲ್ಲಿ ಯಶೋಮಾರ್ಗ ಫೌಂಡೇಶನ್ ನಿಂದ ನಟ ಯಶ್ (Actor Yash) ಅಭಿವೃದ್ದಿಸಿದ್ದ ಕೆರೆ ಅಭಿವೃದ್ದಿ ಪಡಿಸಿದ ನಂತರ ಇದೇ ಮೊದಲು ಕೋಡಿ ಬಿದ್ದಿದೆ. 2008 ರಲ್ಲಿ ತಲ್ಲೂರು ಕೆರೆ ಕೋಡಿ ಬಿದ್ದು ನೀರು (Water) ಹರಿದಿತ್ತು. ಈಗ ಮತ್ತೆ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದ್ದಕ್ಕೆ ಗ್ರಾಮಸ್ಥರಲ್ಲಿ ಸಂತಸ ಮೂಡಿದೆ. ಸತತ ಮೂರ್ನಾಲ್ಕು ವರ್ಷಗಳ ಬರದಿಂದ ಸಂಪೂರ್ಣವಾಗಿ 96 ಎಕರೆ ವಿಸ್ತೀರ್ಣದ ತಲ್ಲೂರು ಕೆರೆ ಬತ್ತಿ ಹೋಗಿತ್ತು. ಸಂಪೂರ್ಣವಾಗಿ ಹೂಳು ತುಂಬಿಕೊಂಡಿತ್ತು. ಕೆರೆಯ ಹೂಳು ತಗೆಯುವ ಕೆಲಸಕ್ಕೆ 2017 ಫೆಬ್ರವರಿ ತಿಂಗಳಲ್ಲಿ ಯಶ್ ದಂಪತಿ ಚಾಲನೆ ನೀಡಿದ್ದರು. ಅಂದು ಮಾಡಿದ್ದ ಕೆಲಸಕ್ಕೆ ಇಂದು ಫಲ ಸಿಕ್ಕಿದೆ. ಇದರಿಂದ ಸುಮಾರು 10 ಕ್ಕೂ ಹೆಚ್ಚು ಗ್ರಾಮದ ರೈತರಿಗೆ ಅನುಕೂಲವಾಗಿದೆ.


4 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದ್ದ ಕೆರೆ


ಈ ಕೆರೆಯನ್ನು ಯಶ್ ಹಾಗೂ ರಾಧಿಕಾ ಪಂಡಿತ್ ನೇತೃತ್ವದಲ್ಲಿ 4 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದ್ದು ಅಂತೂ ಈ ಕೆರೆ ತುಂಬಿದ್ದು ಸುತ್ತಮುತ್ತಲಿನ ಗ್ರಾಮಸ್ಥರು ಇದರ ಪ್ರಯೋಜನ ಪಡೆಯಲಿದ್ದಾರೆ.ಯಶೋಮಾರ್ಗ ಯೋಜನೆ


ಯಶ್ ದಂಪತಿ ಆರಂಭಿಸಿದ ಈ ಯಶೋಮಾರ್ಗ ಫೌಂಡೇಷನ್ ಮೂಲಕ ಕರ್ನಾಟಕದ ಕೆರೆಗಳ ಅಭಿವೃದ್ಧಿಗೆ ಗುರಿ ಇರಿಸಲಾಗಿದ್ದು ಇದು ಸಕ್ಸಸ್​ಫುಲ್ ಆಗಿ ನಡೆಯುತ್ತಿದೆ.


Koppala thalluru Lake developed under Actor rocking star Yash yashomarga project is overflowed
ತಲ್ಲೂರು ಕೆರೆ


ಈ ಬಗ್ಗೆ ಟ್ವೀಟ್ ಮಾಡಲಾಗಿದ್ದು ಯಶೋಮಾರ್ಗದ ಮಹತ್ವದ ಯೋಜನೆಯಾಗಿದ್ದ ತಲ್ಲೂರು ಕೆರೆಯ ತುಂಬಾ ನೀರು ಬಂದಿದ್ದು ನೋಡಲು ಸುಂದರಮಯವಾಗಿದ್ದು ಸುತ್ತಮುತ್ತಲಿನ ಜನರಲ್ಲಿ ನೀರಿನ ದಾಹ ತೀರಿ ಮಂದಹಾಸ ಮೂಡಿಸಿದೆ ಎಂದು ಫೊಟೋ ಹಂಚಿಕೊಳ್ಳಲಾಗಿದೆ.


ರಾಕಿಂಗ್ ಸ್ಟಾರ್ ಯಶ್​ (Rocking Star Yash) ತಮ್ಮ ಯಶೋಮಾರ್ಗ (Yashomarga) ಯೋಜನೆಯ ಮೂಲಕ ಹಲವಾರು ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯವನ್ನು ಮಾಡುತ್ತಿದ್ದಾರೆ. ಕೆರೆಗಳ ಸ್ವಚ್ಛತೆ, ಹೂಳೆತ್ತುವುದು ಹೀಗೆ. ಸಾಮಾಜಿಕ ಕಾರ್ಯಗಳಿಗೆ ಯಾವಾಗಲೂ ಸಾಥ್ ನೀಡುವ ಯಶ್ ಈ ಬಾರಿ ಕೂಡ ಯಶೋಮಾರ್ಗ ಮೂಲಕ ಅತಿ ಪುರಾತನ ಕಲ್ಯಾಣಿಯನ್ನು (kalyani) ಜೀರ್ಣೋದ್ಧಾರ ಮಾಡಿದ್ದಾರೆ. ಕೆಳದಿ ಅರಸ (Keladi dynasty) ಕಾಲದಲ್ಲಿ ನಿರ್ಮಾಣವಾದ ಕಲ್ಯಾಣಿಯನ್ನು ಯಶ್​ ಜೀರ್ಣೋದ್ಧಾರ ಮಾಡಲಾಗಿತ್ತು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಬಳಿಯ ಇರುವ ಈ ಚಂಪಕ ಕಲ್ಯಾಣಿಯನ್ನ ಯಶ್​ ಅವರ ಯೋಜನೆಯಡಿ ಜೀರ್ಣೋದ್ಧಾರ ಮಾಡಲಾಗಿದ್ದು, ನಿವಾಸಿಗಳು ನಟ ಯಶ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಯಶ್ ಅವರ ಕನಸಿನ ಕೂಸು ಯಶೋಮಾರ್ಗ ಎನ್​ಜಿಓ ಈ ಚಂಪಕ ಸರಸಿ ಕಲ್ಯಾಣಿಯ ಸ್ವಚ್ಛತೆ ಮಾಡಿದ್ದು, ನಿನ್ನೆ ವಿಶ್ವ ಪರಿಸರ ದಿನಾಚರಣೆಯ ಹಿನ್ನೆಲೆ ಉದ್ಘಾಟನೆ ಮಾಡಲಾಗಿದೆ.

Published by:Divya D
First published: