ಕೊಪ್ಪಳದ ಗಾನ ಕೋಗಿಲೆ ಗಂಗಮ್ಮನಿಗೆ ಕೊನೆಗೂ ಸಿಕ್ಕಿತು ಸ್ಯಾಂಡಲ್​ವುಡ್​ನಲ್ಲಿ ಅವಕಾಶ!

Anitha E | news18
Updated:July 26, 2018, 5:21 PM IST
ಕೊಪ್ಪಳದ ಗಾನ ಕೋಗಿಲೆ ಗಂಗಮ್ಮನಿಗೆ ಕೊನೆಗೂ ಸಿಕ್ಕಿತು ಸ್ಯಾಂಡಲ್​ವುಡ್​ನಲ್ಲಿ ಅವಕಾಶ!
Anitha E | news18
Updated: July 26, 2018, 5:21 PM IST
ನ್ಯೂಸ್​ 18 ಕನ್ನಡ  

ಪ್ರತಿಭೆ ಯಾರ ಸ್ವತ್ತು ಅಲ್ಲ. ಪ್ರತಿಭೆ ಜತೆಗೆ ಗುರಿಯೊಂದಿದ್ದರೆ ನಾವು ಏನು ಬೇಕಾದರೂ ಸಾಧಿಸಿ ತೋರಿಸಬಹುದು ಅನ್ನೋದಕ್ಕೆ ನೈಜ ಉದಾಹರಣೆ ಕೊಪ್ಪಳದ ಗಾನ ಕೋಗಿಲೆ ಗಂಗಮ್ಮ. ಕಳೆದ ವಾರ ನಮ್ಮ ಕಚೇರಿಗೆ ಬಂದಿದ್ದ ಗಂಗಮ್ಮ ನಮ್ಮ ವೆಬ್​ಸೈಟ್​ನಲ್ಲಿ ಲೈವ್​ ಬಂದು ಹಾಡಿದ್ದ ಅದ್ಭುತ ಹಾಡುಗಳನ್ನ ನೀವು ಕೇಳಿದ್ದೀರಿ. ಇಷ್ಟು ದಿನ ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಿದ್ದ ಈ ಪ್ರತಿಭೆ ಈಗ ಚಂದನವನದ ಸಿನಿಮಾಗೆ ಹಾಡು ಹಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಕೊಪ್ಪಳದಲ್ಲಿ ಎಲೆಮರೆ ಕಾಯಿಯಂತಿದ್ದ ಇದೇ ಗಂಗಮ್ಮ ಅವರಿಗೆ ಇದೀಗ ಕನ್ನಡ ಸಿನಿಮಾಗಳಿಂದ ಅವಕಾಶಗಳು ಅರಸಿ ಬರುತ್ತಿವೆ. ಇಂದು ಇವರು ಕನ್ನಡದ 'ಪರ್ದೇಸಿ ಕೇರ್ ಆಫ್ ಲಂಡನ್' ಚಿತ್ರ ಹಾಡೊಂದಕ್ಕೆ ಧ್ವನಿ ನೀಡಿದ್ದಾರೆ. ವೀರ್ ಸಮರ್ಥ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದು, ಇಂದು ಗಂಗಮ್ಮ ಅವರಿಂದ ಹಾಡಿನ ರೆಕಾರ್ಡಿಂಗ್​ ಕೂಡ ಮುಗಿಸಿದ್ದಾರೆ.

ಇದೊಂದು ಟಪ್ಪಾಂಗುಚ್ಚಿ ಹಾಡಾಗಿದ್ದು, ಮೊಲಿಗೆ ಕೊಂಚ ತರಬೇತಿ ಪಡೆದ ಗಂಗಮ್ಮ ನಂತರದಲ್ಲಿ ಸರಾಗವಾಗಿ ಹಾಡಿ ರೆಕಾರ್ಡಿಂಗ್ ಮುಗಿಸಿಕೊಂಡಿದ್ದಾರೆ. ಟಿವಿ ಕಾರ್ಯಕ್ರಮಗಳಲ್ಲಿ ಗಂಗಮ್ಮರ ಧ್ವನಿ ಕೇಳಿ ಮನಸೋತಿದ್ದ ಚಿತ್ರ ನಿರ್ದೇಶಕ ರಾಜ್‍ಶೇಖರ್ ಇವರಿಂದಲೇ ಈ ಹಾಡನ್ನ ಹಾಡಿಸಬೇಕೆಂದು ನಿರ್ಧರಿಸಿದ್ದರಂತೆ. ಹೀಗಾಗಿ ಇಂದು ಅ ಸಮಯ ಕೂಡಿ ಬಂದಿದ್ದು, ಗಂಗಮ್ಮರೊಂದಿಗೆ ಹಾಡನ್ನ ಹಾಡಿಸಿದ್ದಾರೆ.

ಕೆಲ ದಿನಗಳ ಹಿಂದೆ ಗಂಗಮ್ಮ ಆರ್ಕೆಸ್ಟ್ರಾದಲ್ಲಿ ಹಾಡುವ ಹಾಡನ್ನ ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಲಾಗಿತ್ತು. ಆ ವಿಡಿಯೋ ತುಣುಕನ್ನ ನೋಡಿದ ಅದೆಷ್ಟೊ ಮಂದಿ ಗಂಗಮ್ಮ ಹಾಡಿನ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದರು. ತದನಂತರದಲ್ಲಿ ಬೆಳಕಿಗೆ ಬಂದ ಕೊಪ್ಪಳದ ಈ ಗಾನ ಕೋಗಿಲೆ ಇದೀಗ ಈ ಮಟ್ಟಕ್ಕೆ ಬೆಳೆದಿರೋದಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

 
First published:July 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...