Puneeth Rajkumar: ಮಗುವಿಗೆ ಪುನೀತ್ ಹೆಸರು ನಾಮಕರಣ ಮಾಡಿದ ಅಪ್ಪು ಅಭಿಮಾನಿ

ಕೊಪ್ಪಳದ ಅಪ್ಪು ಅಭಿಮಾನಿಯೊಬ್ಬರು ತಮ್ಮ ಪುಟ್ಟ ಗಂಡು ಮಗುವಿಗೆ ಪುನೀತ್ ರಾಜ್ ಎಂದು ಶಾಸ್ತ್ರೋಕ್ತವಾಗಿ ನಾಮಕರಣ ಮಾಡಿದ್ದಾರೆ.

ಪುನೀತ್​ ರಾಜ್​ಕುಮಾರ್​​

ಪುನೀತ್​ ರಾಜ್​ಕುಮಾರ್​​

  • Share this:
ಕೊಪ್ಪಳ(ಆ.30): ಕೊಪ್ಪಳದ (Koppala) ದಂಪತಿ (Couple) ತಮ್ಮ ಪುಟ್ಟ ಮಗನಿಗೆ (Son) ಪುನೀತ್ ರಾಜಕುಮಾರ್ (Puneeth Rajkumar) ಎಂದು ನಾಮಕರಣ ಮಾಡಿದ್ದಾರೆ. ಮಗನಿಗೆ ಪುನೀತ್ ಎಂದು ನಾಮಕರಣ ಮಾಡಿದ ಯಲ್ಲೇಶ್, ಸಹನಾ ದಂಪತಿಗಳು ಅಪ್ಪು (Appu) ಕುರಿತ ಅಭಿಮಾನ ತೋರಿಸಿಕೊಂಡಿದ್ದಾರೆ. ಕೊಪ್ಪಳದ ನಿವಾಸಿ ಯಲ್ಲೇಶ್ ಅಪ್ಪು ಅಭಿಮಾನಿಯಾಗಿದ್ದು ಹೀಗಾಗಿ ಮಗನಿಗೆ ಪುನೀತ್ ಎಂದು‌ ನಾಮಕರಣ ಮಾಡಿದ್ದಾಗಿ ಹೇಳಿದ್ದಾರೆ. ಕಳೆದ ಏಪ್ರಿಲ್​​ನಲ್ಲಿ ಯಲ್ಲೇಶ್ ಹಾಗೂ ಸಹನಾ ದಂಪತಿಗೆ ಗಂಡು ಮಗು ಜನಿಸಿತ್ತು. ಇದೀಗ ಶಾಸ್ತ್ರೋಕ್ತವಾಗಿ ಮಗನಿಗೆ ಪುನೀತ್ ಎಂದು ನಾಮಕರಣ (Naming Ceremony) ಮಾಡಲಾಗಿದೆ. ಅಪ್ಪು ಮೇಲಿನ ಅಭಿಮಾನಕ್ಕೆ ಮಗನಿಗೆ ಪುನೀತ್ ಎಂದು ನಾಮಕರಣ ಮಾಡಿ ಈಗ ಇವರು ಸುದ್ದಿಯಾಗಿದ್ದಾರೆ.

ಪುನೀತ್ ಅಭಿಮಾನಿ ಕುಟುಂಬವನ್ನು ಮನೆಗೆ ಕರೆಸಿಕೊಂಡ ಅಶ್ವಿನಿ ಪುನೀತ್ ರಾಜ್​ ಕುಮಾರ್

ಪುನೀತ್ ರಾಜ್​ಕುಮಾರ್ ಅವರ ಅಭಿಮಾನಿಯನ್ನು ಮನೆಗೆ ಕರಿಸಿಕೊಂಡ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಅಪ್ಪು ಅಭಿಮಾನಿಯ ಮಗುವಿಗೆ ಉಡುಗೊರೆ ನೀಡಿದ್ದಾರೆ. ಸ್ಯಾಂಡಲ್​ವುಡ್ ಪವರ್​ಸ್ಟಾರ್ ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಪತಿಗಿಂತ ಭಿನ್ನವಾಗಿಲ್ಲ. ಪತಿಯ ಅಭಿಮಾನಿಗಳನ್ನು ಕಂಡರೆ ಅದೇ ಅಕ್ಕರೆ, ಮಮತೆಯನ್ನು ತೋರಿಸುತ್ತಾರೆ. ಪುನೀತ್ ಅವರು ಅಭಿಮಾನಿಗಳಿಗೆ ಸಾಧ್ಯವಾದಷ್ಟು ನೆರವಾಗುತ್ತಿದ್ದರು.

ಅಪ್ಪು ಅಭಿಮಾನಿ ಮಗುವಿಗೆ ಉಡುಗೊರೆ

ಅಭಿಮಾನಿಗಳ ಪ್ರೀತಿಗೆ ದುಪ್ಪಟ್ಟು ಪ್ರೀತಿ ನೀಡುತ್ತಿದ್ದವರು ಅಪ್ಪು. ಅಪ್ಪು ಅಭಿಮಾನಿಯ ಮಗುವಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಪ್ರೀತಿಯ ಉಡುಗೊರೆ ನೀಡಿದ್ದು ಈ ಫೋಟೊಗಳು ಈಗ ವೈರಲ್ ಆಗಿವೆ. ಅಪ್ಪು ಅಭಿಮಾನಿ ಲೋಕೇಶ್ ಎಂಬುವರ ಮಗುವಿಗೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಪ್ರೀತಿಯ ಉಡುಗೊರೆಯನ್ನು ನೀಡಿದ್ದಾರೆ.

ಅಪ್ಪು ಅಭಿಮಾನಿಯ ಮಗುವನ್ನು ಮನೆಗೆ ಕರೆಸಿ ಉಡುಗೊರೆ ಕೊಟ್ಟ ಅಶ್ವಿನಿ ಪುನೀತ್ ರಾಜ್​ ಕುಮಾರ್ ಅಭಿಮಾನಿ ಕುಟುಂಬದ ಜೊತೆಗೆ ಕಳೆದ ಕ್ಷಣಗಳ ಫೋಟೋ ವೈರಲ್ ಆಗಿವೆ. ಪುನೀತ್ ರಾಜ್‍ಕುಮಾರ್ ಅವರ ಕೆಲಸಗಳನ್ನು ಮುಂದುವರೆಸುತ್ತಿರುವ ಅಶ್ವಿನಿ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: Actress Ramya: ಗಣೇಶ ಹಬ್ಬದ ದಿನ ನಟಿ ರಮ್ಯಾ ಸಿಹಿ ಸುದ್ದಿ! ಏನಿರಬಹುದು?

ರಾಮನಗರ ಜಿಲ್ಲೆ ಬಿಡದಿ ಮೂಲದ ಲೋಕೇಶ್ ಅವರು ಬಿಡದಿಯಲ್ಲಿ ತಟ್ಟೆ ಇಡ್ಲಿ ಹೋಟೆಲ್ ನಡೆಸುತ್ತಿದ್ದಾರೆ. ಲೋಕೇಶ್ ಗೆ ಹೋಟೆಲ್ ಇಡಲು ಪವರ್​ಸ್ಟಾರ್ ಪುನೀತ್ ರಾಜ್ಕುಮಾರ್ ಸಹಾಯ ಮಾಡಿದ್ದರು. ಅಶ್ವಿನಿ ಪುನೀತ್ ರಾಜ್​ಕುಮಾರ್ ಜೊತೆ ಅಪ್ಪು ಅಭಿಮಾನಿ ಕುಟುಂಬ ಫೋಟೋ ತೆಗೆಸಿಕೊಂಡಿದ್ದರು.
Published by:Divya D
First published: