Chiyaan Vikram: ಇದೊಂದೇ ಕಾರಣಕ್ಕೆ ಟ್ವಿಟರ್​​ಗೆ ಬಂದಿದ್ದಾರಂತೆ ಚಿಯಾನ್ ವಿಕ್ರಮ್

ಕಾಲಿವುಡ್‌ ಸೂಪರ್‌ ಸ್ಟಾರ್‌ ಆಗಿರುವ ಚಿಯಾನ್ ವಿಕ್ರಮ್ ತಮಿಳು ಚಿತ್ರರಂಗದಲ್ಲಿ ಅತ್ಯಂತ ದೊಡ್ಡ ಹೆಸರು ಮಾಡಿರುವ ಮೇರು ನಟರಾಗಿದ್ದಾರೆ. ಅವರು ಸಿನಿಮಾದಲ್ಲಿ ಕಾಣಿಸಿಕೊಳ್ಳುವ ತಮ್ಮ ಡ್ಯಾಶಿಂಗ್‌ ಪ್ರವೃತ್ತಿಯಿಂದ ಮತ್ತು ತಾಳ್ಮೆಯ ಗುಣದಿಂದ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಈಗ ಸಿನಿಪ್ರಿಯರಿಗೆ ಇಲ್ಲಿದೆ ಒಂದು ದೊಡ್ಡ ಸುದ್ದಿ. ʼಕೋಬ್ರಾʼ ಮತ್ತು ʼಪೊನ್ನಿಯಿನ್ ಸೆಲ್ವನ್ 1ʼ ಸಿನಿಮಾಗಳ ಬಿಡುಗಡೆಗೆ ಮುಂಚಿತವಾಗಿ, ನಟ ವಿಕ್ರಮ್‌ ಸಾಮಾಜಿಕ ಜಾಲತಾಣ ಟ್ವಿಟರ್‌ಗೆ ಪಾದಾರ್ಪಣೆ ಮಾಡಿರುವುದು ಅವರ ಅಭಿಮಾನಿಗಳಿಗೆ ಖುಷಿಯ ವಿಚಾರ ಆಗಿದೆ.

ಚಿಯಾನ್ ವಿಕ್ರಮ್

ಚಿಯಾನ್ ವಿಕ್ರಮ್

  • Share this:
ಕಾಲಿವುಡ್‌ ಸೂಪರ್‌ ಸ್ಟಾರ್‌ (Kollywood superstar) ಆಗಿರುವ ಚಿಯಾನ್ ವಿಕ್ರಮ್ (Chiyaan Vikram) ತಮಿಳು ಚಿತ್ರರಂಗದಲ್ಲಿ ಅತ್ಯಂತ ದೊಡ್ಡ ಹೆಸರು ಮಾಡಿರುವ ಮೇರು ನಟರಾಗಿದ್ದಾರೆ. ಇವರು ಸುಮಾರು 1990 ರ ದಶಕದಿಂದಲೂ ಕಾಲಿವುಡ್‌ ಚಲನಚಿತ್ರದ ಅವಿಭಾಜ್ಯ ಅಂಗವಾಗಿರುವ ಬಹುಮುಖ ಮತ್ತು ಧೀಮಂತ ನಟ. ಅವರು ಸಿನಿಮಾದಲ್ಲಿ (cinema) ಕಾಣಿಸಿಕೊಳ್ಳುವ ತಮ್ಮ ಡ್ಯಾಶಿಂಗ್‌ ಪ್ರವೃತ್ತಿಯಿಂದ ಮತ್ತು ತಾಳ್ಮೆಯ ಗುಣದಿಂದ ಸಾಕಷ್ಟು ಅಭಿಮಾನಿಗಳನ್ನು (Fans) ಗಳಿಸಿದ್ದಾರೆ. ಇವರ ಸಿನಿಮಾಗಳೆಂದರೆ ತಮಿಳುನಾಡಿನಲ್ಲಿ ಅಭಿಮಾನಿಗಳಿಗೆ ಹಬ್ಬ. ಇವರ ಸಿನಿಮಾ ಬಿಡುಗಡೆಯಂದು (Movie Release) ಅಭಿಮಾನಿಗಳು ಅವರ ಕಟ್‌ಔಟ್‌ಗೆ ಹಾಲಿನ ಅಭಿಷೇಕ ಮಾಡಿ, ದೇವರ ಸಿನಿಮಾ ನೋಡುವ ರೀತಿಯಲ್ಲಿ ಅವರ ಸಿನಿಮಾಗಳನ್ನು ಆರಾಧಿಸುವ ಭಕ್ತರಂತೆ ಅಭಿಮಾನಿಗಳು ಇವರನ್ನು ಮತ್ತು ಇವರ ಸಿನಿಮಾವನ್ನು ಆರಾಧಿಸುತ್ತಾರೆ.

ಟ್ವಿಟರ್‌ಗೆ ಪಾದಾರ್ಪಣೆ ಮಾಡಿದ ಚಿಯಾನ್ ವಿಕ್ರಮ್
ಸಿನಿಪ್ರಿಯರಿಗೆ ಇಲ್ಲಿದೆ ಒಂದು ದೊಡ್ಡ ಸುದ್ದಿ. ʼಕೋಬ್ರಾʼ ಮತ್ತು ʼಪೊನ್ನಿಯಿನ್ ಸೆಲ್ವನ್ 1ʼ ಸಿನಿಮಾಗಳ ಬಿಡುಗಡೆಗೆ ಮುಂಚಿತವಾಗಿ, ನಟ ವಿಕ್ರಮ್‌ ಸಾಮಾಜಿಕ ಜಾಲತಾಣ ಟ್ವಿಟರ್‌ಗೆ ಪಾದಾರ್ಪಣೆ ಮಾಡಿರುವುದು ಅವರ ಅಭಿಮಾನಿಗಳಿಗೆ ಖುಷಿಯ ವಿಚಾರ ಆಗಿದೆ.

ಚಿಯಾನ್ ವಿಕ್ರಮ್ ಇದೀಗ ಟ್ವಿಟರ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಅದರ ಜೊತೆಗೆ ಸೌತ್ ಸೂಪರ್ ಸ್ಟಾರ್ ಆಗಿರುವ ಇವರು ತಮ್ಮ ವಿಡಿಯೋವನ್ನು ಈ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:  Prashanth Neel: ಸಾಧನೆ ಶಿಖರ ಏರಿದ್ದರೂ ಹುಟ್ಟೂರು ಮರೆಯದ ಪ್ರಶಾಂತ್ ನೀಲ್, ಕಣ್ಣಿನ ಆಸ್ಪತ್ರೆಗೆ 50 ಲಕ್ಷ ಕೊಟ್ಟ ಕೆಜಿಎಫ್ ಡೈರೆಕ್ಟರ್!

ಚಿಯಾನ್ ವಿಕ್ರಮ್ ಅವರ ಮೊದಲ ಪೋಸ್ಟ್ ಯಾವುದು
ಇಷ್ಟು ದಿನ ವಿಕ್ರಮ್‌ ಟ್ವಿಟರ್‌ ಸಾಮಾಜಿಕ ಜಾಲತಾಣದಿಂದ ದೂರವಿದ್ದರು. ಆದರೆ ಈಗ ಕೊನೆಗೂ ವಿಕ್ರಮ್ ಟ್ವಿಟ್ಟರ್ ಗೆ ಪಾದಾರ್ಪಣೆ ಮಾಡಿದ್ದಾರೆ. ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್ @chiyaan. ಟ್ವಿಟರ್‌ ಖಾತೆಯಲ್ಲಿ ವಿಕ್ರಮ್ ಅವರ ಮೊದಲ ಪೋಸ್ಟ್ ವಿಡಿಯೋವಾಗಿದ್ದು, ಅದರಲ್ಲಿ ಅವರು, “ಇದು ನಾನು ಚಿಯಾನ್ ವಿಕ್ರಮ್. ಇದು ನಿಜವಾಗಿಯೂ ನಾನೇ, ಯಾವುದೇ ಗೊಂದಲಬೇಡ. ನಿಮ್ಮ ವಿಕ್ರಮ್‌ ಟ್ವಿಟರ್‌ಗೆ ಮೊದಲ ಬಾರಿಗೆ ಬಂದಿದ್ದಾರೆ.



ನಾನು ಯಾವುದೋ ವೇಷ ಹಾಕಿಕೊಂಡಿಲ್ಲ. ಇದು ಪಾ.ರಂಜಿತ್ ಅವರೊಂದಿಗಿನ ನನ್ನ ಮುಂದಿನ ಚಿತ್ರಕ್ಕಾಗಿ ಇದು ನನ್ನ ಸ್ಟೈಲ್‌ ಆಗಿದೆ. ನನ್ನ ಅಭಿಮಾನಿಗಳೊಂದಿಗೆ ನಾನು ಸಂಪರ್ಕದಲ್ಲಿರಲು ಮತ್ತು ನನ್ನ ಎಲ್ಲ ಸಿನಿಮಾಗಳ ಬಗ್ಗೆ ಅಭಿಮಾನಿಗಳಿಗೆ ತಿಳಿಸಲು ಈ ಟ್ವಿಟರ್ ನನಗೆ ಅವಕಾಶ ನೀಡುತ್ತದೆ ಎಂದು ನನಗೆ ನನ್ನ ಹಿತೈಶಿಗಳು ತಿಳಿಸಿದರು. ಆದರೆ, ನಾನು ಸುಮಾರು 15 ವರ್ಷ ಆಯಿತು. ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿ, ಆದರೆ ಈಗ ಮತ್ತೆ ಸಾಮಾಜಿಕ ಜಾಲತಾಣಗಳಿಗೆ ಬರುವುದಕ್ಕೆ ಸರಿಯಾದ ಸಮಯ ಆಗಿದೆ ಎಂದು ನಾನು ಭಾವಿಸುತ್ತೇನೆ” ಎಂದು ತಮ್ಮ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ ವಿಡಿಯೋದಲ್ಲಿ ಇದನ್ನು ಹಂಚಿಕೊಂಡಿದ್ದರು.

ಟ್ವಿಟ್ಟರ್ ಖಾತೆ ತೆರೆಯಲು ಕಾರಣ?
ವಿಕ್ರಮ್‌ ತಮ್ಮ ಅಭಿಮಾನಿಗಳ ಪ್ರೀತಿ ಎಷ್ಟಿದೆ ಎಂದು ತಿಳಿಯಲು, ಅವರಿಗೆ ನನ್ನ ಸಿನಿಮಾದ ಪ್ರತಿಯೊಂದು ಮಾಹಿತಿ ತಿಳಿಸಲು ನಾನು ಟ್ವಿಟರ್‌ಗೆ ಪಾದಾರ್ಪಣೆ ಮಾಡಿದ್ದೇನೆ ಎಂದು ನಟ ವಿಕ್ರಮ್‌ ಹೇಳಿದರು.

ಇದನ್ನೂ ಓದಿ:  Shivarajkumar: ರಜನಿಕಾಂತ್ ಜೈಲರ್ ಚಿತ್ರದಲ್ಲಿ ಶಿವಣ್ಣ ಪಾತ್ರ ರಿವೀಲ್! ಹೇಗಿರುತ್ತೆ ಟಗರು ಖದರ್!?

“ಸೋಷಿಯಲ್ ಮೀಡಿಯಾದಲ್ಲಿ ನನ್ನನ್ನು ಮತ್ತು ನನ್ನ ಸಿನಿಮಾ ಮೆಚ್ಚುವ ಸಾಕಷ್ಟು ಅಭಿಮಾನಿಗಳು ಇದ್ದಾರೆ ಮತ್ತು ಅವರು ನನ್ನ ಮೇಲೆ ತುಂಬಾ ಪ್ರೀತಿಯನ್ನು ಇರಿಸಿದ್ದಾರೆ ಎಂದು ಜನರು ಹೇಳುವುದನ್ನು ನಾನು ಕೇಳಿದ್ದೇನೆ ಮತ್ತು ನಾನು ಅದನ್ನು ಸ್ವಲ್ಪ ಆನಂದಿಸಲು ಬಯಸುತ್ತೇನೆ. ಅದಕ್ಕಾಗಿ ನಾನು ಇದೀಗ ಟ್ವಿಟರ್‌ಗೆ ಬಂದಿದ್ದೇನೆ” ಎಂದು ವಿಕ್ರಮ್ ಹೇಳಿದರು.

ಚಿಯಾನ್‌ ವಿಕ್ರಮ್‌ ಬಗ್ಗೆ ಒಂದಿಷ್ಟು ಮಾಹಿತಿ:
ಕೆನಡಿ ಜಾನ್ ವಿಕ್ಟರ್ ಅವರು ವಿಕ್ರಮ್ ಅಥವಾ ಚಿಯಾನ್ ವಿಕ್ರಮ್ ಎಂದೇ ಪ್ರಸಿದ್ಧರಾಗಿರುವ ಒಬ್ಬ ಭಾರತ ಚಲನಚಿತ್ರ ರಂಗ ಕಂಡಿರುವ ಅದ್ಭುತ ನಟರಾಗಿದ್ದಾರೆ. ಇವರು ನಟ ಮತ್ತು ಗಾಯಕರು ಕೂಡ ಹೌದು. ನಟನೆಯ ಹೊರತಾಗಿ, ವಿಕ್ರಮ್ ಇತರ ಚಲನಚಿತ್ರ ನಿರ್ಮಾಣವನ್ನು ಸಹ ಮಾಡುತ್ತಾರೆ. ಸಹಾಯಕ ನಿರ್ದೇಶಕರಾಗಿ ಚಲನಚಿತ್ರದಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರು ಮುಖ್ಯವಾಗಿ ತಮಿಳು ಭಾಷೆಯ ಚಲನಚಿತ್ರಗಳಲ್ಲಿ ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರು ಏಳು ಫಿಲ್ಮಫೇರ್‌ ಪ್ರಶಸ್ತಿ ಹಾಗೂ ಒಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವುಗಳ ಜೊತೆಗೆ ಮೇ, 2011 ರಲ್ಲಿ ಪೀಪಲ್ಸ್ ಯೂನಿವರ್ಸಿಟಿ ಆಫ್ ಮಿಲನ್ ಗೌರವ ಡಾಕ್ಟರೇಟ್ ಪಡೆದರು.
Published by:Ashwini Prabhu
First published: