Beast: ರಾಕಿ ಭಾಯ್​ ಎದುರು ತೊಡೆ ತಟ್ಟಿದ್ದ `ಬೀಸ್ಟ್’​​ಗೆ ಸಂಕಷ್ಟ! ಈ ದೇಶದಲ್ಲಿ ವಿಜಯ್​ ಸಿನಿಮಾ ಬ್ಯಾನ್​

‘ಬೀಸ್ಟ್’ ಸಿನಿಮಾಕ್ಕೆ ದೊಡ್ಡ ಆರಂಭಿಕ ಹಿನ್ನಡೆಯೊಂದು ಎದುರಾಗಿದೆ. ‘ಬೀಸ್ಟ್’ ಸಿನಿಮಾದ ಪ್ರದರ್ಶನವನ್ನು ವಿದೇಶದಲ್ಲಿ ತಡೆಹಿಡಿಯಲಾಗಿದೆ. ಅರಬ್​ ದೇಶಗಳಲ್ಲಿ ಭಾರತೀಯ ಸಿನಿಮಾಗಳಿಗೆ ದೊಡ್ಡ ಬೇಡಿಕೆ ಇದೆ.

ನಟ ವಿಜಯ್

ನಟ ವಿಜಯ್

  • Share this:
ಕೆಜಿಎಫ್​(KGF) ಸಿನಿಮಾ ಮೂಲಕ ಯಶ್(Yash)​ ಮಾಡಿರುವ ದಾಖಲೆಗಳ ಬಳಿ ಬರಲು ಅದೆಷ್ಟೋ ಸಿನಿಮಾಗಳು ಪ್ರಯತ್ನ ನಡೆಸುತ್ತಲೇ ಇದೆ. ಕೆಜಿಎಫ್​ ಚಾಪ್ಟರ್​ 2 (KGF Chapter 2) ಸಿನಿಮಾ ಏಪ್ರಿಲ್​ 14ಕ್ಕೆ ಇಡಿ ವಿಶ್ವದಾದ್ಯಂತ ರಿಲೀಸ್​ ಆಗುತ್ತಿರುವುದು ಗೊತ್ತೆ ಇದೆ.  ತಮಿಳು ನಟ ವಿಜಯ್(Vijay)​ ಅಭಿನಯದ ‘ಬೀಸ್ಟ್​’(Beast) ಸಿನಿಮಾ ಕೂಡ ಏಪ್ರಿಲ್​ 13ಕ್ಕೆ ತೆರೆ  ಬರುವುದಾಗಿ ಚಿತ್ರತಂಡ ಅನೌನ್ಸ್​ ಮಾಡಿತ್ತು. ವಿಜಯ್ ಸಿನಿಮಾ ‘ಕೆಜಿಎಫ್ 2’ ಜೊತೆಗೆ ಅಖಾಡಕ್ಕೆ ಇಳಿಯಲು ಸಜ್ಜಾಗಿದೆ. ಆದರೆ, ಬೀಸ್ಟ್​ ಸಿನಿಮಾದ ಟ್ರೈಲರ್(Trailer) ರಿಲೀಸ್​ ಆಗಿತ್ತು. ಕೆಜಿಎಫ್​ 2 ಮುಂದೆ ತೊಡೆ ತಟ್ಟಿದ ವಿಜಯ್​ ಸಿನಿಮಾ ಯಾಕೋ ಟ್ರೈಲರ್​ನಲ್ಲೇ ಸಪ್ಪೆಯಾಗಿದೆ. ಟ್ರೈಲರ್​ ನೋಡಿದ ಪ್ರತಿಯೊಬ್ಬರು ಯಾಕೆ ಈ ರೀತಿಯ ಸಿನಿಮಾವನ್ನು ವಿಜಯ್​ ಮಾಡಿದರು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇದೀಗ ಯಶ್​ ಸಿನಿಮಾ ಎದುರು ಬರಲು ಸಜ್ಜಾಗಿರುವ ಬೀಸ್ಟ್​ ಸಿನಿಮಾಗೆ ಭಾರಿ ಹಿನ್ನಡೆಯಾಗಿದೆ.

ಕುವೈತ್​ನಲ್ಲಿ ವಿಜಯ್​ ಸಿನಿಮಾಗೆ ನಿಷೇಧ!

ಕೆಜಿಎಫ್​ 2 ಹಾಗೂ ಬೀಸ್ಟ್​​ ಸಿನಿಮಾಗಳು ಕೆಲವೇ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಎದುರು ಬದುರಾಗಲಿವೆ. ಈ ನಡುವೆ ‘ಬೀಸ್ಟ್’ ಸಿನಿಮಾಕ್ಕೆ ದೊಡ್ಡ ಆರಂಭಿಕ ಹಿನ್ನಡೆಯೊಂದು ಎದುರಾಗಿದೆ. ‘ಬೀಸ್ಟ್’ ಸಿನಿಮಾದ ಪ್ರದರ್ಶನವನ್ನು ವಿದೇಶದಲ್ಲಿ ತಡೆಹಿಡಿಯಲಾಗಿದೆ. ಅರಬ್​ ದೇಶಗಳಲ್ಲಿ ಭಾರತೀಯ ಸಿನಿಮಾಗಳಿಗೆ ದೊಡ್ಡ ಬೇಡಿಕೆ ಇದೆ.ಅದರಲ್ಲೂ ಬಾಲಿವುಡ್​ ಸಿನಿಮಾಗಳಿಗೆ ಹೆಚ್ಚು ಡಿಮ್ಯಾಂಡ್​ ಇದೆ. ಆದರೆ, ಅರಬ್ ದೇಶಗಳ ಕುವೈತ್‌ ರಾಷ್ಟ್ರದಲ್ಲಿ 'ಬೀಸ್ಟ್' ಸಿನಿಮಾ ಸೆನ್ಸಾರ್ ಪಾಸ್ ಮಾಡಲು ವಿಫಲವಾಗಿದ್ದು, ಅಲ್ಲಿ ಸಿನಿಮಾದ ಪ್ರದರ್ಶನವನ್ನು ತಡೆ ಹಿಡಿಯಲಾಗಿದೆ.

ಸೆನ್ಸಾರ್​ ಪಾಸಾಗದ ವಿಜಯ್​ ಬೀಸ್ಟ್ ಸಿನಿಮಾ!

ಈ ಬಗ್ಗೆ ಸಿನಿಮಾ ಬಾಕ್ಸ್ ಆಫೀಸ್ ವಿಶ್ಲೇಷಕ ರಮೇಶ್ ಬಾಲಾ ಟ್ವೀಟ್ ಮಾಡಿದ್ದು, ಸಿನಿಮಾವು ಇಸ್ಲಾಮಿಕ್ ಭಯೋತ್ಪಾದನೆಯ ಬಗ್ಗೆ ಇರುವ ಕಾರಣ ಸಿನಿಮಾವನ್ನು ಪ್ರದರ್ಶಿಸಲಾಧ್ಯ ಎಂದು ಕುವೈತ್‌ನ ಮಾಹಿತಿ ಮತ್ತು ಪ್ರಸಾರ ಇಲಾಖೆ ಹೇಳಿದೆ.


ಇದನ್ನೂ ಓದಿ: ಹುಟ್ಟು ಹಬ್ಬದ ಸಂಭ್ರಮದಲ್ಲಿ National Crush; ರಶ್ಮಿಕಾ ಮಂದಣ್ಣಗೆೆ ಅಭಿಮಾನಿಗಳಿಂದ ಶುಭಾಶಯ

ಬೀಸ್ಟ್​ ಟ್ರೈಲರ್​ನಲ್ಲಿ ಇರೋದೇನು?

ಚೆನ್ನೈನ ಮಾಲ್‌ ಒಂದರಲ್ಲಿ ಜನರನ್ನು ಭಯೋತ್ಪಾದಕರು ಒತ್ತೆಯಾಳಾಗಿರಿಸಿಕೊಂಡಿರುತ್ತಾರೆ. ಅದೇ ಮಾಲ್‌ನಲ್ಲಿ ಸಿಲುಕಿರುವ ವಿಜಯ್ ಭಯೋತ್ಪಾದಕರೊಟ್ಟಿಗೆ ಹೋರಾಡಿ ಅವರನ್ನು ರಕ್ಷಿಸುವ ಕತೆಯೇ ‘ಬೀಸ್ಟ್​’. ಈ ಸಿನಿಮಾದಲ್ಲಿ ಇಸ್ಲಾಂ ಭಯೋತ್ಪಾದನೆ ತೋರಿಸಲಾಗಿದೆ. ಹಾಗೂ ಪಾಕಿಸ್ತಾನ ಸೇರಿದಂತೆ ಅರಬ್ ದೇಶಗಳ ಬಗ್ಗೆ ಋಣಾತ್ಮಕ ಸಂಭಾಷಣೆ, ಸಂದೇಶ ಸಾರುವ ದೃಶ್ಯಗಳಿವೆ ಎಂಬ ಕಾರಣಕ್ಕೆ ‘ಬೀಸ್ಟ್​’ ಪ್ರದರ್ಶನಕ್ಕೆ ನಿಷೇಧ ಹೇರಲಾಗಿದೆ.

ಇದನ್ನೂ ಓದಿ: ಒಬ್ಬೊಬ್ಬರ ಕಣ್ಣಲ್ಲಿ ಒಂದೊಂದು ಥರ ರಾಕಿ ಭಾಯ್​!​ ಸಖತ್ತಾಗಿದೆ ನೋಡಿ ಫ್ಯಾನ್​ ಮೇಡ್​ ಪೋಸ್ಟರ್ಸ್​!

ಮಾಜಿ ಸೈನಿಕನ ಪಾತ್ರದಲ್ಲಿ ವಿಜಯ್​!

‘ಬೀಸ್ಟ್’ ಸಿನಿಮಾದಲ್ಲಿ ದಳಪತಿ ವಿಜಯ್ ಮಾಜಿ ಸೈನಿಕನ ಪಾತ್ರದಲ್ಲಿ ನಟಿಸಿದ್ದು, ಮಾಲ್‌ನಲ್ಲಿ ಭಯೋತ್ಪಾದಕರ ವಿರುದ್ಧ ಹೊರಾಡುವ ಕತೆಯ ಜೊತೆಗೆ ಪಾಕ್ ವಿರುದ್ಧ ಯುದ್ಧದ ಕತೆಯೂ ಸಿನಿಮಾದಲ್ಲಿದೆ. ಸಿನಿಮಾದ ಟ್ರೇಲರ್ ಈಗಾಗಲೇ ಬಿಡುಗಡೆ ಆಗಿದ್ದು, ಟ್ರೇಲರ್‌ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಸಿನಿಮಾದಲ್ಲಿ ಪೂಜೆ ಹೆಗ್ಡೆಗೆ ಹೆಚ್ಚು ಆದ್ಯತೆ ನೀಡಿಲ್ಲ ಎಂಬುದನ್ನು ಟ್ರೈಲರ್​ನಲ್ಲೇ ನೋಡಬಹುದು. ಪೂಜಾ ಹೆಗ್ಡೆ ಕೇವಲ ಹಾಡುಗಳಿಗೆ ಮಾತ್ರ ಸೀಮಿತಾನಾ? ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ>
Published by:Vasudeva M
First published: