Jailer Movie: ರಜನಿಕಾಂತ್ ಗೆಲ್ಲಿಸೋಕೆ ಒಂದಾದರೇ ಪರ ಭಾಷೆಯ ಸ್ಟಾರ್ಸ್?

ಸೂಪರ್ ಸ್ಟಾರ್ ರಜಿನಿಕಾಂತ್ ಸೋತು ಹೋದ್ರೆ?

ಸೂಪರ್ ಸ್ಟಾರ್ ರಜಿನಿಕಾಂತ್ ಸೋತು ಹೋದ್ರೆ?

ಕಮಲ್ ಹಾಸನ್ ಅಭಿನಯದ ವಿಕ್ರಂ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಈ ಹಿನ್ನೆಲೆಯಲ್ಲಿ ರಜನಿಕಾಂತ್ Depressionಗೆ ಹೋಗಿದ್ದಾರೆ. ಹಾಗಾಗಿಯೇ ಎಕ್ಸ್​ ಸೂಪರ್ ಸ್ಟಾರ್ ರಜನಿಕಾಂತ್​ಗೆ ಒಂದು ಹಿಟ್ ಬೇಕಾಗಿದೆ ಅಂತ ಟ್ವಿಟರ್ ಪೇಜ್​ನಲ್ಲಿ ಹೇಳಲಾಗಿದೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಸೂಪರ್ ಸ್ಟಾರ್ ರಜನಿಕಾಂತ್ (Rajinikanth Jailer Movie) ಅಭಿನಯದ ಜೈಲರ್ ಚಿತ್ರ ದೊಡ್ಡ ಮಟ್ಟದಲ್ಲಿಯೇ ರೆಡಿ ಆಗುತ್ತಿದೆ. ಚಿತ್ರವನ್ನ ಡೈರೆಕ್ಟರ್ ನೆಲ್ಸನ್ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಬಹು ಭಾಷೆಯಲ್ಲಿ ಚಿತ್ರ ರಿಲೀಸ್ ಆಗೋದು ಪಕ್ಕಾ ಆಗಿದೆ. ಪ್ಯಾನ್ ಇಂಡಿಯಾ (Pan India Movie) ಮಟ್ಟದಲ್ಲಿ ಇದು ಕೂಡ ರಿಲೀಸ್ ಆಗುತ್ತದೆ ಅನ್ನೋದೇ ಈಗೀನ ಸುದ್ದಿ ಆಗಿದೆ. ಮೊನ್ನೆ ಮೊನ್ನೆಯವರೆಗೂ ಮಂಗಳೂರಿನಲ್ಲಿ ಇಡೀ ಜೈಲರ್ ಟೀಮ್ (Jailer Movie Team) ಬಂದಿಳಿದಿತ್ತು. ಚಿತ್ರದ ಪ್ರಮುಖ ಭಾಗದ ಚಿತ್ರೀಕರಣ ನಡೆಯೋಕೆ ಇಲ್ಲಿಗೆ ಜೈಲರ್ ಟೀಮ್ ಬಂದಿದೆ. ಇದರ ಮಧ್ಯ ಈಗೊಂದು ಕಾಮೆಂಟ್ ಕೇಳಿ ಬರುತ್ತಿದೆ. ಸೂಪರ್ ಸ್ಟಾರ್ ರಜಿನಿಕಾಂತ್​ಗೆ (Super Star Rajinikanth) ಈಗ ಒಂದು ಹಿಟ್ ಬೇಕಿದಿಯೇ?


ಈ ಒಂದು ಹಿಟ್​ಗಾಗಿಯೇ ಎಲ್ಲ ಭಾಷೆಯ ನಟರು ಜೈಲರ್​ ಚಿತ್ರದಲ್ಲಿ ಅಭಿನಯಿಸಿದ್ದಾರೆ ಅನ್ನೋದೇ ಆ ಕಾಮೆಂಟ್ ಆಗಿದೆ. ಇದರ ಬಗ್ಗೆ ಇನ್ನೂ ಒಂದಷ್ಟು ವಿಶ್ಲೇಷಣೆ ಇಲ್ಲಿದೆ ಓದಿ.


Kollywood Super Star Rajinikanth New Movie Jailer Viral News
ರಜನಿಕಾಂತ್ ಸೂಪರ್ ಸ್ಟಾರ್ ಅಲ್ವೇ ಅಲ್ಲ!


ಸೂಪರ್ ಸ್ಟಾರ್ ರಜನಿಕಾಂತ್ ಸೋತು ಹೋದ್ರೆ?
ಸೂಪರ್ ಸ್ಟಾರ್ ರಜನಿಕಾಂತ್ ಮಾರ್ಕೆಟ್ ಡೌನ್ ಆಗಿ ಹೋಯಿತೇ? ರಜನಿಕಾಂತ್ ಸಿನಿಮಾಗಳು ಮೊದಲಿನ ರೀತಿ ಈಗ ಓಡುತ್ತಿಲ್ಲವೇ? ದುಡ್ಡು ಹಾಕಿದ ನಿರ್ಮಾಪಕ ಲಾಸ್ ಆಗುತ್ತಿದ್ದಾರೆಯೇ? ಈ ಎಲ್ಲ ಪ್ರಶ್ನೆಗಳು ಹೆಚ್ಚು ಹೆಚ್ಚು ಕೇಳಿ ಬರುತ್ತಿವೆ.
ಪತ್ರಕರ್ತ ಬಿಸ್ಮಿ ಇತ್ತೀಚಿಗೆ ಕೊಟ್ಟಿದ್ದ ಹೇಳಿಕೆಯೊಂದು ಭಾರೀ ಕೋಲಾಹಲ ಎಬ್ಬಿಸಿತ್ತು. ಸಿನಿಮಾಗಳ ಗೆಲುವಿನ ಲೆಕ್ಕವನ್ನ ಗಮನದಲ್ಲಿಟ್ಟುಕೊಂಡೇ ಬಿಸ್ಮಿ ಮಾತನಾಡಿದ್ದರು ಅನಿಸುತ್ತದೆ. ರಜಿನಿಕಾಂತ್ ಸಿನಿಮಾ ಓಡ್ತಿಲ್ಲ. ವಿಜಯ್ ಸಿನಿಮಾಗಳು ಮಾತ್ರ ಓಡ್ತಾ ಇವೆ.


ರಜನಿಕಾಂತ್ ಸೂಪರ್ ಸ್ಟಾರ್ ಅಲ್ವೇ ಅಲ್ಲ!
ಜರ್ನಲಿಸ್ಟ್ ಬಿಸ್ಮಿ ಕೊಟ್ಟ ಈ ಹೇಳಿಕೆ ಭಾರೀ ಚರ್ಚೆ ಆಗಿದೆ. ಆದರೆ ಈಗ ರಜನಿ ವಿಷಯದಲ್ಲಿ ಇನ್ನೂ ಒಂದು ವಿಷಯ ಹೆಚ್ಚು ವೈರಲ್ ಆಗುತ್ತಿದೆ. ರಜನಿ ಅಭಿನಯದ ಜೈಲರ್ ಚಿತ್ರದಲ್ಲಿ ಬಹು ಭಾಷೆಯ ನಟರು ಯಾಕೆ ಇದ್ದಾರೆ ಅನ್ನೋದೇ ಈ ಕಾಮೆಂಟ್​​ನ ಪರೋಕ್ಷ ಪ್ರಶ್ನೆ ಆಗಿದೆ.


ಜೈಲರ್ ಚಿತ್ರದಲ್ಲಿ ಒಬ್ಬರಲ್ಲ ಇಬ್ಬರಲ್ಲ. ಪರ ಭಾಷೆಯ ಸ್ಟಾರ್ ನಟರೆಲ್ಲ ಅಭಿನಯಿಸಿದ್ದಾರೆ. ಇವರೆಲ್ಲ ರಜನಿಯ ಗೆಲುವಿಗಾಗಿಯೇ ಈ ಚಿತ್ರದಲ್ಲಿ ಒಂದಾಗಿದ್ದಾರೆ ಅನ್ನೋ ಅರ್ಥದಲ್ಲಿಯೇ ಸೋಷಿಯಲ್ ಮೀಡಿಯಾದಲ್ಲಿ ಹಲವು ವಿಷಯಗಳು ಹರಿದಾಡುತ್ತಿವೆ.


ಇಳಯದಳಪತಿ ವಿಜಯ್ ಫ್ಯಾನ್ಸ್ ಹೀಗೆ ಮಾಡ್ತಿದ್ದಾರಾ?
ಜೈಲರ್ ಚಿತ್ರದಲ್ಲಿ ಯಾರೆಲ್ಲ ಇದ್ದಾರೆ ಅನ್ನೋದನ್ನ ವಿವರವಾಗಿಯೇ ಟ್ವಿಟರ್​ ನಲ್ಲಿ ಹಾಕಲಾಗಿದೆ. ದುರಂತ ಅಂದ್ರೆ, ಈ ಒಂದು ಟ್ವಿಟರ್ ಅಕೌಂಟ್​ನ ಪೇಜ್​ಗೆ ವಿಜಯ್ ಪೋಟೋ ಇದೆ. ಇದರಿಂದ ಇದನ್ನಾರೋ ವಿಜಯ್ ಅಭಿಮಾನಿಗಳೇ ಮಾಡಿದ್ದಾರೆ ಅಂತಲೇ ತಿಳಿದುಕೊಳ್ಳುವಂತೇನೆ ಮಾಡಿದೆ.


ವಿಜಯ್ ಫೋಟೋ ಇರೋ ಈ ಒಂದು ಪೋಸ್ಟ್​ನಲ್ಲಿ ಏನಿದೆ ಗೊತ್ತೇ? ಇಲ್ಲಿದೆ ನೋಡಿ ಆ ವಿವರ.


ಕೇರಳ-ಮೋಹನ್ ಲಾಲ್-ಜೈಲರ್
ಬಾಲಿವುಡ್- ಜಾಕಿ ಶ್ರಾಫ್-ಜೈಲರ್
ಸ್ಯಾಂಡಲ್​ವುಡ್- ಶಿವರಾಜ್ ಕುಮಾರ್-ಜೈಲರ್
ಟಾಲಿವುಡ್​- ಸುನಿಲ್-ಜೈಲರ್
ಕಾಲಿವುಡ್- ಎಕ್ಸ್ ಸೂಪರ್ ಸ್ಟಾರ್ ರಜಿನಿಕಾಂತ್-ಜೈಲರ್


ಕಮಲ್ ಹಾಸನ್ ಅಭಿನಯದ ವಿಕ್ರಂ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಈ ಹಿನ್ನೆಲೆಯಲ್ಲಿ ರಜನಿಕಾಂತ್ Depressionಗೆ ಹೋಗಿದ್ದಾರೆ. ಹಾಗಾಗಿಯೇ ಎಕ್ಸ್​ ಸೂಪರ್ ಸ್ಟಾರ್ ರಜನಿಕಾಂತ್​ಗೆ ಒಂದು ಹಿಟ್ ಬೇಕಾಗಿದೆ ಅಂತ ಇದೇ ಟ್ವಿಟರ್ ಪೇಜ್​ನಲ್ಲಿ ಹೇಳಲಾಗಿದೆ.


ಇಳಯದಳಪತಿ ವಿಜಯ್ ಫ್ಯಾನ್ಸ್ ಹೀಗೆ ಮಾಡ್ತಿರೋದು ಸರೀನಾ?
ಕುಮಾರನ್ ಅನ್ನೋ ಹೆಸರಿನ ಟ್ವಿಟರ್ ಪೇಜ್​ನಲ್ಲಿ ಈ ಒಂದು ಪೋಸ್ಟ್ ಇದೆ. ಇದರಲ್ಲಿ ಎಕ್ಸ್ ಸೂಪರ್ ಸ್ಟಾರ್ ರಜಿನಿಕಾಂತ್ ಅಂತಲೇ ಬರೆಯಲಾಗಿದೆ. ಅದಕ್ಕೂ ಹೆಚ್ಚಾಗಿ ಜೈಲರ್ ಚಿತ್ರದಲ್ಲಿರೋ ಪರ ಭಾಷೆಯ ಎಲ್ಲ ನಟರ ಹೆಸರನ್ನ ಕೂಡ ಇಲ್ಲಿ ಡಿಟೈಲ್ ಆಗಿಯೇ ಬರೆಯಲಾಗಿದೆ.


Kollywood Super Star Rajinikanth New Movie Jailer Viral News
ಇಳಯದಳಪತಿ ವಿಜಯ್ ಫ್ಯಾನ್ಸ್ ಹೀಗೆ ಮಾಡ್ತಿದ್ದಾರಾ?


ಆದರೆ ಇದು ಎಷ್ಟು ಸರಿ ಅನ್ನೊದು ಮಾತ್ರ ಈಗ ಎದ್ದಿರೋ ಪ್ರಶ್ನೆ ಆಗಿದೆ. ಸೂಪರ್ ಸ್ಟಾರ್ ಯಾವಾಗಲೂ ಸೂಪರ್ ಸ್ಟಾರ್ ಆಗಿರುತ್ತಾರೆ. ಜನರ ಪ್ರೀತಿಯಿಂದಲೇ ಈ ಬಿರುದು ಬಂದಿರುತ್ತದೆ ಅನ್ನೋದು ಅಷ್ಟೇ ಸತ್ಯವಾದ ಮಾತು.


ಇದನ್ನೂ ಓದಿ:  Kantara in English: ಕಾಂತಾರ ಚಿತ್ರದ ಶಿವ ಇನ್ಮೇಲೆ ಇಂಗ್ಲೀಷ್ ಮಾತಾಡ್ತಾರೆ! ಇಲ್ಲಿದೆ ಅಸಲಿ ವಿಷಯ?


ಮಾರ್ಕೆಟಿಂಗ್ ಸ್ಟ್ರಾಟರ್ಜಿಯ ಲೆಕ್ಕವೇ ಬೇರೆ ಆಗಿರುತ್ತದೆ. ಅದನ್ನ ಗಮನಿಸುತ್ತಾ ಹೋದ್ರೆ, ಸಿನಿಮಾರಂಗದಲ್ಲಿ ಏರಿಳಿತಗಳು ಇದ್ದೇ ಇರುತ್ತವೆ. ಹಾಗಂತ ಸ್ಟಾರ್​ ಪಟ್ಟ ಕಳೆದು ಹೋಗುತ್ತದೆಯೇ? ಸೂಪರ್ ಸ್ಟಾರ್ ತನ್ನ ಕಿರೀಟ ಕಳಚಿಟ್ಟು ಪಕ್ಕಕ್ಕೆ ಸರಿದು ಬಿಡಬೇಕೊ, ಗೊತ್ತಿಲ್ಲ. ಆದರೆ ಈಗೀನ ಬೆಳವಣಿಗೆ ಸರಿ ಅಲ್ಲ ಬಿಡಿ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು