Valimai: ಮೂರೇ ದಿನದಲ್ಲಿ ನೂರು ಕೋಟಿ ಕ್ಲಬ್​ ಸೇರಿದ ಅಜಿತ್​ `ವಲಿಮೈ’! ವಿಜಯ್ ಫ್ಯಾನ್ಸ್​ ಕಣ್ಣು ಕೆಂಪಾಗಿದ್ದೇಕೆ?

ಭಾನುವಾರ ಬಿಟ್ಟು ಕಳೆದ ಮೂರು ದಿನಗಳಿಂದ ಅಜಿತ್ ನಟನೆಯ ವಲಿಮೈ ಬಾಕ್ಸಾಫೀಸ್‌ನಲ್ಲಿ ಜಾದು ಮಾಡುತ್ತಿದೆ. ದೇಶ ವಿದೇಶಗಳಲ್ಲಿ ಕೋಟಿ ಕೋಟಿ ಗಳಿಕೆ ಮಾಡುತ್ತಿದೆ. ಭಾರತ ಅಷ್ಟೇ ಅಲ್ಲ, ಸಿಂಗಾಪುರ, ಮಲೇಷಿಯಾ, ಯುಎಇ, ಸೌದಿ ಸೇರಿದಂತೆ ಹಲವೆಡೆ ಈ ಚಿತ್ರದ ಗಳಿಕೆ ಅದ್ಬುತವಾಗಿದೆ.

ವಲಿಮೈ ಸಿನಿಮಾದ ಪೋಸ್ಟರ್​

ವಲಿಮೈ ಸಿನಿಮಾದ ಪೋಸ್ಟರ್​

  • Share this:
ಫೆಬ್ರವರಿ 24ರಂದು ಅಜಿತ್(Ajith)​ ನಟನೆಯ ವಲಿಮೈ (Valimai) ಸಿನಿಮಾ ತೆರೆ ಕಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೂರು ವರ್ಷಗಳ ನಂತರ ಬಿಡುಗಡೆ ಆದ ಮೊದಲ ಅಜಿತ್ ಸಿನಿಮಾ ಇದಾಗಿರುವ ಕಾರಣ ಅಜಿತ್ ಅಭಿಮಾನಿಗಳು (Ajith Fans) ಭಾರಿ ಅದ್ಧೂರಿಯಾಗಿ ಸಿನಿಮಾವನ್ನು ಸ್ವಾಗತಿಸಿದ್ದಾರೆ.ಎಚ್ ವಿನೋದ್(H.Vinod) ನಿರ್ದೇಶನದ ಈ ಸಿನಿಮಾ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ‘ವಲಿಮೈ’ ಚಿತ್ರವನ್ನು ಬಾಲಿವುಡ್‌ ನಿರ್ಮಾಪಕ(Bollywood Producer) ಬೋನಿ ಕಪೂರ್(Boney Kapoor) ನಿರ್ಮಾಣ ಮಾಡಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ(First Day First Show) ಮುಗಿಯುತ್ತಿದ್ದಂತೆ ಈ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೂ, ಅಜಿತ್ ಚಿತ್ರದ ಗಳಿಕೆ ಮಾತ್ರ ಯಾವುದೇ ರೀತಿ ಎಫೆಕ್ಟ್ ಆಗಿಲ್ಲ. 3 ದಿನದಲ್ಲಿ ಅಜಿತ್ ಸಿನಿಮಾ 100 ಕೋಟಿ ಕ್ಲಬ್(100 Crore Club) ಸೇರಿಕೊಂಡಿದೆ.ಈ ವಿಚಾರ ತಿಳಿದ ಅಜಿತ್ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

ಒಂದೇ ವಾರದಲ್ಲಿ ಹಾಕಿದ ಬಂಡವಾಳ ವಾಪಸ್!

ವಲಿಮೈ ಸಿನಿಮಾದಲ್ಲಿ ಅಜಿತ್​ ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆಯೂ ಕೆಲ ಸಿನಿಮಾಗಳಲ್ಲಿ ಪೊಲೀಸ್ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಈ ಚಿತ್ರದಲ್ಲಿ ಡಿಫ್ರೆಂಟ್​ ಶೇಡ್​ನಲ್ಲಿ ಕಾಣಿಸಿಕೊಂಡಿದ್ದಾರೆ.ನಗರದಲ್ಲಿ ನಡೆಯುತ್ತಿರುವ ಕ್ರೈಂ ಸೀನ್‌ಗಳನ್ನು ಹುಡುಕಿಕೊಂಡು ಹೋಗುವ ಕಥೆಯೇ ವಲಿಮೈ ಸಿನಿಮಾದ ಜೀವಾಳ. ಭಾನುವಾರ ಬಿಟ್ಟು ಕಳೆದ ಮೂರು ದಿನಗಳಿಂದ ಅಜಿತ್ ನಟನೆಯ ವಲಿಮೈ ಬಾಕ್ಸಾಫೀಸ್‌ನಲ್ಲಿ ಜಾದು ಮಾಡುತ್ತಿದೆ. ದೇಶ ವಿದೇಶಗಳಲ್ಲಿ ಕೋಟಿ ಕೋಟಿ ಗಳಿಕೆ ಮಾಡುತ್ತಿದೆ. ಭಾರತ ಅಷ್ಟೇ ಅಲ್ಲ, ಸಿಂಗಾಪುರ, ಮಲೇಷಿಯಾ, ಯುಎಇ, ಸೌದಿ ಸೇರಿದಂತೆ ಹಲವೆಡೆ ಈ ಚಿತ್ರದ ಗಳಿಕೆ ಅದ್ಬುತವಾಗಿದೆ.


ಇದನ್ನೂ ಓದಿ: ಮತ್ತೆ ಒಂದಾದ `ಮಾಸ್ಟರ್’​ ಜೋಡಿ.. ಈ ಬಾರಿ ಯಾವ ಮ್ಯಾಜಿಕ್​​ ಮಾಡ್ತಾರೆ ವಿಜಯ್​-ಲೋಕೇಶ್?

ಮೂರೇ ದಿನದಲ್ಲಿ ನೂರು ಕೋಟಿ ಗಳಿಸಿದ ‘ವಲಿಮೈ’

ಬಿಡುಗಡೆಯಾದ ಮೂರು ದಿನಗಳಿಂದ ತಮಿಳು ಚಿತ್ರರಂಗದಲ್ಲಿ ಈ ಸಿನಿಮಾಗೆ ಬೇಡಿಕೆ ಹೆಚ್ಚಾಗಿದೆ. ವಿಶ್ವದಾದ್ಯಂತ ‘ವಲಿಮೈ’ ಮೊದಲ ದಿನ ಗಳಿಸಿದ್ದು, ಬರೋಬ್ಬರಿ 59.48 ಕೋಟಿ ಅಂತ ಟ್ರೇಡ್ ಅನಲಿಸ್ಟ್‌ಗಳು ಹೇಳುತ್ತಿದ್ದಾರೆ. ಎರಡನೇ ದಿನ 35.78 ಕೋಟಿ ಗಳಿಸಿದೆ. ಎರಡೇ ದಿನಕ್ಕೆ ಬರೋಬ್ಬರು 95.26 ಕೋಟಿ ಕಲೆ ಹಾಕಿದೆ. ಇನ್ನೂ ಮೂರನೇ ದಿನದ ಗಳಿಕೆಯನ್ನು ಚಿತ್ರತಂಡ ಹೇಳಬೇಕಿದೆ. ಆದರೆ, ಮೂರನೇ ದಿನವೂ 30 ಕೋಟಿ ಆಸು-ಪಾಸಿನಲ್ಲಿ ಗಳಿಕೆ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.

ಕಟೌಟ್​ ಕಟ್ಟುತ್ತಿದ್ದವರ ಮೇಲೆ ಪೆಟ್ರೋಲ್​ ಬಾಂಬ್​ ದಾಳಿ!

ತಮಿಳುನಾಡಿನ ಕೊಯಂಬತ್ತೂರಿನ ಗಂಗಾ, ತುಂಗಾ, ಕಾವೇರಿ ಚಿತ್ರಮಂದಿರದ ಬಳಿ ಕೆಲವು ಅಭಿಮಾನಿಗಳು ಅಜಿತ್‌ ಅವರ ಕಟೌಟ್, ಫ್ಲೆಕ್ಸ್ ಕಟ್ಟುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಆಗಮಿಸಿದ ಕೆಲವರು ಅಭಿಮಾನಿಗಳ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾರೆ. ಬಳಿಕ ಅಲ್ಲಿಂದ ಕೂಡಲೇ ಪರಾರಿಯಾಗಿದ್ದಾರೆ. ಈ ಘಟನೆಯಲ್ಲಿ ಅಜಿತ್​​ ಅವರ ಅಭಿಮಾನಿಯ ಕಾಲಿಗೆ ಸುಟ್ಟ ಗಾಯಗಳಾಗಿವೆ. ಜೊತೆಗೆ ಅಜಿತ್​ ಅವರ ಕಟೌಟ್​, ಫ್ಲೆಕ್ಸ್​ ಕೂಡ ಸುಟ್ಟು ಕರಕಲಾಗಿದೆ. ದಾಳಿ ಮಾಡುವಾಗ ಮುಖಕ್ಕೆ ಮಾಸ್ಕ್​ ಹಾಕಿದ್ದರಿಂದ ದಾಳಿಕೋರರು ಯಾರು ಎಂದು ಗೊತ್ತಾಗಿಲ್ಲ ಎಂದು ಅಭಿಮಾನಿಗಳು ಹೇಳಿದ್ದಾರೆ.

ಇದನ್ನೂ ಓದಿ: ಕಾಲಿವುಡ್​ನಲ್ಲಿ ಇದೆಂಥಾ ಸ್ಟಾರ್​​ ವಾರ್?​ ಅಜಿತ್​ ಅಭಿಮಾನಿಗಳ ಮೇಲೆ ಪೆಟ್ರೋಲ್​ ಬಾಂಬ್​ ದಾಳಿ

ಮತ್ತೊಂದೆಡೆ ಅಜಿತ್​ ಅಭಿಮಾನಿಗಳಿಂದ ಹುಚ್ಚಾಟ!

ಮತ್ತೊಂದು ಕಡೆ ಅಜಿತ್​ ಅಭಿಮಾನಿಗಳು ಅವರ ನೆಚ್ಚಿನ ನಟನ ಕಟೌಟ್​ಗೆ ಅಭಿಷೇಕ ಮಾಡಲು ಸ್ಥಳೀಯ ಅಂಗಡಿಗಳಿಂದ ಹಾಲು, ಮೊಸರಿನ ಪ್ಯಾಕೇಟ್​​ಗಳನ್ನು ಕಳ್ಳತನ ಮಾಡಿದ್ದಾರಂತೆ. ಇದನ್ನು ಪ್ರಶ್ನಿಸಿದ ಅಂಗಡಿ ಮಾಲೀಕರ ಜೊತೆ ಕಿರಿಕ್ ಸಹ ಮಾಡಿದ್ದಾರಂತೆ. ನಮ್ಮ ತಲಾ ಸಿನಿಮಾ ರಿಲೀಸ್ ಆಗಿದೆ, ದುಡ್ಡು ಕೇಳುತ್ತಿಯ? ಎಂದು ಪ್ರಶ್ನೆ ಮಾಡಿ ಹಲ್ಲೆಗೂ ಕೂಡ ಮುಂದಾಗಿದ್ದರಂತೆ.
Published by:Vasudeva M
First published: