Chiyaan Vikram: 3 ವರ್ಷ ಶವದಂತೆ ಒಂದೇ ಕಡೆ ಮಲಗಿದ್ದ ಸ್ಟಾರ್​ ನಟ! ವಿಕ್ರಮ್ ಬದುಕೇ ಒಂದು ಹೋರಾಟ

ಆಳಕ್ಕೆ ಇಳಿದು ನಟಿಸುವ ನಟರು ನಮ್ಮ ಭಾರತೀಯ ಚಿತ್ರರಂಗದಲ್ಲಿ (Indian Cinema Industry) ಕೆಲವರಷ್ಟೇ ಎಂದರೆ ತಪ್ಪಾಗಲ್ಲ. ಅಂಥ ನಟರಲ್ಲಿ ನಮ್ಮ ತಮಿಳು (Tamil) ಚಿತ್ರರಂಗದ ಖ್ಯಾತ ನಟ ವಿಕ್ರಮ್ (Vikram)​ ಅಲಿಯಾಸ್​ ಚಿಯಾನ್​ ವಿಕ್ರಮ್ (Chiyaan Vikram)​ ಕೂಡ ಒಬ್ಬರು. ಇವರ ಬಗ್ಗೆ ವಿಶೇಷವಾಗಿ ಏನೂ ಹೇಳುವುದು ಬೇಡ. ಅವರೆಂಥ ನಟ ಎಂದು ಎಲ್ಲರಿಗೂ ಗೊತ್ತಿದೆ. ಆದರೆ, ನಾವು ಇಂದು ಇಲ್ಲಿ ಹೇಳುತ್ತಿರುವ ವಿಚಾರ ನಿಮಗ್ಯಾರಿಗೂ ಗೊತ್ತಿಲ್ಲ.

ಚಿಯಾನ್​ ವಿಕ್ರಮ್​

ಚಿಯಾನ್​ ವಿಕ್ರಮ್​

  • Share this:
ನಟ (Actor) ಎನಿಸಿಕೊಳ್ಳುವುದು ಸುಲಭದ ಮಾತಲ್ಲ. ಈಗೆಲ್ಲಾ ಎರಡ್ಮೂರು ಸಿನಿಮಾ ಮಾಡಿದ ತಕ್ಷಣ ತಾನೊಬ್ಬ ಸೂಪರ್​ ಸ್ಟಾರ್ (Super Star)​ ಎಂದುಕೊಂಡು ಬಿಡುತ್ತಾರೆ. ಬೇಜಾನ್​ ಬಿಲ್ಡಪ್​ ತೆಗೆದುಕೊಳ್ಳುತ್ತಾ ಓಡಾಡುತ್ತಿರುತ್ತಾರೆ. ನಟನೆ ಎಂಬುದು ಅಷ್ಟು ಸುಲಭದ ಮಾತಲ್ಲ. ಪಾತ್ರ (Character) ಕ್ಕಾಗಿ ಏನೆಲ್ಲ ತಯಾರಿ ಮಾಡಬೇಕು, ಎಷ್ಟೆಲ್ಲಾ ಕಷ್ಟ ಪಡಬೇಕು ಎಂದು ಎಲ್ಲ ನಟರಗೂ ತಿಳಿದಿಲ್ಲ. ನಿಜವಾದ ನಟ, ಹೀರೋ ಎಂದರೆ ಒಂದು ಪಾತ್ರಕ್ಕಾಗಿ ಸಾಕಷ್ಟು ಆಳಕ್ಕೆ ಇಳಿದು ಸಿದ್ಧತೆ ಮಾಡಿಕೊಳ್ಳಬೇಕು. ಈ ರೀತಿ ಆಳಕ್ಕೆ ಇಳಿದು ನಟಿಸುವ ನಟರು ನಮ್ಮ ಭಾರತೀಯ ಚಿತ್ರರಂಗದಲ್ಲಿ (Indian Cinema Industry) ಕೆಲವರಷ್ಟೇ ಎಂದರೆ ತಪ್ಪಾಗಲ್ಲ. ಅಂಥ ನಟರಲ್ಲಿ ನಮ್ಮ ತಮಿಳು (Tamil) ಚಿತ್ರರಂಗದ ಖ್ಯಾತ ನಟ ವಿಕ್ರಮ್ (Vikram)​ ಅಲಿಯಾಸ್​ ಚಿಯಾನ್​ ವಿಕ್ರಮ್ (Chiyaan Vikram)​ ಕೂಡ ಒಬ್ಬರು. ಇವರ ಬಗ್ಗೆ ವಿಶೇಷವಾಗಿ ಏನೂ ಹೇಳುವುದು ಬೇಡ. ಅವರೆಂಥ ನಟ ಎಂದು ಎಲ್ಲರಿಗೂ ಗೊತ್ತಿದೆ. ಆದರೆ, ನಾವು ಇಂದು ಇಲ್ಲಿ ಹೇಳುತ್ತಿರುವ ವಿಚಾರ ನಿಮಗ್ಯಾರಿಗೂ ಗೊತ್ತಿಲ್ಲ.

ಚಿಯಾನ್‌ ವಿಕ್ರಮ್‌ ಎಂದೇ ಗುರುತಿಸಿಕೊಂಡ ಇವರ ಮೂಲ ಹೆಸರು ಕೆನ್ನೆಡಿ ಜಾನ್‌ ವಿಕ್ಟರ್‌. ಚಿಯಾನ್‌ ವಿಕ್ರಮ್‌ ಭಾರತೀಯ ನಟ ಹಾಗೂ ಗಾಯಕ. ತಮಿಳು ಸಿನಿಮಾ ನಟ ಚಿಯಾನ್‌ ವಿಕ್ರಮ್‌ 7 ಫಿಲ್ಂ ಫೇರ್‌ ಪ್ರಶಸ್ತಿ, ರಾಷ್ಟ್ರೀಯ ಫಿಲಂ ಪ್ರಶಸ್ತಿ ಹಾಗೂ ತಮಿಳುನಾಡು ರಾಜ್ಯ ಫಿಲಂ ಪ್ರಶಸ್ತಿ ಸೇರಿದಂತೆ ಇನ್ನು ಹಲವಾರು ಪ್ರಶಸ್ತಿ, ಸಮ್ಮಾನಗಳನ್ನು ತನ್ನದಾಗಿಸಿಕೊಂಡಿದ್ದಾರೆ.

1996 ಏಪ್ರಿಲ್​ 17 ವಿಕ್ರಮ್​ ಜನನ!

ಚಿಯಾನ್‌ ವಿಕ್ರಮ್‌ 1966, ಏಪ್ರಿಲ್​ 17 ರಂದು ತಮಿಳು ಚಲಚಿತ್ರಗಳಲ್ಲಿ ಹಾಗೂ ಧಾರಾವಾಹಿಗಳಲ್ಲಿ ಪೋಷಕ ನಟರಾಗಿ ತೆರೆಯ ಮೇಲೆ ಕಾಣಿಸಿಕೊಂಡ ಜಾನ್‌ ವೊಕ್ಟರ್‌ ಅಲಿಯಾಸ್‌ ವಿನೋದ್‌ ರಾಜ್‌ ಹಾಗೂ ರಾಜೇಶ್ವರಿ ದಂಪತಿಗಳ ಮಗನಾಗಿ ತಮಿಳುನಾಡಿನಲ್ಲಿ ಜನಿಸಿದರು. ಚೋಲಾ ಟೀ, ಟಿವಿಎಸ್‌ ಎಕ್ಸ್‌ಎಲ್‌ ಮತ್ತು ಅಲ್ವಿನ್‌ ಕೈಗಡಿಯಾರಗಳು ಸೇರಿದಂತೆ ಇನ್ನಿತರ ಬ್ರ್ಯಾಂಡ್‌ಗಳ ಜಾಹೀರಾತುಗಳಲ್ಲಿ ವಿಕ್ರಮ್​  ಕಾಣಿಸಿಕೊಂಡಿದ್ದಾರೆ.

ವಿಕ್ರಮ್​ ನಡೆದು ಬಂದ ಹಾದಿ ಕಠಿಣ!

ವಿಕ್ರಮ್​ ತಂದೆ ಜಾನ್​ ಅವರಿಗೂ ತಾನೊಬ್ಬ ಸಿನಿಮಾ ನಟನಾಗಬೇಕೆಂದು ಮನೆ ಬಿಟ್ಟು ಓಡಿಬಂದಿದ್ದರು. ಆದರೆ, ಇವರಿಗೆ ಸ್ಟಾರ್​ ಪಟ್ಟ ಸಿಗಲಿಲ್ಲ. ವಿಕ್ರಮ್​ಗೂ ಕೂಡ ಚಿಕ್ಕ ವಯಸ್ಸಿನಿಂದಲೂ ನಟನೆ ಕಯಾಲಿ. ತಂದೆ ಎಷ್ಟೇ ಬೇಡ ಅಂದರೂ ನಟ ವಿಕ್ರಮ್ ಕೇಳುತ್ತಿರಲಿಲ್ಲ. ಕಾಲೇಜು ಓದುತ್ತಿರುವಾಗಲೇ ಸಾಕಷ್ಟು ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಆ ಒಂದು ಘಟನೆ ನಡೆದಿದ್ದು, ವಿಕ್ರಮ್​ ಅವರ ಬದುಕಲ್ಲಿ ಬಿರುಗಾಳಿ ಎಬ್ಬಿಸಿತ್ತು. ಮುಂದೆ ಹೇಗಪ್ಪಾ ಎಂದು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿತ್ತು.'

ನಟ ಚಿಯಾನ್​ ವಿಕ್ರಮ್​


ಇದನ್ನೂ ಓದಿ: ಆ ಸ್ಟಾರ್ ನಟನಿಂದ ಸಿಲ್ಕ್ ಸ್ಮಿತಾ ಬದುಕು ಹಾಳಾಯ್ತಾ? ಆಕೆ ಸಾಯುವ ದಿನ ನಿಜಕ್ಕೂ ಆಗಿದ್ದೇನು?

ಭೀಕರ ಅಪಘಾತ, ವಿಕ್ರಮ್​ ಕಾಲಿನ ಮೂಳೆ ಪುಡಿ ಪುಡಿ!

ಸೇಲಂ ಕಾಲೇಜಿನಲ್ಲಿ ಓದುವಾಗ ಅಸಂಗತ ನಾಟಕಗಳನ್ನು ಮಾಡಿ ಹುಡುಗ ಹಲವಾರು ಬಹುಮಾನ ಗೆದ್ದಿದ್ದ. ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ, MBA ಮುಗಿಸಿದರೂ ಕೂಡ ಅವರ ಮನಸ್ಸು ಬೆಳ್ಳಿ ಪರದೆಯ ಕಡೆಗೆ ಇತ್ತು. ಆದರೆ ಅವರ ದುರಾದೃಷ್ಟವು ಅವರಿಗಿಂತ ಮುಂದೆ ಇತ್ತು. ಅದೊಂದು ದಿನ ನಾಟಕ ಮುಗಿಸಿ ಬೈಕ್​ನಲ್ಲಿ ರಾತ್ರಿ ಮನೆಗೆ ಹೋಗುವಾಗ, ಲಾರಿಯೊಂದು ಬಂದು ಡಿಕ್ಕಿಯಾಗಿತ್ತು. ಅಪಘಾತದ ತೀವ್ರತೆ ಹೇಗಿತ್ತು ಅಂದರೆ, ವಿಕ್ರಮ್​ ಅವರ ದೇಹದ ಮೇಲೆ 100ಕ್ಕೂ ಹೆಚ್ಚು ಕಡೆಗಳಲ್ಲಿ ಗಾಯಗಳಾಗಿದ್ದವು. ಬಲಗಾಲಿನ ಮೂಳೆ ಪುಡಿ ಪುಡಿಯಾಗಿತ್ತು. ವೈದ್ಯರು ಕಾಲನ್ನು ಕತ್ತರಿಸಬೇಕು ಎಂದಿದ್ದರು.

ನಟ ಚಿಯಾನ್​ ವಿಕ್ರಮ್​


ಮೂರು ವರ್ಷ ಶವದಂತೆ ಮಲಗಿದ್ದ ವಿಕ್ರಮ್​!

ಆದರೆ ಅರೆಪ್ರಜ್ಞೆಯ ಕೋಮಾ ಅವಸ್ಥೆಯಲ್ಲಿ ಕೂಡ ವಿಕ್ರಮ್​ ಚೀರಿ ಹೇಳಿದ್ದ "ನಾನು ಹೀರೋ ಆಗಲೇ ಬೇಕು. ಎಷ್ಟು ನೋವು ಬೇಕಾದರೂ ಸಹಿಸಿಕೊಳ್ಳಲು ನಾನು ರೆಡಿ. ಆದರೆ ಕಾಲು ಕತ್ತರಿಸುವುದು ಬೇಡ ಎಂದು ಹೇಳಿದರು. ಇವರ ಮಾತು ಕೇಳಿ, ಇವರ ಛಲದ ಮುಂದೆ ವೈದ್ಯರು ಮತ್ತು ವೈದ್ಯಕೀಯ ವಿಜ್ಞಾನವು ಶರಣಾಯಿತು. ವಿಕ್ರಮ್​ ದೇಹದಲ್ಲಿ 23 ಶಸ್ತ್ರಚಿಕಿತ್ಸೆ ನಡೆದಿತ್ತು. ಈ ನೋವನ್ನು ಇವರು ಹೇಗೆ ತಡೆದುಕೊಂಡರು ಎಂದು ಊಹಿಸಿಕೊಳ್ಳುವುದು ಕಷ್ಟ. ಮೂರು ವರ್ಷ ಆಸ್ಪತ್ರೆಯ ಹಾಸಿಗೆಯಲ್ಲಿ ಶವದ ಹಾಗೆ ಬಿದ್ದುಕೊಂಡಿದ್ದರು.

ಜಿದ್ದಿಗೆ ಬಿದ್ದು ಕಾಲು ಉಳಿಸಿಕೊಂಡಿದ್ದ ವಿಕ್ರಮ್​!

ನಂತರ ಒಂದು ವರ್ಷ ಕ್ಲಚಸ್ ಹಿಡಿದುಕೊಂಡು ನಡೆಯಲು ಅಭ್ಯಾಸ ಮಾಡಿದರು. ನಂತರ ಗೋಡೆ ಹಿಡಿದು ನಡೆಯುವ ಅಭ್ಯಾಸ ಮಾಡಿದರರು. ಸ್ವಂತ ಕಾಲಿನ ಮೇಲೆ ನಿಂತು ನಡೆಯಲು ನಾಲ್ಕು ವರ್ಷಗಳೆ ಬೇಕಾದವು. ಹೀಗೆ ನಾಲ್ಕು ವರ್ಷಗಳ ಕಾಲ ಜಿದ್ದಿಗೆ ಬಿದ್ದು ಕಾಲು ಉಳಿಸಿಕೊಂಡು ವಿಕ್ರಮ್​ ಮತ್ತೆ ಸಿನಿಮಾದ ಕಡೆಗೆ ಮುಖ ಮಾಡಿದ್ದರು. ಅವರ ಸಂಕಲ್ಪ ಶಕ್ತಿಯ ಮುಂದೆ ದುರದೃಷ್ಟವು ಕೂಡ ಸೋತಿತ್ತು

ನಟ ಚಿಯಾನ್​ ವಿಕ್ರಮ್​


ಇದನ್ನೂ ಓದಿ: ಆರತಿ ಪುಟ್ಟಣ್ಣ ಕಣಗಾಲ್​ಗೆ ಕೈಕೊಟ್ಟಿದ್ದು ಮಂತ್ರಿಯೊಬ್ಬರನ್ನು ಮದುವೆಯಾಗೋಕಾ? ಪುಟ್ಟಣ್ಣ ಸಾವಿಗೆ ಇದೇ ಕಾರಣವಾ?

ಸೇತು ಮೂಲಕ ಹಿಟ್​ ಕೊಟ್ಟಿದ್ದ ವಿಕ್ರಮ್​!

1999ರಲ್ಲಿ ವಿಕ್ರಮ್​ ಸೇತು ಎಂಬ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದರು. ಈ ಸಿನಿಮಾದ ಶೂಟಿಂಗ್​ ಎರಡು ವರ್ಷ ನಡೆಯಿತು. ವಿಕ್ರಮ್​ ಸವಾಲಿನ ಪಾತ್ರವನ್ನು ಮಾಡಬೇಕಾಗಿತ್ತು. ವಿಕ್ರಮ್ ತನ್ನ ಪಾತ್ರಕ್ಕಾಗಿ ತಲೆಯನ್ನು ನುಣ್ಣನೆ ಬೋಳಿಸಿಕೊಂಡಿದ್ದರು. ಉದ್ದುದ್ದ ಉಗುರುಗಳನ್ನು ಬಿಟ್ಟಿದ್ದರು. ಕೇವಲ ಬೀಟ್ರೂಟ್ ರಸ, ಒಂದು ಚಪಾತಿ, ಮೊಟ್ಟೆಯ ಬಿಳಿ ತಿರುಳು ತಿಂದು ದೇಹದ ತೂಕವನ್ನು ಹದಿನಾರು ಕೆಜಿಯಷ್ಟು ಇಳಿಸಿಕೊಂಡಿದ್ದರು. ಕೊನೆಗೂ ಆ ಸಿನಿಮಾ ರಿಲೀಸ್ ಆಗಿ ಸೂಪರ್​ ಹಿಟ್​ ಎನಿಸಿಕೊಂಡಿತ್ತು. ಅಲ್ಲಿಂದ ವಿಕ್ರಮ್​ ಮತ್ತೆ ಹಿಂದೆ ತಿರುಗಿ ನೋಡಿರಲಿಲ್ಲ.

ವಿಕ್ರಮ್​ ಸ್ಟೈಲ್ ಕಾಪಿ ಮಾಡೋದು ಕಷ್ಟ!

ಕಳೆದ 30 ವರ್ಷಗಳಿಂದ ತಮಿಳು, ತೆಲುಗು, ಮಲಯಾಳಂ ಭಾಷೆಗಳ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಕ್ರಮ್​ ಅವರ ಸಿನಿಮಾಗಳನ್ನು ಬೇರೆ ಭಾಷೆಗೆ ರಿಮೇಕ್ ಮಾಡುವ ಸಾಹಸವನ್ನು ಯಾರೂ ಮಾಡುವುದಿಲ್ಲ. ಮಾಡಿದರೂ ಸಕ್ಸೆಸ್ ಆದ ಉದಾಹರಣೆ ಕಡಿಮೆ. ಯಾಕೆಂದರೆ ವಿಕ್ರಮ್ ಪ್ರತೀ ಒಂದು ಪಾತ್ರಕ್ಕೂ ಬೇರೆ ಬೇರೆ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಾರೆ. ಅವನ ಬಾಡಿ ಲಾಂಗ್ವೇಜ್, ಡೈಲಾಗ್ ಡೆಲಿವರಿ, ನಡಿಗೆ, ನಗು, ಹಾವಭಾವ ಬೇರೆ ಬೇರೆ ಪಾತ್ರಕ್ಕೆ ಬೇರೆ ಬೇರೆ ಆಗಿರುತ್ತದೆ.

ನಟ ಚಿಯಾನ್​ ವಿಕ್ರಮ್​


ಪಿತಾಮಗನ್, ಐ, ದಿಲ್, ಜೆಮಿನಿ, ಅರುಲ್, ಸಾಮಿ, ಆನಿಯನ್, ರಾವಣ್, ಕಿಂಗ್, ಧೂಳ್, ಕಾಸಿ, ಕಾಂತಾ, ತಿರುಮಗಲ್....ಮೊದಲಾದ ಸಿನೆಮಾಗಳನ್ನು ನೋಡಿದರೆ ವಿಕ್ರಮ್ ಎಷ್ಟು ಅದ್ಭುತ ನಟ ಎಂಬ ಅರಿವಾಗುತ್ತದೆ. ಆತನಿಗೆ ಏಳು ಬಾರಿ ಫಿಲ್ಮ್ ಫೇರ್ ಪ್ರಶಸ್ತಿಗಳು, ಮೂರು ಬಾರಿ ರಾಜ್ಯಪ್ರಶಸ್ತಿ, ಪಿತಾಮಗನ್ ಸಿನೆಮಾಕ್ಕೆ ರಾಷ್ಟ್ರ ಪ್ರಶಸ್ತಿ, ತಮಿಳುನಾಡಿನಲ್ಲಿ ಮಹಾನ್ ಕಲಾವಿದರಿಗೆ ಮಾತ್ರ ನೀಡುವ ಕಲೈಮಾಮಣಿ ಪ್ರಶಸ್ತಿಯನ್ನು ವಿಕ್ರಮ್ ಪಡೆದುಕೊಂಡಿದ್ದಾರೆ.
Published by:Vasudeva M
First published: