ಕಾಲಿವುಡ್‌ನಲ್ಲಿ ಪೊನ್ನಿಯನ್ ಸೆಲ್ವನ್-2 ಸಿನಿಮಾದ (Ponniyin Selvan-2 Cinema) ಹವಾ ಜೋರಾಗಿಯೇ ಬೀಸುತ್ತಿದೆ. ಬೆಂಗಳೂರಿಗೆ ಇಡೀ ಟೀಮ್ ಬಂದು ಚಿತ್ರವನ್ನ ಪ್ರಚಾರ ಕೂಡ ಮಾಡಲಿದೆ. ಏಪ್ರಿಲ್-28 ರಂದು ರಿಲೀಸ್ (Pan India Ponniyin Selvan-2 Movie) ಆಗುತ್ತಿರೋ ಈ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದೆ. ಬಾಲಿವುಡ್‌ನ ಐಶ್ವರ್ಯ ರೈ, ತಮಿಳು ಚಿತ್ರರಂಗದ ಶರತ್ ಕುಮಾರ್, ತ್ರಿಷಾ, ಚಿಯಾನ್ ವಿಕ್ರಮ್, ಜಯಂ ರವಿ, ಕಾರ್ತಿ (Ponniyin Selvan-2 Updates) ಹೀಗೆ ಕಲಾವಿದರ ದಂಡೇ ಇಡೀ ಸಿನಿಮಾದಲ್ಲಿದೆ. ಆದರೆ ಇದರ ಮಧ್ಯೆ ಇನ್ನೂ ಒಬ್ಬ ಕಲಾವಿದರು ಹೆಸರು ಕೂಡ ಕೇಳಿ ಬಂದಿತ್ತು. ಅವರೇ ಕಮಲ್ ಹಾಸನ್ (Kollywood Movie Updates) ಅನ್ನೋದು ಅಷ್ಟೇ ವಿಶೇಷವಾದ ಮಾತಾಗಿದೆ.
ಸಿನಿಮಾದ ಪ್ರಚಾರದ ಹಿನ್ನೆಲೆಯಲ್ಲಿ ಲೈಕಾ ಮೀಡಿಯಾ ಇದೀಗ ಕಮಲ್ ಹಾಸನ್ ಇರೋ ಒಂದು ವಿಡಿಯೋವನ್ನ ರಿಲೀಸ್ ಮಾಡಿದೆ.
ಕಮಲ್ ಹಾಸನ್ ಕಂಠಸಿರಿಯಲ್ಲಿ ಪೊನ್ನಿಯನ್ ಸೆಲ್ವನ್-2 ಸಿನಿಮಾ
ಕಾಲಿವುಡ್‌ನಲ್ಲಿ ಕಲಾದೇವಿ ಪುತ್ರ ಅಂದ್ರೆ ಯಾರು? ಈ ಒಂದು ಪ್ರಶ್ನೆಗೆ ಉತ್ತರ ಇಲ್ಲಿ ಒಂದೇ ಇದೆ. ಅದುವೇ ಕಮಲ್ ಹಾಸನ್ ಎಂದೇ ಹೇಳಬೇಕು. ಸಿನಿಮಾರಂಗದ ಎಲ್ಲ ವರ್ಗದಲ್ಲೂ ಪರಿಣಿತಿ ಪಡೆದ ಕಮಲ್ ಹಾಸನ್ ಐತಿಯಾಸಿಕ ಕಥೆಗಳನ್ನ ಮಾಡೋವಲ್ಲಿ ತುಂಬಾ ಆಸಕ್ತಿ ಇರೋ ಕಲಾವಿದರೇ ಆಗಿದ್ದಾರೆ.
ಡೈರೆಕ್ಟರ್ ಮಣಿರತ್ನಂ ಅವರ ಪೊನ್ನಿಯನ್ ಸೆಲ್ವನ್ ಚಿತ್ರ ಬಂದಾಗ ಎಲ್ಲರಿಗೂ ಒಂದು ಪ್ರಶ್ನೆ ಇತ್ತು. ಅತಿ ದೊಡ್ಡ ಸಿನಿಮಾದಲ್ಲಿ ತಮಿಳಿನ ಎಲ್ಲ ಕಲಾವಿದರಿದ್ದಾರೆ. ಆದರೆ ಈ ಚಿತ್ರದಲ್ಲಿ ಕಮಲ್ ಹಾಸನ ಇಲ್ಲ ಅನ್ನೋ ಬೇಸರವೇ ಅನೇಕರಿಗೆ ಕಾಡಿದಂತೇನೂ ಇತ್ತು.
ಮಣಿರತ್ನಂ ಪೊನ್ನಿಯನ್ ಸೆಲ್ವನ್-2 ಚಿತ್ರದಲ್ಲಿ ಕಮಲ್ ಹಾಸನ್!
ಕಮಲ್ ಹಾಸನ್ ಅವರ ಆ ಒಂದು ಆಸೆ ಈಗ ಈಡೇರಿದೆ. ಕಮಲ್ ಹಾಸನ್ ಪೊನ್ನಿಯನ್ ಸೆಲ್ವನ್-2 ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆದರೆ ಯಾವ ಪಾತ್ರ ಅನ್ನೋ ಪ್ರಶ್ನೆ ಕೂಡ ಇದೆ. ಲೈಕಾ ಮೀಡಿಯಾ ಈಗ ರಿಲೀಸ್ ಮಾಡಿರೋ ವಿಡಿಯೋ ನೋಡಿದ್ರೆ, ಕಮಲ್ ಹಾಸನ್ ಇಲ್ಲಿ ಕೇವಲ ನಿರೂಪಕರೇ ಅನ್ನೋ ಅನುಮಾನವೂ ಇದೆ.
ಪೊನ್ನಿಯನ್ ಸೆಲ್ವನ್-2 ಚಿತ್ರದ ಇಡೀ ಕಥೆಯನ್ನ ಕಮಲ್ ಹಾಸನ್ ಇಲ್ಲಿ ನಿರೂಪಿಸಿದ್ದಾರೆ. ಚೋಳ ರಾಜನ ಇಡೀ ಕಥೆಯನ್ನ ತಮ್ಮ ವಿಶೇಷ ಧ್ವನಿಯಲ್ಲಿ ಹೇಳಿದ್ದಾರೆ. ಅದನ್ನ ಕೇಳೋದೇ ಚಂದ ನೋಡಿ. ಅದರ ಒಂದು ಝಲಕ್ ಅನ್ನ ಈಗೀನ ವಿಡಿಯೋದಲ್ಲಿ ನೋಡಬಹುದಾಗಿದೆ.
ಬೆಂಗಳೂರಿನಲ್ಲಿ ಪೊನ್ನಿಯನ್ ಸೆಲ್ವನ್-2 ಸಿನಿಮಾ ಪ್ರಚಾರ
ಪೊನ್ನಿಯನ್ ಸೆಲ್ವನ್-2 ಸಿನಿಮಾದ ಪ್ರಚಾರ ಶುರು ಆಗಿದೆ. ಸಿನಿಮಾ ತಂಡ ಎಲ್ಲೆಡೆ ಹೋಗಿ ಪ್ರಚಾರ ಕೂಡ ಮಾಡುತ್ತಿದೆ. ಇಡೀ ತಂಡ ಏಪ್ರಿಲ್-22 ರಂದು ಬೆಂಗಳೂರಿನ ಖಾಸಗಿ ಹೋಟೆಲ್‌ಗೆ ಇಡೀ ಸಿನಿಮಾ ತಂಡವೇ ಬರ್ತಿದೆ.
ಹಾಗೆ ಬೆಂಗಳೂರಿಗೆ ಚಿಯಾನ್ ವಿಕ್ರಮ್, ತ್ರಿಷಾ, ಕಾರ್ತಿಕ್, ಐಶ್ವರ್ಯ ರೈ, ಜಯಂ ರವಿ ಸೇರಿ ಎಲ್ಲರೂ ಇಲ್ಲಿಗೆ ಆಗಮಿಸುತ್ತಿದ್ದಾರೆ. ಈ ಮೂಲಕ ತಮ್ಮ ಪೊನ್ನಿಯನ್ ಸೆಲ್ವನ್-2 ಸಿನಿಮಾದ ಕುರಿತು ಅಧಿಕೃತವಾಗಿಯೇ ಒಂದಷ್ಟು ಮಾಹಿತಿಯನ್ನ ಹಂಚಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Milind Soman-Ankita: ತನಗಿಂತ 26 ವರ್ಷ ಚಿಕ್ಕ ಹುಡುಗಿಯನ್ನು ಮದುವೆಯಾದ ನಟ! ಆದ್ರೂ ಅಂಕಿತಾ ಗಂಡನೊಂದಿಗೆ ಫುಲ್ ಹ್ಯಾಪಿ
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪೊನ್ನಿಯನ್ ಸೆಲ್ವನ್-2 ಇದೇ 28 ರಂದು ರಿಲೀಸ್ ಆಗುತ್ತಿದೆ. ಈ ಮೂಲಕ ಕಮಲ್ ಹಾಸನ್ ಕೂಡ ತಮ್ಮದೇ ರೀತಿಯಲ್ಲಿ ಸಿನಿಮಾದಲ್ಲಿ ವಿಶೇಷವಾಗಿ ಹೊಳೆಯಲಿದ್ದಾರೆ ನಿರೀಕ್ಷೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ