Vignesh Shivan ಜೊತೆ ತಿರುಪತಿಗೆ ಭೇಟಿ ನೀಡಿ ಆಶೀರ್ವಾದ ಪಡೆದ ಲೇಡಿ ಸೂಪರ್ ಸ್ಟಾರ್ Nayanatara- ವಿಡಿಯೋ ವೈರಲ್...

Nayanatara Visits Tirupati With Vignesh: ನಾವು ಮದುವೆಯಾಗಲು ನಿರ್ಧರಿಸಿದಾಗ, ನಾವು ಖಂಡಿತವಾಗಿಯೂ ನಮ್ಮ ಅಭಿಮಾನಿಗಳಿಗೆ ತಿಳಿಸುತ್ತೇವೆ. ನಮ್ಮ ನಿಶ್ಚಿತಾರ್ಥವು ನಮ್ಮ ಹತ್ತಿರದ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆಯಿತು. ನಾವು ಇನ್ನೂ ನಮ್ಮ ಮದುವೆಯನ್ನು ನಿರ್ಧರಿಸಿಲ್ಲ ಎಂದಿದ್ದಾರೆ.

ವಿಘ್ನೇಶ್ ಶಿವನ್ ಜೊತೆ ನಯನತಾರಾ

ವಿಘ್ನೇಶ್ ಶಿವನ್ ಜೊತೆ ನಯನತಾರಾ

  • Share this:
ಕಾಲಿವುಡ್ ನ (Kollywood)ಲೇಡಿ ಸೂಪರ್ ಸ್ಟಾರ್ ನಯನತಾರಾ(Nayana Tara) ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ (Vignesh Shivan)ಅವರು ಇಂದು ತಿರುಮಲ ತಿರುಪತಿ ದೇವಸ್ಥಾನದಿಂದ ಹೊರಗೆ ಬರುತ್ತಿದ್ದಾಗ ಮಾಧ್ಯಮಗಳ ಕಣ್ಣಿಗೆ ಬಿದ್ದಿದ್ದಾರೆ. ನಯನತಾರಾ ಯಾವಾಗಳಂತೆಯೇ  ಸಾಮಾನ್ಯ ಉಡುಪಿನಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. ದೇವಸ್ಥಾನದಲ್ಲಿ ಆಶೀರ್ವಾದ ಪಡೆದ ನಂತರ ಅವರು ವಿಘ್ನೇಶ್ ಶಿವನ್ ಜೊತೆ  ಕೈ ಹಿಡಿದು ನಡೆದುಕೊಂಡು ಹೋಗಿದ್ದು ಕಾಣಿಸಿದೆ.  ದೇವಾಲಯದಲ್ಲಿ ದೇವರ ದರ್ಶನ ಪಡೆದು ಹೊರ ಬಂದ ಈ ಜೋಡಿ ಫೋಟೋಗೆ ಪೋಸ್ ನೀಡಿದ್ದು, ಈ ವೀಡಿಯೋ ಮತ್ತು ಫೋಟೋ  ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ.  ಇತ್ತೀಚೆಗಷ್ಟೇ 36ನೇ ವರ್ಷಕ್ಕೆ  ಕಾಲಿಟ್ಟ ವಿಘ್ನೇಶ್ ಶಿವನ್‍ರವರಿಗೆ ನಯನತಾರಾ ಸರ್ಪ್ರೈಸ್ ಪಾರ್ಟಿ ನೀಡುವ ಮೂಲಕ ಸಂಭ್ರಮ ಆಚರಿಸಿದ್ದರು. 

ವೀಡಿಯೋದಲ್ಲಿ ನಯನತಾರಾ ನೀಲಿ ಬಣ್ಣದ ಅನಾರ್ಕಲಿ ಧರಿಸಿದ್ದು, ವಿಘ್ನೇಶ್ ಬಿಳಿ ಬಣ್ಣದ ಪಂಚೆ ಹಾಗೂ ಶರ್ಟ್, ಅಲ್ಲದೇ ಮೆರೂನ್ ಕಲರ್‌ನ ಶಲ್ಯವನ್ನು ಧರಿಸಿದ್ದಾರೆ. ಬಳಿಕ ದೇವಾಲಯದಿಂದ ಮುಂದೆ ಸಾಗುತ್ತಾ ಇಬ್ಬರು ಮಾಸ್ಕ್ ಧರಿಸಿಕೊಳ್ಳುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ.  ನಯನತಾರಾ ಮತ್ತು ವಿಘ್ನೇಶ್ ಶಿವನ್ ಯಾವಾಗಲೂ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಮತ್ತು ತಮ್ಮ ಚಿತ್ರ ಬಿಡುಗಡೆಗೂ ಮುನ್ನ ಪ್ರಾರ್ಥನೆ ಸಲ್ಲಿಸುತ್ತಾರೆ. ಸಮಂತಾ ಅಕ್ಕಿನೇನಿ ಮತ್ತು ವಿಜಯ್ ಸೇತುಪತಿ ಜೊತೆಯಾಗಿ ನಟಿಸಿರುವ ವಿಘ್ನೇಶ್ ನಿರ್ದೇಶನದ ಕಾತು ವಾಕುಲಾ ಎರಡು ಕಾದಲ್ ಚಿತ್ರದಲ್ಲಿ ನಯನತಾರಾ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಮಗಳ ದಿನದಂದು ಮುದ್ದು ಮಗಳ ಹೆಸರು ರಿವೀಲ್ ಮಾಡಿದ ನಟ ಆರ್ಯ.

ಈ ಮಧ್ಯೆ ಟೆಲಿವಿಷನ್ ಕಾರ್ಯಕ್ರಮವೊಂದರಲ್ಲಿ ತನ್ನ ನೆಟ್ರಿಕನ್ ಚಿತ್ರದ ಪ್ರಚಾರಕ್ಕಾಗಿ ಕಾಣಿಸಿಕೊಂಡಿದ್ದ ನಯನತಾರಾ, ಚಲನಚಿತ್ರ ನಿರ್ಮಾಪಕ ಶಿವನ್ ಜೊತೆ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ವದಂತಿಗಳಿಗೆ ಉತ್ತರಿಸಿದ್ದಾರೆ. ವಿಘ್ನೇಶ್ ಜೊತೆಗಿನ ತನ್ನ ಫೋಟೋವೊಂದರಲ್ಲಿ ತೋರಿಸಿದ ನಿಶ್ಚಿತಾರ್ಥದ ಉಂಗುರದ ಬಗ್ಗೆ ಮಾತನಾಡುತ್ತಾ, ನಯನತಾರಾ, "ಇದು ನನ್ನ ನಿಶ್ಚಿತಾರ್ಥದ ಉಂಗುರ. ನಾವು  ಸ್ವಲ್ಪ ಖಾಸಗಿ ಬದುಕನ್ನು ಬದುಕಲು ಇಷ್ಟಪಡುತ್ತೇವೆ. ಆದ್ದರಿಂದ ನಾವು ಅದ್ಧೂರಿ ಸಮಾರಂಭವನ್ನು ಮಾಡಲು ಬಯಸುವುದಿಲ್ಲ ಎಂದಿದ್ದಾರೆ.ನಾವು ಮದುವೆಯಾಗಲು ನಿರ್ಧರಿಸಿದಾಗ, ನಾವು ಖಂಡಿತವಾಗಿಯೂ ನಮ್ಮ ಅಭಿಮಾನಿಗಳಿಗೆ ತಿಳಿಸುತ್ತೇವೆ. ನಮ್ಮ ನಿಶ್ಚಿತಾರ್ಥವು ನಮ್ಮ ಹತ್ತಿರದ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆಯಿತು. ನಾವು ಇನ್ನೂ ನಮ್ಮ ಮದುವೆಯನ್ನು ನಿರ್ಧರಿಸಿಲ್ಲ ಎಂದಿದ್ದಾರೆ.

ಸೌತ್‌ನ ಲೇಡಿ ಸೂಪರ್‌ಸ್ಟಾರ್‌ ನಯನತಾರಾ  ಅವರ ಮದುವೆಯ ಸುತ್ತ ಕೆಲವು ದಿನಗಳಿಂದ ನ್ಯೂಸ್‌ ಹರಿದಾಡುತ್ತಿತ್ತು. ನಯನತಾರಾ ವಿಘ್ನೇಶ್ ಶಿವನ್ ಈ ತಿಂಗಳು ಮದುವೆಯಾಗಲಿದ್ದಾರೆ. ನಂತರ ನಟಿ ನಟನೆಯನ್ನು ಬಿಡಲಿದ್ದಾರೆ ಎಂದು ರೂಮರ್‌ಗಳು ಫ್ಯಾನ್ಸ್‌ಗೆ ಆಘಾತ ನೀಡಿತ್ತು.

ಇದನ್ನೂ ಓದಿ: ಹೊಸ ಸಿನಿಮಾಗಾಗಿ ದಿಲ್ ​ರಾಜು- ವಂಶಿ ಪೈಡಿಪಲ್ಲಿ ಜತೆ ಕೂ ಜೋಡಿಸಿದ ನಟ Vijay

ನಯನತಾರಾ ತುಂಬಾ ಖಾಸಗಿ ವ್ಯಕ್ತಿ ಮತ್ತು ಎಂದಿಗೂ ಹೆಚ್ಚಿನ ಸಂದರ್ಶನಗಳನ್ನು ನೀಡುವುದಿಲ್ಲ ಅಥವಾ ಚಲನಚಿತ್ರ ಪ್ರಚಾರ ಅಥವಾ ಕಾರ್ಯಕ್ರಮಗಳಿಗೆ ಹಾಜರಾಗುವುದಿಲ್ಲ. ಆದಾಗ್ಯೂ, ಇತ್ತೀಚೆಗೆ ಅವರು ಚಾಟ್ ಶೋನಲ್ಲಿ ಕಾಣಿಸಿಕೊಂಡು ಉತ್ತರ ನೀಡಿದ್ದಾರೆ.
Published by:Sandhya M
First published: