ಕಾಲಿವುಡ್ನ ಮಹಾನ್ ನಿರ್ದೇಶಕ () ಮಣಿರತ್ನಂ ಅವರ ಕನಸಿನ ಪ್ರೋಜೆಕ್ಟ್ ಪೊನ್ನಿಯನ್ ಸೆಲ್ವನ್ ಪಾರ್ಟ್-2 ಸಿನಿಮಾ ಬರೋಕೆ ರೆಡಿ ಆಗಿದೆ. ಕಳೆದ ಸೆಪ್ಟೆಂಬರ್-30 ರಂದು ಈ ಚಿತ್ರದ (Ponniyin Selvan Part-2) ಪಾರ್ಟ್-1 ರಿಲೀಸ್ ಆಗಿತ್ತು. ಎಲ್ಲೆಡೆ ರಿಲೀಸ್ ಆಗಿ ಹೊಸ ಅಲೆಯನ್ನೆ ಎಬ್ಬಿಸಿತ್ತು. ಬಹು ಕೋಟಿಯ ಈ ಚಿತ್ರದಲ್ಲಿ ಬಹು (Ponniyin Selvan part 2 completed) ತಾರಾಗಣವೇ ಇತ್ತು. ಐಶ್ವರ್ಯ ರೈ, ತ್ರಿಷಾ, ಚಿಯಾನ್ ವಿಕ್ರಮ್, ಜಯಂ ರವಿ ಹೀಗೆ ದೊಡ್ಡ ಸ್ಟಾರ್ಗಳೇ ಈ ಚಿತ್ರದಲ್ಲಿ ಇದ್ದರು. ಸ್ವತಂತ್ರ ಹೋರಾಟಗಾರ ಹಾಗೂ ಲೇಖಕ ಕಲ್ಕಿ ಕೃಷ್ಣಮೂರ್ತಿ ಬರೆದ (Ponniyin Selvan Historical Movie) ಪೊನ್ನಿಯಿನ್ ಸೆಲ್ವನ್ ಐತಿಹಾಸಿಕ ಕಾದಂಬರಿಯನ್ನೆ ಈ ಚಿತ್ರ ಆಧರಿಸಿತ್ತು.
ಇದೇ ಚಿತ್ರದ ಪಾರ್ಟ್-2 ಕೂಡ ರೆಡಿಯಾಗುತ್ತಿದೆ. ಈಗ ಇದರ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ.
ಭಾರತೀಯ ಚಿತ್ರರಂಗದ ಮಹಾನ್ ನಿರ್ದೇಶಕನ ಸಿನಿಮಾ
ಡೈರೆಕ್ಟರ್ ಮಣಿರತ್ನಂ ಚಿತ್ರಗಳೇ ಹಾಗೆ. ಎಲ್ಲೆಡೆ ರಿಲೀಸ್ ಆಗುತ್ತವೆ. ಪೊನ್ನಿಯಿನ್ ಸೆಲ್ವನ್ ಚಿತ್ರವೂ ಅದೇ ರೀತಿ ಎಲ್ಲೆಡೆ ರಿಲೀಸ್ ಆಗಿತ್ತು. ಐತಿಹಾಸಿಕ ಕಾದಂಬರಿಯನ್ನ ಆಧರಿಸಿಯೇ ಡೈರೆಕ್ಟರ್ ಮಣಿರತ್ನಂ ಈ ಚಿತ್ರ ಮಾಡಿದ್ದರು. ಇದು ಬಹು ಕೋಟಿ ಬಹು ತಾರೆಯ ಸಿನಿಮಾನೇ ಆಗಿತ್ತು.
ಪೊನ್ನಿಯಿನ್ ಸೆಲ್ವನ್ ಸಿನಿಮಾ ಕಥೆಯನ್ನ ಕಂಡ ಪ್ರೇಕ್ಷಕರು ಥ್ರಿಲ್ ಆಗಿದ್ದರು. ತಮಿಳು ರಾಜನ ಐತಿಹಾಸಿಕ ಕಥೆಯನ್ನೇ ಹೇಳಿದ್ದ ಈ ಚಿತ್ರ ಅಂದಿನ ಆ ಹೋರಾಟವನ್ನೆ ಕಟ್ಟಿಕೊಟ್ಟಿತ್ತು. ದೊಡ್ಡ ಮಟ್ಟದಲ್ಲಿಯೇ ಈ ಕಥೆ ಸಿನಿ ಪ್ರೇಕ್ಷಕರಲ್ಲಿ ಥ್ರಿಲ್ ಮೂಡಿಸಿತ್ತು.
ಪೊನ್ನಿಯಿನ್ ಸೆಲ್ವನ್ ಚಿತ್ರದ ಪಾರ್ಟ್-2 ರಿಲೀಸ್ ಯಾವಾಗ?
ಪೊನ್ನಿಯಿನ್ ಸೆಲ್ವನ್ ಒಂದು ಐತಿಹಾಸಿಕ ಸಿನಿಮಾ. ಈ ಚಿತ್ರದ ಕಥೆಯನ್ನ ಒಂದೇ ಭಾಗದಲ್ಲಿ ಹೇಳಿದ್ರೆ ಆಗುತ್ತದೆಯೇ? ಅದಕ್ಕೇನೆ ಈ ಚಿತ್ರದ ಕಥೆಯನ್ನ ಎರಡು ಭಾಗದಲ್ಲಿಯೇ ಹೇಳಬೇಕು ಅಂತಲೇ ಡೈರೆಕ್ಟರ್ ಮಣಿರತ್ನಂ ಈ ಮೊದಲೇ ಪ್ಲಾನ್ ಮಾಡಿದ್ದರು. ಆ ನಿಟ್ಟಿನಲ್ಲಿಯೇ ಮೊದಲ ಭಾಗದಲ್ಲಿ ಹೇಳೋಕೆ ಸಾಧ್ಯವಾಗೋ ಎಲ್ಲ ವಿಷಯಗಳನ್ನ ಡೈರೆಕ್ಟರ್ ಮಣಿರತ್ನಂ ಹೇಳಿದ್ದರು.
ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ವಾರ್ ಇತ್ತು. ವಾರ್ ಸುತ್ತ ಅಷ್ಟೇ ಕುತೂಹಲವೂ ಇತ್ತು. ಅದನ್ನ ಇಲ್ಲಿ ಅಷ್ಟೇ ಅದ್ಭುತವಾಗಿಯೇ ಡೈರೆಕ್ಟರ್ ಮಣಿರತ್ನಂ ಬೆಳ್ಳಿ ತೆರೆಗೆ ಕಟ್ಟಿಕೊಟ್ಟಿದ್ದರು.
ಪೊನ್ನಿಯಿನ್ ಸೆಲ್ವನ್-2 ಮುಂದಿನ ವರ್ಷ ಎಲ್ಲೆಡೆ ರಿಲೀಸ್
ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್-2 ಚಿತ್ರದ ರಿಲೀಸ್ ಡೇಟ್ ಈಗಾಗಲೇ ಪ್ಲಾನ್ ಆಗಿದೆ. ಈ ಹಿನ್ನೆಲೆಯಲ್ಲಿಯೇ ಈಗಾಗಲೇ ಸಿನಿಮಾದ ಕೆಲಸ ಕೂಡ ಶುರು ಆಗಿದೆ. ಅದರಂತೆ ಮಣಿರತ್ನಂ ಅವರು ತಮ್ಮ ಈ ಐತಿಹಾಸಿಕ ಚಿತ್ರವನ್ನ ಮುಂದಿನ ವರ್ಷ ರಿಲೀಸ್ ಮಾಡೋಕೆ ಪ್ಲಾನ್ ಮಾಡಿದ್ದಾರೆ. ಅದರ ರಿಲೀಸ್ ಡೇಟ್ ಅನ್ನೂ ಕೂಡ ಈಗಾಗಲೇ ಫಿಕ್ಸ್ ಮಾಡಿದ್ದಾರೆ.
ಏಪ್ರಿಲ್-28 2023 ರಂದು ಪೊನ್ನಿಯಿನ್ ಸೆಲ್ವನ್-2 ರಿಲೀಸ್
ಪೊನ್ನಿಯಿನ್ ಸೆಲ್ವನ್-2 ಸಿನಿಮಾ ಮುಂದಿನ ವರ್ಷ ಏಪ್ರಿಲ್-28 ರಂದು ತೆರೆಗೆ ಬರುತ್ತಿದೆ. ಸಿನಿಮಾ ಪ್ರೇಮಿಗಳಿಗೆ ಪೊನ್ನಿಯಿನ್ ಸೆಲ್ವನ್-2 ಚಿತ್ರವೂ ಥ್ರಿಲ್ ಮೂಡಿಸೋದು ಗ್ಯಾರಂಟಿ ಅಂತಲೇ ಹೇಳಬಹುದು.
ಪಾರ್ಟ್-1 ಚಿತ್ರವನ್ನ ನೋಡಿದ ಪ್ರೇಕ್ಷಕರು ಈಗ ಪಾರ್ಟ್-2 ಚಿತ್ರಕ್ಕಾಗಿಯೇ ಕಾಯುತ್ತಿದ್ದಾರೆ. ಅದಕ್ಕೇನೆ ಈಗಲೇ ಸಿನಿಮಾ ಟೀಮ್ ರಿಲೀಸ್ ಡೇಟ್ ಅನ್ನು ಕೂಡ ಈಗಲೇ ಅನೌನ್ಸ್ ಮಾಡಿದೆ.
ಇದನ್ನೂ ಓದಿ: Rashmika Mandanna: ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ!? ನ್ಯಾಷನಲ್ ಕ್ರಶ್ಗೆ ಬಂಪರ್ ಆಫರ್!
ಮಣಿರತ್ನಂ ಅವರ ಈ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಐತಿಹಾಸಿಕ ಕಥೆಯನ್ನ ರವಿವರ್ಮನ್ ತಮ್ಮ ಕ್ಯಾಮರಾ ಕಣ್ಣಿನಲ್ಲಿ ಅದ್ಭುತವಾಗಿಯೇ ಸೆರೆಹಿಡಿದಿದ್ದಾರೆ. ಇನ್ನುಳಿದಂತೆ ಸದ್ಯಕ್ಕೆ ಈ ಚಿತ್ರದ ಬಗ್ಗೆ ಇಷ್ಟೇ ಮಾಹಿತಿ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ