Kollywood: ಫಸ್ಟ್​ ಟೈಂ ಬಿಕಿನಿ ತೊಟ್ಟ `ಮಾಣಿಕ್ಯ’ನ ಬೆಡಗಿ.. ಇಷ್ಟು ದಿನ ಇಲ್ದೇ ಇರದು, ಈಗ್ಯಾಕೆ? ಎಂದ ನೆಟ್ಟಿಗರು!

ಇನ್ನೂ ಟಾಲಿವುಡ್​, ಕಾಲಿವುಡ್​ನಲ್ಲಿ ಕೆಲ ನಟಿಯರು ಬಿಕಿನಿ ತೊಟ್ಟು ಮೈಮಾಟ ಪ್ರದರ್ಶಿಸಿದ್ದಾರೆ. ಇದೀಗ ಕಾಲಿವುಡ್​ನ ನಟಿಯರೊಬ್ಬರು ಇದೇ ಮೊದಲ ಬಾರಿಗೆ ಬಿಕಿನಿ ತೊಟ್ಟು ಪೋಸ್​ ಕೊಟ್ಟಿದ್ದಾರೆ. ಇಷ್ಟು ವರ್ಷ ಚಿತ್ರರಂಗದಲ್ಲಿದ್ದರೂ ಇಲ್ಲಿಯವರೆಗೂ ಈ ನಟಿ ಬಿಕಿನಿ ತೊಟ್ಟಿರಲಿಲ್ಲ.

ನಟಿ ವರಲಕ್ಷ್ಮಿ

ನಟಿ ವರಲಕ್ಷ್ಮಿ

  • Share this:
ಪ್ರತಿಯೊಬ್ಬ ನಟಿಯರು ಕೂಡ ಒಂದಲ್ಲ ಒಂದು ಬಾರಿಯಾದರೂ ಬಿಕಿನಿ(Bikini) ತೊಟ್ಟು ಕ್ಯಾಮರಾಗೆ ಪೋಸ್​ ಕೊಡಬೇಕು ಎಂಬ ಆಸೆ ಇದ್ದೆ ಇರುತ್ತೆ. ಅದರಲ್ಲೂ ಬಾಲಿವುಡ್(Bollywood)​ ನಟಿಯರು ಬಿಕಿನಿ ತೊಡುವುದರಲ್ಲಿ ಎತ್ತಿದ್ದ ಕೈ. ಸ್ಯಾಂಡಲ್​ವುಡ್​(Sandalwood)ನಲ್ಲಿ ಕೊಂಚ ಮಟ್ಟಿಗೆ ಬಿಕಿನಿ ಕ್ರೇಜ್​ ಕಡಿಮೆ ಅನ್ನುವುದು ಎಲ್ಲರಿಗೂ ಗೊತ್ತಿದೆ. ಟಾಲಿವುಡ್(Tollywood)​, ಕಾಲಿವುಡ್​(Kollywood)ನಲ್ಲೂ ಬಿಕಿನಿ ತೊಟ್ಟು ಪೋಸ್​​ ಕೊಡುವ ನಟಿಮಣಿಯರ ಸಂಖ್ಯೆ ಹೆಚ್ಚಿದೆ. ಬಾಲಿವುಡ್​ನಲ್ಲಿ ಬಿಕಿನಿ ಅಂದರೆ, ಕಣ್ಣು ಮುಂದೆ ದಿಶಾ ಪಾಟ್ನಿ(Disha Patani) ಹಾಗೂ ಜಾನ್ಹವಿ ಕಪೂರ್​ ಬರುತ್ತಾರೆ. ಇನ್ನೂ ಟಾಲಿವುಡ್​, ಕಾಲಿವುಡ್​ನಲ್ಲಿ ಕೆಲ ನಟಿಯರು ಬಿಕಿನಿ ತೊಟ್ಟು ಮೈಮಾಟ ಪ್ರದರ್ಶಿಸಿದ್ದಾರೆ. ಇದೀಗ ಕಾಲಿವುಡ್​ನ ನಟಿಯರೊಬ್ಬರು ಇದೇ ಮೊದಲ ಬಾರಿಗೆ ಬಿಕಿನಿ ತೊಟ್ಟು ಪೋಸ್​ ಕೊಟ್ಟಿದ್ದಾರೆ. ಇಷ್ಟು ವರ್ಷ ಚಿತ್ರರಂಗದಲ್ಲಿದ್ದರೂ ಇಲ್ಲಿಯವರೆಗೂ ಈ ನಟಿ ಬಿಕಿನಿ ತೊಟ್ಟಿರಲಿಲ್ಲ.

ಸಿನಿಮಾರಂಗದಲ್ಲಿ ಸಖತ್​ ಬ್ಯುಸಿಯಸ್ಟ್​ ನಟಿ ವರಲಕ್ಷ್ಮಿ!

ಇದೇ ಮೊದಲ ಬಾರಿಗೆ ಬಿಕಿನಿ ತೊಟ್ಟು ಸಖತ್​ ಹಾಟ್​ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಕಂಡ ನೆಟ್ಟಿಗರು ಇಷ್ಟು ದಿನ ಇಲ್ದೇ ಇರದು, ಈಗ್ಯಾಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.ನಟಿ ವರಲಕ್ಷ್ಮಿ ಶರತ್ ಕುಮಾರ್ ಅವರು ಕನ್ನಡದಲ್ಲಿ ಕಿಚ್ಚ ಸುದೀಪ್ ಅಭಿನಯದ 'ಮಾಣಿಕ್ಯ' , ಅರ್ಜುನ್ ಸರ್ಜಾ ನಟನೆಯ 'ವಿಸ್ಮಯ', ಚಿರಂಜೀವಿ ಸರ್ಜಾ ಅವರ 'ರಣಂ' ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ವರಲಕ್ಷ್ಮಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಾಯಕಿಯಾಗಿ ಮಿಂಚದಿದ್ದರೂ, ನೆಗೆಟಿವ್ ಪಾತ್ರ, ಪೋಷಕ ಪಾತ್ರಗಳ ಮೂಲಕ ಸ್ಟಾರ್ ನಾಯಕಿಯರಷ್ಟೇ ಸ್ಥಾನಮಾನ ಗಳಿಸಿದ್ದಾರೆ.

ಬಿಕಿನಿ ತೊಟ್ಟು ಪೋಸ್​ ಕೊಟ್ಟ ನಟಿ ವರಲಕ್ಷ್ಮಿ!

ವರಲಕ್ಷ್ಮಿ ತಮ್ಮ ಗ್ಲಾಮರ್ ಫೋಟೋಗಳನ್ನು ಈಗ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮಾಲ್ಡೀವ್ಸ್ ಗೆ ಹೋಗಿದ್ದ ವರಲಕ್ಷ್ಮಿ ಅವರು ಅಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡು ಎಲ್ಲರಿಗೂ ಶಾಕ್ ನೀಡಿದ್ದಾರೆ. ಇಲ್ಲಿಯವರೆಗೂ ಸಿನಿಮಾದಲ್ಲಿಯೂ ಇಷ್ಟು ಗ್ಲಾಮರಸ್​ ಆಗಿ ವರಲಕ್ಮಿ ಕಾಣಿಸಿಕೊಂಡಿರಲಿಲ್ಲ,ಬಿಕಿನಿ ತೊಟ್ಟು ಪೋಸ್ ಕೊಡುವ ಮೂಲಕ ನೋಡುಗರಲ್ಲಿ ಹಲ್‌ಚಲ್ ಎಬ್ಬಿಸಿದ್ದಾರೆ. ಈ ಫೋಟೋಗಳನ್ನು ಕಂಡ ನೆಟ್ಟಿಗರು ಚಿತ್ರ, ವಿಚಿತ್ರ ಕಮೆಂಟ್​ ಮಾಡುತ್ತಿದ್ದಾರೆ.ಇದನ್ನೂ ಓದಿ: 3 ದಿನದಲ್ಲಿ ₹31 ಕೋಟಿ ಕಲೆಕ್ಷನ್​.. ಸಿನಿಮಾ ನೋಡಲು ಪೊಲೀಸರಿಗೆ ರಜೆ ಕೊಟ್ಟ ಸರ್ಕಾರ!

ಸಖತ್​ ವೈರಲ್​ ಆಗ್ತಿದೆ ನಟಿಯ ಬಿಕಿನಿ ಫೋಟೋಗಳು

ನಟಿ ವರಲಕ್ಷ್ಮಿ ಅವರ ಈ ಬಿಕಿನಿ ಫೋಟೊಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 90ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದ್ದು, ಸಾಕಷ್ಟು ನೆಟ್ಟಿಗರು ಕಮೆಂಟ್ ಕೂಡ ಮಾಡುತ್ತಿದ್ದಾರೆ. ಕೆಲವರು ಹಾಟ್ ಲುಕ್ಕಿಂಗ್​ ಬೋಲ್ಡ್ ಅಂತ ಕಮೆಂಟ್​ ಮಾಡುತ್ತಿದ್ದಾರೆ. ಮತ್ತೆ ಕೆಲವರು ಇಷ್ಟುದಿನ ಚೆನ್ನಾಗಿದ್ದ ನಿಮಗೆ ಈಗ ಏನಾಗಿದೆ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಇದ್ಯಾವುದಕ್ಕು ತಲೆಕೆಡಿಸಿಕೊಳ್ಳದ ವರಲಕ್ಷ್ಮಿ ಮಾಲ್ಡೀವ್ಸ್ ಬೀಚ್‌ನಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಲೂಸ್​ ಮಾದ ಈಗ `ಕಿರಿಕ್ ಶಂಕರ್​’.. ಇವ್ನ್​ ತಂಟೆಗೆ ಮಾತ್ರ ಹೋಗ್ಬೇಡಿ ಗುರೂ!

ಸಮಂತಾ ಯಶೋಧ ಸಿನಿಮಾದಲ್ಲಿ ವರಲಕ್ಷ್ಮಿ!
 ವರಲಕ್ಷ್ಮಿ ಸಧ್ಯ ಗೋಪಿಚಂದ್ ಮಲಿನೇನಿ ಅವರ, ಬಾಲಕೃಷ್ಣ ಅವರು ನಾಯಕನಾಗಿ ನಟಿಸಿರುವ ಮುಂದಿನ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.ಸಮಂತಾ ರುತ್ ಪ್ರಭು ತಮ್ಮ ಮುಂದಿನ ಚಿತ್ರ 'ಯಶೋದಾ'ದ ಬಗ್ಗೆ ಈಗಾಗಲೇ ತಿಳಿಸಿದ್ದಾರೆ. ಶಿವಲೆಂಕ ಕೃಷ್ಣ ಪ್ರಸಾದ್ ನಿರ್ಮಿಸಿರುವ ಈ ಹೊಸ ಪ್ಯಾನ್-ಇಂಡಿಯಾ ಚಿತ್ರದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ.ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿ ವರಲಕ್ಷ್ಮಿ ಬಣ್ಣ ಹಚ್ಚಲಿದ್ದಾರೆ.
Published by:Vasudeva M
First published: