ಮೂರು ವರ್ಷಗಳಿಂದ ಪ್ರೀತಿ (Love) ಮಾಡ್ತಾ ಇದ್ದ ತಮಿಳು ನಟ ಗೌತಮ್ ಕಾರ್ತಿಕ್ (Gautham Karthik) ಮತ್ತು ನಟಿ ಮಂಜಿಮಾ ಮೋಹನ್ (Manjima Mohan) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ತಾವು ಎಂಗೇಜ್ ಆಗಿರುವುದಾಗಿ ಈ ಜೋಡಿ ತಿಳಿಸಿತ್ತು. ಆದಾದ ಬೆನ್ನಲ್ಲೇ ಅಭಿಮಾನಿಗಳಿಗೆ ಮದುವೆಯ ಗುಡ್ ನ್ಯೂಸ್ (Good News) ಕೊಟ್ಟಿದ್ದಾರೆ. ಮದುವೆಗೆ (Marriage) ಕುಟುಂಬಸ್ಥರು ಮತ್ತು ಪರಿಚಯಸ್ಥರಿಗಷ್ಟೇ ಆಹ್ವಾನ ನೀಡಿದ್ದರು. ಇಬ್ಬರ ಜೋಡಿ ಚೆನ್ನಾಗಿದೆ. ಆಲ್ ದಿ ಬೆಸ್ಟ್ ಎಂದು ಅಭಿಮಾನಿಗಳು (Fans) ಹೇಳಿದ್ದಾರೆ. ಅಲ್ಲದೇ ಈ ಜೋಡಿ ತಮ್ಮ ಮದುವೆ ಫೋಟೋವನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅವರ ಫೋಟೋಗಳು ಎಲ್ಲೆಡೆ ವೈರಲ್ (Viral) ಆಗ್ತಾ ಇವೆ.
ಕಾಲಿವುಡ್ ಸೆಲೆಬ್ರೆಟಿ ಜೋಡಿಯ ಮದುವೆ
ಕಾಲಿವುಡ್ ನಲ್ಲಿ ಮಿಂಚಿದ್ದ ನಟ ಗೌತಮ್ ಕಾರ್ತಿಕ್ ಮತ್ತು ನಟಿ ಮಂಜಿಮಾ ಮೋಹನ್ ಮದುವೆ ಆಗಿದ್ದಾರೆ. ಕಳೆದ ಮೂರು ವರ್ಷಗಳಿದ್ದ ಇಬ್ಬರು ಒಬ್ಬರಿಗೊಬ್ಬರು ಪ್ರೀತಿ ಮಾಡ್ತಾ ಇದ್ರು. ಈಗ ಪ್ರೀತಿಯನ್ನು ಇನ್ನಷ್ಟು ಗಟ್ಟಿಗೊಳಿಸಲು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮುತ್ತುಕುಮಾರ್ ಅವರ ಮೊಮ್ಮಗ
ನಟ ಕಾರ್ತಿಕ್ ಅವರ ಮಗ ಗೌತಮ್ ಕಾರ್ತಿಕ್. ತಮಿಳು ಚಿತ್ರರಂಗದ ಖ್ಯಾತ ಹಿರಿಯ ನಟ ಆರ್. ಮುತ್ತುಕುಮಾರ್ ಅವರ ಮೊಮ್ಮಗ. 2013ರಲ್ಲಿ ತೆರೆಕಂಡ 'ಕಡಲ್' ಚಿತ್ರದ ಮೂಲಕ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. 'ಕಡಲ್' ಚಿತ್ವನ್ನು ಮಣಿರತ್ನಂ ನಿರ್ದೇಶನ ಮಾಡಿದ್ದರು.
ಇದನ್ನೂ ಓದಿ: Prabhas-Kriti Sanon: ಪ್ರಭಾಸ್-ಕೃತಿ ಸನೋನ್ ಡೇಟಿಂಗ್ ಮಾಡ್ತಿರೋದು ನಿಜಾನಾ? ಇಬ್ಬರ ಮಧ್ಯೆ ಪ್ರೀತಿ ಅರಳಿತಾ?
ಮೊದಲ ಚಿತ್ರದಲ್ಲಿ ಗೌತಮ್ ಅಭಿಮಾನಿಗಳ ಮನಸ್ಸು ಸೆಳೆದಿದ್ದರು. ಆನಂತರ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಮಫ್ತಿ ರಿಮೇಕ್ ಪತ್ತು ತಲಾ ಸಿನಿಮಾದಲ್ಲಿ ಗೌತಮ್ ಕಾರ್ತಿಕ್ ನಟಿಸಿದ್ದಾರೆ. ಜೊತೆಗೆ 16 ಆಗಸ್ಟ್ 1947 ಚಿತ್ರದಲ್ಲೂ ಅಭಿನಯಿಸಿದ್ದಾರೆ.
ಬಾಲ ನಟಿಯಾಗಿ ಮಂಜಿಮಾ ಮೋಹನ್ ಎಂಟ್ರಿ
ಕೇರಳ ಮೂಲದ ನಟಿ ಮಂಜಿಮಾ ಮೋಹನ್ ಬಾಲನಟಿಯಾಗಿ ಸಿನಿಮಾ ರಂಗ ಪ್ರವೇಶ ಮಾಡಿದ್ದರು. 1997ರಿಂದ 2001ರವರೆಗೂ ಬಾಲನಟಿಯಾಗಿ ಹಲವು ಸಿನಿಮಾಗಳಲ್ಲಿ ಮಂಜಿನಾ ನಟಿಸಿದ್ದಾರೆ. 2015ರಲ್ಲಿ 'ಒರು ಒಡಕ್ಕನ್ ಸೆಲ್ಫಿ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ತಮಿಳು, ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ.
Actors #GauthamKarthik and #ManjimaMohan, who recently revealed that they are in a relationship, tied the knot in a private ceremony on Mondayhttps://t.co/wNGJolYyq2
— The Hindu Cinema (@TheHinduCinema) November 28, 2022
ಮದುವೆಗೆ ಗಣ್ಯರ ದಂಡು
ಗೌತಮ್ ಕಾರ್ತಿಕ್ ಮತ್ತು ಮಂಜಿಮಾ ಮೋಹನ್ ಮದುವೆಗೆ ತಮಿಳು ಚಿತ್ರರಂಗದ ಗಣ್ಯರು ಬಂದಿದ್ದರು. ನಿರ್ದೇಶಕ ಮಣಿರತ್ನಂ, ಗೌತಮ್ ಮೇನನ್, ವಿಕ್ರಮ್ ಪ್ರಭು, ಆರ್ಕೆ ಸುರೇಶ್, ಶಿವಕುಮಾರ್, ಐಶ್ವರ್ಯಾ ರಜನಿಕಾಂತ್, ಅಶೋಖ್ ಸೆಲ್ವನ್, ನಿಕ್ಕಿ ಗಲ್ರಾನಿ ಆಗಮಿಸಿ, ಜೋಡಿ ವಿಶ್ ಮಾಡಿ ಹೋಗಿದ್ದಾರೆ.
ಇದನ್ನೂ ಓದಿ: Bigg Boss Kannada: ವಿನೋದ್ ಔಟ್ ಆದ ಬೆನ್ನಲ್ಲೇ, 'ಬಡವರ ಮಕ್ಕಳು ಬೆಳಿಬೇಕ್ ಕಣ್ರಯ್ಯ' ಅಭಿಯಾನ!
ಚೆನ್ನೈನಲ್ಲಿ ಸಿಂಪಲ್ ಮ್ಯಾರೇಜ್
ಗೌತಮ್ ಕಾರ್ತಿಕ್ ಮತ್ತು ಮಂಜಿಮಾ ಮೋಹನ್ 2019ರಲ್ಲಿ ದೇವರಾಟ್ಟಂ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಅಂದಿನಿಂದ ಇಬ್ಬರು ಹೆಚ್ಚು ಆತ್ಮೀಯರಾಗಿದ್ದರು. ಇಬ್ಬರ ಒಳ್ಳೆಯ ಸ್ನೇಹಿತರಾಗಿದ್ದರು. ಈಗ ಮದುವೆ ಆಗಿದ್ದಾರೆ. ಈ ಹಿಂದ ಇಬ್ಬರ ಸಂಬಂಧದ ಬಗ್ಗೆ ಮಂಜಿಮಾ ಮೋಹನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಮದುವೆ ಚೆನ್ನೈನಲ್ಲಿ ಸಿಂಪಲ್ ಆಗಿ ನಡೆದಿದೆ. ಗಣ್ಯರು, ಪರಿಚಯಸ್ಥರು ಮಾತ್ರ ಭಾಗಿಯಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ