ಕೋಲಾರದ ಚಿನ್ನದ ಗಣಿಯಲ್ಲಿ ಏನೇನೋ (Chiyaan Vikram Cinema) ಆಗಿದೆ. ಚಿನ್ನ ತೆಗೆಯೋ ಹೊತ್ತಿಗೆ ಅದೆಷ್ಟೋ ಜೀವಗಳೂ ಹೋಗಿವೆ. ಅದನ್ನ ಆಧರಿಸಿಯೇ ಪ್ರಶಾಂತ್ ನೀಲ್ ಅದ್ಭುತ ಕೆಜಿಎಫ್ ಕಥೆ ಹೇಳಿದ್ದರು. ಆದರೆ (Thangalaan Movie Making) ಸ್ವತಂತ್ರ ಪೂರ್ವದಲ್ಲಿ ಇದೇ ಕೋಲಾರ ಚಿನ್ನದ ಗಣಿಯಲ್ಲಿ ತಮಿಳು ಕಾರ್ಮಿಕರು ಕೂಡ ಕೆಲಸ ಮಾಡಿದ್ದಾರೆ. ಇವರ ಕಷ್ಟ-ನಷ್ಟಗಳ ಚಿತ್ರಗಳು ಹೆಚ್ಚಿನ ಜನಕ್ಕೆ ಗೊತ್ತಿಲ್ಲ. ಇದೀಗ ಅದನ್ನ (Thangalaan Film Updates) ತಿಳಿಯೋ ಕೆಲಸವನ್ನ ತಮಿಳಿನ ಸೂಪರ್ ನಾಯಕ ನಟ ಚಿಯಾನ್ ವಿಕ್ರಮ್ ಮಾಡುತ್ತಿದ್ದಾರೆ. ತಂಗಲಾನ್ ಸಿನಿಮಾ ಮೂಲಕ ಚಿಯಾನ್ ವಿಕ್ರಮ್ ಸಂಪೂರ್ಣ (Kollywood Actor Vikram) ಬದಲಾಗಿದ್ದಾರೆ. ಸ್ವತಂತ್ರ ಪೂರ್ವದ ತಮಿಳಿನ ಕಥೆಗಾಗಿಯೇ ಚಿಯಾನ್ ವಿಕ್ರಮ್ ಗುರುತು ಸಿಗದಷ್ಟು ಬದಲಾಗಿದ್ದಾರೆ.
ಆ ಲುಕ್ ಅನ್ನ ನೋಡಿದ್ರೆ, ನೀವೂ ಬೆಚ್ಚಿ ಬೆರಗಾಗೋದು ಗ್ಯಾರಂಟಿ ನೋಡಿ.
ಚಿಯಾನ್ ವಿಕ್ರಮ್ ಅಭಿನಯದಲ್ಲಿ ಪರಕಾಯ ಪ್ರವೇಶ ಮಾಡುತ್ತಾರೆ. ಅದಕ್ಕೆ ಬೇಕಾಗೋ ರೂಪಕ್ಕೂ ಒತ್ತುಕೊಡ್ತಾರೆ. ಈ ಹಿಂದಿನ ಅವರ "ಐ" ಸಿನಿಮಾ ಅದಕ್ಕೆ ಸಾಕ್ಷಿ ಅಂತ ಹೇಳಬಹುದು. ಅದೇ ಚಿಯಾನ್ ವಿಕ್ರಮ್ ಇದೀಗ ತಂಗಲಾನ್ ಸಿನಿಮಾಗೋಸ್ಕರ ಬದಲಾಗಿದ್ದಾರೆ. ಸಂಪೂರ್ಣ ಬದಲಾಗಿ, ಸ್ವತಂತ್ರ ಪೂರ್ವದ ಕಥೆ ಹೇಳೋಕೆ ಬರ್ತಿದ್ದಾರೆ ನೋಡಿ.
"ತಂಗಲಾನ್" ಸಿನಿಮಾದಲ್ಲಿ ಕೆಜಿಎಫ್ ತಮಿಳು ಕಾರ್ಮಿಕರ ಕಥೆ
ತಂಗಲಾನ್ ಸಿನಿಮಾದ ಕಥೆ ಏನೂ ಅನ್ನೋ ಹಿಂಟ್ ಈಗಾಗಲೇ ನಿಮಗೆ ಸಿಕ್ಕಿದೆ. ಆದರೆ ತಮಿಳು ಕಾರ್ಮಿಕರ ಮೇಲೇನೆ ಇಡೀ ಸಿನಿಮಾ ಇದ್ದಂತೆ ಕಾಣುತ್ತದೆ. ಕೆಜಿಎಫ್ ಕಥೆಯನ್ನ ಇಟ್ಟುಕೊಂಡೇ ಕಮರ್ಷಿಯಲ್ ಚೌಕಟ್ಟಿನಲ್ಲಿ ಡೈರೆಕ್ಟರ್ ಪ್ರಶಾಂತ್ ನೀಲ್ ಕೆಜಿಎಫ್ ಸಿನಿಮಾ ಮಾಡಿದ್ದರು.
ಆದರೆ ತಮಿಳಿನ ಕಬಾಲಿ ಡೈರೆಕ್ಟರ್ ಪಾ. ರಂಜಿತ್ ಇಲ್ಲಿ ಬೇರೆ ರೀತಿಯ ಕಥೆಯನ್ನ ಮಾಡಿಕೊಂಡಂತಿದೆ. ತಮಿಳು ಕಾರ್ಮಿಕರ ಸಮಸ್ಯೆಗಳು ಏನಿದ್ದವು? ಅಸಲಿಗೆ ಕೆಜಿಎಫ್‌ನಲ್ಲಿದ್ದ ತಮಿಳು ಕಾರ್ಮಿಕರಲ್ಲಿ ಯಾರು ಲೀಡರ್ ಆಗಿದ್ದರು. ಈ ಎಲ್ಲ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಿದ್ದಾರೆ ಅಂತ ಅನಿಸುತ್ತದೆ.
ಅಂದು ಯಶ್ ಇಂದು ಚಿಯಾನ್ ವಿಕ್ರಮ್ ಹೊಸ ರೂಪ
ಕನ್ನಡದ ಕೆಜಿಎಫ್ ಚಿತ್ರಕ್ಕಾಗಿಯೇ ರಾಕಿಂಗ್ ಸ್ಟಾರ್ ಯಶ್, ಗಡ್ಡಬಿಟ್ಟು ಕಂಪ್ಲೀಟ್ ಬದಲಾಗಿದ್ದರು. ಅದೇ ರೀತಿ ತಮಿಳಿನ ಈ ತಂಗಲಾನ್ ಸಿನಿಮಾದಲ್ಲಿ ಚಿಯಾನ್ ವಿಕ್ರಮ್ ಬದಲಾಗಿದ್ದಾರೆ. ಹಾಲಿವುಡ್‌ನ ಅಪೋಕ್ಯಾಲಿಪ್ಟೋ ಸಿನಿಮಾದ ಕಾಡು ಜನರ ರೀತಿಯ ಲುಕ್‌ನಲ್ಲಿಯೇ ಚಿಯಾನ್ ವಿಕ್ರಮ್ ಕಾಣಿಸುತ್ತಿದ್ದಾರೆ.
ಚಿಯಾನ್ ವಿಕ್ರಮ್ ಈ ಚಿತ್ರಕ್ಕಾಗಿ ಲುಕ್ ಬದಲಿಸಿಕೊಂಡು ಬೇರೆ ರೀತಿ ಕಾಣಿಸುತ್ತಿದ್ದಾರೆ. ಡೈರೆಕ್ಟರ್ ಪಾ. ರಂಜಿತ್ ಕೂಡ ಈ ಸಿನಿಮಾ ಕೆಲಸ ಮಾಡೋ ಹೊತ್ತಿಗೆ ಗಡ್ಡ ಬೆಳೆದು ಬಿಟ್ಟಿದೆ ನೋಡಿ ಅನ್ನೋಮಟ್ಟಿಗೆ ಅವರೂ ಬದಲಾಗಿ ಬಿಟ್ಟಿದ್ದಾರೆ.
ತಂಗಲಾನ್ ಸಿನಿಮಾದ ಮೇಕಿಂಗ್ ವಿಡಿಯೋ ವೈರಲ್
ಚಿಯಾನ್ ವಿಕ್ರಮ್ ನಟನೆಯ ತಂಗಲಾನ್ ಸಿನಿಮಾ ಕೆಲಸ ಹೇಗೆ ನಡೆಯುತ್ತಿದೆ ಅನ್ನೋದನ್ನ ಇದೀಗ ಬಿಟ್ಟಿರೋ ಮೇಕಿಂಗ್ ವಿಡಿಯೋ ರಿವೀಲ್ ಮಾಡಿದೆ. ವಿಶೇಷವಾಗಿ ಈ ಒಂದು ಮೇಕಿಂಗ್ ವಿಡಿಯೋವನ್ನ ಚಿಯಾನ್ ವಿಕ್ರಮ್ ಜನ್ಮ ದಿನಕ್ಕೆ ಬಿಡಲಾಗಿದೆ.
ಇದನ್ನೂ ಓದಿ: Raj Classic Movie: ಸಿಪಾಯಿ ರಾಮು ಸಿನಿಮಾ ರಾಜ್ಕುಮಾರ್ ಜೀವನದಲ್ಲಿ ತುಂಬಾ ಸ್ಪೆಷಲ್, ಯಾಕೆ?
ಈ ಹಿನ್ನೆಲ್ಲೆಯಲ್ಲಿ ವಿಕ್ರಮ್ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಬೇರೆಯವರು ಕೂಡ ಇದನ್ನ ನೋಡಿ ಬೆಕ್ಕಸ ಬೆರಗಾಗಿದ್ದಾರೆ ಅಂತಲೇ ಹೇಳಬಹುದು. ಹಾಗೇನೆ ಈ ಚಿತ್ರದ ಮೂಲಕ ಚಿಯಾನ್ ವಿಕ್ರಮ್ ಮತ್ತೊಮ್ಮೆ ಹೊಸ ರೀತಿಯ ಭರವಸೆ ಮೂಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ