ದೀಪಿಕಾ ಜತೆ ಜಾಹೀರಾತಿನ ಶೂಟ್‍ಗೆ ನಿರಾಕರಿಸಿದ ಕೋಹ್ಲಿ: ಇದಕ್ಕೆ ಕಾರಣ ಪತ್ನಿ ಅನುಷ್ಕಾನಾ?

news18
Updated:March 24, 2018, 12:11 PM IST
ದೀಪಿಕಾ ಜತೆ ಜಾಹೀರಾತಿನ ಶೂಟ್‍ಗೆ ನಿರಾಕರಿಸಿದ ಕೋಹ್ಲಿ: ಇದಕ್ಕೆ ಕಾರಣ ಪತ್ನಿ ಅನುಷ್ಕಾನಾ?
  • News18
  • Last Updated: March 24, 2018, 12:11 PM IST
  • Share this:
ನ್ಯೂಸ್ 18 ಕನ್ನಡ

ಟೀಮ್ ಇಂಡಿಯಾ ತಂಡದ ನಾಯಕ ವಿರಾಟ್ ಇತ್ತೀಚೆಗೆ ತಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಾರೆ. ಆದರೂ ಯಾವುದಾದರೊಂದು ವಿಷಯದಿಂದಾಗಿ ಚರ್ಚೆಯಲ್ಲಿರುತ್ತಾರೆ. ಆದರೆ ಈ ಬಾರಿ ಅವರು ಮತ್ತೆ ಚರ್ಚೆಯ ವಿಷಯವಾಗಿರುವುದು ಮಾತ್ರ ತಮ್ಮ ಟ್ವೀಟ್ ಅಥವಾ ಸ್ಟೈಲ್‍ನಿಂದಾಗಿ ಅಲ್ಲ. ಬದಲಾಗಿ ದೀಪಿಕಾ ಪಡುಕೋಣೆ.

ಕೋಹ್ಲಿ ಈ ಬಾರಿ ದೀಪಿಕಾ ಪಡುಕೋಣೆ ಜತೆ ಜಾಹೀರಾತಿನಲ್ಲಿ ಅಭಿನಯಿಸಲು ನಿರಾಕರಿಸಿದ್ದಾರೆ. ಇದೇ ಕಾರಣದಿಂದಾಗಿ ಈಗ ಕೋಹ್ಲಿ ಚರ್ಚೆಯಲ್ಲಿದ್ದಾರೆ. ಆದರೆ ವಿರಾಟ್ ಯಶಸ್ಸಿನ ಉತ್ತುಂಗದಲ್ಲಿದ್ದಾರೆ ನಿಜ. ಆದರೆ ದೀಪಿಕಾ ಸಹ ಯಾರಿಗೂ ಕಮ್ಮಿಯಿಲ್ಲ ಎಂಬಂತೆ ವೃತ್ತಿ ಜೀವನಲ್ಲಿ ಬೆಳೆದು ನಿಂತ್ತಿದ್ದಾರೆ. ಇಂದು ಅವರೊಂದಿಗೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕರೆ ಯಾರೂ ನಿರಾಕರಿಸಲು ಬಯಸುವುದಿಲ್ಲ.

ಆರ್​ಸಿಬಿಗೆ 11 ಕೋಟಿ ನಷ್ಟ

ಇತ್ತೀಚೆಗಷ್ಟೆ ಇನ್‍ಸ್ಟಾಗ್ರಾಂ ಕೋಹ್ಲಿ ಹಾಗೂ ದೀಪಿಕಾ ಅವರನ್ನು ಖ್ಯಾತ ಸೆಲೆಬ್ರಿಟಿ ಎಂದು ಘೋಷಿಸಿದೆ. ಇದೇ ಕಾರಣಕ್ಕೆ ಇವರಿಬ್ಬರನ್ನು ಜಾಹೀರಾತಿನಲ್ಲಿ ಬಳಸಿಕೊಂಡರೆ ಕಂಪೆನಿಯೊಂದಕ್ಕೆ ಲಾಭವಾಗಬಹುದು ಎಂದೆನಿಸಿರಬಹುದು. ಅದಕ್ಕಾಗಿಯೇ ಆ ಕಂಪೆನಿ ಕೋಹ್ಲಿ ಅವರನ್ನು ಈ ಬಗ್ಗೆ ಕೇಳಿದಾಗ, ದೀಪಿಕಾ ಜತೆ ನಟಿಸಲು ಅವರು ನಿರಾಕರಿಸಿದ್ದಾರೆ. ಇದರಿಂದ ಆರ್‍ಸಿಬಿ ತಂಡಕ್ಕೆ 11 ಕೋಟಿ ನಷ್ಟವಾಗಲಿದೆಯಂತೆ.

ಕೋಹ್ಲಿಯ ಈ ನಿರ್ಧಾರದಿಂದ ಆರ್‍ಸಿಬಿಗೆ ನಷ್ಟವೇಕೆ ಅಂದುಕೊಳ್ಳುತ್ತಿದ್ದೀರಾ? ಕಾರಣ ಇದೆ. ಈ ಜಾಹೀರಾತಿನಲ್ಲಿ ನಟಿಸಲು ಕೋಹ್ಲಿಗೆ ಸಮಸ್ಯೆ ಇರಲಿಲ್ಲವಂತೆ. ಆದರೆ ದೀಪಿಕಾ ಜತೆ ನಟಿಸಲು ಸಮಸ್ಯೆ ಇತ್ತು ಎನ್ನಲಾಗುತ್ತಿದೆ. ಆರ್​ಸಿಬಿಯ ಒಂದು ಟ್ರಾವೆಲ್ ಕಂಪೆನಿ ಜತೆ 11 ಕೋಟಿಯ ಡೀಲ್ ಮಾಡಿಕೊಂಡಿತ್ತು. ಇದರ ಭಾಗವಾಗಿ ಆ ಕಂಪೆನಿ ತನ್ನ ಸಂಸ್ಥೆಯ ರಾಯಭಾರಿ ದೀಪಿಕಾ ಜತೆ ಜಾಹೀರಾತಿನಲ್ಲಿ ಅಭಿನಯಿಸುವಂತೆ ಕೋಹ್ಲಿಗೆ ಆಫರ್ ನೀಡಿತ್ತು. ಆದರೆ ಈಗ ಕೋಹ್ಲಿಯ ನಿರ್ಧಾರದಿಂದ ಆರ್​ಸಿಬಿಯ 11 ಕೋಟಿ ನಷ್ಟವಾಗಿದೆ. ಆದರೆ ಕೋಹ್ಲಿಯ ಈ ನಿರ್ಧಾರಕ್ಕೆ ಕಾರಣ ಏನೆಂದು ತಿಳಿದು ಬಂದಿಲ್ಲವಾದರೂ, ಬಿ-ಟೌನ್ ಅಂಗಳದಲ್ಲಿ ಇದಕ್ಕೆ ಅನುಷ್ಕಾ ಕಾರಣ ಇರಬಹುದು ಎನ್ನಲಾಗುತ್ತಿದೆ. ಕಾರಣ ಈ ನಟಿಯರಿಬ್ಬರ ನಡುವೆ ಇರುವ ಶೀತಲಕ ಸಮರ.

ಅನುಷ್ಕಾ ಈ ಹಿಂದೆ ರಣವೀರ್ ಸಿಂಗ್ ಜತೆ ಡೇಟಿಂಗ್ ಮಾಡುತ್ತಿದ್ದರು. ಆದರೆ ಈಗ ರಣವೀರ್ ದೀಪಿಕಾ ಜತೆ ಇದ್ದಾರೆ. ಈ ವಿಷಯವಾಗಿಯೇ ಈ ಹಿಂದೆ ಸಹ ಅನುಷ್ಕಾ ಹಾಗೂ ದೀಪಿಕಾ ನಡುವೆ ಶೀತಲ ಸಮರವಾಗಿತ್ತು ಎನ್ನಲಾಗುತ್ತಿದೆ.
First published: March 24, 2018, 12:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading