Koffee With Karan: ಫಸ್ಟ್ ನೈಟ್‌ ಬಗ್ಗೆ ಆಲಿಯಾ ಬೋಲ್ಡ್ ಮಾತು, ಬಾಲಿವುಡ್​ ಬ್ಯೂಟಿ ಕಾಮೆಂಟ್​ಗೆ ರಣವೀರ್​ ಸಿಂಗ್ ಸುಸ್ತೋ ಸುಸ್ತು!

ಕಾಫಿ ವಿತ್​ ಕರಣ್ ಮೊದಲ ಎಪಿಸೋಡ್​ ನಲ್ಲಿ ರಣವೀರ್​ ಸಿಂಗ್ ಮತ್ತು ನಟಿ ಆಲಿಯಾ ಭಟ್​ ಕಾಣಿಸಿಕೊಳ್ಳಲಿದ್ದಾರೆ. ಈ ಸಂಬಂಧ ಕರಣ್ ಜೋಹಾರ್​ ವಿಶೇಷ ಪ್ರೋಮೋವನ್ನು ಹಂಚಿಕೊಂಡಿದ್ದು, ಎಲ್ಲಡೆ ಸಖತ್ ವೈರಲ್ ಆಗುತ್ತಿದೆ.

ಆಲಿಯಾ ಭಟ್​

ಆಲಿಯಾ ಭಟ್​

  • Share this:
ಕಾಫಿ ವಿತ್ ಕರಣ್ (Koffee With Karan)  ಶೋ ಮತ್ತೆ ಪ್ರಾರಂಭವಾಗುತ್ತಿದೆ. ಜುಲೈ 7ರಿಂದ ಕಾಫಿ ವಿತ್ ಕರಣ್​ ಶೋ ನ 7 ನೇ ಸೀಸನ್​ ಆರಂಭವಾಗಲಿದೆ.  ಆದರೆ ಈ ಬಾರಿ ಶೋ ಅನ್ನು ಟಿವಿಯಲ್ಲಿ ಅಲ್ಲ. ಬದಲಿಗೆ ಈ ಬಾರಿ ಒಟಿಟಿಯಲ್ಲಿ (OTT)  ಆರಂಭವಾಗುತ್ತಿದ್ದು, ಡಿಸ್ನಿ ಫ್ಲಸ್ ಹಾಸ್ಟ್​ಸ್ಟಾರ್​ನಲ್ಲಿ ಪ್ರಸಾರವಾಗಲಿದೆ. ಸೆಲೆಬ್ರಿಟಿಗಳನ್ನು ಇಂಟರ್​ವ್ಯೂ ಮಾಡುವ ಈ ವಿಭಿನ್ನ ಕಾರ್ಯಕ್ರಮ ಎಲ್ಲರಿಗೂ ಬಹಳ ಇಷ್ಟವಾಗಿತ್ತು. ಬಾಲಿವುಡ್​ (Bollywood) ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ (Karan Johar) ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದಾರೆ.   ಇನ್ನು, ಮೊದಲ ಎಪಿಸೋಡ್​ ನಲ್ಲಿ ರಣವೀರ್​ ಸಿಂಗ್ ಮತ್ತು ನಟಿ ಆಲಿಯಾ ಭಟ್​ ಕಾಣಿಸಿಕೊಳ್ಳಲಿದ್ದಾರೆ. ಈ ಸಂಬಂಧ ಕರಣ್ ಜೋಹಾರ್​ ವಿಶೇಷ ಪ್ರೋಮೋವನ್ನು ಹಂಚಿಕೊಂಡಿದ್ದು, ಎಲ್ಲಡೆ ಸಖತ್ ವೈರಲ್ ಆಗುತ್ತಿದೆ. ಅಲ್ಲದೇ ಈ ಶೋ ನಾಳೆ (ಜುಲೈ 7) ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ.

ವಿಶೇಷ ಫ್ರೋಮೋ ಹಂಚಿಕೊಂಡ ಕರಣ್:

ಇನ್ನು, ಮೊದಲ ಎಪಿಸೋಡ್​ ನಲ್ಲಿ ನಟ ರಣವೀರ್​ ಸಿಂಗ್ ಮತ್ತು ನಟಿ ಆಲಿಯಾ ಭಟ್​ ಭಾಗಿಯಾಗಲಿದ್ದಾರೆ. ಈ ಸಂಬಂಧ ಕರಣ್ ಜೋಹಾರ್ ಟ್ವಿಟರ್​ ನಲ್ಲಿ ಶೋ ನ​ ವಿಶೇಷ ಪ್ರೋಮೋವನ್ನು ಹಂಚಿಕೊಂಡಿದ್ದು, ಎಲ್ಲಡೆ ಸಖತ್ ವೈರಲ್ ಆಗುತ್ತಿದೆ. ಅಲ್ಲದೇ ಈ ಶೋ ನಾಳೆ (ಜುಲೈ 7) ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ. ಈ ಪ್ರೋಮೋ ಸಖತ್ ಫನ್ನಿಯಾಗಿದ್ದು, ಪ್ರೇಕ್ಷಕರ ನಿರೀಕ್ಷೆಯನ್ನು ಹೆಚ್ಚಿಸಿದೆ. ಪ್ರೋಮೋದಲ್ಲಿ ನಟಿ ಆಲಿಯಾ ನೀಡಿದ ಒಂದು ಉತ್ತರ ಸಖತ್ ಎಲ್ಲಡೆ ವೈರಲ್ ಆಗಿದೆ.

ಫಸ್ಟ್ ನೈಟ್​ ಕುರಿತು ಉತ್ತರಿಸಿದ ಆಲಿಯಾ:

ಇನ್ನು, ಕರಣ್ ಜೋಹಾರ್​ ಅವರ ಕಾಫಿ ವಿತ್ ಕರಣ್ ಶೋ ನಲ್ಲಿ ಮೊದಲ ಅತಿಥಿಗಳಾಗಿ ಆಲಿಯಾ ಭಟ್ ಮತ್ತು ರಣವೀರ್​ ಸಿಂಗ್ ಪಾಲ್ಗೊಂಳಲ್ಲಿದ್ದಾರೆ. ಅಲ್ಲದೇ ಈ ವೇಳೆ ಕರಣ್ ಜೋಹಾರ್ ರ್ಯಾಪಿಡ್​ ಫೈಯರ್ ರೌಂಡ್​ ನಲ್ಲಿ ಕೇಳಿದ ಪ್ರಶ್ನೆಗೆ ಆಲಿಯಾ ಸಖತ್ ಉತ್ತರ ನೀಡಿದ್ದು, ಇದಿಗ ಎಲ್ಲಡೆ ಸಖತ್ ವೈರಲ್ ಆಗುತ್ತಿದೆ.

ಶೋ ನಲ್ಲಿ ಕರಣ್ ಜೋಹಾರ್​ ಅವರು ಆಲಿತಯಾ ಭಟ್​ಗೆ ‘ಮದುವೆಯ ನಂತರ ನಿಮಗೆ ಅರ್ಥವಾದ ಒಂದು ವಿಚಾರ ಯಾವುದು ಎಂದು ತಿಳಿಸಿ‘ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಆಲಿಯಾ, ‘ಮೊದಲ ರಾತ್ರಿ ಎನ್ನುವುದು ಇರುವುದಿಲ್ಲ. ನೀವು ಮದುವೆಯ ದಿನ ಸುಸ್ತಾಗಿರುತ್ತೀರಿ‘ ಎಂದು ಹೇಳಿದ್ದಾರೆ. ಇದಕ್ಕೆ ಕರಣ್ ಮತ್ತು ರಣವೀರ್ ಸಿಂಗ್​ ಬಿದ್ದು ಬಿದ್ದು ನಕ್ಕಿದ್ದಾರೆ. ಅಲ್ಲದೇ ಇದನ್ನು ಪ್ರೋಮೋದಲ್ಲಿ ಇರಸಲಾಗಿದ್ದು, ಪ್ರೊಮೋ ಎಲ್ಲಡೆ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ: Koffee With Karan: ಹಾರ್ದಿಕ್ ಪಾಂಡ್ಯ ಟು ದೀಪಿಕಾ; 'ಕಾಫಿ ವಿತ್ ಕರಣ್‘ ಶೋ ಕಾಂಟ್ರವರ್ಸಿಗಳು

ಮತ್ತೆ ಒಂದಾಗ್ತಿದ್ದಾರೆ ಆಲಿಯಾ - ರಣವೀರ್:

ಹೌದ್ಉ, ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಗಲ್ಲಿ ಬಾಯ್ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಇದಿಗ ಈ ಜೋಡಿ ಮತ್ತೆ ‘ರಾಕಿ ಔರ್​ ರಾಣಿ ಪ್ರೇಮ್​ ಕಹಾನಿ‘ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ ಈ ಚಿತ್ರವನ್ನು ಕರಣ್ ಜೋಹಾರ್ ಅವರೇ ನಿರ್ದೇಶನ ಮಾಡುತ್ತಿರುವುದು ವಿಶೇಷವಾಗಿದೆ. ಇದೇ ಕಾರಣದಿಂದಾಗಿ ರಣವೀರ್ ಮತ್ತು ಆಲಿಯಾ ಅವರನ್ನು ಕಾಫಿ ವಿತ್ ಕರಣ್ ಶೋಗೆ ಮೊದಲ ಅಥಿತಿಗಳಾಗಿ ಕರೆಸಿದ್ದಾರೆ.
Published by:shrikrishna bhat
First published: