Koffee with Karan 7: ಕತ್ರಿನಾ ಕೈಫ್‌ ಬಗ್ಗೆ ಪತಿ ವಿಕ್ಕಿ ಕೌಶಲ್ ರಿವೀಲ್ ಮಾಡಿದ 10 ಇಂಟ್ರೆಸ್ಟಿಂಗ್ ವಿಷಯಗಳಿವು

ಬಾಲಿವುಡ್ ನಿರ್ಮಾಪಕ, ನಿರ್ದೇಶಕ ಕರಣ್‌ ಜೋಹರ್‌ ಅವರ ಕಾಫಿ ವಿತ್ ಕರಣ್ ಶೋನಲ್ಲಿ ಈಗಾಗಲೇ ಅನೇಕ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಈ ವಾರ ಬಾಲಿವುಡ್‌ನ ಖ್ಯಾತ ನಟರಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ವಿಕ್ಕಿ ಕೌಶಲ್ ಹಾಜರಾಗಿದ್ದಾರೆ. ಈ ಶೋನಲ್ಲಿ ಅನೇಕ ಇಂಟ್ರೆಸ್ಟಿಂಗ್ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.

ವಿಕ್ಕಿ ಕೌಶಲ್‌ ಮತ್ತು ಕತ್ರಿನಾ ಕೈಫ್‌

ವಿಕ್ಕಿ ಕೌಶಲ್‌ ಮತ್ತು ಕತ್ರಿನಾ ಕೈಫ್‌

 • Share this:
ಬಾಲಿವುಡ್ ನಿರ್ಮಾಪಕ, ನಿರ್ದೇಶಕ ಕರಣ್‌ ಜೋಹರ್‌ (Karan Johar) ಅವರ ಕಾಫಿ ವಿತ್ ಕರಣ್ ಶೋ ಪ್ರಾರಂಭವಾಗಿದ್ದು ಅನೇಕ ದಿನಗಳೇ ಆಗಿದೆ. ಕಾಫಿ ವಿತ್ ಕರಣ್ 7 (Koffee with Karan) ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಈಗಾಗಲೇ ಅನೇಕ ಸೆಲೆಬ್ರಿಟಿಗಳು ಶೋನಲ್ಲಿ ಭಾಗಿಯಾಗಿದ್ದರು. ಈ ವಾರ ಬಾಲಿವುಡ್‌ನ ಖ್ಯಾತ ನಟರಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ವಿಕ್ಕಿ ಕೌಶಲ್ (Vicky Kaushal) ಹಾಜರಾಗಿದ್ದಾರೆ. ಈ ಶೋನಲ್ಲಿ ಅನೇಕ ಇಂಟ್ರೆಸ್ಟಿಂಗ್ ವಿಚಾರಗಳನ್ನು ರಿವೀಲ್ (Reveal) ಮಾಡಿದ್ದಾರೆ. ಆದರೆ ಬಾಲಿವುಡ್‌ ಯುವ ಬೆಡಗಿ ಎಂದು ಹೆಸರಾದ ತಮ್ಮ ವಿಭಿನ್ನ ನಟನಾ ಕೌಶಲ್ಯ ಮತ್ತು ಸೌಂದರ್ಯದಿಂದ ಯುವಕರ ನಿದ್ದೆ ಕೆಡಿಸುವ ಚೋರಿ ಕತ್ರಿನಾ ಕೈಫ್‌ (Katrina Kaif) ಇನ್ನು ಈ ಶೋಗೆ ಬಂದಿಲ್ಲ ಎಂದು ಇವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳ ಮಳೆ ಸುರಿಸಿದ್ದಾರೆ.

ಶೋ ಆರಂಭವಾಗಿ ಇಷ್ಟು ಸಮಯ ಆದರೂ ಸಹ ಕತ್ರಿನಾ ಕೈಫ್‌ ಕಾಫಿ ವಿತ್‌ ಕರಣ್‌ ಶೋನಲ್ಲಿ ಭಾಗವಹಿಸಿಲ್ಲ. ಏಕೆ? ಎಂಬ ಅನುಮಾನ ಸಹಜವಾಗಿ ಪ್ರೇಕ್ಷಕರಲ್ಲಿ ಹುಟ್ಟುವುದು ಸಾಮಾನ್ಯ.

ಈ ಎಪಿಸೋಡ್‌ನಲ್ಲಿ ವಿಕ್ಕಿ ಕೌಶಲ್‌ ತಮ್ಮ ಮದುವೆಯ ಕೆಲವು ಘಟನೆಗಳನ್ನು ಹಂಚಿಕೊಂಡಿದ್ದಾರೆ. ನಾನು ಹಾಗೂ ಕತ್ರಿನಾ ಹೇಗೆ ಮೊದಲ ಬಾರಿ ಭೇಟಿಯಾದೆವು? ಯಾರು ಹೆಚ್ಚು ಬುದ್ದಿವಂತರು? ಹೀಗೆ ಹತ್ತು ಹಲವು ವೈಯಕ್ತಿಕ ವಿಷಯಗಳನ್ನು ಮುಕ್ತವಾಗಿ ಈ ಶೋನಲ್ಲಿ ಹಂಚಿಕೊಂಡಿದ್ಧಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಸವಾಯಿ ಮಾಧೋಪುರದಲ್ಲಿ ವಿವಾಹವಾದರು. ಈ ಶೋ ನಲ್ಲಿ ಪತ್ನಿ ಕತ್ರಿನಾ ಕೈಫ್‌ ಬಗ್ಗೆ ವಿಕ್ಕಿ ಕೌಶಲ್‌ ರಿವೀಲ್‌ ಮಾಡಿದ 10 ವಿಷಯಗಳು ಯಾವುವು ಅನ್ನೋದನ್ನು ನೋಡೋಣ

ಪತ್ನಿ ಕತ್ರಿನಾ ಕೈಫ್‌ ಬಗ್ಗೆ ವಿಕ್ಕಿ ಕೌಶಲ್‌ ಹೇಳಿದ 10 ವಿಷಯಗಳು ಇಲ್ಲಿವೆ:

 • ಕತ್ರಿನಾ ಕೈಫ್‌ ಹೆಚ್ಚು ಬುದ್ದಿವಂತರು
  ನಿಮ್ಮ ಮದುವೆ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕರಣ್‌ ಕೇಳಿದ ಪ್ರಶ್ನೆಗೆ ವಿಕ್ಕಿ ಕೌಶಲ್‌ ಅವರು ಕತ್ರಿನಾ ಕೈಫ್‌ ಬಗ್ಗೆ ನಮ್ಮ ಮದುವೆ ಜೀವನ ನಿಜಕ್ಕೂ ಅದ್ಭುತವಾಗಿದೆ. ನಾನು ಜೀವನದಲ್ಲಿ ಸೆಟಲ್‌ ಆದೆ ಎಂಬ ಭಾವನೆ ಮೂಡಿಸುತ್ತಿದೆ. ನಮ್ಮ ಸಂಗಾತಿ, ಅವರು ನಮ್ಮ ಜೀವನಪೂರ್ತಿ ಇರುತ್ತಾರೆ ಎನ್ನುವ ಭಾವನೆ ನಿಜಕ್ಕೂ ತೃಪ್ತಿಕರ ಎನಿಸುತ್ತದೆ. ಅದರಲ್ಲೂ ಕತ್ರಿನಾ ಕೈಫ್‌ ಅವರಂತಹ ಗ್ರೇಟ್‌ ಮಹಿಳೆ ನನ್ನ ಜೀವನ ಸಂಗಾತಿ ಆಗಿರುವುದು ನನ್ನ ಅದೃಷ್ಟ. ಕತ್ರಿನಾ ಕೈಫ್‌ ಅವರು ನನಗಿಂತ ಅತ್ಯಂತ ಬುದ್ದಿವಂತರು ಮತ್ತು ಸಹಾನಾಭೂತಿ ವ್ಯಕ್ತಿ ಎನ್ನುತ್ತಾರೆ ವಿಕ್ಕಿ ಕೌಶಲ್‌. • ಕತ್ರಿನಾ ನನಗೆ ಕನ್ನಡಿ ಇದ್ದಂತೆ
  ನಾನು ಅವಳಿಂದ ಬಹಳಷ್ಟು ಕಲಿತಿದ್ದೇನೆ ಮತ್ತು ಅವಳು ನನ್ನ ಎಲ್ಲ ಕೆಲಸದಲ್ಲೂ ಆಧಾರವಾಗಿ ನಿಲ್ಲುತ್ತಾಳೆ. ನಾನು ಪತಿಯಾಗಿ ತಿಳಿಯಬೇಕಾದ ಎಲ್ಲ ವಿಚಾರಗಳನ್ನು ನನ್ನ ಜೊತೆ ಯಾವುದೇ ಸಂಕೋಚವಿಲ್ಲದೇ ಹಂಚಿಕೊಳ್ಳುತ್ತಾಳೆ. ಅವಳು ನನಗೆ ಒಂದು ಕನ್ನಡಿಯಂತಿದ್ದಾಳೆ. ನನ್ನೊಂದಿಗೆ ಸದಾ ಇರುವ ಇಂತಹ ಜೀವನ ಸಂಗಾತಿ ಸಿಕ್ಕಿರುವುದು ನಿಜಕ್ಕೂ ಸಂತೋಷ. • ಲವ್‌ ಕಹಾನಿ ಆರಂಭವಾಗಿದ್ದು ಹೇಗೆ?
  ಇನ್ನು ಇದೇ ವೇಳೆ ಹಳೆಯ ಸೀಸನ್ ಬಗ್ಗೆಯೂ ಚರ್ಚೆಯಾಗಿದೆ. 2018ರಲ್ಲಿ ಪ್ರಸಾರವಾಗುತ್ತಿದ್ದ ಕಾಫಿ ವಿತ್ ಕರಣ್ ಸೀಸನ್ 6ನಲ್ಲಿ ಭಾಗಿಯಾಗಿದ್ದ ಕತ್ರಿನಾ, ವಿಕ್ಕಿ ಕೌಶಲ್ ಬಗ್ಗೆ ಮಾತನಾಡಿದ್ದರು. ತೆರೆಮೇಲೆ ವಿಕ್ಕಿ ಕೌಶಲ್ ಜೊತೆ ನಾನು ನಟಿಸಿದ್ರೆ ಚೆನ್ನಾಗಿ ಕಾಣುತ್ತದೆ ಎಂದು ಹೇಳಿದ್ದರು. ಆ ಮಾತನ್ನು ವಿಕ್ಕಿ ಕೌಶಲ್ ನೆನಪಿಸಿಕೊಂಡಿದ್ದಾರೆ. 'ಕಳೆದ ಸೀಸನ್‌ನಲ್ಲಿ ಈ ಕಾರ್ಯಕ್ರಮದಲ್ಲಿ ಏನಾಯಿತು, ಅದು ನಿಜಕ್ಕೂ ನನ್ನ ಕ್ಷಣವಾಗಿತ್ತು. ಯಾಕೆಂದರೆ ಅವರು ನನ್ನ ಬಗ್ಗೆ ತಿಳಿದಿದ್ದಾರೆಯೇ ಎಂಬ ಅಚ್ಚರಿಯಾಗಿತ್ತು. ನಾವು ಯಾವತ್ತು ಭೇಟಿಯಾಗಿರಲಿಲ್ಲ' ಎಂದು ಹೇಳಿದರು.


ಇದನ್ನೂ ಓದಿ:  Ranbir Kapoor - Alia Bhatt: ಗರ್ಭಿಣಿ ಪತ್ನಿ ಬಗ್ಗೆ ಕ್ಯಾಮೆರಾ ಮುಂದೆಯೇ ಹೀಗನ್ನಬಾರದಿತ್ತು ರಣಬೀರ್ ಕಪೂರ್!

 • ಯಾವ ವಿಷಯಕ್ಕೆ ನೀವು ಕತ್ರಿನಾ ಹೆಚ್ಚು ಜಗಳವಾಡುತ್ತೀರಿ?
  ಈ ವೇಳೆ ಕರಣ್ ವಿಕ್ಕಿ ಕೌಶಲ್ ಬಳಿ ಕತ್ರಿನಾ ಮತ್ತು ನೀವು ಹೆಚ್ಚು ಜಗಳವಾಡುವುದು ಯಾವುದಕ್ಕೆ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ವಿಕ್ಕಿ ಕೌಶಲ್, 'ನಮ್ಮ ಮನೆಯಲ್ಲಿ ಹೆಚ್ಚು ಜಾಗವಿಲ್ಲ, ದಿನದಿಂದ ದಿನಕ್ಕೆ ಕಮ್ಮಿ ಆಗುತ್ತಿದೆ' ಆ ಕಾರಣಕ್ಕೆ ಜಗಳವಾಗುತ್ತದೆ ಎಂದು ವಿಕ್ಕಿ ಹೇಳಿದರು. ಇದಕ್ಕೆ ಕರಣ್ ಜೋಹರ್, 'ನಾನು ನಿಮ್ಮನೆ ನೋಡಿದ್ದೇನೆ ಆದರೆ ನನಗೆ ಹಾಗೆ ಅನಿಸಿಲ್ಲ' ಎಂದು ಹೇಳಿದರು. ಅದಕ್ಕೆ ವಿಕ್ಕಿ ಕೌಶಲ್, 'ಕತ್ರಿನಾ ಈಗಾಗಲೇ ಒಂದುವರೆ ರೂಮ್ ಬಳಸುತ್ತಿದ್ದಾರೆ. ನನಗೆ ಒಂದು ಕಬೋರ್ಡ್ ಇದೆ ಅಷ್ಟೆ. ಸದ್ಯದಲ್ಲೇ ಅದೂ ಕೂಡ ಡ್ರಾಯರ್ ಆಗಬಹುದು' ಎಂದು ಹೇಳಿದರು. • ಕತ್ರಿನಾ ನಟನೆಯ ಯಾವ ಸಿನಿಮಾವನ್ನು ದ್ವೇಷಿಸುತ್ತೀರಾ?
  ಇನ್ನು ಕತ್ರಿನಾ ನಟನೆಯ ಯಾವ ಸಿನಿಮಾವನ್ನು ದ್ವೇಷಿಸುತ್ತೀರಾ ಎಂದು ಕರಣ್ ಜೋಹರ್, ವಿಕ್ಕಿ ಕೌಶಲ್ ಅವರನ್ನು ಕೇಳಿದರು. ಇದಕ್ಕೆ ಉತ್ತರಿಸಿದ ವಿಕ್ಕಿ, ಆಧಿತ್ಯ ರಾಯ್ ಜೊತೆ ನಟಿಸಿದ್ದ ಫಿತೂರ್ ಸಿನಿಮಾ ಇಷ್ಟವಿಲ್ಲ ಎಂದು ಹೇಳಿದರು. • ಕತ್ರಿನಾ ಅಥವಾ ವಿಕ್ಕಿ ಇವರಿಬ್ಬರಲ್ಲಿ ಬೆಟರ್‌ ಕುಕ್‌ ಯಾರು?
  ಕರಣ್‌ ಅವರು ನಿಮ್ಮಿಬ್ಬರಲ್ಲಿ ಬೆಟರ್‌ ಕುಕ್‌ ಯಾರು ಎಂದು ಕೇಳಿದ ಪ್ರಶ್ನೆಗೆ ವಿಕ್ಕಿ ಕೌಶಲ್‌ ನಾವಿಬ್ಬರೂ ಭಯಾನಕ ಕುಕ್‌ ಆಗಿದ್ದೇವೆ. ಆದರೆ ಕತ್ರಿನಾ ಅವರು ಮೊಟ್ಟೆಯಿಂದ ತಯಾರಿಸುವ ಅಡುಗೆ ಸಕತ್‌ ಆಗಿ ಮಾಡುತ್ತಾರೆ ಎಂದು ಹೇಳಿದರು. • ನಿಮ್ಮಿಬ್ಬರಲ್ಲಿ ಮಕ್ಕಳೊಂದಿಗೆ ಸಮಯ ಕಳೆಯುವುದು ಯಾರಿಗೆ ಹೆಚ್ಚು ಇಷ್ಟ?
  ಕರಣ್‌ ಕೇಳಿದ ಈ ಪ್ರಶ್ನೆಗೆ ವಿಕ್ಕಿ ಕೌಶಲ್‌ ನಾನೇ ಬೆಸ್ಟ್‌ ಎಂದು ನೇರವಾದ ಉತ್ತರ ನೀಡಿದರು. • ಇನ್ನು ನಿಮ್ಮಿಬ್ಬರಲ್ಲಿ ರೊಮ್ಯಾಂಟಿಕ್‌ ಯಾರು?
  ಕರಣ್‌ ಕೇಳಿದ ಈ ಪ್ರಶ್ನೆಗೆ ವಿಕ್ಕಿ ಕೌಶಲ್‌ ಅವರು ನನ್ನ ಜೀವನ ಸಂಗಾತಿ, ನನ್ನ ಡಿಯರ್‌ ವೈಪ್‌ ಕತ್ರಿನಾ ಅವರು ಎಂದು ಉತ್ತರಿಸಿದರು. • ಮದುವೆ ಸಮಯದಲ್ಲಿ ಸೃಷ್ಟಿಯಾದ ಮೆಮ್ಸ್‌ಗಳ ಬಗ್ಗೆ ಏನ್‌ ಹೇಳುತ್ತಿರಿ?
  ಅನೇಕ ಮೆಮ್ಸ್‌ಗಳು ಇಂಟರ್‌ನೆಟ್‌ನಲ್ಲಿ ಓಡಾಡುತ್ತಿದ್ದವು. ಅದರ ಕುರಿತು ಏನ್‌ ಹೇಳುತ್ತಿರಿ ಎಂಬ ಪ್ರಶ್ನೆಗೆ, ಮದುವೆ ಸಮಯದಲ್ಲಿ ಪ್ರತಿದಿನ, ಈ ತಮಾಷೆಯ ಮೇಮ್‌ಗಳು, ಟ್ವೀಟ್‌ಗಳು ಮತ್ತು ಸಂದೇಶಗಳನ್ನು ಇಂಟರ್ನೆಟ್‌ನಲ್ಲಿ ಹಂಚಿಕೊಳ್ಳಲಾಗುತ್ತದೆ ಎಂದು ಈ ಮೊದಲೇ ನಮ್ಗೆ ತಿಳಿದಿತ್ತು. ಅವುಗಳನ್ನು ನೋಡಿ ಸುಮ್ಮನೆ ನಗುತ್ತಿದ್ದೆವು ಎಂದು ಹೇಳಿದರು.


ಇದನ್ನೂ ಓದಿ:  Tollywood: ಬೆಂಕಿ ಇಲ್ಲದೇ ಹೊಗೆ ಆಡಲ್ಲ, ಅಲ್ಲು-ರಾಮ್​​ಚರಣ್​ ನಡುವೆ ವಾರ್ ನಡೀತಿರೋದು ಸತ್ಯವಂತೆ!

 • ಇಷ್ಟು ದಿನ ಮಿಸ್‌ ಆಗಿದ್ದೊರು ಈಗ ಮಿಸೆಸ್‌ ಆಗಿದ್ದಾರೆ..!
  ಈ ಶೋನ ರ್ಯಾಪಿಡ್ ಫೈರ್ ರೌಂಡ್ ಸಮಯದಲ್ಲಿ, ವಿಕ್ಕಿ ಕೌಶಲ್ ಅವರನ್ನು ಕರಣ್‌ ಅವರು ಕತ್ರಿನಾ ಕೈಫ್ ಅವರು ತಮ್ಮ ಬ್ಯಾಚುಲರ್‌ ಜೀವನವನ್ನು ಸಂಪೂರ್ಣವಾಗಿ ತ್ಯಜಿಸಿದ್ದಾರೆ ಇದರಿಂದ ಅವರಿಗೆ ಸಿಕ್ಕ ಪ್ರತಿಫಲ ಏನು ಎಂಬ ಪ್ರಶ್ನೆಗೆ ವಿಕ್ಕಿ ಕೌಶಲ್ ಅವರ ಉತ್ತರ ಹೀಗಿತ್ತು: ದಿ ಮಿಸ್ ಈಗ ಮಿಸೆಸ್ ಆಗಿದ್ದಾರೆ ಎಂದರು.

Published by:Ashwini Prabhu
First published: