Koffee With Karan: ಟಾಲಿವುಡ್​ನ ಆ ಸ್ಟಾರ್​ ಕಂಡ್ರೆ ಸಾರಾಗೆ ಏನೋ ಒಂಥರಾ ಅಂತೆ, ಡೇಟಿಂಗೂ ಮಾಡ್ತಿನಿ-ಸಿಕ್ರೆ ಮದ್ವೆನೂ ಆಗ್ತೀನಿ ಎಂದ ನಟಿ

ಕಾಫಿ ವಿತ್ ಕರಣ್ ಶೋನ 2ನೇ ಎಪಿಸೋಡ್​ನಲ್ಲಿ ಬಾಲಿವುಡ್​ ಬೆಡಗಿಯರಾದ ಜಾನ್ವಿ ಕಪೂರ್ ಮತ್ತು ಸಾರಾ ಅಲಿ ಖಾನ್ ಭಾಗಿಯಾಗಿದ್ದಾರೆ. ಈ ಶೋ ನ ಪ್ರೋಮೋವನ್ನು ಕರಣ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಾರಾ ಅಲಿ ಖಾನ್ ಅವರು ಡೇಟಿಂಗ್ ಕುರಿತು ಮಾತನಾಡಿದ್ದಾರೆ.

ಸಾರಾ ಅಲಿ ಖಾನ್- ವಿಜಯ್ ದೇವರಕೊಂಡ

ಸಾರಾ ಅಲಿ ಖಾನ್- ವಿಜಯ್ ದೇವರಕೊಂಡ

  • Share this:
ಕಾಫಿ ವಿತ್ ಕರಣ್ (Koffee With Karan)  ಶೋ ಮತ್ತೆ ಪ್ರಾರಂಭವಾಗುತ್ತಿದೆ. ಜುಲೈ 7ರಿಂದ ಕಾಫಿ ವಿತ್ ಕರಣ್​ ಶೋ ನ 7ನೇ ಸೀಸನ್​ ಆರಂಭವಾಗಿದೆ.  ಆದರೆ ಈ ಬಾರಿ ಶೋ ಟಿವಿ ಬದಲಾಗಿ ಒಟಿಟಿಯಲ್ಲಿ (OTT)  ಪ್ರಸಾರವಾಗುತ್ತಿದೆ, ಡಿಸ್ನಿ ಫ್ಲಸ್ ಹಾಸ್ಟ್​ಸ್ಟಾರ್​ನಲ್ಲಿ ಪ್ರತಿ ಸಂಚಿಕೆ ಬಿಡುಗಡೆ ಆಗುತ್ತದೆ. ಮೊದದಲಿನಿಂದಲೂ ಸೆಲೆಬ್ರಿಟಿಗಳನ್ನು ಇಂಟರ್​ವ್ಯೂ ಮಾಡುವ ಈ ವಿಭಿನ್ನ ಕಾರ್ಯಕ್ರಮ ಎಲ್ಲರಿಗೂ ಬಹಳ ಇಷ್ಟವಾಗಿತ್ತು. ಬಾಲಿವುಡ್​ (Bollywood) ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ (Karan Johar) ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದಾರೆ. ಇನ್ನು, ಮೊದಲ ಎಪಿಸೋಡಲ್ಲಿ  ರಣವೀರ್​ ಸಿಂಗ್ ಮತ್ತು ನಟಿ ಆಲಿಯಾ ಭಟ್ ಭಾಗಿಯಾಗಿದ್ದರು. ಇದೀಗ 2ನೇ ಎಪಿಸೋಡ್​ನಲ್ಲಿ ಬಾಲಿವುಡ್​ ಬೆಡಗಿಯರಾದ ಜಾನ್ವಿ ಕಪೂರ್ ಮತ್ತು ಸಾರಾ ಅಲಿ ಖಾನ್ ಭಾಗಿಯಾಗಿದ್ದಾರೆ. ಈ ಶೋ ನ ಪ್ರೋಮೋವನ್ನು ಕರಣ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಡೇಟಿಂಗ್ ಕುರಿತು ಮಾತನಾಡಿದ ಸಾರಾ:

ಇನ್ನು, ಪ್ರೋಮೊದಲ್ಲಿ ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ಕಾಣಿಸಿಕೊಂಡಿದ್ದಾರೆ. ಕರಣ್ ಜೋಹಾರ್​ ಸಾರಾ ಅಲಿ ಖಾನ್‌ಗೆ ‘ನೀವು ಡೇಟಿಂಗ್ ಮಾಡಲು ಇಷ್ಟಪಡುವ ಹುಡುಗನ ಹೆಸರನ್ನು ತಿಳಿಸಿ‘ ಎಂದು ಕೇಳುತ್ತಾರೆ.ಇದಕ್ಕೆ ಸರಾ ಅಲಿ ಖಾನ್ ಮೊದಲಿಗೆ ಯಾವುದೇ ಉತ್ತರ ನೀಡದೆ ಇದ್ದರೂ ನಂತರದಲ್ಲಿ ವಿಜಯ್​ ದೇವರಕೊಂಡ ಹೆಸರನ್ನು ಹೇಳಿಕೊಂಡಿದ್ದಾರೆ. ಇದಕ್ಕೆ ಕರಣ್ ಜಾನ್ವಿ ಬಳಿ 'ವಿಜಯ್ ದೇವರಕೊಂಡ ಜೊತೆ' ಎನ್ನಲು ಸಾರಾ 'ನಿಮಗೆ ವಿಜಯ್ ದೇವರಕೊಂಡ ಇಷ್ಟಾನಾ‘ ಎಂದು ಕೇಳುತ್ತಾರೆ. ಸದ್ಯ ಈ ಪ್ರೋಮೋ ಎಲ್ಲಡೆ ಸಖತ್ ವೈರಲ್ ಆಗುತ್ತಿದೆ.

ಈ ಮೂಲಕ ಇಬ್ಬರು ನಟಿಯರಿಗೂ ವಿಜಯ್ ದೇವರಕೊಂಡ ಮೇಲೆ ಇಷ್ಟವಿದೆ ಅನಿಸುತ್ತಿದೆ ಎಂದು ನೆಟ್ಟಿಗರು ಕಾಮೆಂಟ್  ಮಾಡುತ್ತಿದ್ದಾರೆ. ಇದರ ಸಂಪೂರ್ಣ ಸಂಚಿಕೆ ಜುಲೈ 14ರಂದು ಹಾಟ್​ ಸ್ಟಾರ್​ನಲ್ಲಿ ಪ್ರಸಾರವಾಗಲಿದೆ. ಇನ್ನು, ಸಾರಾ ಅಲಿ ಖಾನ್ ಕಳೆದ ಸೀಸನ್​ ನಲ್ಲಿ ಕಾಫಿ ವಿತ್ ಕರಣ್‌ ಶೋ ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರು ಕಾರ್ತಿಕ್ ಆರ್ಯನ್‌ ಜೊತೆ ಡೇಟಿಂಗ್ ಮಾಡುವುದಾಗಿ ಹೇಳಿಕೊಂಡಿದ್ದರು. ಆದರೆ ಈ ಬಾರಿ ವಿಜಯ್ ದೇವರಕೊಂಡ ಹೆಸರನ್ನು ತೆಗೆದುಕೊಂಡಿದ್ದಾರೆ. ಇದಲ್ಲದೇ ಎಲ್ಲರ ಎಕ್ಸ್ ಬಾಯ್​ಫ್ರೆಂಡ್ ಅವರು ಎಂದಿದ್ದಾರೆ.

ಇದನ್ನೂ ಓದಿ: Pushpa 2 ಚಿತ್ರದ ಬಜೆಟ್​ ರಿವೀಲ್, ಅಲ್ಲು ಸಂಭಾವನೆ ಅಂತೂ ಅಬ್ಬಬ್ಬಾ! ಕೋಟಿಗಳಿಗೆ ಬೆಲೆನೇ ಇಲ್ವಾ?

ಮೊದಲ ಎಪಿಸೋಡ್​ನಲ್ಲಿ ಆಲಿಯಾ-ರಣವೀರ್​:

ಮೊದಲ ಎಪಿಸೋಡ್​ ನಲ್ಲಿ ನಟ ರಣವೀರ್​ ಸಿಂಗ್ ಮತ್ತು ನಟಿ ಆಲಿಯಾ ಭಟ್​ ಭಾಗಿಯಾಗಿದ್ದರು. ಈ ವೇಳೆ ಕರಣ್ ಜೋಹಾರ್ ರ್ಯಾಪಿಡ್​ ಫೈಯರ್ ರೌಂಡ್​ ನಲ್ಲಿ ಕೇಳಿದ ಪ್ರಶ್ನೆಗೆ ಆಲಿಯಾ ನೀಡಿದ ಉತ್ತರ ಎಲ್ಲಡೆ ಸಖತ್ ವೈರಲ್ ಆಗಿತ್ತು. ಹೌದು, ಶೋ ನಲ್ಲಿ ಕರಣ್ ಜೋಹಾರ್​ ಅವರು ಆಲಿತಯಾ ಭಟ್​ಗೆ ‘ಮದುವೆಯ ನಂತರ ನಿಮಗೆ ಅರ್ಥವಾದ ಒಂದು ವಿಚಾರ ಯಾವುದು ಎಂದು ತಿಳಿಸಿ‘ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಆಲಿಯಾ, ‘ಮೊದಲ ರಾತ್ರಿ ಎನ್ನುವುದು ಇರುವುದಿಲ್ಲ. ನೀವು ಮದುವೆಯ ದಿನ ಸುಸ್ತಾಗಿರುತ್ತೀರಿ‘ ಎಂದು ಹೇಳಿದ್ದಾರೆ. ಇದಕ್ಕೆ ಕರಣ್ ಮತ್ತು ರಣವೀರ್ ಸಿಂಗ್​ ಬಿದ್ದು ಬಿದ್ದು ನಕ್ಕಿದ್ದರು.
Published by:shrikrishna bhat
First published: