• Home
  • »
  • News
  • »
  • entertainment
  • »
  • Koffee with Karan: ಕಾಫಿ ವಿತ್ ಕರಣ್‍ಗೆ ನಟಿ ತಾಪ್ಸಿ ಯಾಕೆ ಬರಲಿಲ್ಲ? ರಹಸ್ಯ ಬಿಚ್ಚಿಟ್ಟ ಕರಣ್ ಜೋಹರ್

Koffee with Karan: ಕಾಫಿ ವಿತ್ ಕರಣ್‍ಗೆ ನಟಿ ತಾಪ್ಸಿ ಯಾಕೆ ಬರಲಿಲ್ಲ? ರಹಸ್ಯ ಬಿಚ್ಚಿಟ್ಟ ಕರಣ್ ಜೋಹರ್

ತಾಪ್ಸಿ ಪನ್ನು-ಕರಣ್ ಜೋಹರ್

ತಾಪ್ಸಿ ಪನ್ನು-ಕರಣ್ ಜೋಹರ್

ತಾಪ್ಸಿಗೆ ನಾನು ಕಾರ್ಯಕ್ರಮಕ್ಕೆ ಬರುವಂತೆ ಹಲವು ಬಾರಿ ವಿನಂತಿಸಿಕೊಂಡಿದ್ದೇನೆ. ಆದ್ರೆ ಆಕೆ ಒಪ್ಪದೇ ನಿರಾಕರಿಸಿದ್ದಳು. ತನ್ನ ವೈಕ್ತಿಕ ಜೀವನ ಅಷ್ಟು ಆಸಕ್ತಿದಾಯವಾಗಿಲ್ಲ.ನನಗೆ ನೀರಸ ಜೀವನವಿದೆ. ನೀವು ನನ್ನನ್ನು ಏನು ಕೇಳುತ್ತೀರಿ? ಎಂದು ಹೇಳಿದ್ದರು.

  • Share this:

    ಕಾಫಿ ವಿತ್ ಕರಣ್ (Koffee with Karan) ಕಾರ್ಯಕ್ರಮ (Program) ಹಲವರಿಗೆ ಇಷ್ಟ ಆದ್ರೆ,  ಇನ್ನೂ ಕೆಲವರು ವಿರೋಧ ವ್ಯಕ್ತ ಪಡಿಸುತ್ತಾರೆ. ಈ ಕಾರ್ಯಕ್ರಮವು ಬಾಲಿವುಡ್ (Bollywood) ನಟ, ನಟಿಯರ ಪ್ರೇಮ ಪುರಾಣಗಳು, ಇತರ ತಾರೆಯರ ಮೇಲೆ ಅವರಿಗಿರುವ ಕ್ರಶ್, ಅವರ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆಗಳನ್ನು ಕರಣ್ ಜೋಹರ್ (Karan Johar) ಕೇಳ್ತಾರೆ. ಈ ಮೂಲಕ ಕರಣ್ ಜೋಹರ್ ಖ್ಯಾತರಾಗಿದ್ದಾರೆ. ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕೆ ಮೊದಲಿನಿಂದಲೂ ಪರ ವಿರೋಧ ಅಭಿಪ್ರಾಯಗಳು ಬರುತ್ತಲೇ ಇವೆ. ಅದನ್ನೂ ಹೊರತು ಪಡಿಸಿಯೂ ಈ ಕಾರ್ಯಕ್ರಮವನ್ನು ಪ್ರೀತಿಸೋ ಅಭಿಮಾನಿ ವರ್ಗವೂ ಇದೆ. ತಮ್ಮ ನೆಚ್ಚಿನ ನಟ (Hero), ನಟಿಯರಿಗೆ ಕರಣ್ ಕೇಳುವ ಪ್ರಶ್ನೆಗೆ ಬಿಚ್ಚುಮನಸ್ಸಿನಿಂದ ಉತ್ತರಿಸುತ್ತಾರೆ. ಮತ್ತು ಅವರ ಅಭಿಮಾನಿ ಬಳಗ ಈ ಮೂಲಕ ತಮ್ಮ ನಾಯಕ ನಾಯಕಿಯರ ಕುರಿತು ಇನ್ನಷ್ಟು ವಿಷಯಗಳನ್ನು ತಿಳಿದುಕೊಳ್ಳುತ್ತಾರೆ.


    ತಾಪ್ಸಿ ಪನ್ನು ಅವರನ್ನು ಏಕೆ ಆಹ್ವಾನಿಸಿಲ್ಲ?
    ಕಾಫಿ ವಿತ್ ಕರಣ್‍ನ ಇತ್ತೀಚಿನ ಸಂಚಿಕೆಯಲ್ಲಿ, ಚಲನಚಿತ್ರ ನಿರ್ಮಾಪಕ-ನಿರೂಪಕ ಕರಣ್ ಜೋಹರ್ ಅವರು ಕಾರ್ಯಕ್ರಮದ ಬಗ್ಗೆ ಹಲವಾರು ಪ್ರಶ್ನೆಗಳು ಮತ್ತು ಆರೋಪಗಳನ್ನು ಎದುರಿಸಬೇಕಾಯಿತು. ಆಲಿಯಾ ಭಟ್ ಅವರೊಂದಿಗಿನ ಗೀಳು, ಇತರ ಜನರ ವೈಯಕ್ತಿಕ ಜೀವನ ಮತ್ತು ತಾಪ್ಸಿ ಪನ್ನು ಅವರನ್ನು ಕಾರ್ಯಕ್ರಮಕ್ಕೆ ಏಕೆ ಆಹ್ವಾನಿಸಲಾಗಿಲ್ಲ ಎಂದು ಕೇಳಲಾಯಿತು.


    ಕರಣ್ ಜೋಹರ್ ಗೆ  ಪ್ರಶ್ನೆ?
    ಅಂತಿಮ ಸಂಚಿಕೆಯಲ್ಲಿ ತನ್ಮಯ್ ಭಟ್, ಕುಶಾ ಕಪಿಲಾ, ನಿಹಾರಿಕಾ ಎನ್‍ಎಂ ಮತ್ತು ಡ್ಯಾನಿಶ್ ಸೇಟ್ ತೀರ್ಪುಗಾರರಾಗಿ ಕಾಣಿಸಿಕೊಂಡರು. ಮತ್ತು ವಿವಿಧ ವಿಭಾಗಗಳಲ್ಲಿ ಸೀಸನ್‍ನ ವಿಜೇತರನ್ನು ಆಯ್ಕೆ ಮಾಡಲು ಅವರನ್ನು ಕೇಳಲಾಯಿತು. ಅವರು ಕರಣ್‍ಗೆ ಋತುವಿನ ಬಗ್ಗೆ ಹಲವಾರು ಪ್ರಶ್ನೆಗಳನ್ನು ಕೇಳಿದರು.


    ಇದನ್ನೂ ಓದಿ: Lakshana: ಭೂಪತಿಗೆ ನಕ್ಷತ್ರಾ ಮೇಲೆ ಪ್ರೀತಿ ಇದ್ಯಾ? ಕಣ್ಮುಚಿದ್ರೆ ಎಲ್ಲಾ ಕಡೆ ಕಾಣೋದು ಅವಳೇನಾ?


    ಕಾರ್ಯಕ್ರಮದಲ್ಲಿ ಮಾತನಾಡಿದ ಕುಶಾ ಕಳೆದ ಎರಡು ವರ್ಷಗಳಲ್ಲಿ ವಿಮರ್ಶಾತ್ಮಕ ಯಶಸ್ಸನ್ನು ಹೊಂದಿರುವ ಬಹಳಷ್ಟು ನಟರನ್ನು ಇನ್ನೂ ಕಾಫಿ ವಿತ್ ಕರಣ್‍ಗೆ ಕರೆದಿಲ್ಲ. ಅವರಲ್ಲಿ ಒಬ್ಬರು ತಾಪ್ಸಿ ಪನ್ನು. ಯಾವುದೇ ರೀತಿಯ ಪರಿಶೀಲನೆ ಪ್ರಕ್ರಿಯೆ ಇದೆಯೇ? ಎಂದು ಕೇಳಿದ್ದಾರೆ.


    ಕರಣ್ ಜೋಹರ್ ಹೇಳಿದ್ದೇನು?
    ತಾಪ್ಸಿಗೆ ನಾನು ಕಾರ್ಯಕ್ರಮಕ್ಕೆ ಬರುವಂತೆ ಹಲವು ಬಾರಿ ವಿನಂತಿಸಿಕೊಂಡಿದ್ದೇನೆ. ಅಲ್ಲಿ ನೀವು ಹೆಚ್ಚು ಗುರುತಿಸಿಕೊಳ್ಳಬಹುದು ಎಂದು ಸಹ ಹೇಳಿದ್ದೆ. ಆದ್ರೆ ಆಕೆ ಒಪ್ಪದೇ ನಿರಾಕರಿಸಿದ್ದಳು. ತನ್ನ ವೈಕ್ತಿಕ ಜೀವನ ಅಷ್ಟು ಆಸಕ್ತಿದಾಯವಾಗಿಲ್ಲ. ನನ್ನ ಜೀವನ ಬಹಳಷ್ಟು ನೀರಸವಾಗಿದೆ. ನೀವು ನನ್ನನ್ನು ಏನು ಕೇಳುತ್ತೀರಿ? ಯಾವ ಲಿಂಕ್‍ಅಪ್‍ಗಳು, ಯಾವ ಸಂಬಂಧಗಳು ಎಂದಲ್ಲವೇ? ನನ್ನ ಜೀವನದ ಎಲ್ಲಾ ರೋಚಕ ಭಾಗಗಳು ತೆರೆದಿವೆ. ಆದರೆ ರೀತಿಯ ಕಾರ್ಯಕ್ರಮಗಳಲ್ಲಿ ಮಾತನಾಡುವಷ್ಟು ಅದು ರೋಮಾಂಚನಕಾರಿಯಾಗಿಲ್ಲ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ


    ಕರಣ್ ನಿರ್ಮಿಸುತ್ತಿರುವ ಚಿತ್ರಗಳಾವುವು?
    ವೃತ್ತಿ ವಿಷಯಕ್ಕೆ ಬರುವುದಾದರೆ, ಕರಣ್ ಜೋಹರ್ ಶೀಘ್ರದಲ್ಲೇ ಆ್ಯಕ್ಷನ್ ಪ್ರಧಾನ ಚಿತ್ರವನ್ನು ನಿರ್ಮಿಸಲಿದ್ದಾರೆ. ಆಲಿಯಾ ಭಟ್ ಹಾಗೂ ರಣ್‌ವೀರ್ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.


    ಇದನ್ನೂ ಓದಿ: Kannadathi: ವರ್ಕ್ ಆಗ್ತಿಲ್ಲ ಸಾನಿಯಾ ಪ್ಲ್ಯಾನ್, ರಾವಣನ ತಲೆ ಹೊತ್ತು ಹರ್ಷನ ಬಳಿ ಗನ್ ಹಿಡಿದು ಬಂದಿದ್ಯಾರು?


    ಡ್ಯಾನ್ಸ್ ರಿಯಾಲಿಟಿ ಶೋ ಝಲಕ್ ದಿಖ್‌ಲಾಜಾ 10 ತೀರ್ಪುಗಾರರಾಗಿದ್ದಾರೆ. ಗೋವಿಂದ ನಾಮ್ ಮೇರಾ, ಯೋಧಾ, ಹೀಗೆ ಇನ್ನಿತರ ಸಾಲು ಸಾಲು ಚಿತ್ರಗಳು ಧರ್ಮ ಪ್ರೊಡಕ್ಶನ್ಸ್‌ನಲ್ಲಿ ಮೂಡಿಬರಲು ಸಜ್ಜಾಗಿವೆ. ಇತ್ತೀಚಿನ ಸಿನಿಮಾ ಬಿಡುಗಡೆಗಳ ಕುರಿತು ಹೇಳುವುದಾದರೆ ಜುಗ್ ಜುಗ್ ಜಿಯೋ, ಲೈಗರ್, ಬ್ರಹ್ಮಾಸ್ತ್ರ ಚಿತ್ರಗಳು ಧರ್ಮ ಪ್ರೊಡಕ್ಶನ್ಸ್‌ನಲ್ಲಿ ತೆರೆಕಂಡಿವೆ.

    Published by:Savitha Savitha
    First published: