• Home
  • »
  • News
  • »
  • entertainment
  • »
  • Koffee With Karan: ಬೇರೆಯವರ ಲೈಫ್​ ಬಗ್ಗೆ ನೀವ್ ಮಾತನಾಡ್ಬೋದು, ನಿಮ್ ಲೈಫ್​ ಬಗ್ಗೆ ಮಾತಾಡ್ಬಾರ್ದಾ? ಕರಣ್​ಗೆ ಆಮಿರ್ ಖಡಕ್ ಪ್ರಶ್ನೆ

Koffee With Karan: ಬೇರೆಯವರ ಲೈಫ್​ ಬಗ್ಗೆ ನೀವ್ ಮಾತನಾಡ್ಬೋದು, ನಿಮ್ ಲೈಫ್​ ಬಗ್ಗೆ ಮಾತಾಡ್ಬಾರ್ದಾ? ಕರಣ್​ಗೆ ಆಮಿರ್ ಖಡಕ್ ಪ್ರಶ್ನೆ

ಕರೀನಾ, ಆಮಿರ್​

ಕರೀನಾ, ಆಮಿರ್​

Aamir khan and Kareena Kapoor: ಕಿರಣ್ ರಾವ್ ಅವರೊಂದಿಗೆ ಮದುವೆ ಆಗುವ ಮೊದಲು ಅಮೀರ್ ಈ ಹಿಂದೆ ರೀನಾ ದತ್ತಾ ಅವರನ್ನು ವಿವಾಹವಾಗಿದ್ದರು. ಅಲ್ಲದೇ ಆಮಿರ್ ಮತ್ತು ಕಿರಣ್ ಕಳೆದ ವರ್ಷ ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಿಸಿದ್ದಾರೆ.

  • Share this:

ಕಾಫಿ ವಿತ್ ಕರಣ್ (Koffee With Karan)  ಶೋ ಮತ್ತೆ ಪ್ರಾರಂಭವಾಗಿದೆ. ಕಾಫಿ ವಿತ್ ಕರಣ್​ ಶೋ ನ 7ನೇ ಸೀಸನ್ ಈಗಾಗಲೇ ತನ್ನ ಎಪಿಸೋಡ್​ ಮೂಲಕ ಕಿಚ್ಚು ಹತ್ತಿಸಿದೆ. ಈ ಬಾರಿ ಶೋ ಟಿವಿ ಬದಲಾಗಿ ಒಟಿಟಿಯಲ್ಲಿ (OTT)  ಪ್ರಸಾರವಾಗುತ್ತಿರುವ ಈ ಶೋನಲ್ಲಿ ಬಾಲಿವುಡ್​ (bollywood) ಹಾಗೂ ಟಾಲಿವುಡ್​ (Tollywood) ಸೆಲೆಬ್ರಿಟಿಗಳು ಭಾಗವಹಿಸಿದ್ದು, ಈ ಬಾರಿ ನಟಿ ಕರೀನಾ ಕಪೂರ್ ಹಾಗೂ ಆಮಿರ್ ಖಾನ್​ ಭಾಗವಹಿಸಿದ್ದು, ಅದರ ಪ್ರೋಮೋ ಬಿಡುಗಡೆಯಾಗಿ ಎಲ್ಲೆಡೆ ಸದ್ದು ಮಾಡುತ್ತಿದೆ.  


ಲೈಂಗಿಕತೆಯ ಬಗ್ಗೆ ಮಾತನಾಡಿದ ಕರಣ್


ಸಾಮಾನ್ಯವಾಗಿ ಕರಣ್ ಜೋಹರ್ ಶೋ ಎಂದ ಮೇಲೆ ವಿವಾದಗಳಿಗೆ ಕಡಿಮೆ ಇಲ್ಲ. ಅದರಲ್ಲೂ ಅತಿ ವೈಯಕ್ತಿಕ ಎನಿಸುವ ಪ್ರಶ್ನೆಗಳನ್ನು ಕೇಳಿ ಅತಿಥಿಗಳನ್ನು ಮುಜುಗರಕ್ಕೀಡು ಮಾಡಿದ ಹಲವಾರು ಉದಾಹರಣೆಗಳಿವೆ. ಕಳೆದ ಬಾರಿ ವಿಜಯ್ ದೇವರಕೊಂಡ ಬಳಿ ಲೈಂಗಿಕತೆಯ ಬಗ್ಗೆ ಅವರು ಕೇಳಿದ್ದ ಪ್ರಶ್ನೆ ವೈರಲ್ ಆಗಿತ್ತು, ಈ ಬಾರಿ ಸಹ ಕರೀನಾ ಹಾಗೂ ಆಮಿರ್ ಬಳಿ ಅದೇ ರೀತಿಯ ಪ್ರಶ್ನೆ ಕೇಳಿದ್ದು, ಅದಕ್ಕೆ ಆಮಿರ್ ಸರಿಯಾಗಿ ಟಾಂಗ್ ಕೊಟ್ಟಿದ್ದಾರೆ.


ಈ ಕಾರ್ಯಕ್ರಮದಲ್ಲಿ ಮಗುವಿನ ಜನನದ ನಂತರದಲ್ಲಿ ಗುಣಮಟ್ಟದ ಲೈಂಗಿಕತೆ ಇರುತ್ತದೆ ಎನ್ನುವುದ ಸುಳ್ಳಾ? ನಿಜನಾ? ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಉತ್ತರ ನೀಡದ್ದ ಕರೀನಾ ಕಪೂರ್ ನಿನಗೆ ಗೊತ್ತಿಲ್ವಾ? ಎಂದಿದ್ದಾರೆ.ಈ ಸಮಯದಲ್ಲಿ ಮತ್ತೆ ಕರಣ್ ಈ ಶೋ ಅನ್ನು ನನ್ನ ತಾಯಿ ಈ ಶೋ ನೋಡ್ತಿದ್ದಾರೆ, ನನ್ನ ಲೈಂಗಿಕತೆ ಬಗ್ಗೆ ಮಾತನಾಡುತ್ತೀರಾ ಎಂದು ಕೇಳಿದ್ದಾರೆ, ಅದಕ್ಕೆ ಪ್ರತಿಯಾಗಿ ಆಮಿರ್ ಖಾನ್, ಬೇರೆಯವರ ಲೈಂಗಿಕತೆ ಬಗ್ಗೆ ಮಾತನಾಡಿದ್ರೆ ನಿಮ್ಮ ತಾಯಿ ಏನೂ ಅಂದುಕೊಳ್ಳುವುದಿಲ್ಲವೇ? ಎಂದು ಕರಣ್ ಜೋಹರ್‌ಗೆ ಪ್ರಶ್ನೆ ಮಾಡಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.


ಇದನ್ನೂ ಓದಿ: ಪ್ಯಾರಿಸ್​ ಟ್ರಿಪ್ ಮುಗಿಸಿ ಬಂದ ವಿರುಷ್ಕಾ, ಮಗಳ ಫೋಟೋ ತೆಗೆಯದಂತೆ ಪಾಪರಾಜಿಗಳಿಗೆ ವಿರಾಟ್​ ಮನವಿ


ಈ ಕಾರ್ಯಕ್ರಮದಲ್ಲಿ ಆಮಿರ್​ ಖಾನ್ ಅವರು ತಮ್ಮ ಮಾಜಿ ಪತ್ನಿಯರೊಂದಿಗೆ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಕಾರ್ಯಕ್ರಮದ ಹೊಸ ಸಂಚಿಕೆಯಲ್ಲಿ, ಮಾಜಿ ಪತ್ನಿ ಕಿರಣ್ ರಾವ್ ಹಾಗೂ ರೀನಾ  ಅವರೊಂದಿಗಿನ ಅವರ ಸಂಬಂಧವು ಪ್ರೀತಿ ಮತ್ತು ಗೌರವದ ಬಗ್ಗೆ ಹಂಚಿಕೊಂಡಿದ್ದಾರೆ. ಕರಣ್ ಅವರೊಂದಿಗಿನ ಮಾತುಕತೆಯ ಸಮಯದಲ್ಲಿ, ಆಮಿರ್ ತಮ್ಮ ಸಂಬಂಧದಲ್ಲಿ ಯಾವುದೇ ಕೆಟ್ಟ ಕ್ಷಣಗಳು ಇರಬಾರದು. ನನಗೆ ಅವರಿಬ್ಬರ ಬಗ್ಗೆ ಹೆಚ್ಚಿನ ಗೌರವವಿದೆ. ನಾವು ಯಾವಾಗಲೂ ಒಂದು ಕುಟುಂಬವಾಗಿರುತ್ತೇವೆ,ಎಂದು ಅವರು ಹೇಳಿದ್ದಾರೆ.

View this post on Instagram


A post shared by Karan Johar (@karanjohar)

ಮಾಜಿ ಪತ್ನಿಯರ ಬಗ್ಗೆ ಗೌರವವಿದೆ


ಕಿರಣ್ ರಾವ್ ಅವರೊಂದಿಗೆ ಮದುವೆ ಆಗುವ ಮೊದಲು ಅಮೀರ್ ಈ ಹಿಂದೆ ರೀನಾ ದತ್ತಾ ಅವರನ್ನು ವಿವಾಹವಾಗಿದ್ದರು. ಅಲ್ಲದೇ ಆಮಿರ್ ಮತ್ತು ಕಿರಣ್ ಕಳೆದ ವರ್ಷ ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಿಸಿದ್ದಾರೆ. ಇನ್ನು ಆಮಿರ್​ ಹಾಗೂ ರೀನಾ ದತ್ತ ಅವರಿಗೆ ಇಬ್ಬರು ಮಕ್ಕಳಿದ್ದು, ಮಗ ಜುನೈದ್ ಖಾನ್ ಮತ್ತು ಮಗಳು ಇರಾ ಖಾನ್.  ಹಾಗೆಯೇ ಅನೇಕರು ತಿಳಿದುಕೊಂಡಿರುವಂತೆ ತನ್ನ ಮಾಜಿ ಪತ್ನಿಯರ ಜೊತೆ ನನ್ನ ಸಂಬಂಧವಿಲ್ಲ. ನಮ್ಮದು ವಿಭಿನ್ನ ಸಂಬಂಧ ಎಂಬುದನ್ನು ಅಮೀರ್ ಬಹಿರಂಗಪಡಿಸಿದರು.


ಇದನ್ನೂ ಓದಿ: ಕೆಲಸ, ವೈಯಕ್ತಿಕ ಜೀವನ ಬೇರೆ, ಎರಡೂ ಮಿಕ್ಸ್ ಮಾಡ್ಬೇಡಿ; ಡೈವೋರ್ಸ್​ಗೆ ಮೌನ ಮುರಿದ ನಾಗಚೈತನ್ಯ


ನಾವು ಎಷ್ಟೇ ಬ್ಯುಸಿ ಇದ್ದರೂ ಸಹ ವಾರಕ್ಕೊಮ್ಮೆ ನಾವೆಲ್ಲರೂ ಒಟ್ಟಿಗೆ ಸೇರುತ್ತೇವೆ. ಒಬ್ಬರಿಗೊಬ್ಬರು ನಿಜವಾದ ಕಾಳಜಿ, ಪ್ರೀತಿ ಮತ್ತು ಗೌರವವನ್ನು ಹೊಂದಿದ್ದೇವೆ ಎಂದು ಅವರು ಹೇಳಿದ್ದಾರೆ.  ಅಮೀರ್ ಮತ್ತು ಕರೀನಾ ಈ ಸೀಸನ್‌ನ ಐದನೇ ಸಂಚಿಕೆಯಲ್ಲಿ ಭಾಗವಹಿಸಲಿದ್ದಾರೆ, ಇದು ಗುರುವಾರ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ. ಅವರು ಮುಂದಿನ ತಮ್ಮ ಚಲನಚಿತ್ರ ಲಾಲ್ ಸಿಂಗ್ ಚಡ್ಡಾದ ಪ್ರಚಾರದ ಭಾಗವಾಗಿ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಆಗಸ್ಟ್ 11 ರಂದು ಬಿಡುಗಡೆಯಾಗಲಿದೆ.

Published by:Sandhya M
First published: