ಕರಣ್ ಜೋಹರ್ (Karan Johar) ಸಾರಥ್ಯದ ಚಾಟ್ ಶೋ, ಕಾಫಿ ವಿತ್ ಕರಣ್ ಸೀಸನ್ 7 ಸಕತ್ ಆಗಿ ಮೂಡಿ ಬರುತ್ತಿದೆ. ಕಾಂಟ್ರವರ್ಸಿಯೇ ತುಂಬಿದ್ದ ಶೋ, ಈ ಸೀಸನ್ ನಲ್ಲಿ ಅಂತಹ ಸೀನ್ ಗಳಿಗೆ ಸ್ವಲ್ಪ ಕತ್ತರಿ ಹಾಕಿದ್ದು ಎಂಟರ್‌ಟೇನ್ಮೆಂಟ್ ಗೆ (Entertainment) ಹೆಚ್ಚಾಗಿ ಗಮನ ಹರಿಸಿದೆ. ಈ ಸೂಪರ್ ಶೋ ಈಗಾಗ್ಲೇ ಹಲವು ಸಂಚಿಕೆಗಳನ್ನು ಪೂರೈಸಿದ್ದು, ಹಲವು ಕಲಾವಿದರು ಎಂಟ್ರಿ ಕೊಟ್ಟು ಹೋಗಿದ್ದಾರೆ. ಪ್ರಸ್ತುತ ಮುಂದಿನ ಎಪಿಸೋಡ್ ಗೆ (Episode) ಯಾವ ಗೆಸ್ಟ್ ಬರಲಿದ್ದಾರೆ ಎಂಬುವುದರ ಪ್ರೋಮೋ ಒಂದನ್ನು ತಮ್ಮ ಇನ್ಸ್ಟಾಗ್ರಾಮ್ (Instagram) ಪೇಜಿನಲ್ಲಿ ನಿರೂಪಕ ಕರಣ್ ಪೋಸ್ಟ್ ಮಾಡಿದ್ದಾರೆ.
ಮುಂದಿನ ಸಂಚಿಕೆಯಲ್ಲಿ ಸ್ಟಾರ್ ನಟರ ಪತ್ನಿಯರೇ ಗೆಸ್ಟ್
ಹೌದು, ಮುಂಬರುವ ಸಂಚಿಕೆಯಲ್ಲಿ ಬಾಲಿವುಡ್ ಸ್ಟಾರ್ ನಾಯಕರ ಪತ್ನಿಯರು ಶೋಗೆ ಬರಲಿದ್ದಾರೆ. ಶಾರುಖ್ ಖಾನ್ ಪತ್ನಿ ಗೌರಿ ಖಾನ್, ಸಂಜಯ್ ಕಪೂರ್ ಪತ್ನಿ ಮಹೀಪ್ ಕಪೂರ್, ಚಂಕಿ ಪಾಂಡೆ ಪತ್ನಿ ಭಾವನಾ ಪಾಂಡೆ ಈ ಸಂಚಿಕೆಯ ಗೆಸ್ಟ್.
ಒಬ್ಬರ ಬಳಿ ಮಾತ್ರ ಡೇಟಿಂಗ್ ಮಾಡಲು ಮಗಳು ಸುಹಾನಾಗೆ ಗೌರಿ ಸಲಹೆ
ಕರಣ್ ಜೋಹರ್ ಹಂಚಿಕೊಂಡ ಸಂಚಿಕೆಯ ಪ್ರೋಮೋವು ಗೌರಿ ಖಾನ್ ಗೆ ಕೇಳುವ ಪ್ರಶ್ನೆಯಿಂದ ಆರಂಭವಾಗುತ್ತದೆ. "ನೀವು ಸುಹಾನಾಗೆ ಡೇಟಿಂಗ್ ಮಾಡುವ ಬಗ್ಗೆ ಒಂದು ಸಲಹೆ ನೀಡುವುದಾದರೆ ಏನು ನೀಡುತ್ತೀರಿ" ಎಂಬ ಪ್ರಶ್ನೆಯನ್ನು ಕರಣ್ ಗೌರಿಗೆ ಕೇಳುತ್ತಾರೆ.
ಇದಕ್ಕೆ ಉತ್ತರಿಸಿದ ಶಾರುಖ್ ಖಾನ್ ಪತ್ನಿ, ಮಗಳು ಸುಹಾನಾಗೆ "ಎರಡು ಹುಡುಗರೊಂದಿಗೆ ಒಂದೇ ಸಮಯದಲ್ಲಿ ಡೇಟಿಂಗ್ ಮಾಡಬೇಡ" ಎಂಬ ಸಲಹೆ ನೀಡಿದ್ದಾರೆ. ಗೌರಿ ಉತ್ತರಕ್ಕೆ ಕರಣ್ ಕೂಡ ನಗು ವ್ಯಕ್ತಪಡಿಸುತ್ತಾರೆ.
"ಹೃತಿಕ್ ರೋಷನ್ ಜೊತೆ ನಟಿಸಬೇಕು"
ಹಾಗೆಯೇ ಮುಂದುವರಿದ ಪ್ರೋಮೋದಲ್ಲಿ ಕರಣ್ ಅವರು ಮಹೀಪ್ ಅವರಿಗೆ ಪ್ರಶ್ನೆ ಕೇಳುತ್ತಾರೆ, "ನಿಮಗೆ ಫಿಲ್ಮ್ ಆಫರ್ ಬಂದರೆ, ನೀವು ಯಾವ ನಟನೊಂದಿಗೆ ಸ್ಕ್ರೀನ್ ಶೇರ್ ಮಾಡಲು ಬಯಸುತ್ತೀರಿ ಎನ್ನುತ್ತಾರೆ. ಈ ಪ್ರಶ್ನೆಗೆ ಮಹೀಪ್ ಕೂಡಲೇ ಹೃತಿಕ್ ರೋಷನ್ ಎನ್ನುತ್ತಾರೆ. ಇದನ್ನು ಕೇಳಿದ ಕರಣ್ ಜೋಹರ್, ನಿಜವಾಗಿಯೂ" ಎಂದು ಹೇಳುತ್ತಾರೆ.
ದಂಪತಿಗಳ ಲವ್ ಸ್ಟೋರಿಗೆ "ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ," ಸಿನಿಮಾದ ಟೈಟಲ್ ನೀಡಿದ ಗೌರಿ
ಮತ್ತೆ ಗೌರಿ ಖಾನ್ ಗೆ ಪ್ರಶ್ನಿಸಿದ ಕರಣ್ ಜೋಹರ್, ಶಾರುಖ್ ಖಾನ್ ಮತ್ತು ನಿಮ್ಮ ಪ್ರೇಮಕಥೆಗೆ ಚಿತ್ರದ ಒಂದು ಶೀರ್ಷಿಕೆಯನ್ನು ನೀಡುವುದಾದರೆ ಯಾವ ಟೈಟಲ್ ನೀಡುತ್ತೀರಿ ಎಂದು ಕೇಳಿದರು. ಇದಕ್ಕೆ ಗೌರಿ ಖಾನ್ ನಮ್ಮಿಬ್ಬಿರ ಲವ್ ಸ್ಟೋರಿಗೆ ನಾನು "ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ," ಸಿನಿಮಾದ ಟೈಟಲ್ ಇಡುತ್ತೇನೆ, ನನಗೆ ಆ ಸಿನಿಮಾ ತುಂಬಾನೇ ಇಷ್ಟ ಎಂದಿದ್ದಾರೆ. ಇದಕ್ಕೆ ಕರಣ್ ಜೋಹರ್, ಕೂಡ ನನಗೂ ಆ ಸಿನಿಮಾ ತುಂಬಾ ಇಷ್ಟ" ಎಂದು ಹೇಳುತ್ತಾರೆ.
ಮುಂದೆ, ಕರಣ್ ಜೋಹರ್ ಗೌರಿ ಖಾನ್, ಮಹೀಪ್ ಕಪೂರ್ ಮತ್ತು ಭಾವನಾ ಪಾಂಡೆ ಅವರನ್ನು, ಅವರ ಸೆಲೆಬ್ರಿಟಿ ಪತಿಗೆ ಪೋನ್ ಕರೆ ಮಾಡಲು ಕೇಳಿದರು. ಗೌರಿ ತಕ್ಷಣವೇ ಶಾರುಖ್ ಖಾನ್ಗೆ ಕರೆ ಮಾಡಿದರು. ಕರಣ್ ಗೆ ಶಾರುಖ್ ಫೋನ್ ಕಾಲ್ ನಲ್ಲಿಯೇ ಹಾಯ್ ಹೇಳುತ್ತಾರೆ. ಅವರಿಬ್ಬರು ಏನೆಲ್ಲಾ ಮಾತನಾಡಿದರು ಎನ್ನುವುದನ್ನು ತಿಳಿದುಕೊಳ್ಳಲು ನೀವು ಎಪಿಸೋಡ್ ನೋಡಲೇ ಬೇಕು.
View this post on Instagram
ಸಂಚಿಕೆಯ ಪ್ರೋಮೋದ ವಿಡಿಯೋವನ್ನು ಹಂಚಿಕೊಂಡ ಕರಣ್ ಜೋಹರ್ "ಈ ಅಸಾಧಾರಣ ಮಹಿಳೆಯರು ಸ್ವಲ್ಪ ಬಿಸಿ ಕಾಫಿಯನ್ನು ಚೆಲ್ಲಲು ಸಿದ್ಧರಾಗಿದ್ದಾರೆ!" ಎಂದು ಕ್ಯಾಪ್ಷನ್ ನೀಡಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಗೌರಿ ಖಾನ್, ಮಹೀಪ್ ಕಪೂರ್ ಮತ್ತು ಭಾವನಾ ಪಾಂಡೆ ಉತ್ತಮ ಸ್ನೇಹಿತರು. ಅವರಷ್ಟೇ ಅಲ್ಲ, ಅವರ ಪುತ್ರಿಯರಾದ ಸುಹಾನಾ ಖಾನ್, ಶನಯಾ ಕಪೂರ್ ಮತ್ತು ಅನನ್ಯಾ ಪಾಂಡೆ ಕೂಡ ಉತ್ತಮ ಸ್ನೇಹಿತರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ