Joru Paattu Song: ಯೂಟ್ಯೂಬ್​ಗೆ ಲಗ್ಗೆ ಇಟ್ಟಿದೆ ಡಿಬಾಸ್​ ಹೆಜ್ಜೆ ಹಾಕಿರುವ ಕೊಡವ ಶೈಲಿಯ ಹಾಡು..!

ಕೊಡವ ಶೈಲಿ ಹಾಗೂ ಕೊಡವ ಸಾಹಿತ್ಯವನ್ನೇ ಹೊಂದಿರುವ ಜೋರುಪಾಟ್ಟು ಲಿರಿಕಲ್​ ವಿಡಿಯೋ ಹಾಡು ವೀಕ್ಷಣೆಗೆ ಈಗ ಲಭ್ಯ. ಆನಂದ್​ ಆಡಿಯೋ ಅಮರ್​ ಸಿನಿಮಾದ ಈ ವಿಶೇಷ ಹಾಡನ್ನು ಬಿಡುಗಡೆ ಮಾಡಿದೆ.

Anitha E | news18
Updated:May 18, 2019, 8:20 PM IST
Joru Paattu Song: ಯೂಟ್ಯೂಬ್​ಗೆ ಲಗ್ಗೆ ಇಟ್ಟಿದೆ ಡಿಬಾಸ್​ ಹೆಜ್ಜೆ ಹಾಕಿರುವ ಕೊಡವ ಶೈಲಿಯ ಹಾಡು..!
ಜೋರು ಪಾಟ್ಟು ಹಾಡಿನಲ್ಲಿ ದರ್ಶನ್​
  • News18
  • Last Updated: May 18, 2019, 8:20 PM IST
  • Share this:
- ಅನಿತಾ ಈ,

ಇದೇ ತಿಂಗಳ ಅಂತ್ಯಕ್ಕೆ ತೆರೆಗಪ್ಪಳಿಸಲಿರುವ ಯಂಗ್​ ರೆಬೆಲ್​ ಸ್ಟಾರ್​ ಅಭಿಷೇಕ್ ಅಂಬರೀಷ್​ ಅಭಿನಯದ 'ಅಮರ್​' ಸಿನಿಮಾದ ಹಾಡು ವಿಶೇಷ ಹಾಡು ಬಿಡುಗಡೆಯಾಗಿದೆ.

ಕೊಡವ ಶೈಲಿ ಹಾಗೂ ಕೊಡವ ಸಾಹಿತ್ಯವನ್ನೇ ಹೊಂದಿರುವ ಲಿರಿಕಲ್​ ವಿಡಿಯೋ ಹಾಡು ಇದಾಗಿದ್ದು, ಇದರಲ್ಲಿ ಡಿಬಾಸ್​ ದರ್ಶನ್​, ರಚಿತಾ ರಾಮ್​, ನಿರೂಪ್​​ ಭಂಡಾರಿ ಹೆಜ್ಜೆ ಹಾಕಿದ್ದಾರೆ. ಆದರೆ ಈ ಹಾಡಿನ ಮತ್ತೊಂದು ವಿಶೇಷತೆ ಎಂದರೆ ಇದರಲ್ಲಿ ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ಸಹ ಕಾಣಿಸಿಕೊಂಡಿದ್ದಾರೆ.

 



 

ಅರ್ಜುನ್​ ಜನ್ಯ ಸಂಗೀತ ನೀಡಿರುವ 'ಅಮರ್​' ಸಿನಿಮಾದ ಈ 'ಜೋರು ಪಟ್ಟು' ಹಾಡನ್ನು ಗಾಯಕ ಜೆಸ್ಸಿ ಗಿಫ್ಟ್​ ಹಾಡಿದ್ದಾರೆ. ಕಿರಣ್​ ಕಾವೇರಪ್ಪ ಸಾಹಿತ್ಯ ರಚಿಸಿರುವ ಈ ಹಾಡಿನ್ನು ಇಂದು ಬಿಡುಗಡೆ ಮಾಡುವುದಾಗಿ ಆನಂದ್​ ಆಡಿಯೋ ನಿನ್ನೆ ಟ್ವೀಟ್​ ಮೂಲಕ ಪ್ರಕಟಿಸಿತ್ತು.
Loading...

ಇದನ್ನೂ ಓದಿ: AMAR Movie: ಡಿಬಾಸ್ ದರ್ಶನ್​​-ರಚಿತಾ ರಾಮ್​ ಅಭಿನಯದ 'ಜೋರು ಪಟ್ಟು' ಹಾಡು ನಾಳೆ ಬಿಡುಗಡೆ



ಕನ್ನಡದ ಸಿನಿಮಾದಲ್ಲಿ ಮೊದಲ ಕೊಡವ ಪಾರ್ಟಿ ಹಾಡು ಇದಾಗಿದ್ದು, ಇದರಲ್ಲಿ ಅಭಿ, ತಾನ್ಯಾ, ದರ್ಶನ್​, ರಚಿತಾ, ಅರ್ಜುನ್ ಜನ್ಯ ಜತೆಗೆ ನಿರೂಪ್​​ ಭಂಡಾರಿ ಸಹ ಹೆಜ್ಜೆ ಹಾಕಿದ್ದಾರೆ. ಇದನ್ನೆಲ್ಲ ಗಮಿಸಿದರೆ, ಈ ಚಿತ್ರದಲ್ಲಿ ಅನೂಪ್ ಅವರು ಸಹ ಅತಿಥಿ ಪಾತ್ರದಲ್ಲಿ ಅಭಿನಯಿಸಿರಬಹುದು ಎಂದೆನಿಸುತ್ತದೆ. ಒಟ್ಟಾರೆ ಈ ವಿಭಿನ್ನ ಪ್ರಯತ್ನದ ಹಾಡಿಗೆ ಯೂಟ್ಯೂಬ್​ನಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ

Cannes 2019: ಮೆಟ್​ಗಾಲಾದಲ್ಲಿ ವಿಚಿತ್ರ ಉಡುಗೆಯಿಂದ ಟ್ರಾಲ್​ ಆಗಿದ್ದ ಪ್ರಿಯಾಂಕಾ ಕಾನ್ಸ್​​ನಲ್ಲಿ ಬೆಂಕಿ ಹೊತ್ತಿಸಿದ್ದು ಹೀಗೆ..!


 
First published:May 18, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...