Minnal Murali ಚಿತ್ರದ ಕ್ಲೈಮ್ಯಾಕ್ಸ್ ಶೂಟ್​ ಮಾಡಿದ್ದು ಇಲ್ಲೇ ಅಂತೆ: ಎಷ್ಟ್​ ಚೆಂದ ಇದೆ ಜಾಗ..!

ವಿಶೇಷವೆಂದರೆ ಈ ಚರ್ಚ್ ತೇಲುವ ಚರ್ಚ್ ಎಂದೇ ಖ್ಯಾತಿ ಪಡೆದಿದೆ. ಮಳೆಗಾಲದ ಸಂದರ್ಭದಲ್ಲಿ ಹಿನ್ನೀರನ್ನು ಹತ್ತಿರದ ಅಣೆಕಟ್ಟೆಯಿಂದ ಹೊರಬಿಟ್ಟಾಗ ಇದು ಅರ್ಧವಾಗಿ ಮುಳುಗಿರುತ್ತದೆ ಹಾಗೂ ತೇಲುತ್ತಿರುವಂತೆ ಭಾಸವಾಗುತ್ತದೆ.

ಶೆಟ್ಟಿಹಳ್ಳಿ ರೋಸ್ ಮೇರಿ ಚರ್ಚ್

ಶೆಟ್ಟಿಹಳ್ಳಿ ರೋಸ್ ಮೇರಿ ಚರ್ಚ್

  • Share this:
ಬಹು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಮಿನ್ನಲ್ ಮುರಳಿ (Minnal Murali ) ಒಂದು ಸೂಪರ್ ಹೀರೊಗಳಿರುವ (Superhero film) ಅದ್ಭುತ ಚಿತ್ರ. ಚಿತ್ರದ ಇಬ್ಬರು ನಾಯಕರು ಸೂಪರ್ ಹೀರೊಗಳು. ಒಂದೊಮ್ಮೆ ಏಕಕಾಲದಲ್ಲಿ ಇಬ್ಬರೂ ನಾಯಕರಿಗೆ ಸಿಡಿಲು ಬಡಿದು ಅವರಿಬ್ಬರಲ್ಲಿ ಅಸಾಧಾರಣ ಶಕ್ತಿಯ(Extraordinary Energy) ಆವಾಹನೆಯಾಗಿರುತ್ತದೆ. ಆದರೆ ಆ ಇಬ್ಬರು ಅದನ್ನು ಬಳಸುವ ರೀತಿಯಲ್ಲಿ ವ್ಯತ್ಯಾಸವಿರುತ್ತದೆ. ಈಗ ಚಿತ್ರದಲ್ಲಿ ಬರುವ ಅತಿ ಪ್ರಮುಖ ದೃಶ್ಯವೊಂದರಲ್ಲಿ ಇಬ್ಬರೂ ನಾಯಕರು ಒಬ್ಬರಿಗೊಬ್ಬರನ್ನು ಎದುರಿಸುತ್ತಿದ್ದಾರೆ. ಹಿನ್ನೆಲೆಯಲ್ಲಿ ಚರ್ಚ್ ಒಂದಿರುವ ( Island) ದ್ವೀಪವಿದೆ. ಇದರಲ್ಲಿ ಶಿಬು(Shibu) ಪಾತ್ರ ನಿರ್ವಹಿಸಿರುವ ಸೂಪರ್ ಹೀರೊ ದ್ವೀಪದಿಂದ ಮುಖ್ಯ ಭೂಮಿಗೆ ಸಂಪರ್ಕ ಕಲ್ಪಿಸುವ ಸೇತುವೆಯನ್ನು ನಾಶ ಮಾಡಿ ದ್ವೀಪದಲ್ಲಿನ ಚರ್ಚ್‌ನಲ್ಲಿರುವ ಜನರನ್ನು ಸಂಕಷ್ಟದಲ್ಲಿ ಸಿಲುಕಿಸಿರುತ್ತಾನೆ. ಈ ದೃಶ್ಯಕಾಗಿ ಚಿತ್ರೀಕರಣ ಮಾಡಬೇಕಾಗಿರುವ ಸ್ಥಳವು ಬಹಳ(Great Importance) ಮಹತ್ವದ್ದಾಗಿದೆ.

50 ಲಕ್ಷ ರೂಪಾಯಿಗಳ ಹಾನಿ
ಅದಕ್ಕೆಂದೇ 2021ರ ಮೇ ತಿಂಗಳಿನಲ್ಲಿ ಈ ಚಿತ್ರದ ತಂಡವು ಎರ್ನಾಕುಲಂನ ಪೆರಿಯಾರ್ ನದಿ ತಟದ ಕಾಲಡಿಯಲ್ಲಿ ಚರ್ಚ್ ರೀತಿಯ ಒಂದು ಸೆಟ್ ನಿರ್ಮಿಸಿತ್ತು. ಆದರೆ, ಬಜರಂಗ ದಳ ಹಾಗೂ ಅಖಿಲ ಹಿಂದೂ ಪರಿಷತ್ ಸದಸ್ಯರು ಈ ಸೆಟ್ ನಾಶ ಮಾಡಿದ್ದರೆಂದು ತಿಳಿದುಬಂದಿದೆ. ಈ ಚರ್ಚ್ ನಾಶಪಡಿಸಿದವರು, ಈ ಚರ್ಚ್ ಅನ್ನು ದೇವಾಲಯದ ಬಳಿ ನಿರ್ಮಿಸಲಾಗಿತ್ತು ಎಂದು ಹೇಳಿದ್ದರು. ಈ ಘಟನೆಯಿಂದಾಗಿ ಚಿತ್ರ ತಂಡವು ಸುಮಾರು 50 ಲಕ್ಷ ರೂಪಾಯಿಗಳ ಹಾನಿ ಅನುಭವಿಸಿತ್ತು ಹಾಗೂ ಹಲವು ದಿನಗಳವರೆಗೆ ಚಿತ್ರೀಕರಣ ಮಾಡಲು ಅಡಚಣೆ ಉಂಟಾಗಿತ್ತು ಎಂದು ವರದಿಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ: Priyanka Chopra: ಮನೆ ಹೊರಗೆ ಗಂಟೆಗಟ್ಟಲೆ ಕಾಯುತ್ತಿದ್ದ ಯುವ ಅಭಿಮಾನಿ ಬಗ್ಗೆ ನಟಿ ಪಿಗ್ಗಿ ಹೇಳಿದ್ದೇನು ಗೊತ್ತೇ.!

ರಾಜ್ಯದಲ್ಲಿ ಶೂಟಿಂಗ್..!
ತದನಂತರ ಈ ದೃಶ್ಯದ ಚಿತ್ರೀಕರಣಕ್ಕೆಂದು ಸ್ಥಳವೊಂದನ್ನು ಕರ್ನಾಟಕದಲ್ಲಿ ಗುರುತಿಸಲಾಯಿತು. ಆ ಪ್ರಕಾರ ಹಾಸನ ಜಿಲ್ಲೆಯ ಶೆಟ್ಟಿಹಳ್ಳಿಯಲ್ಲಿರುವ ನಿರ್ಜನ ಚರ್ಚ್ ಒಂದನ್ನು ಅಂತಿಮಗೊಳಿಸಲಾಯಿತು. ವಿಶೇಷವೆಂದರೆ ಈ ಚರ್ಚ್ ತೇಲುವ ಚರ್ಚ್ ಎಂದೇ ಖ್ಯಾತಿ ಪಡೆದಿದೆ. ಮಳೆಗಾಲದ ಸಂದರ್ಭದಲ್ಲಿ ಹಿನ್ನೀರನ್ನು ಹತ್ತಿರದ ಅಣೆಕಟ್ಟೆಯಿಂದ ಹೊರಬಿಟ್ಟಾಗ ಇದು ಅರ್ಧವಾಗಿ ಮುಳುಗಿರುತ್ತದೆ ಹಾಗೂ ತೇಲುತ್ತಿರುವಂತೆ ಭಾಸವಾಗುತ್ತದೆ. ಶೆಟ್ಟಿಹಳ್ಳಿ ರೋಸ್ ಮೇರಿ ಚರ್ಚ್ ಎಂದೇ ಪ್ರಸಿದ್ಧವಾಗಿರುವ ಇದನ್ನು 1860ರಲ್ಲಿ ಪ್ರೆಂಚ್ ಮಿಷನರಿಗಳು ನಿರ್ಮಿಸಿದ್ದಾರೆಂದು ಇತಿಹಾಸದಿಂದ ತಿಳಿದುಬರುತ್ತದೆ.

ಗೋಥಿಕ್ ವಾಸ್ತುಶಿಲ್ಪ ಶೈಲಿ
ಇಲ್ಲಿನ ಐತಿಹ್ಯದ ಪ್ರಕಾರ, ಈ ಚರ್ಚ್ ಅನ್ನು ಸ್ಥಳೀಯವಾಗಿ ವಾಸಿಸುತ್ತಿದ್ದ ಬ್ರಿಟಿಷ್ ಕುಟುಂಬ ಒಂದಕ್ಕೆ ನಿರ್ಮಿಸಿಕೊಡಲಾಗಿತ್ತಂತೆ. ಕಾವೇರಿ ನದಿಯ ಉಪನದಿಯಾದ ಹೇಮಾವತಿ ನದಿ ತಟದ ಮೇಲೆ ಇದನ್ನು ಗೋಥಿಕ್ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. ಅಂದಿನ ಸಮಯದಲ್ಲಿ ಈ ಶ್ರೀಮಂತ ಬ್ರಿಟಿಷ್ ಕುಟುಂಬ ಹಾಗೂ ಇತರರು ಇಲ್ಲಿ ಸೇರಿ ಪ್ರಾರ್ಥನೆ ಮಾಡಲು ಅನುಕೂಲವಾಗಲೆಂದು ಇದರ ನಿರ್ಮಾಣ ಮಾಡಿತ್ತೆನ್ನಲಾಗಿದೆ.

ಮಳೆಗಾಲದಲ್ಲಿ ಮುಳುಗಡೆ
ಇದರ ನಿರ್ಮಾಣದ 100 ವರ್ಷಗಳ ನಂತರ ಅಂದರೆ 1960ರಲ್ಲಿ ಹೇಮಾವತಿ ನದಿಗೆ ಅಡ್ಡಲಾಗಿ ಅಣೆಕಟ್ಟೆಯ ನಿರ್ಮಾಣ ಮಾಡಲಾಯಿತು. ಅದರಿಂದ ಉಂಟಾದ ಹಿನ್ನೀರಿನಲ್ಲಿ ಈ ಪ್ರದೇಶದ ಕೆಲ ಗ್ರಾಮಗಳು ನೀರಿನಲ್ಲಿ ಮುಳುಗಡೆಯಾದವು. ಅಲ್ಲಿನ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ ಬೇರೆಡೆ ಸ್ಥಳಾವಕಾಶ ನೀಡಲಾಯಿತು. ಆಗ ಈ ಚರ್ಚ್ ನಿರ್ಜನವಾಯಿತು. ಕಾರಣ ಪ್ರತಿ ಮಳೆಗಾಲದಲ್ಲಿ ಈ ಚರ್ಚ್ ಮುಳುಗಡೆಯಾಗುತ್ತದೆ.

ದ್ವೀಪವೊಂದರ ಮೇಲೆ ನಿರ್ಮಾಣ
ವರ್ಷದ ವಿವಿಧ ಸಮಯದಲ್ಲಿ ಅಲ್ಲಿರುವ ನೀರಿನ ಮಟ್ಟಕ್ಕೆ ತಕ್ಕಂತೆ ಚರ್ಚ್‌ನ ಭಾಗಗಳು ಗೋಚರಿಸುತ್ತವೆ. ಪ್ರಸ್ತುತ ಚರ್ಚ್ ಮೇಲ್ಬಾಗ ಸ್ವಲ್ಪ ಹಾನಿಗೀಡಾಗಿದ್ದು ಕೆಳ ಭಾಗವು ಇನ್ನು ಗಟ್ಟಿಮುಟ್ಟಾಗಿದೆ. ಇದು ಪ್ರವಾಸಿ ಕ್ಷೇತ್ರವಾಗಿಯೂ ಜನರನ್ನು ಸೆಳೆಯುತ್ತದೆ. ಏಪ್ರಿಲ್ ಹಾಗೂ ಜೂನ್ ಮಧ್ಯದ ಸಮಯದಲ್ಲಿ ಈ ಪ್ರದೇಶದಲ್ಲಿ ನೀರಿನ ಪ್ರಮಾಣ ತಗ್ಗುವುದರಿಂದ ಚರ್ಚ ಅನ್ನು ದ್ವೀಪವೊಂದರ ಮೇಲೆ ನಿರ್ಮಾಣಗೊಂಡಿರುವುದನ್ನು ಕಾಣಬಹುದು. ತದನಂತರ ಮಳೆ ಆರಂಭವಾದಂತೆ ಈ ಚರ್ಚ್ ಮುಳುಗುತ್ತದೆ. ಮಳೆ ತನ್ನ ಗರಿಷ್ಠ ಪ್ರಮಾಣದ ಅವಧಿಯಲ್ಲಿದ್ದಾಗ ಚರ್ಚ್ ಮೇಲ್ಭಾಗದಲ್ಲಿರುವ ಶಿಲುಬೆ ಮಾತ್ರವನ್ನೇ ನೋಡಬಹುದು.

ಇದನ್ನೂ ಓದಿ: Sunny Leone: ದೇವರನ್ನು ದೂಷಿಸುವ ಸಾಂಗ್​ನಲ್ಲಿ ನಟಿಸಿ ಸನ್ನಿ ಲಿಯೋನ್​ ವಿವಾದ : ಅಂಥದ್ದೇನಿದೆ ಈ ಹಾಡಿನಲ್ಲಿ?

ಪ್ರಾಕೃತಿಕ ತಾಣ
ಮಿಕ್ಕಂತೆ ಇಲ್ಲಿ ತೆಪ್ಪಗಳ ಮೂಲಕ ಪ್ರವಾಸಿಗರು ಈ ಚರ್ಚ್‌ಗೆ ಭೇಟಿ ನೀಡಿ ಅನ್ವೇಷಣೆ ಮಾಡುತ್ತಾರೆ. ಇದರ ಸುತ್ತಮುತ್ತಲಿನ ಪರಿಸರವು ಶಾಂತತೆಯಿಂದ ಕೂಡಿದ್ದು ಅದ್ಭುತವಾದ ಪ್ರಾಕೃತಿಕ ತಾಣದ ನೋಟವನ್ನು ಈ ಸ್ಥಳ ಒದಗಿಸುತ್ತದೆ. ಈಗಾಗಲೇ ಮಿನ್ನಲ್ ಮುರಳಿ ಚಿತ್ರತಂಡವು ಈ ಸ್ಥಳದಲ್ಲಿ ಹಲವಾರು ಸ್ಮಾರಕ ಹಾಗೂ ರಚನೆಗಳನ್ನು ನಿರ್ಮಿಸಿದೆ. ಕಟ್ಟಿಗೆಯ ಸೇತುವೆ, ಆಟದ ಉಪಕರಣಗಳು, ಸ್ಟಾಲ್‌ಗಳನ್ನು ಸ್ಥಾಪಿಸಿ ಇದೊಂದು ಗ್ರಾಮ ಎಂದು ತೋರುವಂತೆ ಹಲವು ರಚನೆಗಳ ನಿರ್ಮಾಣ ಮಾಡಲಾಗಿದೆ. ಈ ಕುರಿತು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ಫೋನ್ ಮೂಲಕ ಈ ಸೆಟ್ಟಿನ ಚಿತ್ರೀಕರಣ ಮಾಡಿದ್ದಾರೆ.
Published by:vanithasanjevani vanithasanjevani
First published: