Pawan Kalyan Wife: ಪವನ್ ಕಲ್ಯಾಣ್ ಅವರ ರಷ್ಯಾ ಮೂಲದ ಪತ್ನಿ ಸಖತ್ ರಿಚ್!

ಪತ್ನಿಯೊಂದಿಗೆ ಪವನ್ ಕಲ್ಯಾಣ್

ಪತ್ನಿಯೊಂದಿಗೆ ಪವನ್ ಕಲ್ಯಾಣ್

ತೀನ್ ಮಾರ್ ಪವನ್ ಮತ್ತು ಅನ್ನಾ ಒಟ್ಟಿಗೆ ಮಾಡಿದ ಮೊದಲ ಚಲನಚಿತ್ರವಾಗಿತ್ತು. ಇದೇ ಸಂದರ್ಭದಲ್ಲಿ ಇಬ್ಬರೂ ಪರಸ್ಪರರ ಬಗ್ಗೆ ಇನ್ನಷ್ಟು ಹೆಚ್ಚು ತಿಳಿದುಕೊಳ್ಳುವ ಅವಕಾಶವನ್ನು ಪಡೆದರು. ಪವನ್ ಪತ್ನಿಯ ಆಸ್ತಿ ಎಷ್ಟು ಗೊತ್ತಾ?

  • Trending Desk
  • 3-MIN READ
  • Last Updated :
  • Share this:

ತೆಲುಗು ಚಿತ್ರರಂಗದ (Tollywood) ಪವರ್ ಸ್ಟಾರ್ (Powerstar) ಅಂತಾನೆ ಖ್ಯಾತಿ ಹೊಂದಿರುವ ಪವನ್ ಕಲ್ಯಾಣ್ (Pawan Kalyan) ಅವರಿಗೆ ಲಕ್ಷಾಂತರ ಅಭಿಮಾನಿಗಳು (Fans) ಇದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ತೆಲುಗು ಚಿತ್ರಗಳಲ್ಲಿ ಅವರ ನಟನೆ ಮತ್ತು ವಿಭಿನ್ನ ಶೈಲಿಯ ಮತ್ತು ವೇಗದ ಡೈಲಾಗ್ ಡೆಲಿವರಿ ಯಾರಿಗೆ ತಾನೇ ಇಷ್ಟ ಆಗಿರುವುದಿಲ್ಲ ಹೇಳಿ? ಇಷ್ಟೇ ಅಲ್ಲದೆ ಈ ನಟ ರಾಜಕೀಯಕ್ಕೂ ಧುಮುಕಿದ್ದು ಇವರ ಅಭಿಮಾನಿಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚು ಮಾಡಿದೆ ಅಂತ ಹೇಳಬಹುದು.


ತೆಲುಗು ಚಿತ್ರೋದ್ಯಮದಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯಿಂದ ಗುರುತಿಸಿಕೊಂಡ ನಟ ಪವನ್ ಕಲ್ಯಾಣ್ ಅವರ ಸಿನಿ ಬದುಕು ಮೊದಲಿಗೆ ತುಂಬಾನೇ ಚೆನ್ನಾಗಿತ್ತು.


ಅವರ ಸಿನಿ ವೃತ್ತಿಯ ಹೊಸತರಲ್ಲಿ ಅಭಿನಯಿಸಿದ ಚಿತ್ರಗಳು ತುಂಬಾನೇ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದವು. ಅವುಗಳು ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದವು ಅಂತ ಹೇಳಬಹುದು.


ಮೂರು ಬಾರಿ ಮದುವೆಯಾದ ಪವನ್ ಕಲ್ಯಾಣ್


ಪವನ್ ಕಲ್ಯಾಣ್ ಅವರ ನಟನಾ ವೃತ್ತಿಜೀವನವು ಅಸಾಧಾರಣವಾಗಿದೆ, ಆದರೆ ಅವರ ವೈವಾಹಿಕ ಜೀವನವು ಸ್ವಲ್ಪ ಗೊಂದಲಮಯವಾಗಿದೆ ಅಂತ ಹೇಳಲಾಗುತ್ತದೆ. ಈ ನಟ ಮೂರು ಬಾರಿ ಮದುವೆಯಾಗಿದ್ದಾರೆ. ಎರಡು ಬಾರಿ ವಿಚ್ಛೇದನ ಪಡೆದಿದ್ದಾರೆ.
ಅತ್ಯುತ್ತಮ ನಟನಲ್ಲದೆ, ಪವನ್ ಕಲ್ಯಾಣ್ ಜನಸೇನಾ ರಾಜಕೀಯ ಪಕ್ಷದ ಮುಖ್ಯಸ್ಥರು ಸಹ ಆಗಿದ್ದಾರೆ. ಆದರೂ ಅವರ ವೈವಾಹಿಕ ಜೀವನದಿಂದ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದ್ದಾರೆ.


ತಮ್ಮ ಮದುವೆಗಳ ಬಗ್ಗೆ ಏನ್ ಹೇಳಿದ್ರು ಪವನ್?


ತೆಲುಗು ಚಲನಚಿತ್ರೋದ್ಯಮದ ಈ ಗಬ್ಬರ್ ಸಿಂಗ್, ಕೆಲವೊಮ್ಮೆ ಅವರ ವಿವಾಹ ಜೀವನದ ಅವಲೋಕಿಸಿ ನೋಡಿದಾಗ ಅವಿವಾಹಿತರಾಗಿ ಉಳಿಯುವುದು ಉತ್ತಮ ಆಯ್ಕೆ ಎಂದು ಅನಿಸುತ್ತದೆ ಎಂದು ಹೇಳಿದ್ದಾರೆ.
ಪವನ್ ಕಲ್ಯಾಣ್ ಅವರ ಮೂರನೇ ಪತ್ನಿ ಅನ್ನಾ ಲೆಜ್ನೆವಾ ಈ ವರ್ಷದ ಅಂತ್ಯದ ವೇಳೆಗೆ ವಿಚ್ಛೇದನ ನೀಡಬಹುದು ಎಂದು ಈಗಾಗಲೇ ಸುದ್ದಿಯಾಗುತ್ತಿದೆ.


ಇದನ್ನೂ ಓದಿ: Bollywood Brides: ಬಾಲಿವುಡ್ ನಟಿಯರಲ್ಲಿ ಅತಿ ಹೆಚ್ಚು ಬೆಲೆಯ ಲೆಹೆಂಗಾ ಧರಿಸಿದ್ಯಾರು ಗೊತ್ತಾ?


ಈ ವಿಚ್ಛೇದನೆ ಬಗ್ಗೆ ಯಾವುದೇ ಕಡೆಯಿಂದ ಅಧಿಕೃತ ದೃಢೀಕರಣವಿಲ್ಲ. ರಷ್ಯಾದ ರೂಪದರ್ಶಿ ಮತ್ತು ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಲೆಜ್ನೆವಾ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.


ಪವನ್ ಅವರ ಪತ್ನಿ ರಷ್ಯಾದ ರೂಪದರ್ಶಿ


ಅನ್ನಾ ಲೆಜ್ನೆವಾ 1980 ರಲ್ಲಿ ರಷ್ಯಾದಲ್ಲಿ ಜನಿಸಿದ ಕ್ರಿಶ್ಚಿಯನ್ ಮಹಿಳೆಯಾಗಿದ್ದು, ರಷ್ಯಾದ ರೂಪದರ್ಶಿ ಸಹ ಆಗಿದ್ದವರು. ಇವರು ಸಹ ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ವಿವಿಧ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ತೀನ್ ಮಾರ್ ಚಿತ್ರದಲ್ಲಿ ಅವರು ನಾಯಕಿಯಾಗಿ ನಟಿಸಿದ್ದಾರೆ.
ತೀನ್ ಮಾರ್ ಪವನ್ ಮತ್ತು ಅನ್ನಾ ಒಟ್ಟಿಗೆ ಮಾಡಿದ ಮೊದಲ ಚಲನಚಿತ್ರವಾಗಿತ್ತು. ಇದೇ ಸಂದರ್ಭದಲ್ಲಿ ಇಬ್ಬರೂ ಪರಸ್ಪರರ ಬಗ್ಗೆ ಇನ್ನಷ್ಟು ಹೆಚ್ಚು ತಿಳಿದುಕೊಳ್ಳುವ ಅವಕಾಶವನ್ನು ಪಡೆದರು. ನಂತರ ಇಬ್ಬರ ನಡುವೆ ಪ್ರೀತಿ ಬೆಳೆದು, ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು ಎಂದು ವರದಿಯಾಗಿದೆ.


ಅನ್ನಾ ಅವರ ಆಸ್ತಿ ಎಷ್ಟಿದೆ ಗೊತ್ತೇ?


2013ರಲ್ಲಿ ವಿವಾಹವಾದ ಈ ಜೋಡಿಗೆ ಪೊಲೆನಾ ಅಂಜನಾ ಪವನೌವಾ ಎಂಬ ಮಗಳು ಮತ್ತು ಮಾರ್ಕ್ ಶಂಕರ್ ಪವನೌವಿಚ್ ಎಂಬ ಮಗನಿದ್ದಾನೆ.


ರೂಪದರ್ಶಿಯಾಗಿರುವುದರ ಹೊರತಾಗಿ, ಅನ್ನಾ ಉದ್ಯಮಿಯೂ ಹೌದು ಎಂದು ಹೇಳಲಾಗುತ್ತದೆ. ಅನ್ನಾ ಸಿಂಗಾಪುರದಲ್ಲಿರುವ ಹೋಟೆಲ್ ನ ಮಾಲೀಕರು ಎಂದು ಮೂಲವೊಂದು ಹೇಳಿದೆ.


ಅನ್ನಾ ಅವರು ರಷ್ಯಾ ಮತ್ತು ಸಿಂಗಾಪುರದಲ್ಲಿ ತಮ್ಮ ಸ್ವಂತ ಮನೆಗಳನ್ನು ಹೊಂದಿದ್ದು, 1800 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತದೆ.

Published by:Divya D
First published: