Dilip Kumar - ಹೆಸರು ದಿಲೀಪ್ ಕುಮಾರ್ ಆದರೂ ಇವರು ಬಾಲಿವುಡ್​ನ ಮೊದಲ ಖಾನ್

ಬಾಂಬೆ ಟಾಕೀಸ್ ಮಾಲಕಿ ದೇವಿಕಾ ರಾಣಿ ಅವರು 1943ರಲ್ಲಿ ಮೊಹಮ್ಮದ್ ಯೂಸುಫ್ ಖಾನ್ ಅವರಿಗೆ ದಿಲೀಪ್ ಕುಮಾರ್ ಎಂದು ಸ್ಕ್ರೀನ್ ನೇಮ್ ಕೊಟ್ಟರು. ಅಲ್ಲಿಂದಾಜೆ ದಿಲೀಪ್ ಕುಮಾರ್ ಬಾಲಿವುಡ್ನಲ್ಲಿ ಹೊಸ ಪರ್ವವನ್ನೇ ಸೃಷ್ಟಿಸಿದರು.

ದಿಲೀಪ್ ಕುಮಾರ್

ದಿಲೀಪ್ ಕುಮಾರ್

  • News18
  • Last Updated :
  • Share this:
ಬಾಲಿವುಡ್ ಕಂಡ ಅತ್ಯಂತ ಪ್ರಭಾವಿ ಮತ್ತು ಪ್ರತಿಭಾನ್ವಿತ ನಟರಲ್ಲಿ ಒಬ್ಬರಾದ ದಿಲೀಪ್ ಕುಮಾರ್ 98ರ ಇಳಿ ಪ್ರಾಯದಲ್ಲಿ ಅವರು ಇಹಲೋಕ ತ್ಯಜಿಸಿದ್ದಾರೆ. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಪದ್ಮ ವಿಭೂಷಣ ಸೇರಿದಂತೆ ಹಲವು ದಾಖಲೆ, ಪ್ರಶಸ್ತಿ, ಗೌರವಗಳು ಅವರನ್ನ ಅರಸಿ ಹೋಗಿವೆ. ಅನೇಕ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿದ ದಿಲೀಪ್ ಕುಮಾರ್ ಬಾಲಿವುಡ್​ನ ಸೂಪರ್ ಸ್ಟಾರ್. ಅಂದಹಾಗೆ, ಬಾಲಿವುಡ್​ನ ಖಾನ್ ದಾನ್ ಎಂದರೆ ಸಲ್ಮಾನ್, ಶಾರುಕ್ ಮತ್ತು ಆಮೀರ್ ಖಾನ್ ಹೆಸರು ನೆನಪಿಗೆ ಬರುತ್ತವೆ. ಆದರೆ, ದಿಲೀಪ್ ಕುಮಾರ್ ಅವರನ್ನ ಬಾಲಿವುಡ್​ನ ಮೊದಲ ಖಾನ್ ಎಂದು ಕರೆಯಲಾಗುತ್ತದೆ. ಇವರ ಮೂಲ ಹೆಸರು ಮೊಹಮ್ಮದ್ ಯೂಸುಫ್ ಖಾನ್. 1922. ಡಿಸೆಂಬರ್ 11ರಂದು ಅಂದಿನ ಅವಿಭಿತ ಭಾರತ ಹಾಗೂ ಈಗಿನ ಪಾಕಿಸ್ತಾನದಲ್ಲಿರುವ ಪೇಶಾವರದಲ್ಲಿ ಜನಿಸಿದ ಅವರು ಬಾಲ್ಯದಲ್ಲಿ ರಾಜ್ ಕಪೂರ್ ಅವರ ಒಡನಾಟದಲ್ಲಿ ಬೆಳೆದು ಮುಂದೆ ಆ ಮಹಾನ್ ನಟನಷ್ಟೇ ಎತ್ತರಕ್ಕೆ ಏರಿದ್ದು ಇತಿಹಾಸ. ಕೆಲ ಮೂಲಗಳ ಪ್ರಕಾರ, ಮುಸ್ಲಿಮ್ ಹೆಸರನ್ನ ಇಟ್ಟುಕೊಂಡರೆ ಜನರಿಗೆ ಇಷ್ಟವಾಗುವುದಿಲ್ಲ ಎಂಬ ಕಾರಣಕ್ಕೆ ಮೊಹಮ್ಮದ್ ಯೂಸುಫ್ ಖಾನ್ ಅವರು ತಮ್ಮ ಸಿನಿಮಾಗಳಿಗಾಗಿ ತಮ್ಮ ಹೆಸರನ್ನ ದಿಲೀಪ್ ಕುಮಾರ್ ಎಂದು ಬದಲಾಯಿಸಿಕೊಂಡರಂತೆ. ಆದರೆ, ಆರು ದಶಕಗಳ ಕಾಲ ಬಾಲಿವುಡ್ ಆಳಿದ ಅವರು ಹೆಸರಿಗಿಂತ ತಮ್ಮ ನಟನಾ ಸಾಮರ್ಥ್ಯದ ಮೂಲಕ ಜನಮನದಲ್ಲಿ ಅಚ್ಚಳಿಯದೇ ಉಳಿದಿರುವುದಂತೂ ದಿಟ.

ಮನೆ ಬಿಟ್ಟು ಓಡಿ ಹೋದವರು ಸಿನಿರಂಗ ಪ್ರವೇಶಿಸಿದ್ದು ಹೀಗೆ…: ದಿಲೀಪ್ ಕುಮಾರ್ ಹದಿಹರೆಯದಲ್ಲಿರುವಾಗಲೇ ತಮ್ಮ ತಂದೆಯೊಂದಿಗೆ ಜಗಳ ಮಾಡಿಕೊಂಡು ಮುಂಬೈನ ಮನೆಯಿಂದ ಓಡಿ ಹೋಗಿ ಮಹಾರಾಷ್ಟ್ರದ ಪುಣೆ ನಗರಕ್ಕೆ ಬಂದಿಳಿದಿದ್ದರು. ಅವರ ಇಂಗ್ಲೀಷ್ ಜ್ಞಾನ ಇಲ್ಲಿ ಅವರಿಗೆ ಕೆಲಸ ಸಿಗಲು ಸುಲಭ ಮಾಡಿದ್ದವು. ಸ್ವಲ್ಪ ಕಾಲದ ಬಳಿಕ ಇವರು ಮುಂಬೈಗೆ ವಾಪಸ್ಸಾಗಿ ತಮ್ಮ ಕುಟುಂಬದ ಪಾಲನೆಗೆ ಬ್ಯುಸಿನೆಸ್ ಮಾಡುವ ಆಲೋಚನೆಯಲ್ಲಿದ್ದರು. ಆಗ ಡಾ. ಮಸನಿ ಮೂಲಕ ದಿಲೀಪ್ ಕುಮಾರ್ ಅವರಿಗೆ ಬಾಂಬೆ ಟಾಕೀಸ್ ಮಾಲಕಿ ದೇವಿಕಾ ರಾಣಿ ಅವರ ಪರಿಚಯ ಆಯಿತು. ಅವರು ದಿಲೀಪ್ ಕುಮಾರ್ ಅವರಿಗೆ 1,250 ರೂ ಸಂಬಳಕ್ಕೆ ಕೆಲಸಕ್ಕೆ ಸೇರಿಸಿಕೊಂಡರು. ಆಗಿನ್ನೂ ಆವರು ಮೊಹಮ್ಮದ್ ಯೂಸುಫ್ ಆಗಿದ್ದರು. ದಿಲೀಪ್ ಕುಮಾರ್ ಎಂದು ನಾಮಕರಣ ಮಾಡಿದ್ದು ದೇವಿಕಾ ರಾಣಿ ಅವರೆಯೇ.

1944ರಲ್ಲಿ ಜ್ವರ್ ಭಾಟಾ ಸಿನಿಮಾ ಮೂಲಕ ದಿಲೀಪ್ ಕುಮಾರ್ ಅವರ ಬಾಲಿವುಡ್ ಪ್ರಯಾಣ ಆರಂಭವಾಯಿತು. 1998ರವರೆಗೂ ಸಾಗಿದ ಅವ ಸಿನಿಪಯಣದಲ್ಲಿ 62 ಚಿತ್ರಗಳಲ್ಲಿ ನಟಿಸಿದ್ದಾರೆ. ಅನೇಕ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿದ್ಧಾರೆ. ಅಂದಾಜ್, ದೀದಾರ್, ದೇವದಾಸ್, ಮುಘಲ್-ಇ-ಅಝಂ, ದಾಗ್, ಮಧುಮತಿ, ಕೊಹಿನೂರ್, ಲೀಡರ್ ಇತ್ಯಾದಿ ಅನೇಕ ಚಿತ್ರಗಳಲ್ಲಿ ಇವರ ನಟನೆ ಅವಿಸ್ಮರಣೀಯವಾಗಿ ಈಗಲೂ ಉಳಿದಿದೆ. ಇವರ ದೇವದಾಸ್ ಮತ್ತು ಮೊಘಲ್-ಇ-ಅಜಂ ಸಿನಿಮಾಗಳು ಎವರ್ ಗ್ರೀನ್ ಹಿಟ್ ಆಗಿವೆ. ಮೊಘಲ್-ಇ-ಅಜಂ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಬಾಕ್ಸಾಫೀಸ್ ಗಳಿಕೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಈಗಿನ ಹಣದ ಲೆಕ್ಕಾಚಾರದಲ್ಲಿ ಆ ಚಿತ್ರದ ಗಳಿಕೆ 2,000 ಕೋಟಿಗೂ ಹೆಚ್ಚು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: Dilip Kumar Passes Away: ಹಿರಿಯ ನಟ ದಿಲೀಪ್ ಕುಮಾರ್ ಇನ್ನಿಲ್ಲ, ಇಂದು ಮುಂಜಾನೆ ಕೊನೆಯುಸಿರೆಳೆದ ಭಾರತೀಯ ಚಿತ್ರರಂಗದ ದಂತಕತೆ

ದಿಲೀಪ್ ಕುಮಾರ್ ಅವರಿಗೆ ಭಾರತೀಯ ಸಿನಿಮಾ ಜಗತ್ತಿನ ಅತ್ಯುಚ್ಚ ಪ್ರಶಸ್ತಿ ದಾದಾ ಸಾಹೇಬ್ ಫಾಲ್ಕೆ ಲಭಿಸಿದೆ. 2015ರಲ್ಲಿ ಕೇಂದ್ರ ಸರ್ಕಾರ ಇವರಿಗೆ ಪದ್ಮವಿಭೂಷಣ ನೀಡಿ ಗೌರವಿಸಿದೆ. 2000ರಲ್ಲಿ ರಾಜ್ಯಸಭಾ ಸದಸ್ಯರೂ ಆಗಿದ್ದರು. 1998ರಲ್ಲಿ ಪಾಕಿಸ್ತಾನ ಸರ್ಕಾರ ದಿಲೀಪ್ ಕುಮಾರ್ ಅವರಿಗೆ ನಿಶಾನ್-ಇ-ಇಮ್ತಿಯಾಜ್ ಪ್ರಶಸ್ತಿ ನೀಡಿ ಗೌರವಿಸಿದೆ. ಇವಲ್ಲದೇ ದಿಲೀಪ್ ಕುಮಾರ್ ಅತ್ಯುತ್ತಮ ನಟನೆಗಾಗಿ 8 ಫಿಲಂ ಫೇರ್ ಪ್ರಶಸ್ತಿಗಳನ್ನ ಗೆದ್ದಿದ್ದಾರೆ. ಈ ದಾಖಲೆಯನ್ನ ಇನ್ನೂ ಯಾರೂ ಮುರಿದಿಲ್ಲ. ಶಾರುಕ್ ಖಾನ್ ಅವರು ಮಾತ್ರ ಈ ದಾಖಲೆ ಸರಿಗಟ್ಟಿದ್ದಾರೆ.
Published by:Vijayasarthy SN
First published: