KL Rahul: ಭಾವಿ ಮಾವ ಸುನೀಲ್​ ಶೆಟ್ಟಿ ಜೊತೆ ಕಾಣಿಸಿಕೊಂಡ ಕೆ.ಎಲ್​.ರಾಹುಲ್​: ಶೀಘ್ರ ಮೇವ ಕಲ್ಯಾಣ ಪ್ರಾಪ್ತಿರಸ್ತು!

KL Rahul: ಸುನೀಲ್​ ಶೆಟ್ಟಿ , ಆತಿಯಾ ಶೆಟ್ಟಿ ಸೇರಿ ಹಲವರು ಆಗಮಿಸಿದ್ದರು. ಈ ಪ್ರೀಮಿಯರ್​ ಶೋಗೆ ಕ್ರಿಕೆಟಿಗ ರಾಹುಲ್​ ಕೂಡ ಆಗಮಿಸಿದ್ದರು. ಇದೇ ಮೊದಲ ಬಾರಿಗೆ ಸುನೀಲ್ ಶೆಟ್ಟಿ ಜೊತೆ ಕೆ.ಎಲ್​.ರಾಹುಲ್​ ಕಾಣಿಸಿಕೊಂಡಿದ್ದಾರೆ. ಇದನ್ನು ಕಂಡ ಫ್ಯಾನ್ಸ್​ ಕೆ.ಎಲ್​.ರಾಹುಲ್ ಹಾಗೂ ಆತಿಯಾ ಶೆಟ್ಟಿ ಮದುವೆಗೆ ಗ್ರೀನ್​ ಸಿಗ್ನಲ್​ ಸಿಕ್ಕಿದೆ ಎಂದು ಕಮೆಂಟ್​ ಮಾಡಿದ್ದಾರೆ.

ಸುನೀಲ್​ ಶೆಟ್ಟಿ ಜೊತೆ ಕೆ.ಎಲ್.ರಾಹುಲ್​

ಸುನೀಲ್​ ಶೆಟ್ಟಿ ಜೊತೆ ಕೆ.ಎಲ್.ರಾಹುಲ್​

  • Share this:
ಕ್ರಿಕೆಟ್​ ಆಟಗಾರರು(Cricket Players) ಹಾಗೂ ಚಿತ್ರರಂಗಕ್ಕೂ ಅವಿನಾಭಾವ ಸಂಬಂಧ. ಅದೆಷ್ಟೋ ಕ್ರಿಕೆಟ್​ ಆಟಗಾರರು ಚಿತ್ರನಟಿಯರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇತ್ತೀಚಿಗೆ ಟೀಂ ಇಂಡಿಯಾದ ಓಪನಿಂಗ್​ ಬ್ಯಾಟ್ಸ್​​ಮಾನ್​ ಕನ್ನಡಿಗೆ ಕೆ.ಎಲ್​.ರಾಹುಲ್(KL Rahul)​ ಹಾಗೂ ಆತಿಯಾ ಶೆಟ್ಟಿ(Athiya Shetty) ನಡುವೆ  ಪ್ರೀತಿ ಇರುವ ವಿಚಾರವನ್ನು ರಾಹುಲ್​ ಅವರೇ ಸ್ಪಷ್ಟ ಪಡಿಸಿದ್ದರು. ಆತಿಯಾ ಶೆಟ್ಟಿ ಬಾಲಿವುಡ್​ ನಟ ಸುನೀಲ್​ ಶೆಟ್ಟಿ(Sunil Shetty) ಅವರ ಪುತ್ರಿ. ಕಳೆದ ಕೆಲ ತಿಂಗಳುಗಳಿಂದ ಇವರಿಬ್ಬರ ನಡುವೆ ಇರುವ ಪ್ರೀತಿ(Love) ಬಗ್ಗೆ ಅನೇಕ ಊಹಾಪೋಹಗಳು ಕೇಳಿಬಂದಿದ್ದವು. ಈ ಜೋಡಿ ಹಕ್ಕಿಗಳು ಎಲ್ಲೇ ಹೋದರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಎರಡು ಕುಟುಂಬಸ್ಥರು ಇವರ ಪ್ರೇಮಕ್ಕೆ ಗ್ರೀನ್​ಸಿಗ್ನಲ್​ ಕೊಟ್ಟಿದ್ದಾರಂತೆ. ಅಷ್ಟೇ ಯಾಕೆ ಶೀಘ್ರದಲ್ಲೆ ರಾಹುಲ್​ ಹಾಗೂ ಆತಿಯಾ ಶೆಟ್ಟಿ ವಿವಾಹ(Marriage)ವಾಗಲಿದ್ದಾರೆ ಎಂಬ ವಿಚಾರವೂ ಕೇಳಿಬಂದಿದೆ. ಇದೇ ಮೊದಲ ಬಾರಿಗೆ ಕೆ.ಎಲ್​. ರಾಹುಲ್, ಸುನೀಲ್​ ಶೆಟ್ಟಿ ಹಾಗೂ ಅವರ ಕುಟುಂಬಸ್ಥರೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಫೋಟೋ(Photo)ಗಳು ಇದೀಗ ವೈರಲ್​ ಆಗುತ್ತಿವೆ. ಶೀಘ್ರದಲ್ಲೇ ಇಬ್ಬರು ಹಸೆಮಣೆ ಏರುವುದು ಕನ್ಫರ್ಮ್​ ಆಗಿದೆ. ​ಈ ಮೂಲಕ ಮತ್ತೊಂದು ಜೋಡಿ ಯಶಸ್ವಿಯಾಗಿ ತಮ್ಮ ಪ್ರೀತಿಯನ್ನು ಕಾಪಾಡಿಕೊಂಡು ಮದುವೆ ಹಂತಕ್ಕೆ ಬಂದಿದ್ದಾರೆ. 

ತಡಪ್​ ಸಿನಿಮಾದ ಪ್ರೀಮಿಯರ್​ ಶೋಗೆ ಬಂದಿದ್ದ ರಾಹುಲ್​!

ಬಾಲಿವುಡ್​ನಲ್ಲಿ ನಾಳೆ ತಡಪ್​ ಸಿನಿಮಾ ರಿಲೀಸ್​ ಆಗಲಿದೆ. ಆದರೆ ನಿನ್ನೆ ಈ ಸಿನಿಮಾದ ಪ್ರೀಮಿಯರ್​ ಶೋ ಆಯೋಜಿಸಲಾಗಿತ್ತು. ಸುನೀಲ್​ ಶೆಟ್ಟಿ , ಆತಿಯಾ ಶೆಟ್ಟಿ ಸೇರಿ ಹಲವರು ಆಗಮಿಸಿದ್ದರು. ಈ ಪ್ರೀಮಿಯರ್​ ಶೋಗೆ ಕ್ರಿಕೆಟಿಗ ರಾಹುಲ್​ ಕೂಡ ಆಗಮಿಸಿದ್ದರು. ಇದೇ ಮೊದಲ ಬಾರಿಗೆ ಸುನೀಲ್ ಶೆಟ್ಟಿ ಜೊತೆ ಕೆ.ಎಲ್​.ರಾಹುಲ್​ ಕಾಣಿಸಿಕೊಂಡಿದ್ದಾರೆ. ಇದನ್ನು ಕಂಡ ಫ್ಯಾನ್ಸ್​ ಕೆ.ಎಲ್​.ರಾಹುಲ್ ಹಾಗೂ ಆತಿಯಾ ಶೆಟ್ಟಿ ಮದುವೆಗೆ ಗ್ರೀನ್​ ಸಿಗ್ನಲ್​ ಸಿಕ್ಕಿದೆ. ಹೀಗಾಗಿ ಆತಿಯಾ ಶೆಟ್ಟಿ ಕುಟುಂಬಸ್ಥರೊಂದಿಗೆ ಕೆ.ಎಲ್​.ರಾಹುಲ್​ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಕಮೆಂಟ್​ ಮಾಡುತ್ತಿದ್ದಾರೆ. ಇನ್ನೂ ಆತಿಯಾ ಶೆಟ್ಟಿ ಅವರ ಹುಟ್ಟುಹಬ್ಬದ ದಿನ ರಾಹಲ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹ್ಯಾಪಿ ಬರ್ತ್​ಡೇ ಮೈ ಲವ್​ ಎಂದು ಬರೆದುಕೊಂಡಿದ್ದರು.

ಇದನ್ನು ಓದಿ : IPL 2022- ಐಪಿಎಲ್​ನಿಂದ ಕೆಎಲ್ ರಾಹುಲ್, ರಷೀದ್ ಖಾನ್ ಒಂದು ವರ್ಷ ನಿಷೇಧ? ಕಾರಣ ಇದು

ಆತಿಯಾ ಪಕ್ಕ ನಿಲ್ಲುವಂತೆ ಹೇಳಿದ ಸುನೀಲ್​ ಶೆಟ್ಟಿ!

ತಡಪ್​ ಪ್ರೀಮಿಯರ್​ ಶೋ ಮುಗಿದ ಬಳಿಕ ಎಲ್ಲರೂ ಕ್ಯಾಮರಾಗೆ ಪೋಸ್​ ನೀಡುತ್ತಿದ್ದರು. ಈ ವೇಳೆ ರಾಹುಲ್​ ಕೂಡ ಅಲ್ಲಿಗೆ ಬಂದಿದ್ದಾರೆ. ಎಲ್ಲಿ ನಿಂತುಕೊಳ್ಳಬೇಕೆಂದು ತಿಳಿಯದೇ ಅತ್ತ ಇತ್ತ ನೋಡಿದ್ದಾರೆ. ಈ ವೇಳೆ ಸುನೀಲ್​ ಶೆಟ್ಟಿ ರಾಹುಲ್​ರನ್ನು ಕರೆದು ಆತಿಯಾ  ಪಕ್ಕ ನಿಲ್ಲುವಂತೆ ಹೇಳಿದ್ದಾರೆ. ಸುನೀಲ್​ ಶೆಟ್ಟಿ ಹೇಳಿದಂತೆ ಆತಿಯಾ ಪಕ್ಕ ನಿಂತು ರಾಹುಲ್​ ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ  ಸಖತ್​ ವೈರಲ್ ಆಗುತ್ತಿದೆ. ಇದನ್ನು ಕಂಡ ಆತಿಯಾ ಮನಸ್ಸಿನಲ್ಲೇ ನಕ್ಕು ಕ್ಯಾಮರಾಗೆ ಪೋಸ್​ ನೀಡಿದ್ದಾರೆ.



ಇದನ್ನು ಓದಿ : Athiya Shetty ಹುಟ್ಟುಹಬ್ಬದ ದಿನ KL Rahul ಬಹುದೊಡ್ಡ ಘೋಷಣೆ; ಕುಣಿದು ಕುಪ್ಪಳಿಸಿದ ಅಭಿಮಾನಿಗಳು

IPL 2022- ಐಪಿಎಲ್​ನಿಂದ  ರಾಹುಲ್  ಒಂದು ವರ್ಷ ನಿಷೇಧ? 

ಇತ್ತ ಆತಿಯಾ ಶೆಟ್ಟಿ ಫ್ಯಾಮಿಲಿ ಜೊತೆ ರಾಹುಲ್​ ಸಖತ್​ ಪೋಸ್​ ನೀಡಿದ್ದಾರೆ. ಅತ್ತ IPL 2022- ಐಪಿಎಲ್​ನಿಂದ  ರಾಹುಲ್  ಒಂದು ವರ್ಷ ನಿಷೇಧವಾಗುವ ಆತಂಕ ಎದುರಾಗಿದೆ. ಅವರ ತಂಡಗಳು ಇನ್ನೂ ರಿಟೆಂಶನ್ ಲಿಸ್ಟ್ (Players’ retention list) ಅನ್ನು ಸಲ್ಲಿಸುವ ಮುನ್ನವೇ ಬೇರೊಂದು ಐಪಿಎಲ್ ತಂಡವನ್ನ ಸಂಪರ್ಕಿಸಿ ಮಾತುಕತೆ ನಡೆಸಿರುವ ಆರೋಪ ಎದುರಿಸುತ್ತಿದ್ದಾರೆ.  ಒಂದು ವೇಳೆ, ಈ ಆರೋಪ ನಿಜವೇ ಆದಲ್ಲಿ ಕೆಎಲ್ ರಾಹುಲ್ ಗೆ ಒಂದು ವರ್ಷ ಬ್ಯಾನ್ ಹೇರುವ ಸಾಧ್ಯತೆ ದಟ್ಟವಾಗಿದೆ.
Published by:Vasudeva M
First published: