ಪೈಲ್ವಾನ್ ಚಿತ್ರ ನಟನ ಮಗಳೊಂದಿಗೆ ಕ್ರಿಕೆಟಿಗ ಕೆ.ಎಲ್ ರಾಹುಲ್ ಡೇಟಿಂಗ್..?

ಈ ಹಿಂದೆ ಕೂಡ ರಾಹುಲ್ ಹೆಸರು ಬಣ್ಣದ ಲೋಕದ ನಟಿಮಣಿಯರ ಹೆಸರಿನೊಂದಿಗೆ ಅಂಟಿಕೊಂಡಿತ್ತು. ಕನ್ನಡದ ಚೆಲುವೆ ನಿನ್ನ ನೋಡಲು ಮತ್ತು ಜನ್ನತ್ ಹಾಗೂ ಬುಡ್ಡಾ ಹೋಗ ತೆರಾ ಬಾಪ್ ಸೇರಿದಂತೆ ಅನೇಕ ಹಿಂದಿ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಸೋನಾಲ್ ಜತೆ ಕನ್ನಡಿಗ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು.

zahir | news18
Updated:June 28, 2019, 7:50 PM IST
ಪೈಲ್ವಾನ್ ಚಿತ್ರ ನಟನ ಮಗಳೊಂದಿಗೆ ಕ್ರಿಕೆಟಿಗ ಕೆ.ಎಲ್ ರಾಹುಲ್ ಡೇಟಿಂಗ್..?
ಕೆಎಲ್ ರಾಹುಲ್- ಆತಿಯಾ ಶೆಟ್ಟಿ
  • News18
  • Last Updated: June 28, 2019, 7:50 PM IST
  • Share this:
ಬಾಲಿವುಡ್​ ಹಾಗೂ ಕ್ರಿಕೆಟಿಗೂ ಅವಿನಾಭಾವ ಸಂಬಂಧವಿದೆ. ಅದಕ್ಕೆ ಸಾಕ್ಷಿ ಎಂಬಂತೆ ಆಗಾಗ್ಗೆ ಟೀಂ ಇಂಡಿಯಾದ ಆಟಗಾರರ ಹೆಸರುಗಳು ಬಾಲಿವುಡ್ ನಟಿಮಣಿಯರೊಂದಿಗೆ ತಳುಕು ಹಾಕಿಕೊಳ್ಳುತ್ತವೆ. ಇದೀಗ ಮತ್ತೊಮ್ಮೆ ಭಾರತ ತಂಡ ಆರಂಭಿಕ ಆಟಗಾರ ಕನ್ನಡಿಗ ಕೆ.ಎಲ್ ರಾಹುಲ್ ಹೆಸರು ಖ್ಯಾತ ಬಾಲಿವುಡ್ ನಟನ ಮಗಳೊಂದಿಗೆ ಕೇಳಿ ಬಂದಿದೆ.​

ಅತ್ತ ಕಡೆ ವಿಶ್ವಕಪ್​ಗಾಗಿ ಭರ್ಜರಿ ಪ್ರದರ್ಶನ ನೀಡುತ್ತಿರುವ​ ರಾಹುಲ್ ಹೆಸರು ಈ ಬಾರಿ ಆತಿಯಾ ಶೆಟ್ಟಿಯೊಂದಿಗೆ ಹರಿದಾಡುತ್ತಿದೆ. ಇಲ್ಲಿ ಶೆಟ್ಟಿ ಎಂಬ ಸರ್​ನೇಮ್ ಕಾಣಿಸಿಕೊಂಡಿದ್ದರಿಂದ ನಟಿಗೂ ಕನ್ನಡಕ್ಕೂ ಸಂಬಂಧವಿದೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ಹೌದು, ಆತಿಯಾ ಖ್ಯಾತ ಬಾಲಿವುಡ್​ ನಟ ಸುನೀಲ್ ಶೆಟ್ಟಿ ಅವರ ಮಗಳು.

ರಾಹುಲ್


ಸಲ್ಮಾನ್ ಖಾನ್ ನಿರ್ಮಾಣದ 'ಹೀರೋ' ಚಿತ್ರದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದ ಆತಿಯಾ ಸದ್ಯ ರಾಹುಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪುರಾವೆ ಎಂಬಂತೆ ಆಕಾಂಕ್ಷ ರಂಜನ್ ಕಪೂರ್ ಎಂಬವರು ಫೋಟೋವೊಂದನ್ನು ಸಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಎಡದಿಂದ ಮೂರನೇಯವರು ಆತಿಯಾ ಶೆಟ್ಟಿ


ಈ ಫೋಟೋ ವೈರಲ್ ಆಗುತ್ತಿದ್ದಂತೆ ಆತಿಯಾ ಹಾಗೂ ರಾಹುಲ್ ಕಳೆದ ಫೆಬ್ರವರಿಯಿಂದಲೇ ಜೊತೆಯಾಗಿ ಓಡಾಡುತ್ತಿದ್ದಾರೆ ಎಂಬ ಸುದ್ದಿಯೊಂದು ಬಹಿರಂಗವಾಗಿದೆ. ಆದರೆ ತಮ್ಮ ಪ್ರೇಮ್​ ಕಹಾನಿಯನ್ನು ಬಹಿರಂಗವಾಗದಂತೆ ಕಾಪಾಡಿಕೊಂಡಿರುವ ಆತಿಯಾ ಸದ್ಯ ಇಂಗ್ಲೆಂಡ್​ನಲ್ಲಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋ ಕೂಡ ಇಂಗ್ಲೆಂಡ್​ನಲ್ಲಿ ತೆಗೆಯಲಾಗಿದೆ ಎಂದು ಹೇಳಲಾಗುತ್ತಿದೆ.

ಆತಿಯಾ ಶೆಟ್ಟಿ
ಈ ಹಿಂದೆ ಕೂಡ ರಾಹುಲ್ ಹೆಸರು ಬಣ್ಣದ ಲೋಕದ ನಟಿಮಣಿಯರ ಹೆಸರಿನೊಂದಿಗೆ ಅಂಟಿಕೊಂಡಿತ್ತು. ಕನ್ನಡದ 'ಚೆಲುವೆ ನಿನ್ನ ನೋಡಲು' ಮತ್ತು 'ಜನ್ನತ್' ಹಾಗೂ 'ಬುಡ್ಡಾ ಹೋಗ ತೆರಾ ಬಾಪ್' ಸೇರಿದಂತೆ ಅನೇಕ ಹಿಂದಿ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಸೋನಾಲ್ ಜತೆ ಕನ್ನಡಿಗ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್​ಗಳು ಬಿಟೌನ್​ನಲ್ಲಿ ಹರಿದಾಡಿದ್ದವು.

ಆತಿಯಾ ಶೆಟ್ಟಿ


ಇದಕ್ಕೂ ಮುನ್ನ 'ಮುನ್ನಾ ಮೈಕೆಲ್' ಚಿತ್ರನಟಿ ನಿಧಿ ಅರ್ಗವಾಲ್​ ಜತೆ ರಾಹುಲ್​ಗೆ ಪ್ರೇಮಾಂಕುರವಾಗಿದೆ ಎನ್ನಲಾಗಿತ್ತು. ಇದೀಗ ರಾಹುಲ್ ಸುತ್ತ 'ಪೈಲ್ವಾನ್' ಚಿತ್ರ ನಟ ಸುನೀಲ್ ಶೆಟ್ಟಿ ಅವರ ಮಗಳ ಹೆಸರು ಕೇಳಿ ಬರುತ್ತಿದೆ.

First published:June 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ