KL Rahul-Athiya Shetty: ರಾಹುಲ್‌, ಅಥಿಯಾ ಶೆಟ್ಟಿ ಮದುವೆಗೆ ಈ ಸ್ಪೆಷಲ್ ಲೊಕೇಷನ್ ಫಿಕ್ಸ್​!

ಅಥಿಯಾ ಶೆಟ್ಟಿ ಮತ್ತು ಕೆ.ಎಲ್ ರಾಹುಲ್‌ ಜೋಡಿಗಳು ಯಾವಾಗ ವಿವಾಹವಾಗುತ್ತಾರೆ, ಎಲ್ಲಿ ಮದುವೆಯಾಗುತ್ತಾರೆ ಎಂದು ಕಾತುರದಿಂದ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಅವರ ವಿವಾಹದ ಬಗ್ಗೆ ಹೊಸ ಅಪ್ಡೇಟ್‌ ಒಂದು ಹೊರಬಿದ್ದಿದ್ದು, ಇತ್ತೀಚಿನ ವರದಿಯೊಂದು ಸೆಲೆಬ್ರಿಟಿಗಳ ವಿವಾಹ ಇನ್ನೇನು ನೆರವೇರಲಿದ್ದು, ಸ್ಥಳ ಕೂಡ ಫಿಕ್ಸ್‌ ಆಗಿದೆ ಎಂದಿದೆ.

ಅಥಿಯಾ ಶೆಟ್ಟಿ ಮತ್ತು ಕೆ.ಎಲ್ ರಾಹುಲ್‌

ಅಥಿಯಾ ಶೆಟ್ಟಿ ಮತ್ತು ಕೆ.ಎಲ್ ರಾಹುಲ್‌

  • Share this:
ಕ್ರಿಕೆಟ್‌ ಲೋಕದ ಹ್ಯಾಂಡ್‌ ಸಮ್‌ ಹಂಕ್‌, ಟೀಂ ಇಂಡಿಯಾದ ವೈಸ್ ಕ್ಯಾಪ್ಟನ್ ರಾಹುಲ್‌ (Rahul) ಎಂಗೇಜ್‌ ಆಗಿರುವ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದೆ. ಹುಡುಗಿ ಬೇರೆ ಯಾರು ಅಲ್ಲ, ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ (Suniel Shetty)   ಮಗಳು ಅಥಿಯಾ ಶೆಟ್ಟಿ (Athiya Shetty). ಪ್ರೀತಿಯ ವಿಚಾರವನ್ನು ಮುಕ್ತವಾಗಿ ಹೇಳಿಕೊಂಡಿರುವ ಇಬ್ಬರೂ ಹಸೆಮಣೆ ಏರಲು ಸಹ ಸಿದ್ಧರಾಗಿದ್ದಾರೆ. ಆದರೆ ಇಬ್ಬರ ವಿವಾಹ (Wedding) ಯಾವಾಗ ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ. ಮುಂದಿನ ವರ್ಷ ಇಬ್ಬರು ಮದುವೆಯಾಗುತ್ತಾರೆ ಎನ್ನಲಾಗಿದ್ದರೂ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.

ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಮದುವೆಗೆ ಜಾಗ ಫಿಕ್ಸ್
ಈ ಮುದ್ದಾದ ಜೋಡಿಗಳು ಯಾವಾಗ ವಿವಾಹವಾಗುತ್ತಾರೆ, ಎಲ್ಲಿ ಮದುವೆಯಾಗುತ್ತಾರೆ ಎಂದು ಕಾತುರದಿಂದ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಅಥಿಯಾ ಶೆಟ್ಟಿ ಮತ್ತು ಕೆ. ಎಲ್. ರಾಹುಲ್ ಅವರ ವಿವಾಹದ ಬಗ್ಗೆ ಹೊಸ ಅಪ್ಡೇಟ್‌ ಒಂದು ಹೊರ ಬಿದ್ದಿದ್ದು, ಇತ್ತೀಚಿನ ವರದಿಯೊಂದು ಸೆಲೆಬ್ರಿಟಿಗಳ ವಿವಾಹ ಇನ್ನೇನು ನೆರವೇರಲಿದ್ದು, ಸ್ಥಳ ಕೂಡ ಫಿಕ್ಸ್‌ ಆಗಿದೆ ಎಂದಿದೆ.

ಸುನೀಲ್ ಶೆಟ್ಟಿ ಮನೆ ʼಜಹಾನ್ʼ ನಲ್ಲಿ ಮದುವೆ!?
ದಿನಾಂಕದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗದಿದ್ದರೂ, ಇಬ್ಬರು ಖಂಡಾಲಾದಲ್ಲಿರುವ ಸುನೀಲ್ ಶೆಟ್ಟಿ ಅವರ ಮನೆ ʼಜಹಾನ್ʼ ನಲ್ಲಿ ಮದುವೆಯಾಗಲಿದ್ದಾರೆ ಎಂಬುದರ ಬಗ್ಗೆ ಸುದ್ದಿಯಾಗುತ್ತಿದೆ. ಅಥಿಯಾ ಶೆಟ್ಟಿ ಮತ್ತು ಕೆ. ಎಲ್. ರಾಹುಲ್ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಸ್ಟಾರ್‌ ಕಪಲ್‌ ವಿವಾಹವು ಮನೆಯಲ್ಲಿಯೇ ಜರುಗಲಿದೆಯಂತೆ. ಹೋಟೆಲ್‌, ರೆಸಾರ್ಟ್‌ ಬದಲಿಗೆ ಅಥಿಯಾ ಶೆಟ್ಟಿ ಮನೆ ಅಂದರೆ ಸುನೀಲ್ ಶೆಟ್ಟಿ ಅವರ ಮನೆ ʼಜಹಾನ್ʼನಲ್ಲಿ ಮದುವೆಯಾಗಲು ಈ ಜೋಡಿಗಳು ನಿರ್ಧರಿಸಿದ್ದಾರಂತೆ ಎಂದು ಬಲ್ಲ ಮೂಲಗಳ ವರದಿಗಳು ಹೇಳುತ್ತಿವೆ. ಅಲ್ಲದೇ ಮದುವೆ ಆಯೋಜಕರು ಖಂಡಾಲಾಗೆ ಭೇಟಿ ನೀಡಿ, ಮನೆಯನ್ನು ವೀಕ್ಷಿಸಿದ್ದಾರೆ ಎನ್ನಲಾಗಿದೆ.

ರಾಹುಲ್‌ ವೇಳಾಪಟ್ಟಿ ನೋಡಿಕೊಂಡು ಮದುವೆ ಡೇಟ್‌ ನಿಗದಿ
ಟೀಂ ಇಂಡಿಯಾದ ವೈಸ್ ಕ್ಯಾಪ್ಟನ್, ಐಪಿಎಲ್​ನ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿರುವ ಕೆ.ಎಲ್. ರಾಹುಲ್ ಅವರ ಕೆಲಸದ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಮದುವೆ ದಿನಾಂಕವನ್ನು ನಿಗದಿಪಡಿಸಲು ನಿರ್ಧರಿಸಲಾಗಿದೆ.

kl rahul and athiya shetty will get married within the next three months
ಕೆಎಲ್‌ ರಾಹುಲ್‌-ಅಥಿಯಾ ಶೆಟ್ಟಿ


ಇದನ್ನೂ ಓದಿ:  Shubman Gill: ‘ಸಾರಾ’ಗೆ ಮಿಡಿದ ಗಿಲ್ ದಿಲ್! ಸಚಿನ್ ಪುತ್ರಿ ಬಳಿಕ ಶುಭ್‌ಮನ್‌ ಸಂ'ಸಾರ' ಸೇರ್ತಾರಾ ಈ ಬೆಡಗಿ?

ಅಥಿಯಾ ಮತ್ತು ರಾಹುಲ್ ಕಳೆದ ವರ್ಷ ತಮ್ಮ ಪ್ರೀತಿ ಬಗೆಗಿನ ಗುಟ್ಟನ್ನು ಬಹಿರಂಗಮಾಡಿದ್ದರು. ಇವರಿಬ್ಬರು ಸುಮಾರು ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದು, ಸಿನಿಮಾ ಕುರಿತಾದ ಕಾರ್ಯಕ್ರಮ, ಪಾರ್ಟಿ, ಟ್ರಿಪ್‌ ಹೀಗೆ ಹಲವಾರು ಕಡೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರರ ಚಿತ್ರಗಳನ್ನು ಆಗಾಗ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇತ್ತೀಚಿಗಷ್ಟೇ ಕೆಎಲ್ ರಾಹುಲ್ ಜರ್ಮನಿಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಈ ವೇಳೆ ರಾಹುಲ್ ಜೊತೆ ಪ್ರೇಯಸಿ ಅಥಿಯಾ ಶೆಟ್ಟಿ ಕೂಡ ಹೋಗಿದ್ದರು.

ರಾಹುಲ್‌, ಅಥಿಯಾ ನಿರ್ಧರಿಸಿದ ತಕ್ಷಣ ಮದುವೆ- ಸುನೀಲ್‌ ಶೆಟ್ಟಿ
ಇನ್ನೂ ಇಬ್ಬರ ಪ್ರೀತಿಗೆ ಕುಟುಂಬದವರು ಕೂಡ ಒಪ್ಪಿಗೆ ನೀಡಿದ್ದು, ಮದುವೆ ಬಗ್ಗೆಯೂ ಖುಷಿಯಾಗಿದ್ದಾರೆ. ಕಳೆದ ತಿಂಗಳು, ಅಥಿಯಾ ತಂದೆ ಸುನೀಲ್ ಶೆಟ್ಟಿ ತಮ್ಮ ಮಗಳ ಮದುವೆಯ ವದಂತಿಗಳಿಗೆ ಪ್ರತಿಕ್ರಿಯಿಸಿದರು. ಸಂದರ್ಶನದಲ್ಲಿ, ರಾಹುಲ್‌ ಮತ್ತು ಅಥಿಯಾ ನಿರ್ಧರಿಸಿದ ತಕ್ಷಣ ಮದುವೆ ನಡೆಯಲಿದೆ ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ. “ಮಕ್ಕಳು ನಿರ್ಧರಿಸಿದ ತಕ್ಷಣ ಮದುವೆ ನಡೆಯುತ್ತದೆ. ರಾಹುಲ್ ಏಷ್ಯಾಕಪ್, ವಿಶ್ವ, ದಕ್ಷಿಣ ಆಫ್ರಿಕಾ ಪ್ರವಾಸ, ಆಸ್ಟ್ರೇಲಿಯಾ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ. ಅವರಿಬ್ಬರಿಗೂ ಬಿಡುವು ಸಿಕ್ಕಾಗ ಮಾತ್ರ ಮದುವೆ ನಡೆಯಲಿದೆ" ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ.

ಇದಕ್ಕೂ ಮುನ್ನ ಸುನೀಲ್ ಶೆಟ್ಟಿ ಅವರು ರಾಹುಲ್ ಮೇಲಿನ ಅಭಿಮಾನದ ಬಗ್ಗೆ ಮಾತನಾಡಿದ್ದರು. "ನನಗೆ ರಾಹುಲ್‌ ಎಂದರೆ ಅಭಿಮಾನ, ಗೌರವ. ಕಾಲ ಬದಲಾಗಿರುವುದರಿಂದ ಅವರು ಏನು ಮಾಡಬೇಕೆಂದು ನಿರ್ಧರಿಸುತ್ತಾರೆ. ನನ್ನ ಮಗಳು ಮತ್ತು ಮಗ ಇಬ್ಬರಿಗೂ ಜವಾಬ್ದಾರಿ ಇದೆ. ಅವರ ಜೀವನದ ಬಗ್ಗೆ ಅವರೇ ನಿರ್ಧಾರ ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಅವರಿಗೆ ನನ್ನ ಆಶೀರ್ವಾದ ಮತ್ತು ಬೆಂಬಲ ಸದಾ ಇರುತ್ತದೆ,'' ಎಂದು ಸುನೀಲ್‌ ಶೆಟ್ಟಿ ಹೇಳಿದ್ದರು.

ಇದನ್ನೂ ಓದಿ:  Suniel Shetty: ಸುನೀಲ್ ಶೆಟ್ಟಿಯವರ ಈ ಒಂದು ಅಭ್ಯಾಸ ಮ್ಯಾಜಿಕ್ ಮಾಡ್ತಿದ್ಯಂತೆ., ಜೊತೆಗೆ ಮನಸ್ಸಿಗೆ ನೆಮ್ಮದಿನೂ ಸಿಗ್ತಿದ್ಯಂತೆ!

ಒಟ್ಟಾರೆ ಎಲ್ಲರೂ ಎದುರು ನೋಡುತ್ತಿರುವ ಸ್ಟಾರ್‌ ಜೋಡಿ ಮದುವೆ ಸದ್ಯದಲ್ಲೇ ನೆರವೇರಲಿದ್ದು, ಪ್ರಯಣ ಪಕ್ಷಿಗಳು ದಾಂಪತ್ಯ ಜೀವನಕ್ಕೆ ಶೀಘ್ರದಲ್ಲಿಯೇ ಕಾಲಿಡಲಿದ್ದಾರೆ.
Published by:Ashwini Prabhu
First published: