KL Rahul-Athiya Shetty: ಕೆ ಎಲ್ ರಾಹುಲ್ ಮತ್ತು ಅತಿಯಾ ಶೆಟ್ಟಿ ಮದುವೆ ಯಾವಾಗ? ಹೊಸ ಅಪ್​ಡೇಟ್ ರಿವೀಲ್

ಕೆ.ಎಲ್ ರಾಹುಲ್ ಹಾಗೂ ಅತಿಯಾ ಶೆಟ್ಟಿ ಪ್ರೀತಿಯಲ್ಲಿ ಬಿದ್ದಿರುವ ವಿಚಾರ ಹೊಸದೇನಲ್ಲ. ಆದರೆ ಇವರಿಬ್ಬರ ಮದುವೆ ಎಂದು?, ಯಾವಾಗ ಈ ಪ್ರಣಯ ಪಕ್ಷಿಗಳು ಹಸೆಮಣೆ ಏರುತ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ. ಈ ಕುತೂಹಲಕ್ಕೆ ತೆರೆಬೀಳುವ ಸಾಧ್ಯತೆಗಳು ಎದ್ದು ಕಾಣುತ್ತಿವೆ.

ರಾಹುಲ್ ಮತ್ತು ಅತಿಯಾ

ರಾಹುಲ್ ಮತ್ತು ಅತಿಯಾ

  • Share this:
ಕ್ರಿಕೆಟ್  ಲೋಕದ ಅದ್ಭುತ ಬ್ಯಾಟ್ಸ್ ಮನ್, ಹ್ಯಾಂಡ್ಸಮ್ ಹಂಕ್ ಕೆ.ಎಲ್ ರಾಹುಲ್ (K L Rahul) ಬಾಲಿವುಡ್ ಸುಂದರಿ ಅತಿಯಾ ಶೆಟ್ಟಿ (Athiya Shetty) ಜೊತೆ ಪ್ರೀತಿಯಲ್ಲಿ ಬಿದ್ದಿರುವ ವಿಚಾರ ಹೊಸದೇನಲ್ಲ. ಆದರೆ ಇವರಿಬ್ಬರ ಮದುವೆ ಎಂದು?, ಯಾವಾಗ ಈ ಪ್ರಣಯ ಪಕ್ಷಿಗಳು (Love Birds) ಹಸೆಮಣೆ ಏರುತ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ. ಈ ಕುತೂಹಲಕ್ಕೆ ತೆರೆಬೀಳುವ ಸಾಧ್ಯತೆಗಳು ಎದ್ದು ಕಾಣುತ್ತಿವೆ. ಹೌದು, ಇಬ್ಬರು ಮುದ್ದಾದ ಜೋಡಿಗಳು (Couple) 2023ರಲ್ಲಿ ಅಂದರೆ ಮುಂಬರುವ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಇತ್ತೀಚಿನ ವರದಿಗಳು ಹೇಳಿವೆ.

ರಾಹುಲ್ ಅತಿಯಾ ಮದುವೆ ಯಾವಾಗ?
ಕೆಲ ದಿನಗಳ ಹಿಂದೆ ಕೆಎಲ್ ರಾಹುಲ್ ಮತ್ತು ಅತಿಯಾ ಶೆಟ್ಟಿ ಮುಂದಿನ ಮೂರು ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ವರದಿಗಳು ಬಂದಿದ್ದವು. ಇದಕ್ಕೆ ಹೌದು ಎನ್ನುವಂತೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ಮಗಳಾದ ಅತಿಯಾ ಕೂಡ ಇನ್ನು 3 ತಿಂಗಳಲ್ಲಿ ನಡೆಯಲಿರುವ ಈ ಮದುವೆಗೆ ನನ್ನನ್ನು ಆಹ್ವಾನಿಸಲಿದ್ದೇನೆ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿದ್ದರು.

ಮತ್ತಷ್ಟು ವರದಿಗಳು ಈ ಜೋಡಿಗಳು ಇದೇ ವರ್ಷದ ಕೊನೆಯಲ್ಲಿ ಮದುವೆಯಾಗಲಿದ್ದಾರೆ ಎಂದಿದ್ದವು. ಆದರೆ ಇತ್ತೀಚಿನ ಅಪ್‌ಡೇಟ್ ಏನೆಂದರೆ ರಾಹುಲ್ ಮತ್ತು ಅತಿಯಾ 2023ರಲ್ಲಿ ಜನವರಿ ಅಥವಾ ಫೆಬ್ರವರಿಯಲ್ಲಿ ಮದುವೆಯಾಗಲಿದ್ದಾರೆ ಎಂಬುವುದಾಗಿದೆ. ಆದರೆ ಮದುವೆ ಎಲ್ಲಿ ನಡೆಯುತ್ತೆ, ದಿನಾಂಕ ಈ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ.

ಮದುವೆ ಬಗ್ಗೆ ಅತಿಯ ಅವರ ಹೇಳಿದ್ದು ಹೀಗೆ 
ಮೇ ತಿಂಗಳಲ್ಲಿ, ಅಥಿಯಾ ಅವರ ಸಹೋದರ ವದಂತಿ ಬಗ್ಗೆ ಸ್ಪಷ್ಟನೆ ನೀಡಿ ವಿವಾಹದ ಬಗ್ಗೆ ಮಾತನಾಡಿದ್ದರು. “ಮದುವೆಗೆ ಸಂಬಂಧಿಸಿದಂತೆ, ಯಾವುದೇ ವ್ಯವಸ್ಥೆಗಳನ್ನು ಮಾಡಲಾಗುತ್ತಿಲ್ಲ. ಅಂತಹ ಯಾವುದೇ ಸಮಾರಂಭವಿಲ್ಲ, ಇದೆಲ್ಲವೂ ವದಂತಿಗಳು. ಮದುವೆಯೇ ಇಲ್ಲದಿರುವಾಗ, ನಾವು ನಿಮಗೆ ದಿನಾಂಕವನ್ನು ಹೇಗೆ ಹೇಳುವುದು? ” ಅಂತಾ ಅಹಾನ್ ತಿಳಿಸಿದ್ದರು.

ಇಬ್ಬರ ಮದುವೆಗೆ ಕುಟುಂಬದವರಿಂದ ಗ್ರೀನ್ ಸಿಗ್ನಲ್
ಸುನೀಲ್ ಶೆಟ್ಟಿ ಕೂಡ ಕೆ.ಎಲ್ ರಾಹುಲ್ ಬಗ್ಗೆ ಮೆಚ್ಚುಗೆ ಮಾತುಗಳನ್ನು ಹಿಂದಿನ ಸಂದರ್ಶನವೊಂದರಲ್ಲಿ ಹೇಳಿದ್ದರು. "ರಾಹುಲ್ ಮೇಲೆ ತುಂಬಾ ಅಭಿಮಾನವಿದೆ. ಕಾಲ ಬದಲಾಗಿರುವುದರಿಂದ ಅವರು ಏನು ಮಾಡಬೇಕೆಂದು ನಿರ್ಧರಿಸುತ್ತಾರೆ. ನನ್ನ ಮಗಳು ಮತ್ತು ಮಗ ಇಬ್ಬರೂ ಜವಾಬ್ದಾರಿ ಹೊಂದಿದ್ದಾರೆ. ಅವರೇ ನಿರ್ಧಾರ ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಅವರಿಗೆ ನನ್ನ ಆಶೀರ್ವಾದ ಸದಾ ಇರುತ್ತದೆ,'' ಎಂದು ಹೇಳಿದ್ದರು.

ಇದನ್ನೂ ಓದಿ: Nithya Menen: ಮಾಲಿವುಡ್​ನ​ ಆ ಸೂಪರ್​ ಸ್ಟಾರ್​ ಜೊತೆ ನಿತ್ಯಾ ಮದುವೆ ಫಿಕ್ಸ್​! ಈ ವರ್ಷವೇ ಪೆ ಪೆ ಪೆ-ಡುಂ ಡುಂ ಡುಂ

ಕುಟುಂಬದವರು ಸಹ ಇಬ್ಬರ ಮದುವೆಗೆ ಈಗಾಗ್ಲೇ ಗ್ರೀನ್ ಸಿಗ್ನಲ್ ನೀಡಿದ್ದು, ಮದುವೆ ಯಾವಾಗ ಎಂಬ ಅಧಿಕೃತ ಮಾಹಿತಿ ಮಾತ್ರ ಸದ್ಯ ಬಾಕಿಯಿರುವಂತದ್ದು. ಇನ್ನೂ ಮದುವೆ ಬಳಿಕ ಈ ಜೋಡಿಗಳು ಮುಂಬೈನ ಪ್ಲಶ್ ಪಾಲಿ ಹಿಲ್‌ನಲ್ಲಿರುವ ಸಂಧು ಪ್ಯಾಲೇಸ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ಕಟ್ಟಡದ ಕೆಲಸ ಇನ್ನೂ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ.

ರಾಹುಲ್ ಮತ್ತು ಅತಇಯಾ ನಡುವೆ ಪ್ರೀತಿ ಶುರುವಾಗಿದ್ದು ಯಾವಾಗ?
ಅತಿಯಾ ಮತ್ತು ರಾಹುಲ್ ಮೂರು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರು ತಮ್ಮ ಪ್ರೀತಿ ವಿಷಯವನ್ನು ಮುಚ್ಚುಮರೆ ಮಾಡದೇ ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಇಬ್ಬರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಖಾಸಗಿ ಫೋಟೋಗಳನ್ನು ಆಗಾಗ್ಗೆ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಸಹೋದರ ಅಹಾನ್ ಶೆಟ್ಟಿ ಅವರ ಚೊಚ್ಚಲ ಚಿತ್ರ ತಡಾಪ್‌ನ ಪ್ರಥಮ ಪ್ರದರ್ಶನದಲ್ಲಿ ಇಬ್ಬರು ತಮ್ಮ ನಡುವಿನ ಸಂಬಂಧವನ್ನು ಅಧಿಕೃತಗೊಳಿಸಿದರು.

ಇದನ್ನೂ ಓದಿ: Sushmita Sen: ಟ್ರೋಲಿಗರಿಗೆ ಟಾಂಗ್ ಕೊಟ್ಟ ಸುಶ್ಮಿತಾ ಸೇನ್, ನಾನು ಡೈಮಂಡ್ ಡಿಗ್ಗರ್ ಎಂದ ನಟಿ

ಅಥಿಯಾ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವಾಸಗಳಲ್ಲಿ ರಾಹುಲ್ ಜೊತೆ ತೆರಳುತ್ತಾರೆ. ಇತ್ತೀಚೆಗೆ ಕ್ರಿಕೆಟಿಗ ರಾಹುಲ್ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದಾಗ ರಾಹುಲ್ ಜೊತೆ ಅಥಿಯಾ ಕೂಡ ಪ್ರಯಾಣಿಸಿದ್ದರು. ಅಥಿಯಾ ಅವರು ಚಿತ್ರರಂಗದ ಜೊತೆ ವ್ಯವಹಾರಗಳನ್ನು ಹೊಂದಿದ್ದಾರೆ. ಇವರು ಚಲನಚಿತ್ರ ಮತ್ತು ಕೆಲವು ವೆಬ್ ಶೋಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.
Published by:Ashwini Prabhu
First published: