ನಟ ರಜನಿಕಾಂತ್​ ಅಭಿಮಾನಿಯಂತೆ ಕೆಕೆಆರ್ ತಂಡದ Batman Venkatesh Iyer

ಕೆಕೆಆರ್ ತಂಡದ ವೆಂಕಟೇಶ್ ಕಟ್ಟಾ ರಜಿನಿಕಾಂತ್ ಅಭಿಮಾನಿ ಎಂದರೆ ತಪ್ಪಾಗುವುದಿಲ್ಲ. ರಜಿನಿಯ ಸ್ಟೈಲ್ ಅನ್ನು ಆಟದ ಮೈದಾನದಲ್ಲಿ ಮತ್ತು ಮನೆಯಲ್ಲಿಯೂ ಅನುಕರಣೆ ಮಾಡುತ್ತಾರಂತೆ.

ಕ್ರಿಕೆಟಿಗ ವೆಂಕಟೇಶ್​ ಅಯ್ಯರ್​

ಕ್ರಿಕೆಟಿಗ ವೆಂಕಟೇಶ್​ ಅಯ್ಯರ್​

  • Share this:
ನೀವು ನಟ ರಜಿನಿಕಾಂತ್ ಅಭಿಮಾನಿ ಆಗಿದ್ದರೆ ನಿಮಗೆ ಅವರ ಕೆಲವು ಸ್ಟೈಲ್‌ಗಳು ಐಪಿಎಲ್ 2021ರ ಎರಡನೆಯ ಹಂತದಲ್ಲಿ ಖಂಡಿತವಾಗಿಯೂ ನಿಮಗೆ ಕ್ರಿಕೆಟ್ ಆಟದ ಮೈದಾನದಲ್ಲಿ ನೋಡಲು ಸಿಕ್ಕಿರುತ್ತದೆ. ಹೇಗೆ ಅಂತೀರಾ..? ರಜನಿ ಕಟ್ಟಾ ಅಭಿಮಾನಿಯಾದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಆಟಗಾರ ವೆಂಕಟೇಶ್ ಅಯ್ಯರ್ ರಜನಿಯವರ ಸ್ಟೈಲ್ ಅನ್ನು ಬಹುತೇಕವಾಗಿ ಅನುಕರಣೆ ಮಾಡುತ್ತಾರೆ. ಅಯ್ಯರ್ ತಮ್ಮ ಶರ್ಟ್ ಅನ್ನು ಎಂದಿಗೂ ಒಳಕ್ಕೆ ಹಾಕುವುದಿಲ್ಲ. ಹೆಲ್ಮೆಟ್ ಇಲ್ಲದೆ ಸ್ಪಿನ್ನರ್ ಅನ್ನು ಎದುರಿಸುತ್ತಾರೆ. ಅವರು ಎರಡೂ ಕೈಗಳಿಂದ ಬೌಂಡರಿ ಗೆರೆ ಬಳಿಯಿಂದ ಚೆಂಡನ್ನು ತುಂಬಾ ಜೋರಾಗಿ ಎಸೆಯುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ, ವೆಂಕಟೇಶ್ ಕಟ್ಟಾ ರಜಿನಿಕಾಂತ್ ಅಭಿಮಾನಿ ಎಂದರೆ ತಪ್ಪಾಗುವುದಿಲ್ಲ.

ಐಪಿಎಲ್ 2021ರ ಎರಡನೆಯ ಹಂತದಲ್ಲಿ ದುಬೈನಲ್ಲಿ ಸರಣಿಯುದ್ದಕ್ಕೂ ಅಯ್ಯರ್ Rabada ಎಸೆತವನ್ನು ಮುಂದೆ ಬಂದು ಸಿಕ್ಸ್ ಬಾರಿಸಿದ್ದು, ಅಕ್ಷರ್‌ ಪಟೇಲ್ ಮತ್ತು ಬುಮ್ರಾ ಅವರ ಎಸೆತಗಳನ್ನು ಸಮರ್ಥವಾಗಿ ಎದುರಿಸಿದ್ದು ಹಾಗೂ ಫೈನಲ್ ಪಂದ್ಯದಲ್ಲಿ ಮೊದಲ 10 ಓವರ್‌ಗಳಲ್ಲಿ ಹ್ಯಾಜೆಲ್‌ವುಡ್ ಎಸೆತಗಳನ್ನು ಮನಬಂದಂತೆ ಚಚ್ಚಿದ್ದರು.
ಕೆಕೆಆರ್ ತಂಡವು ಸಿಎಸ್‌ಕೆ ನೀಡಿದ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾಗಿರಬಹುದು. ಆದರೆ, ವೆಂಕಟೇಶ್ ಅಯ್ಯರ್ ರಜಿನಿಯ ಸ್ಟೈಲ್ ಅನ್ನು ಆಟದ ಮೈದಾನದಲ್ಲಿ ಮತ್ತು ಮನೆಯಲ್ಲಿಯೂ ಅನುಕರಣೆ ಮಾಡುತ್ತಾರಂತೆ. “ಮನೆಯಲ್ಲಿ ಎಲ್ಲರೂ ಸೂಪರ್ ಸ್ಟಾರ್ ಅನ್ನು 'ರಜನಿ ಸರ್' ಎಂದು ಸಂಬೋಧಿಸಬೇಕೆಂದು ವೆಂಕಟೇಶ್ ಸೂಚನೆ ನೀಡಿದ್ದಾರೆ” ಎಂದು ಹೇಳಿದ್ದಾರೆ ವೆಂಕಟೇಶ್ ಅವರ ತಂದೆ ರಾಜಶೇಖರನ್.

"ಒಬ್ಬ ಸೆಟ್ ಬ್ಯಾಟ್ಸ್‌ಮನ್ ಆಗಿ ನಾನು ಹೋಗಿ ಎರಡೂ ಪಂದ್ಯಗಳನ್ನು ಮುಗಿಸಬೇಕಾಗಿತ್ತು. ಇದು ಸಾಮಾನ್ಯ ಆಟಗಾರ ಮತ್ತು ಅಸಾಧಾರಣ ಆಟಗಾರನ ನಡುವಿನ ಮುಖ್ಯ ವ್ಯತ್ಯಾಸವಾಗಿದೆ. ಸಾಮಾನ್ಯವಲ್ಲದ ಆಟಗಾರರು ಆಟವನ್ನು ಮುಗಿಸುತ್ತಾರೆ. ನಾನು ಕೊನೆಯವರೆಗೂ, ವಿಶೇಷವಾಗಿ ಫೈನಲ್‌ನಲ್ಲಿ ಕೊನೆಯವರೆಗೆ ಇದ್ದು ಆಟವನ್ನು ಮುಗಿಸಬೇಕಿತ್ತು ಎಂದು ನಾನು ಇನ್ನೂ ಯೋಚಿಸುತ್ತಿದ್ದೇನೆ" ಎಂದು ನಿರಾಶೆಗೊಂಡ ಅಯ್ಯರ್ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Rajinikanth: ಕೋವಿಡ್​ ಲಸಿಕೆ ಹಾಕಿಸಿಕೊಂಡ ರಜಿನಿಕಾಂತ್​: ಫೋಟೋ ಹಂಚಿಕೊಂಡ ಮಗಳು ಸೌಂದರ್ಯ..!

"ರಾಹುಲ್ ತ್ರಿಪಾಠಿ ಗಾಯಗೊಂಡಿದ್ದಾರೆ ಎಂದು ನನಗೆ ತಿಳಿದಿತ್ತು. ಪಿಚ್ ಬ್ಯಾಟಿಂಗ್‌ಗೆ ಉತ್ತಮವಾಗಿತ್ತು ಮತ್ತು ನಾವು ಸಿಎಸ್‌ಕೆ ನೀಡಿದ ಗುರಿಯನ್ನು ಬೆನ್ನಟ್ಟಬಹುದಿತ್ತು ಎಂದು ನಮಗೆ ತಿಳಿದಿತ್ತು" ಎಂದೂ ಹೇಳಿದ್ದಾರೆ.

25ನೇ ವಯಸ್ಸಿನಲ್ಲಿ, ಅಯ್ಯರ್ ತನ್ನ ಸಹವರ್ತಿಗಳಿಗಿಂತ ಹೆಚ್ಚು ಪ್ರಬುದ್ಧರಾಗಿದ್ದಾರೆ ಮತ್ತು ಎಂಬಿಎ ಓದಿರುವ ಅವರು, ಕ್ರಿಕೆಟ್ ಆಡಲು ಬಹುರಾಷ್ಟ್ರೀಯ ಕಂಪನಿಯಿಂದ ಬಂದ ಪ್ರಸ್ತಾಪ ಬಿಟ್ಟು, ತಮ್ಮ ಪದವಿಯನ್ನು ಬದಿಗಿಟ್ಟಿದ್ದಾರೆ. ಕ್ರಿಕೆಟ್ ಆಡಲು ಅವಕಾಶ ನೀಡುವುದು ಮತ್ತು ಸಂಬಂಧಿಕರ ಮಾತಿಗೆ ತಲೆಕೆಡಿಸಿಕೊಳ್ಳದಿರುವುದು ತನ್ನ ಪೋಷಕರು ತೆಗೆದುಕೊಂಡ ಧೈರ್ಯದ ನಿರ್ಧಾರ ಎನ್ನುತ್ತಾರೆ ಅವರು.
ಅಯ್ಯರ್ ಒಬ್ಬ ಒಳ್ಳೆಯ ವಿದ್ಯಾರ್ಥಿಯಾಗಿದ್ದರು ಮತ್ತು ಉತ್ತಮ ಕ್ರಿಕೆಟಿಗರೂ ಆಗಿದ್ದರು. ಅವರು ನಂತರದ ಹಂತದಲ್ಲಿ ಬಿಕಾಂ ನಂತರ ಚಾರ್ಟರ್ಡ್ ಅಕೌಂಟೆಂಟ್ ಆಗಲು ಬಯಸಿದ್ದರು. ಆದರೆ ಮುಂದಿನ ಮೂರು ವರ್ಷಗಳವರೆಗೆ ಸಿಎಗೆ ದಾಖಲಾದರೆ, ಅವರು ಸಿಎ ಆಗಿ ಕೆಲಸ ಮಾಡಬೇಕಾಗುತ್ತಿತ್ತು.

ಬದಲಾಗಿ ಕ್ರಿಕೆಟ್ ಆಡುವಾಗ, ಅಯ್ಯರ್ ಫೈನಾನ್ಸ್‌ನಲ್ಲಿ ಎಂಬಿಎ ಪೂರ್ಣಗೊಳಿಸಿದರು ಮತ್ತು ನಂತರ ಡೆಲಾಯ್ಟ್‌ನಲ್ಲಿ ಕೆಲಸ ನೀಡಲಾಯಿತು. ಅಂದರೆ ಅವರು ಬೆಂಗಳೂರು ಅಥವಾ ಹೈದರಾಬಾದ್‌ನಲ್ಲಿ ನೆಲೆಸಬೇಕಾಗಿತ್ತು. ಆದ್ದರಿಂದ ಅಯ್ಯರ್ ಮತ್ತೊಮ್ಮೆ ಕ್ರಿಕೆಟ್ ಅನ್ನು ಆಯ್ಕೆ ಮಾಡಿಕೊಂಡರು.

"ಮಗನು ಕಂಪನಿ ಕೆಲಸಕ್ಕಿಂತ ತನ್ನ ಅಭಿರುಚಿಯನ್ನು ಕೆಲಸವಾಗಿ ಮಾಡುವುದು ಒಳ್ಳೆಯದು ಎಂದು ಮತ್ತು ಅವನು ಕ್ರಿಕೆಟ್ ಆಡುವುದನ್ನು ಮುಂದುವರಿಸಿದನು. ಈಗ ನೋಡಿ, ಅವನ ಉತ್ಸಾಹವು ಫಲ ನೀಡುತ್ತಿದೆ" ಎಂದು ತಂದೆ ರಾಜಶೇಖರನ್ ಹೇಳಿದರು.

ಇದನ್ನೂಓದಿ: Rajinikanth: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ನಟ ರಜಿನಿಕಾಂತ್​..!

ಐಪಿಎಲ್ ಅವರನ್ನು ರಾತ್ರೋ ರಾತ್ರಿ ತಾರೆಯನ್ನಾಗಿ ಮಾಡಿದೆ. ಆದರೆ ಅಯ್ಯರ್ ತಮ್ಮ ಯಶಸ್ಸಿನ ಬಗ್ಗೆ ಅಷ್ಟಾಗಿ ಯೋಚನೆ ಮಾಡುವುದಿಲ್ಲ. "ನನ್ನ ಕುಟುಂಬದ ಪರಿಸ್ಥಿತಿ ಬದಲಾಗಿದ್ದು, ತನ್ನ ಮಗು ಕ್ರಿಕೆಟ್ ಆಡುತ್ತಾನೆ ಎಂದು ನಿರ್ಧರಿಸಲು ಪೋಷಕರಿಗೆ ತುಂಬಾನೇ ಧೈರ್ಯ ಬೇಕು. ಈಗ ನನ್ನ ಸಂಬಂಧಿಕರು ಸಂತೋಷವಾಗಿದ್ದಾರೆ, ಆದ್ದರಿಂದ ನನ್ನ ಹೆತ್ತವರ ಮುಖದಲ್ಲಿ ನಾನು ನೋಡುವ ನಗು ನನಗೆ ಸಂತೋಷವನ್ನು ನೀಡುತ್ತದೆ" ಎಂದು ಅಯ್ಯರ್ ಹೇಳಿದ್ದಾರೆ.

ತಂದೆ ರಾಜಶೇಖರನ್ ತಮ್ಮ ಮಗನನ್ನು ಕ್ರಿಕೆಟ್‌ಗೆ ಪರಿಚಯಿಸಿದ ಘಟನೆಯನ್ನು ನೆನಪಿಸಿಕೊಂಡು "ಒಮ್ಮೆ ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯ ನಡೆಯುತ್ತಿದ್ದಾಗ, ವೆಂಕಟೇಶ್ ಸೌರವ್ ಗಂಗೂಲಿ ಅವರ ದೊಡ್ಡ ಅಭಿಮಾನಿಯಾಗಿದ್ದರು. ಗಂಗೂಲಿ ಬೇಗನೆ ಔಟಾದರು ಮತ್ತು ವೆಂಕಟೇಶ್ ಅಳಲು ಪ್ರಾರಂಭಿಸಿದರು. ಆ ದಿನ ಅವನು ಅನಾರೋಗ್ಯಕ್ಕೆ ಒಳಗಾದನು. ಮುಂದಿನ ಪಂದ್ಯದಲ್ಲಿ ಅವರು ಸ್ಕೋರ್ ಮಾಡುತ್ತಾರೆ, ಚಿಂತಿಸಬೇಡಿ ಎಂದು ನಾವು ಅವರಿಗೆ ಹೇಳಿದೆವು. ಆದರೆ ಮುಂದಿನ ಎರಡು ದಿನಗಳವರೆಗೆ ಅವನು ಅಸಮಾಧಾನಗೊಂಡಿದ್ದನು. ಆದ್ದರಿಂದ ಆಟದ ಮೇಲಿನ ಉತ್ಸಾಹ ನೋಡಿ, ನಾವು ಕ್ರಿಕೆಟ್ ಅಭ್ಯಾಸ ಮಾಡಲು ಸೇರಿಸಿದೆವು" ಎಂದಿದ್ದಾರೆ.
Published by:Anitha E
First published: