Vijay Yesudas: ಕನ್ನಡ ಸೇರಿ 6 ಭಾಷೆಯಲ್ಲಿ ಸಜ್ಜಾಗುತ್ತಿದೆ ಯೇಸುದಾಸ್​ ಪುತ್ರ ವಿಜಯ್​ ಯೇಸುದಾಸ್​ ಸಿನಿಮಾ!

Vijay Yesudas: ದಕ್ಷಿಣ ಭಾರತದಲ್ಲೇ ಪ್ರತಿಭಾನ್ವಿತ ನಿರ್ದೇಶಕ ಎಂದೇ ಭರವಸೆ ಮೂಡಿಸಿರುವ ಶಲೀಲ್ ಕಲೂರ್ ಸಾಲ್ಮನ್ ಚಿತ್ರದ ನಿರ್ದೇಶಕರು. ಇದೊಂದು ರೊಮ್ಯಾಂಟಿಕ್ ಸಸ್ಪೆನ್ಸ್ ಚಿತ್ರವಾಗಿದ್ದು, ಬಹುತೇಕ ಭಾಗದ ಚಿತ್ರೀಕರಣವೂ ಆಕರ್ಷಕ ತಾಣಗಳಾದ ಕುಲು-ಮನಾಲಿ, ರಾಮೋಜಿರಾವ್ ಫಿಲಂಸಿಟಿ ಅಲ್ಲದೇ, ದುಬೈ, ಮಲೇಷ್ಯಾ ಮುಂತಾದ ಕಡೆ ಪೂರ್ಣಗೊಂಡಿದೆ.

 ಸಾಲ್ಮನ್

ಸಾಲ್ಮನ್

  • News18
  • Last Updated :
  • Share this:
ಮಹಾಮಾರಿ ಕೊರೋನಾದಿಂದಾಗಿ ಸಿನಿಮಾ ರಂಗ ಸ್ತಬ್ಧವಾಗಿದೆ‌‌. ಈಗಾಗಲೇ ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾಗಳು ತೆರೆಕಾಣಲು ತಿಣುಕಾಡುತ್ತಿವೆ‌. ಯಾವಾಗ ಚಿತ್ರಮಂದಿರ ಓಪನ್ ಆಗುತ್ತೆ? ಚಿತ್ರಮಂದಿರ ತೆರೆದರು , ಪ್ರೇಕ್ಷಕರು ಬರುತ್ತಾರಾ? ಅಂತ ಗೊಂದಲದಲ್ಲಿದ್ದಾರೆ ಸಿನಿಮಾ ಮಂದಿ. ಹೀಗಿರುವಾಗಲೇ 3D ಸಿನಿಮಾವೊಂದು ಆರು ಭಾಷೆಗಳಲ್ಲಿ ಬಿಡುಗಡೆಗೆ ಸಿದ್ಧವಾಗಿ ದಾಖಲೆಯನ್ನು ಸೃಷ್ಠಿಸಲು ಮುಂದಾಗುತ್ತಿದೆ, ಅದುವೇ ಸಾಲ್ಮನ್!

ದಕ್ಷಿಣ ಭಾರತದಲ್ಲೇ ಪ್ರತಿಭಾನ್ವಿತ ನಿರ್ದೇಶಕ ಎಂದೇ ಭರವಸೆ ಮೂಡಿಸಿರುವ ಶಲೀಲ್ ಕಲೂರ್ ಸಾಲ್ಮನ್ ಚಿತ್ರದ ನಿರ್ದೇಶಕರು. ಇದೊಂದು ರೊಮ್ಯಾಂಟಿಕ್ ಸಸ್ಪೆನ್ಸ್ ಚಿತ್ರವಾಗಿದ್ದು, ಬಹುತೇಕ ಭಾಗದ ಚಿತ್ರೀಕರಣವೂ ಆಕರ್ಷಕ ತಾಣಗಳಾದ ಕುಲು-ಮನಾಲಿ, ರಾಮೋಜಿರಾವ್ ಫಿಲಂ ಸಿಟಿ ಅಲ್ಲದೇ, ದುಬೈ, ಮಲೇಷ್ಯಾ ಮುಂತಾದ ಕಡೆ ಪೂರ್ಣಗೊಂಡಿದೆ.

ಈ ಚಿತ್ರವು ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲೂ ತೆರೆಕಾಣಲಿದೆ. ಎಂ.ಜೆ.ಎಸ್.ಮೀಡಿಯಾ ಬ್ಯಾನರ್ ಈ ಚಿತ್ತವನ್ನು ಸುಮಾರು 12 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದು, ಡಾ. ಟಿ. ಎನ್. ವಿನೀತ್ ಭಟ್, ಶಾಜು ಥಾಮಸ್, ಜೋಸ್. ಡಿ. ಪೇಕಾಟ್ಟಿಲ್ ಮತ್ತು ಜಾಯಿಸ್. ಟಿ. ಪೇಕಾಟ್ಟಿಲ್ ಈ ಸಿನಿಮಾ ನಿರ್ಮಾಣದ ಹೊಣೆ ಹೊತ್ತಿದ್ದಾರೆ.

ಸಾಲ್ಮನ್


ಸಾಲ್ಮನ್


ಹುಟ್ಟಿದ ತಕ್ಷಣವೇ ಅನಾಥವಾಗುವ ವೈಶಿಷ್ಯತೆಯನ್ನು ಹೊಂದಿರುವ ಸಾಲ್ಮನ್ ಮೀನಿನ ಹೆಸರನ್ನು ಈ ಚಿತ್ರಕ್ಕೆ ಇಡಲಾಗಿದ್ದು, ಅದು ತನ್ನ ಬದುಕಿನಲ್ಲಿ ಎದುರಾಗುವ ಪ್ರತಿಕೂಲ ಪರಿಸ್ಥಿತಿಗಳನ್ನು ದಾಟಿ ಹಲವಾರು ಉಪಖಂಡ ಪ್ರದೇಶಗಳನ್ನು ಹೇಗೆ ಸೇರುತ್ತದೆಯೋ, ಅದೇರೀತಿ ಕಥಾನಾಯಕನ ಜೀವನದ ಸುತ್ತ  ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಘಟನಾವಳಿಗಳೇ ಈ ಸಿನಿಮಾದ ಕಥಾವಸ್ತುವಾಗಿದೆ.

ದುಬೈನಲ್ಲಿ ತನ್ನ ಕುಟುಂಬ ಸಮೇತ ನೆಲೆಸಿ ಒಮ್ಮೆ ಹುಟ್ಟೂರಿಗೆ ಆಗಮಿಸಿದ ವೇಳೆ ಅನಿರೀಕ್ಷಿತವಾಗಿ ನಡೆಯುವ ದಾರುಣ ಸಾವು, ಆ ಬಳಿಕ ಅನಾವರಣಗೊಳ್ಳುವ ಆತ್ಮದ ಹಿನ್ನೆಲೆಯು ಈ ಸಿನಿಮಾದ ಕಥಾಹಂದರವಾಗಿದೆ.      ಖ್ಯಾತ ಗಾಯಕರಾದ ಯೇಸುದಾಸ್ ಅವರ ಪುತ್ರ ವಿಜಯ್ ಯೇಸುದಾಸ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ರಾಹುಲ್ ಮೆನನ್ ಕ್ಯಾಮರಾ ನಿರ್ವಹಿಸಿದ್ದು, ಜೀಮೋನ್ ಪಲ್ಲೇಲಿ 3D ಸ್ಟೀರಿಯೋಸ್ಕಾಪಿಕ್ ಜವಾಬ್ದಾರಿಯನ್ನೂ ಹೊತ್ತಿದ್ದು,  ಈ ಚಿತ್ರವು ಸದ್ಯದಲ್ಲೇ ಬಿಡುಗಡೆಗೆ ಸಿದ್ಧವಾಗಲಿದೆ.

ನಕ್ಕು ನಗಲು ತಯಾರಾಗಿರಿ; ಮತ್ತೆ ಬರಲಿದೆ ‘ಮಜಾ ಟಾಕೀಸ್​‘
First published: