Kishore Kumar Birth Anniversary: ಇಂದು ಕಿಶೋರ್ ಕುಮಾರ್ ಜನ್ಮದಿನ, ಸ್ವರಮಾಂತ್ರಿಕನ ಹಾಡುಗಳು ಎಂದಿಗೂ ಅಜರಾಮರ

Kishore Kumar Birth Anniversary: ಕಿಶೋರ್ ಕುಮಾರ್​ ಅವರನ್ನು ಜನ ಪ್ರೀತಿಯಿಂದ ಕಿಶೋರ್ ದಾ ಎಂದು ನೆನಪಿಸಿಕೊಳ್ಳುತ್ತಾರೆ. ಗಾಯನದ ಹೊರತಾಗಿ, ಅವರು ನಟನೆಯಲ್ಲಿಯೂ ಸ್ವಲ್ಪಮಟ್ಟಿಗೆ ತೊಡಗಿಸಿಕೊಂಡಿದ್ದರು.

ಕಿಶೋರ್ ಕುಮಾರ್

ಕಿಶೋರ್ ಕುಮಾರ್

  • Share this:
ಕಿಶೋರ್ ಕುಮಾರ್, (Kishore Kumar)  ಈ ಅದ್ಬುತ ಗಾಯಕನ (Singer) ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ಅವರ ಹಾಡುಗಳು (Songs) ಇಂದಿಗೂ ಜನರಲ್ಲಿ ಅಜರಾಮರ. ಆಗಸ್ಟ್ 4, 1929 ರಂದು ಜನಿಸಿದ ಕಿಶೋರ್ ಕುಮಾರ್ ಭಾರತೀಯ ಸಂಗೀತ ಉದ್ಯಮದ ಅತಿ ದೊಡ್ಡ ಹೆಸರು. ಸುಮಧುರ ಕಂಠದ ರಾಜ, ಅವರು ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಹಲವಾರು ಹಿಟ್ ಹಾಡುಗಳನ್ನು ನೀಡಿದ್ದಾರೆ. ಅವರು ಕೇವಲ ಶ್ರೇಷ್ಠ ಗಾಯಕರಾಗಿರಲಿಲ್ಲ ಆದರೆ ಅದ್ಭುತ ನಟ ಕೂಡ. ಇಂದು ಅವರ ಜನ್ಮದಿನ. ಅವರ ಕೆಲ ಅದ್ಣುತ ಹಾಡುಗಳ ಲಿಸ್ಟ್​ ಇಲ್ಲಿದೆ.  

ಏಕ್ ಅಜ್ಞಾಬೀ ಹಸೀನಾ ಸೆ

1974 ರಲ್ಲಿ ಬಿಡುಗಡೆಯಾದ ಅಜನಾಬೀ ಚಲನಚಿತ್ರದ ಈ ಹಾಡು ಎಲ್ಲರಿಗೂ ಬಹಳ ಇಷ್ಟ. . ಕಿಶೋರ್ ಕುಮಾರ್ ಹಾಡಿರುವ ಈ ಹಾಡಿಗೆ ರಾಜೇಶ್ ಖನ್ನಾ ಮತ್ತು ಜೀನತ್ ಅಮಾನ್ ನಟಿಸಿದ್ದು, ಪ್ರೇಮಿಗಳ ನೆಚ್ಚಿನ ಗೀತೆ ಇದಾಗಿತ್ತು.

ಏಕ್ ಲಡ್ಕಿ ಭೀಗಿ ಭಾಗಿ ಸಿ

ಈ ಹಾಡು 1958 ರಲ್ಲಿ ಬಿಡುಗಡೆಯಾದ ಚಲ್ತಿ ಕಾ ನಾಮ್ ಗಾಡಿ ಚಲನಚಿತ್ರದ್ದು, ಒಂಥರಾ ಮಜಾವಾಗಿದ್ದ ಈ ಹಾಡಿಗೆ ಮಧುಬಾಲಾ ನಟನೆ ಹೆಚ್ಚು ಮೆರಗು ನೀಡಿತ್ತು ಎಂದರೆ ತಪ್ಪಲ್ಲ.

ತೇರೆ ಬಿನಾ ಜಿಂದಗಿ ಸೆ

ಗಾಯಕರಾದ ಕಿಶೋರ್ ಕುಮಾರ್ ಮತ್ತು ಲತಾ ಮಂಗೇಶ್ಕರ್ ಹಾಡಿರುವ ಈ ಹಾಡು ಆಂಧಿ ಚಿತ್ರದ ಹಾಡು. 1975 ರಲ್ಲಿ ಬಿಡುಗಡೆಯಾದ ಸುಮಧುರ ಹಾಡು ಆ ಕಾಲದ ದೊಡ್ಡ ಹಿಟ್ ಆಗಿತ್ತು. ಸಂಜೀವ್ ಕುಮಾರ್ ಮತ್ತು ಸುಚಿತ್ರಾ ಸೇನ್ ಅವರ ಅಭಿನಯಿಸಿದ್ದು, ಒಬ್ಬರಿಗೊಬ್ಬರು ಬೇರ್ಪಟ್ಟ ಪ್ರೇಮಿಗಳ ಪರಿಸ್ಥಿತಿಯನ್ನು ಹಾಡು ಅದ್ಭುತವಾಗಿ ವಿವರಿಸುತ್ತದೆ.

ಚಿಂಗಾರಿ ಕೋಯಿ ಭಡ್ಕೆ

1972 ರ ಚಲನಚಿತ್ರ ಅಮರ್ ಪ್ರೇಮ್ ಸಿನಿಮಾ ಈ ಅದ್ಭುತ ಹಾಡು ಕೇಳುಗರನ್ನು ಬೇರೆಯ ಲೋಕಕ್ಕೆ ಕರೆದೊಯ್ಯುವ ಶಕ್ತಿಯನ್ನು ಹೊಂದಿದೆ. ರಾಜೇಶ್ ಖನ್ನಾ ಮತ್ತು ಶರ್ಮಿಳಾ ಟ್ಯಾಗೋರ್ ಅವರು ಅಭಿನಯಿಸಿರುವ ಈ ಹಾಡಿನ ಪ್ರತಿಯೊಂದು ಪದಕ್ಕೂ ಕುಮಾರ್ ಅವರ ಧ್ವನಿ ಜೀವ ತುಂಬಿದೆ ಎನ್ನಬಹುದು.

ಇದನ್ನೂ ಓದಿ: ಟಾಲಿವುಡ್ ಬಿಕ್ಕಟ್ಟಿಗೆ ಕಾರಣ ಇವರಂತೆ, ಹೀಗ್ಯಾಕಂದ್ರು ರಾಮ್​ ಗೋಪಾಲ್ ವರ್ಮಾ?

ಮೇರೆ ಸಪ್ನೋ ಕಿ ರಾಣಿ

ಕುಮಾರ್ ಹಾಡಿರುವ ಈ ಹಾಡು 1969 ರಲ್ಲಿ ಬಿಡುಗಡೆಯಾಗಿದ್ದು. ಇದು ಆರಾಧನಾ ಸಿನಿಮಾದಲ್ಲಿ ಖನ್ನಾ ಅವರು ಜೀಪಿನಲ್ಲಿ ರೈಲಿನಲ್ಲಿ ಕುಳಿತಿರುವಾಗ ಹೋಗುತ್ತಿರುವ ಶರ್ಮಿಳಾ ಟ್ಯಾಗೋರ್ ಅವರನ್ನು ಹಿಂಬಾಲಿಸುತ್ತಿರುವಾಗ ಹಾಡುತ್ತಾರೆ. ಈಗಲೂ ಈ ಹಾಡು ಜನರಿಗೆ ಬಹಳ ಇಷ್ಟ.

ಕಿಶೋರ್ ಕುಮಾರ್​ ಅವರನ್ನು ಜನ ಪ್ರೀತಿಯಿಂದ ಕಿಶೋರ್ ದಾ ಎಂದು ನೆನಪಿಸಿಕೊಳ್ಳುತ್ತಾರೆ. ಗಾಯನದ ಹೊರತಾಗಿ, ಅವರು ನಟನೆಯಲ್ಲಿಯೂ ಸ್ವಲ್ಪಮಟ್ಟಿಗೆ ತೊಡಗಿಸಿಕೊಂಡಿದ್ದರು. ಆರಂಭಿಕ ವರ್ಷಗಳಲ್ಲಿ, ಅವರು ಕೆಲ ಪಾತ್ರಗಳಲ್ಲಿ ನಟಿಸುತ್ತಿದ್ದಾಗ, ಅವರು  ಆಸಕ್ತಿ ಹೊಂದಿರಲಿಲ್ಲವಂತೆ. ಆದರೆ ಸಹೋದರ, ಹಿರಿಯ ನಟ ಅಶೋಕ್ ಕುಮಾರ್ ಅವರಿಗಾಗಿ ಅವರು ನಟಿಸುತ್ತಿದ್ದರಂತೆ.

ಇದನ್ನೂ ಓದಿ: ಕಿಚ್ಚನಿಗೆ ತಿನ್ನೋದಕ್ಕಿಂತ ಅಡುಗೆ ಮಾಡಿ ಬಡಿಸೋದು ಇಷ್ಟವಂತೆ! ವಿಮಾನ ಹಾರಿಸುವ ಕನಸು ಬಿಚ್ಚಿಟ್ಟ ವಿಕ್ರಾಂತ್ ರೋಣ

ಕಿಶೋರ್ ಕುಮಾರ್ ಅವರು ಸುಮಾರು 20 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಕನಿಷ್ಠ 15 ಸಿನಿಮಾ ಹೇಳಿಕೊಳ್ಳುವಂತಿರಲಿಲ್ಲ. ಅಲ್ಲದೇ, ಕಿಶೋರ್ ಕುಮಾರ್ ಸಿನಿಮಾ ಮಾಡದಿರಲು ಹಲವಾರು ಪ್ರಯತ್ನಗಳನ್ನು ಮಾಡಿದ್ದಾರೆ. ಆದರೆ ಅದ್ಯಾವುದು ವರ್ಕ್ ಆಗಿಲ್ಲವಂತೆ. ಆದರೆ, 1950 ರ ದಶಕದ ಮಧ್ಯಭಾಗದ ನಂತರ ಅವರ ನಟನಾ ವೃತ್ತಿಜೀವನವು ಹೊಸ ತಿರುವ ಪಡೆದುಕೊಂಡಿತು, ಅವರು ಲಡ್ಕಿ ಮತ್ತು ನೌಕರಿ ಮುಂತಾದ ಯಶಸ್ವಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡು, ಜನರ ಮೆಚ್ಚುಗೆಗೆ ಪಾತ್ರವಾದರು.
Published by:Sandhya M
First published: