4 Years Of Kirik Party: 4 ವರ್ಷ ಪೂರೈಸಿದ ಕಿರಿಕ್​ ಪಾರ್ಟಿ ಸಿನಿಮಾ: ಸಂಭ್ರಮದಲ್ಲಿ ಚಿತ್ರತಂಡ..!

ಕಿರಿಕ್​ ಪಾರ್ಟಿ ಸಿನಿಮಾ

ಕಿರಿಕ್​ ಪಾರ್ಟಿ ಸಿನಿಮಾ

ಹೌದು, ಕಿರಿಕ್​ ಪಾರ್ಟಿ ಸಿನಿಮಾ ತೆರೆಕಂಡು ಇಂದಿಗೆ ನಾಲ್ಕು ವರ್ಷ. ಈ ಖುಷಿಯನ್ನು ಚಿತ್ರತಂಡ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ. ರಕ್ಷಿತ್ ಶೆಟ್ಟಿ ಈ ಸಿನಿಮಾದ ಚಿತ್ರೀಕರಣದ ವೇಳೆ ತೆಗೆದ ಕೆಲವು ವಿಡಿಯೋ ತುಣುಕುಗಳನ್ನು ಸೇರಿಸಿ, ಒಂದು ಪುಟ್ಟ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.

ಮುಂದೆ ಓದಿ ...
  • Share this:

ರಕ್ಷಿತ್​ ಶೆಟ್ಟಿ ಹಾಗೂ ತಂಡದವರು ಸೇರಿದ ಮಾಡಿದ ಸಿನಿಮಾ  'ಕಿರಿಕ್‌ ಪಾರ್ಟಿ'ಸ್ಯಾಂಡಲ್​ವುಡ್​ನಲ್ಲಿ ಸಾಕಷ್ಟು ದಾಖಲೆಗಳನ್ನು ಮಾಡಿದೆ. ಇತ್ತೀಚೆಗಷ್ಟೆ ಈ ಸಿನಿಮಾದ ಬೆಳಗೆದ್ದು ಯಾರ ಮುಖವ ನಾನು ನೋಡಿದೆ ವಿಡಿಯೋ ಹಾಡಿಗೆ  100 ಮಿಲಿಯನ್ ಅಂದರೆ  10 ಕೋಟಿ ವೀಕ್ಷಣೆ ಸಿಕ್ಕಿದೆ.  2016ರಲ್ಲಿ ತೆರೆ ಕಂಡ ಈ ಸಿನಿಮಾ ಮಾಡಿದ ಸದ್ದು ಅಷ್ಟಿಷ್ಟಲ್ಲ. ರಕ್ಷಿತ್ ಶೆಟ್ಟಿ ನಾಯಕನಾಗಿರುವ ಈ ಸಿನಿಮಾಗೆ ರಿಷಬ್‌ ಶೆಟ್ಟಿ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಇದೇ ಸಿನಿಮಾದ ಮೂಲಕ  ರಶ್ಮಿಕಾ ಹಾಗೂ ಸಂಯುಕ್ತಾ ಹೆಗ್ಡೆ ನಾಯಕಿಯರಾಗಿ ಎಂಟ್ರಿ ಕೊಟ್ಟರು. ಯುವ ಸಿನಿಪ್ರಿಯರಿಗೆ ಈ ಸಿನಿಮಾ ಸಖತ್​ ಇಷ್ಟವಾಗಿತ್ತು. ಬಾಕ್ಸಾಫಿಸ್​ನಲ್ಲೂ ಕಿರಿಕ್​ ಪಾರ್ಟಿ ಸಖತ್​ ಸದ್ದು ಮಾಡಿತ್ತು. ಇನ್ನು, ಅಜನೀಶ್​ ಲೋಕನಾಥ್​ ನೀಡಿದ್ದ ಸಂಗೀತ  ಇಂದಿಗೂ  ಸಿನಿಪ್ರಿಯರ ನಾಲಗೆ ಮೇಲೆ ನಲಿಯುತ್ತಿದೆ.  ಜೊತೆಗೆ ಯೂಟ್ಯೂಬ್​ನಲ್ಲೂ ದಾಖಲೆ ಬರೆಯುತ್ತಿವೆ. ಈ ಸಿನಿಮಾ ಬೇರೆ ಭಾಷೆಗೂ ಸಹ ರಿಮೇಕ್​ ಆಗಿದೆ. ಇದರ ಜೊತೆಗೆ ಈ ಚಿತ್ರದ ಎರಡನೇ ಭಾಗ ಸಹ ಬರಲಿದೆ. ಹೀಗಿರುವಾಗಲೇ ಕಿರಿಕ್​ ಪಾರ್ಟಿ ಸಿನಿಮಾಗೆ 4ರ ಸಂಭ್ರಮ. 


ಹೌದು, ಕಿರಿಕ್​ ಪಾರ್ಟಿ ಸಿನಿಮಾ ತೆರೆಕಂಡು ಇಂದಿಗೆ ನಾಲ್ಕು ವರ್ಷ. ಈ ಖುಷಿಯನ್ನು ಚಿತ್ರತಂಡ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ. ರಕ್ಷಿತ್ ಶೆಟ್ಟಿ ಈ ಸಿನಿಮಾದ ಚಿತ್ರೀಕರಣದ ವೇಳೆ ತೆಗೆದ ಕೆಲವು ವಿಡಿಯೋ ತುಣುಕುಗಳನ್ನು ಸೇರಿಸಿ, ಒಂದು ಪುಟ್ಟ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.





ಈ ಸಿನಿಮಾ ತಮಗೆ ಎಷ್ಟು ವಿಶೇಷ ಎಂದು ಬರೆದುಕೊಂಡಿರುವ ರಕ್ಷಿತ್​, ಈ ಚಿತ್ರದಿಂದ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ಸಹ ಸಿಕ್ಕಿತ್ತು ಎಂದು  ಟ್ವೀಟ್​ ಮಾಡಿದ್ದಾರೆ ಶೆಟ್ರು.



ಇನ್ನು, 777 ಚಾರ್ಲಿ ಸಿನಿಮಾದ ನಿರ್ದೇಶಕ ಕಿರಣ್​ ರಾಜ್​ ಸಹ ಕಿರಿಕ್​ ಪಾರ್ಟಿ ಸಿನಿಮಾಗೆ 4 ವರ್ಷ ತುಂಬಿದ ಸಂಭ್ರಮದಲ್ಲಿದ್ದಾರೆ. 'ಕಿರಿಕ್​ ಪಾರ್ಟಿಗೆ 4 ವರ್ಷಗಳು! ಚಿತ್ರರಂಗಕ್ಕೆ ಅದೆಷ್ಟೋ ಹೊಸ ಕಲಾವಿದರು, ತಂತ್ರಜ್ಞರನ್ನು ಪರಿಚಯಿಸಿದ ಚಿತ್ರ. ಎಷ್ಟೋ ಮಂದಿ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನುಗಳಿಸಿದ್ರು. ಹಲವರ ಸಿನಿ ಜೀವನದ ಹಾದಿಯನ್ನೇ ಬದಲಿಸಿತು. ಅದರಲ್ಲಿ ನಾನು ಒಬ್ಬ ಅನ್ನೋದು ಪ್ರತಿ ದಿನದ ಹೆಮ್ಮೆಯ ಕ್ಷಣ' ಎಂದು ಕಿರಣ್​ ಸಂತಸ ವ್ಯಕ್ತಪಡಿಸಿದ್ದಾರೆ.








View this post on Instagram






A post shared by Kiranraj K (@kiranraj_k)





ಕಿರಿಕ್​ ಪಾರ್ಟಿ ಸಿನಿಮಾದಿಂದಾಗಿ ರಿಷಬ್‌ ಶೆಟ್ಟಿ, ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್‌ ಶೆಟ್ಟಿ ಕನ್ನಡ ಸಿನಿರಂಗದಲ್ಲಿ ಭದ್ರವಾಗಿ ನೆಲೆಯೂರುವಂತಾಯಿತು.

Published by:Anitha E
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು