Kirik Party: ಮತ್ತೆ ಸದ್ದು ಮಾಡಿದ ಡಾನ್ಸಿಂಗ್​ ಡಾಲ್​: ಕಿರಿಕ್​ ಹುಡುಗಿಯ ಹೊಸ ಸಿನಿಮಾ..!

Comali Movie: ಡಾನ್ಸಿಂಗ್​ ಡಾಲ್ ಎಂದೇ ಖ್ಯಾತರಾಗಿರುವ ಸಂಯುಕ್ತಾ ಹೆಗ್ಡೆ​  ಎಲ್ಲೋದ್ರು ಅಂದುಕೊಳ್ಳುತ್ತಿರುವಾಗಲೇ ತಮಿಳು ಚಿತ್ರವೊಂದರ ಮೂಲಕ ಸದ್ದು ಮಾಡುವ ಸೂಚನೆ ಕೊಡ್ತಿದ್ದಾರೆ.

Anitha E | news18
Updated:August 7, 2019, 2:15 PM IST
Kirik Party: ಮತ್ತೆ ಸದ್ದು ಮಾಡಿದ ಡಾನ್ಸಿಂಗ್​ ಡಾಲ್​: ಕಿರಿಕ್​ ಹುಡುಗಿಯ ಹೊಸ ಸಿನಿಮಾ..!
ಸಂಯುಕ್ತಾ-ರಿಕ್​
Anitha E | news18
Updated: August 7, 2019, 2:15 PM IST
ಕಿರಿಕ್ ಬೆಡಗಿ ಸಂಯುಕ್ತಾ ಹೆಗ್ಡೆ ಇತ್ತೀಚೆಗೆ ಎಲ್ಲೂ ಕಾಣಿಸಿಕೊಂಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿದೇಶಿ ಗೆಳೆಯನೊಂದಿಗೆ ಪ್ರವಾಸದಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ, ಬೇರೆಲ್ಲೂ ಕಣ್ಣಿಗೆ ಬಿದ್ದಿಲ್ಲ ಈ ಚೆಲುವೆ.

ಡಾನ್ಸಿಂಗ್​ ಡಾಲ್ ಎಂದೇ ಖ್ಯಾತರಾಗಿರುವ ಸಂಯುಕ್ತಾ ಹೆಗ್ಡೆ​  ಎಲ್ಲೋದ್ರು ಅಂದುಕೊಳ್ಳುತ್ತಿರುವಾಗಲೇ ತಮಿಳು ಚಿತ್ರವೊಂದರ ಮೂಲಕ ಸದ್ದು ಮಾಡುವ ಸೂಚನೆ ಕೊಡ್ತಿದ್ದಾರೆ.

Kirik Party fame actress Samyuktha Hegdes new tamil movie releasing on August 15th
'ಕೋಮಾಲಿ' ಚಿತ್ರದಲ್ಲಿ ಸಂಯುಕ್ತಾ ಹೆಗ್ಡೆ


ಹೌದು, 'ಕೋಮಾಲಿ' ಎಂಬ ಸಿನಿಮಾದಲ್ಲಿ ಸಂಯುಕ್ತಾ ನಟಿಸಿದ್ದು, ಅದರ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆಯಾಗಿದೆ. ಸಂಯುಕ್ತಾ ಚಿತ್ರದ ನಾಯಕನ ಮೊದಲ ಪ್ರೇಮಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಟ್ರೈಲರ್​ ಬಿಡುಗಡೆಯಾಗುತ್ತಿದ್ದಂತೆಯೇ ಅದರಲ್ಲಿನ ಒಂದು ದೃಶ್ಯದಿಂದಾಗಿ ವಿವಾದಕ್ಕೀಡಾಗಿದೆ.

ರಜಿನಿ ಬಣ್ಣದ ಬದುಕಿನಿಂದ ರಾಜಕೀಯಕ್ಕೆ ಎಂಟ್ರಿ ಕೊಡುವ ಕುರಿತು ಈ ಸಿನಿಮಾದಲ್ಲಿ ಚಿತ್ರೀಕರಿಸಲಾಗಿದೆ. ಈ ದೃಶ್ಯವನ್ನು ಟ್ರೈಲರ್​ನಲ್ಲಿ ನೋಡಿದ ಮೇಲೆ ತಮಿಳಿನ ಸಿನಿ ಪ್ರಮುಖರು ಹಾಗೂ ಅಭಿಮಾನಿಗಳು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ.



ಈ ದೃಶ್ಯವನ್ನು ಚಿತ್ರದಲ್ಲಿ ಆ ದೃಶ್ಯವನ್ನು ತೆಗೆಯುವಂತೆ ಕಮಲ್​ ಹಾಸನ್​ ಸೇರಿದಂತೆ ಸಾಕಷ್ಟು ಮಂದಿ ಚಿತ್ರತಂಡಕ್ಕೆ ತಿಳಿಸಿದ್ದಾರೆ. ಅದರಂತೆ ಈಗ ಈ ದೃಶ್ಯವನ್ನು ಸಿನಿಮಾದಿಂದ ತೆಗೆಯಲಾಗಿದೆ ಎಂಬ ಸುದ್ದಿಗಳೂ ಬರುತ್ತಿವೆ.
Loading...

ಇದನ್ನೂ ಓದಿ: Comali Movie: ರಜಿನಿಯನ್ನು ಕೆಣಕಿದ್ರೆ ಕಮಲ್ ತಗೋತಾರೆ ಕ್ಲಾಸ್ : ಕೋಮಾಲಿ ತಂಡಕ್ಕೆ ಬಿಸಿ ಮುಟ್ಟಿಸಿದ ಉಳಗ ನಾಯಕನ್​

ಇನ್ನು 16 ವರ್ಷಗಳು ಕೋಮಾ ಪರಿಸ್ಥಿತಿಯಲ್ಲಿದ್ದು, ಅದರಿಂದ ವಾಪಸ್ ಬಂದ ಮೇಲೆ ಅವರ ಪರಿಸ್ಥಿತಿ ಹೇಗಿರುತ್ತದೆ ಎಂಬ ಕಥಾ ವಸ್ತು ಈ ಚಿತ್ರದಲ್ಲಿದ್ದು,  ಅದನ್ನು ಹಾಸ್ಯದ ರೂಪದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಗಣೇಶ್​ ನಿರ್ಮಾಣದ ಈ ಸಿನಿಮಾದಲ್ಲಿ ಜಯಂ ರವಿ ನಾಯಕನಾಗಿ ಅಭಿನಯಿಸಿದ್ದು, ಸಂಯುಕ್ತಾ ಹಾಗೂ ಕಾಜಲ್​ ಅಗರ್​ವಾಲ್​ ಸಹ ನಟಿಸಿದ್ದಾರೆ. ಆಗಸ್ಟ್​ 15ರಂದು ಚಿತ್ರ ತೆರೆ ಕಾಣಲಿದೆ.

 

Deepika Padukone: ಮೇಕಪ್​ ಇಲ್ಲದೆ ವೋಗ್​ ನಿಯತಕಾಲಿಕೆಗೆ ಪೋಸ್​ ಕೊಟ್ಟ ಗುಳಿಕೆನ್ನೆ ಸುಂದರಿ ದೀಪಿಕಾ ಪಡುಕೋಣೆ..!



 

 

 
First published:August 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...