ರಕ್ಷಿತ್ ಶೆಟ್ಟಿ (Rakshit Shetty), ರಶ್ಮಿಕಾ ಮಂದಣ್ಣ (Rashmika mandanna) ಹಾಗೂ ಸಂಯುಕ್ತಾ ಹೆಗಡೆ ಅಭಿನಯದ 'ಕಿರಿಕ್ ಪಾರ್ಟಿ' (Kirik Party) ಸಿನಿಮಾ ಕೇವಲ ಬಾಕ್ಸಾಫಿಸ್ ಅಲ್ಲದೆ, ಈ ಚಿತ್ರದ ಹಾಡುಗಳು ಯೂಟ್ಯೂಬ್ನಲ್ಲೂ (You tube) ಹೊಸ ದಾಖಲೆ ಬರೆದಿತ್ತು. ಇಂತಹ ಹಿಟ್ ಸಿನಿಮಾದ ಸೀಕ್ವೆಲ್ಗಾಗಿ ಕನ್ನಡದ ಸಿನಿ ಪ್ರೇಕ್ಷಕರು ಕಾದು ಕುಳಿತಿದ್ದಾರೆ. ಹೀಗಿರುವಾಗಲೇ ರಕ್ಷಿತ್ ಶೆಟ್ಟಿ 'ಕಿರಿಕ್ ಪಾರ್ಟಿ 2' KP2 ಚಿತ್ರ ಮಾಡುವುದಾಗಿ ಪ್ರಕಟಿಸಿ ಹಲವು ದಿನಗಳು ಕಳೆದಿದ್ದು, ಅಭಿಮಾನಿಗಳು ಚಿತ್ರದ ಅಪ್ಡೆಟ್ಗಾಗಿ ಕಾಯುತ್ತಿದ್ದಾರೆ. ಇಷ್ಟು ದಿನ ಈ ಬಗ್ಗೆ ಯಾವುದೇ ಸುದ್ದಿ ಇರಲಿಲ್ಲ, ಆದರೆ ಈಗ ರಕ್ಷಿತ್ ಮತ್ತು ಟೀಮ್ ಈ ಚಿತ್ರದ ಸಿದ್ದತೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ತಯಾರಿ ಆರಂಭಿಸಿದ ಚಿತ್ರತಂಡ
ಕಾಲೇಜ್ ಕಥೆಯನ್ನ ತೆರೆಯ ಮೇಲೆ ಅದ್ಭುತವಾಗಿ ಚಿತ್ರಿಸಿ, ಆ ಸಮಯದಲ್ಲಿ ಹೈಪ್ ಕ್ರಿಯೇಟ್ ಮಾಡಿರುವ ಚಿತ್ರಗಳಲ್ಲಿ ಕಿರಿಕ್ ಪಾರ್ಟಿ ಕೂಡ ಒಂದು. ಅಲ್ಲದೇ ಕಾಲೇಜ್ ಕತೆಯ ಚಿತ್ರ ಎಮದರೆ ಕಾಲೆಜ್ ಹುಡುಗರು ಕಿರಿಕ್ ಪಾರ್ಟಿ ಎಂದು ಈಗಲೂ ಹೇಳುತ್ತಾರೆ, ಅಂತಹ ಅದ್ಭುತ ಚಿತ್ರ. ಈ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಡಿಗ್ರಿ ಕೊನೆಯ ಹಂತದಲ್ಲಿದ್ದ ವಿದ್ಯಾರ್ಥಿಗಳಿಗೆ ಇದರ ಹಾಡುಗಳು ಬಹಳ ಹತ್ತಿರ ಎನಿಸಿದ್ದವು. ಒಟ್ಟಾರೆಯಾಗಿ ಬದುಕಿನ ಮುಖ್ಯ ಘಟ್ಟದ ಕತೆಯನ್ನು ಬಿಚ್ಚಿಟ್ಟ ಅಮೋಘ ಚಿತ್ರ ಇದು ಎಂಬುದರಲ್ಲಿ ಅನುಮಾನವಿಲ್ಲ. ಇದೀಗ ಅದರ ಸೀಕ್ವೆಲ್ ತರಲು ಸಿದ್ದತೆ ಜೋರಾಗಿ ನಡೆಯುತ್ತಿದೆಯಂತೆ.
ಹೌದು ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಹೊಸ ತಂಡದೊಂದಿಗೆ `ಕಿರಿಕ್ ಪಾರ್ಟಿ 2′ ಮಾಡೋಕೆ ರಕ್ಷಿತ್ ಶೆಟ್ಟಿ ರೆಡಿಯಾಗಿದ್ದಾರೆ. ಈಗಾಗಲೇ ಅದಕ್ಕೆ ಬೇಕಾದ ಸಿದ್ದತೆ ಆರಂಭಿಸಿದ್ದು, ಹೊಸ ಕತೆಯ ಜೊತೆ ಪಾತ್ರಗಳು ಹೊಸದಿರಲಿದೆ ಎನ್ನಲಾಗುತ್ತಿದೆ. ಇನ್ನು ಚಿತ್ರತಂಡ ಕೂಡ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದು, ಎಲ್ಲಾ ತಯಾರಿಯ ನಂತರ ಘೋಷಣೆ ಮಾಡುವ ಸಾಧ್ಯತೆ ಇದೆ. ಇನ್ನು ಜನರು ಕೂಡ ಈ ಬಾರಿ ಕಿರಿಕ್ ಪಾರ್ಟಿ ತಂಡ ಹೇಗೆ ಮೋಡಿ ಮಾಡಲಿದೆ ಎಂದು ಕಾದು ಕುಳಿತಿರುವುದರಲ್ಲಿ ಅನುಮಾನವಿಲ್ಲ.
ಇದನ್ನೂ ಓದಿ: ಪ್ರಿಯಾಮಣಿಗಿಂದು ಜನ್ಮದಿನದ ಸಂಭ್ರಮ; ಬಹುಭಾಷಾ ನಟಿಯ ಸಿನಿ ಜರ್ನಿ
ಮತ್ತೊಂದು ಸೂಪರ್ ಹಿಟ್ ಚಿತ್ರದ ತವಕದಲ್ಲಿ ಅಭಿಮಾನಿಗಳು
2016ರಲ್ಲಿ ತೆರೆ ಕಂಡ ಈ ಸಿನಿಮಾ ಮಾಡಿದ ಸದ್ದು ಅಷ್ಟಿಷ್ಟಲ್ಲ. ರಕ್ಷಿತ್ ಶೆಟ್ಟಿ ನಾಯಕನಾಗಿರುವ ಈ ಸಿನಿಮಾಗೆ ರಿಷಬ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದೇ ಸಿನಿಮಾದ ಮೂಲಕ ರಶ್ಮಿಕಾ ಹಾಗೂ ಸಂಯುಕ್ತಾ ಹೆಗ್ಡೆ ನಾಯಕಿಯರಾಗಿ ಎಂಟ್ರಿ ಕೊಟ್ಟರು. ಯುವ ಸಿನಿಪ್ರಿಯರಿಗೆ ಈ ಸಿನಿಮಾ ಸಖತ್ ಇಷ್ಟವಾಗಿತ್ತು. ಬಾಕ್ಸಾಫಿಸ್ನಲ್ಲೂ ಕಿರಿಕ್ ಪಾರ್ಟಿ ಸಖತ್ ಸದ್ದು ಮಾಡಿತ್ತು. ಇನ್ನು, ಅಜನೀಶ್ ಲೋಕನಾಥ್ ನೀಡಿದ್ದ ಸಂಗೀತ ಇಂದಿಗೂ ಸಿನಿಪ್ರಿಯರ ನಾಲಗೆ ಮೇಲೆ ನಲಿಯುತ್ತಿದೆ.
ಇದನ್ನೂ ಓದಿ: ಜೂನ್ 10ರಿಂದ ಚಾರ್ಲಿ ಓಟ ಶುರು, 21 ಸಿಟಿಗಳಲ್ಲಿ ಚಾರ್ಲಿ ಪೇಯ್ಡ್ ಪ್ರೀಮಿಯರ್ ಶೋ
ಕಿರಿಕ್ ಪಾರ್ಟಿ ಚಿತ್ರ ಚಿತ್ರರಂಗಕ್ಕೆ ಅದೆಷ್ಟೋ ಹೊಸ ಕಲಾವಿದರು, ತಂತ್ರಜ್ಞರನ್ನು ಪರಿಚಯಿಸಿದ ಚಿತ್ರ. ಎಷ್ಟೋ ಮಂದಿ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನುಗಳಿಸಿದ್ರು. ಹಲವರ ಸಿನಿ ಜೀವನದ ಹಾದಿಯನ್ನೇ ಬದಲಿಸಿತು. ಅದರಲ್ಲೂ ನಟಿ ರಶ್ಮಿಕಾ ಮಂದಣ್ಣ ಅದೃಷ್ಟವೇ ಖುಲಾಯಿಸಿತು. ಅವರು ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಬಾಲಿವುಡ್ನಲ್ಲಿ ಸಹ ಈಗ ಮಿಂಚುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ