• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Kirik Keerthi: ಡೆತ್ ನೋಟ್​ ಬರೆದು ಆತ್ಮಹತ್ಯೆಗೆ ಯತ್ನಿಸಿದ್ರಾ ಕಿರಿಕ್ ಕೀರ್ತಿ!? ಏನಿದು ಬಿಗ್ ಶಾಕಿಂಗ್ ನ್ಯೂಸ್?

Kirik Keerthi: ಡೆತ್ ನೋಟ್​ ಬರೆದು ಆತ್ಮಹತ್ಯೆಗೆ ಯತ್ನಿಸಿದ್ರಾ ಕಿರಿಕ್ ಕೀರ್ತಿ!? ಏನಿದು ಬಿಗ್ ಶಾಕಿಂಗ್ ನ್ಯೂಸ್?

ಕಿರಿಕ್ ಕೀರ್ತಿ ದಂಪತಿ

ಕಿರಿಕ್ ಕೀರ್ತಿ ದಂಪತಿ

ಮಗನ ಜೊತೆಗಿರುವ ಫೋಟೋ ಶೇರ್ ಮಾಡಿದ ಕಿರಿಕ್ ಕೀರ್ತಿ, ವೈಯಕ್ತಿಕ ಜೀವನದಲ್ಲಾದ ಕೆಲವು ಘಟನೆಗಳಿಂದ ಡಿಪ್ರೆಷನ್‌ಗೆ ಹೋಗಿದ್ದೆ ಎಂದು ಹೇಳಿದ್ದಾರೆ.

  • News18 Kannada
  • 5-MIN READ
  • Last Updated :
  • Karnataka, India
  • Share this:

ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಕಿರಿಕ್ ಕೀರ್ತಿ (Kirik Keerthi), ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟಿವ್ ಆಗಿದ್ದಾರೆ. ರಿಯಾಲಿಟಿ ಶೋಗಳಲ್ಲಿ (Reality Show) ಭಾಗವಹಿಸಿ ಕಿರಿಕ್ ಕೀರ್ತಿ ಮತ್ತಷ್ಟು ಜನಪ್ರಿಯರಾಗಿದ್ದಾರೆ.  ಸೋಶಿಯಲ್ ಮೀಡಿಯಾದಲ್ಲಿ (Social Media) ನೋವಿನ ಘಟನೆಯನ್ನು ಶೇರ್ ಮಾಡಿಕೊಂಡಿದ್ದಾರೆ. ಜಗತ್ತಿಗೆ ವಿದಾಯ ಹೇಳುವ ನಿರ್ಧಾರ ಮಾಡಿದ್ದೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ವೈಯಕ್ತಿಕ ಜೀವನದಲ್ಲಿ (Personal Life) ಉಂಟಾದ ನೋವಿನ ಕಣ್ಣೀರಿನ ಕಥೆಯನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ. 


ಆಘಾತಕಾರಿ ಸಂಗತಿ ಬಿಚ್ಚಿಟ್ಟ ಕಿರಿಕ್ ಕೀರ್ತಿ


ಪತ್ರಕರ್ತರಾಗಿಯೂ ಹೆಸರು ಮಾಡಿದ್ದ ಕಿರಿಕ್ ಕೀರ್ತಿ ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಿರೋದಾಗಿ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಆದ್ರೆ ಈ ಬಾರಿ ಜಗತ್ತನ್ನೇ ಬಿಟ್ಟು ಹೋಗುವ ನಿರ್ಧಾರ ಮಾಡಿಬಿಟ್ಟಿದೆ ಎಂಬ ಆಘಾತಕಾರಿ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.


ಡಿಪ್ರೆಶನ್‌ಗೆ ಹೋಗಿದ್ಯಾಕೆ ಕಿರಿಕ್ ಕೀರ್ತಿ?


ಮಗನ ಜೊತೆಗಿರುವ ಫೋಟೋ ಶೇರ್ ಮಾಡಿದ ಕಿರಿಕ್ ಕೀರ್ತಿ, ವೈಯಕ್ತಿಕ ಜೀವನದಲ್ಲಾದ ಕೆಲವು ಘಟನೆಗಳಿಂದ ಡಿಪ್ರೆಷನ್‌ಗೆ ಹೋಗಿದ್ದೆ ಎಂದು ಹೇಳಿದ್ದಾರೆ. ಅಲ್ಲದೇ ಜಿಹಾದಿಗಳ ಬೆದರಿಕೆ ಕರೆಗಳು ಕುಟುಂಬವನ್ನು ತುಂಬಾ ಡಿಸ್ಟರ್ಬ್ ಮಾಡಿತ್ತು ಎಂದು ಸಾಮಾಜಿಕ ಜಾಲತಾದಲ್ಲಿ ಕಿರಿಕ್ ಕೀರ್ತಿ ದೀರ್ಘವಾದ ಪೋಸ್ಟ್ ಹಂಚಿಕೊಂಡಿದ್ದಾರೆ.


kirik keerthi shared a post on that he had decided to good bye to life


ಕಿರಿಕ್ ಕೀರ್ತಿ ಪೋಸ್ಟ್ ನಲ್ಲಿ ಏನಿದೆ?


ನಿರ್ಧಾರ ಮಾಡಿಬಿಟ್ಟಿದ್ದೆ. ಜಗತ್ತಿಗೆ ವಿದಾಯ ಹೇಳಿಬಿಡಬೇಕು ಅಂತ. ಕಾರಣಗಳು ಹಲವು. ವೈಯಕ್ತಿಕ ಜೀವನದಲ್ಲಾದ ಕೆಲವು ಘಟನೆಗಳು ನನ್ನನ್ನು ಇನ್ನಿಲ್ಲದಂತೆ ಕುಗ್ಗಿಸಿತ್ತು. ಜೀವನದ ಮೇಲೊಂದು ಕೆಟ್ಟ ನಿರಾಸಕ್ತಿ ಬಂದಿತ್ತು. ಎಲ್ಲ ಪ್ರಯತ್ನಗಳೂ ಕೈಕೊಡ್ತಿತ್ತು. ಒಂದು ಕಡೆ ಜಿಹಾದಿಗಳ ಬೆದರಿಕೆ ಕರೆಗಳು ಕುಟುಂಬವನ್ನು ಡಿಸ್ಟರ್ಬ್ ಮಾಡಿತ್ತು. ಸೋಷಿಯಲ್ ಮೀಡಿಯಾದಿಂದಲೂ ಸ್ವಲ್ಪ ದೂರವೇ ಇದ್ದೆ. ಆದ್ರೆ ಈಗ ಎಲ್ಲದಕ್ಕೂ ಹೆದರಿ ಹೋಗಿಬಿಟ್ರೆ ನನ್ನನ್ನು ಈ ಪರಿಸ್ಥಿತಿಗೆ ತಂದವರಿಗೆ ಉತ್ತರ ಕೊಡೋದು ಹೇಗೆ..? ನನ್ನ ನಂಬಿ ಇನ್ವೆಸ್ಟ್ ಮಾಡಿರೋರಿಗೆ ನ್ಯಾಯ ಸಿಗೋದು ಹೇಗೆ...? ನನ್ನ ಮಗನ ಭವಿಷ್ಯ ಕಟ್ಟೋದು ಹೇಗೆ..? ಈ ಪ್ರಶ್ನೆಗಳು ಕಾಡಿದ್ವು, ಟೈಪ್ ಮಾಡಿದ ಡೆತ್ ನೋಟ್ ಡಿಲೀಟ್ ಮಾಡ್ದೆ' ಎಂದು ಬರೆದುಕೊಂಡಿದ್ದಾರೆ.


'10 ನಿಮಿಷ ಧ್ಯಾನ ಮಾಡ್ದೆ. ತಡವಾದ್ರೂ ಪರವಾಗಿಲ್ಲ ನನ್ನ ನಂಬಿದ ಎಲ್ಲರಿಗೂ ಅವರಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳೋ ಹಾಗೆ ಸಾಧಿಸಬೇಕು ಅಂತ ಡಿಸೈಡ್ ಮಾಡ್ದೆ. ಮನಸ್ಸಲ್ಲಿದ್ದ ಕೆಟ್ಟ ಅಲೋಚನೆಗಳನ್ನು ಕಿತ್ತು ಬಿಸಾಕಿದ್ದೇನೆ. ಕೆಲವರನ್ನು ಕಳೆದುಕೊಂಡಿದ್ದರ ಹೊರತು ಬೇರೆ ಎಲ್ಲವನ್ನೂ ಟ್ರ್ಯಾಕಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡ್ತೀನಿ. ನಿಮ್ಮ ಬೆಂಬಲ‌ ಜೊತೆಗಿರಲಿ. ಡಿಪ್ರೆಷನ್‌ನಿಂದ ಮತ್ತೆ ವಾಪಾಸ್ ಬರಲು ಸಹಕರಿಸಿ. ಮತ್ತೆ ನನ್ನ ಮುಖದ ಮೇಲಿನ ನಗು ವಾಪಾಸ್ ತರುವ ತನಕ ಪ್ರಯತ್ನ‌ ನಿರಂತರ. ಇದು ಹೇಳಿಕೊಳ್ಳಬಾರದ ವಿಷಯ. ಆದ್ರೆ ಹೇಳಿಕೊಂಡರಷ್ಟೆ ಸಮಾಧಾನ' ಎಂದು ಕಿರಿಕ್ ಕಾರ್ತಿ ತನ್ನ ನೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.




ಇದನ್ನೂ ಓದಿ: Shahrukh Khan: ಬಾಹುಬಲಿ ಕೋಟೆ ಪುಡಿ ಪುಡಿ, ಕೆಜಿಎಫ್ ದಾಖಲೆಯೂ ಉಡೀಸ್, 600 ಕೋಟಿ ದಾಟಿದೆ ಪಠಾಣ್ ಕಲೆಕ್ಷನ್!




ಕಾಮೆಂಟ್ ಹೈಡ್​ ಮಾಡಿದ ಕಿರಿಕ್ ಕೀರ್ತಿ


ಡೆತ್ ನೋಟ್ ಬರೆದು ಸಾವಿಗೆ ಶರಣಾಗಲು ಮುಂದಾಗಿದ್ದ ಕಿರಿಕ್ ಕೀರ್ತಿ, ಇಂತಹ ನಿರ್ಧಾರ ತೆಗೆದುಕೊಳ್ಳಲು ನಿಖರ ಕಾರಣದ ಬಗ್ಗೆ ರಿವೀಲ್ ಮಾಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗೆ ಕಾಮೆಂಟ್ ಅನ್ನು ಹೈಡ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಿರಿಕ್ ಪೋಸ್ಟ್ ನೋಡ್ತಿದ್ದಂತೆ ಅಭಿಮಾನಿಗಳು ಕಿರಿಕ್ ಕೀರ್ತಿ ಧೈರ್ಯವಾಗಿ ಮುನ್ನಡೆಯಿರಿ ಎಂದು ಹೇಳ್ತಿದ್ದಾರೆ.

Published by:ಪಾವನ ಎಚ್ ಎಸ್
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು