Bigg Boss OTT: ಬಿಗ್​ಬಾಸ್​ ಮನೆಯಿಂದ ರಾಜಸ್ಥಾನಿ ಬೆಡಗಿ ಔಟ್ ಆಗಲು ಇದೆ ಕಾರಣ? ಸೋನು ಗೌಡ ಸೇಫ್ ಆಗಿದ್ದೇಗೆ?

ಕಿರಣ್​ ಯೋಗೇಶ್ವರ್​ ಅವರು ರಾಜಸ್ಥಾನದವರು ಹೀಗಾಗಿ ಅವರಿಗೆ ಕನ್ನಡ ಮಾತಾಡಲು ಬರುತ್ತಿರಲಿಲ್ಲ. ಜೊತೆಗೆ ಬಿಗ್​ ಬಾಸ್​ ಸ್ಪರ್ಧಿಗಳ ಜೊತೆ ಕೂಡ ಹೊಂದಿಕೊಳ್ಳಲು ಸಾಧ್ಯವಾಗದೆ ಕಿರಣ್​ ಅವರು  ಪರದಾಡುತ್ತಿದ್ರು. 

ಕಿರಣ್​ ಯೋಗೇಶ್ವರ್​

ಕಿರಣ್​ ಯೋಗೇಶ್ವರ್​

  • Share this:
ಬಿಗ್​ ಬಾಸ್​ ಕನ್ನಡ ಒಟಿಟಿ’ (Bigg Boss Kannada OTT ) ಶೋನಲ್ಲಿ ಮೊದಲ ಎಲಿಮಿನೇಷನ್​ ನಡೆದಿದೆ. ರಾಜಸ್ಥಾನದ ಬೆಡಗಿ ಕಿರಣ್​ ಯೋಗೇಶ್ವರ್ (Kiran Yogeshwar) ಅವರು ಬಿಗ್​ ಬಾಸ್​ ಮನೆಯಿಂದ ಹೊರಹೋಗಿದ್ದಾರೆ. ಕಿರಣ್​ ಯೋಗೇಶ್ವರ್​ ಅವರು ರಾಜಸ್ಥಾನದವರು ಹೀಗಾಗಿ ಅವರಿಗೆ ಕನ್ನಡ ಮಾತಾಡಲು ಬರುತ್ತಿರಲಿಲ್ಲ. ಜೊತೆಗೆ ಬಿಗ್​ ಬಾಸ್​ ಸ್ಪರ್ಧಿಗಳ ಜೊತೆ ಕೂಡ ಹೊಂದಿಕೊಳ್ಳಲು ಸಾಧ್ಯವಾಗದೆ ಕಿರಣ್​ ಅವರು  ಪರದಾಡುತ್ತಿದ್ರು.  ಜೊತೆಗೆ ಅವರಿಗೆ ಕಡಿಮೆ ವೋಟ್ (Vote)​ ಬಂದಿದ್ದು, ಈ ಕಾರಣಕ್ಕೆ ಅವರು ಬಿಗ್​ಬಾಸ್​ ಮನೆಯಿಂದ ಔಟ್ (Out) ​ಆಗಿದ್ದಾರೆ.

ಕಿರಣ್​ ಯೋಗೇಶ್ವರ್​ ಔಟ್​

ಮೊದಲ ವಾರವೇ ಅವರ ಬಿಗ್​ ಬಾಸ್​ ಪಯಣ ಅಂತ್ಯವಾಗಿದೆ. ಇಂದು (ಆಗಸ್ಟ್​ 13) ನಡೆದ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಎಪಿಸೋಡ್​ನಲ್ಲಿ ಕಿಚ್ಚ ಸುದೀಪ್​ ಅವರು ಎಲಿಮಿನೇಷನ್​ ಘೋಷಿಸಿದ್ದಾರೆ. ರಾಜಸ್ಥಾನ ಮೂಲದ ಬ್ಯೂಟಿ ಕ್ವೀನ್, ಮಾಡೆಲ್ ಕಿರಣ್ ಯೋಗೇಶ್ವರ್‌ ಬಿಗ್ ಬಾಸ್ ಮನೆಯಿಂದ ಈ ವಾರ ಹೊರ ನಡೆದಿದ್ದಾರೆ. ಮನೆಯವರ ಜತೆ ಖುಷಿ ಖುಷಿಯಾಗಿದ್ದ ಸ್ಪರ್ಧಿ ಕಿರಣ್, ಅಭಿಮಾನಿಗಳಿಗೆ ಮನರಂಜಿಸುವುದರಲ್ಲಿ ಸೋತ್ರಾ ಎಂಬ ಪ್ರಶ್ನೆ ಇದೀಗ ಕಾಡ್ತಿದೆ.

ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ವಿಚಾರಗಳಿಂದ ಗಮನ ಸೆಳೆದಿದ್ದ ಸ್ಪರ್ಧಿ ಕಿರಣ್ ಯೋಗೇಶ್ವರ್ ಈಗ ಮನೆಯಿಂದ ಹೊರ ನಡೆದಿದ್ದಾರೆ. ಮುಂದಿನ ವಾರ ಯಾರ ತಲೆಯ ಮೇಲೆ ಎಲಿಮೀನೇಷನ್ ಕತ್ತಿ ತೂಗುತ್ತೆ ಎಂಬುದನ್ನ ಕಾದುನೋಡಬೇಕಿದೆ‌.

ಇದನ್ನೂ ಓದಿ:Bigg Boss OTT: ಬಿಗ್​ಬಾಸ್​ ಮನೆಯಲ್ಲಿ ಮತ್ತೆ ಸೋನು ಗೌಡ ವಿಡಿಯೋ ಚರ್ಚೆ; 'ಅವಳಿಗೆ ಟ್ರೋಲ್ ಆಗಿ ಫೇಮಸ್ ಆಗೋ ಆಸೆ'

ಬಿಗ್​ ಬಾಸ್​ ಮನೆಯಲ್ಲಿ ಎಲಿಮಿನೇಷನ್ ಭಯ

ಮೊದಲ ವಾರ ಬಿಗ್​ ಬಾಸ್​ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳು ಫುಲ್​ ಆ್ಯಕ್ಟಿವ್​ ಹಾಗಿದ್ರು. ತಮ್ಮ ಜೀವನ ಸಿಹಿ ಹಾಗೂ ಕಹಿ ಘಟನೆಗಳನ್ನು ಹಂಚಿಕೊಳ್ಳುತ್ತಾ ಖುಷಿಯಾಗಿದ್ರು.  ಕಡಿಮೆ ಸಮಯದಲ್ಲಿ ತಮ್ಮ ತನವನ್ನು ಸಾಬೀತು ಪಡಿಸಿಕೊಳ್ಳಬೇಕು. ವೀಕ್ಷಕರಿಂದ ವೋಟ್​ ಗಿಟ್ಟಿಸಿಕೊಳ್ಳಬೇಕು. ಎಲ್ಲ ಟಾಸ್ಕ್​ಗಳನ್ನು ಚೆನ್ನಾಗಿ ಆಡಬೇಕು. ಒಂದು ವಿಚಾರದಲ್ಲಿ ಎಡವಟ್ಟು ಆದರೂ ಎಲಿಮಿನೇಷನ್​ ಭಯ ಕಾಡುತ್ತದೆ. ಈ ವಾರ ಸಾನ್ಯಾ ಅಯ್ಯರ್​, ರಾಕೇಶ್​ ಅಡಿಗ, ಆರ್ಯವರ್ಧನ್​ ಗುರೂಜಿ, ಸೋನು ಶ್ರೀನಿವಾಸ್​ ಗೌಡ, ಅರ್ಜುನ್​ ರಮೇಶ್​, ಉದಯ್​ ಸೂರ್ಯ, ಸ್ಫೂರ್ತಿ ಗೌಡ, ಜಯಶ್ರೀ ಆರಾಧ್ಯ, ಅಕ್ಷತಾ ಕುಕ್ಕಿ, ಕಿರಣ್​ ಯೋಗೇಶ್ವರ್​ ನಾಮಿನೇಟ್​ ಆಗಿದ್ದರು.

Who is Bigg Boss OTT contestant Sonu Srinivasa Gowda
ಸೋನು ಶ್ರೀನಿವಾಸ್​ ಗೌಡ


ಸೋನುಗೌಡಗೆ ಸಖತ್​ ವೋಟು

ಬಿಗ್​ ಬಾಸ್​ ಮನೆಗೆ ಹೋದಾಗಿಂದ ಸೋನು ಶ್ರೀನಿವಾಸ್​ ಗೌಡ ಸಖತ್​ ಟ್ರೋಲ್​ ಆಗಿದ್ದಾರೆ.  ಅವರಿಗೆ ಬಿಗ್​ ಬಾಸ್​ ವೇದಿಕೆಯಲ್ಲಿ ಅವಕಾಶ ನೀಡಿದ್ದೇ ತಪ್ಪು ಎಂಬ ಅಭಿಪ್ರಾಯ ನೆಟ್ಟಿಗರಿಗೆ ಇದೆ. ಹಾಗಾಗಿ ಅವರಿಗೆ ಜನರಿಂದ ಕಡಿಮೆ ವೋಟ್​ ಬೀಳಬಹುದು ಎಂದೇ ಊಹಿಸಲಾಗಿತ್ತು. ಆದರೆ ಆ ರೀತಿ ಆಗಿಲ್ಲ. ಜನರು ಸೋನು ಗೌಡಗೆ ಸೇಫ್​ ಆಗುವಷ್ಟು ವೋಟ್​ ಮಾಡಿದ್ದಾರೆ. ಆದ್ದರಿಂದ ಮೊದಲ ವಾರದ ಎಲಿಮಿನೇಷನ್​ ನಿಂದ ಸೋನುಗೌಡ ತಪ್ಪಿಸಿಕೊಂಡಿದ್ದಾರೆ.

ಬಿಗ್​ಬಾಸ್​ ಮನೆಯಲ್ಲೂ ವಿಡಿಯೋ ಚರ್ಚೆ
 ಈ ಹಿಂದೆ ಸೋನು ಶ್ರೀನಿವಾಸ್​ ಗೌಡ ಅವರ ಖಾಸಗಿ ವಿಡಿಯೋ ಲೀಕ್​ ಆಗಿತ್ತು. ವಿಡಿಯೋ ವೈರಲ್ ಬಗ್ಗೆ ಬಿಗ್​ಬಾಸ್ ಮನೆಯಲ್ಲೂ ಸೋನು ಗೌಡ ಹಂಚಿಕೊಂಡ್ರು. ಮತ್ತೊಂದು ವಿಡಿಯೋ  ಅಂತನೂ ಬಿಗ್​ ಮನೆಯಲ್ಲಿ ಹೇಳಿದ್ರು. ವಿಡಿಯೋ ವಿಚಾರ ಬಿಗ್ ಬಾಸ್ ಮನೆಯಲ್ಲಿ ಚರ್ಚೆ ಆಗ್ತಾನೆ ಇದೆ.



ಟ್ರೋಲ್​ ವಿಚಾರದಲ್ಲಿ ಸಿಟ್ಟಾಗಿದ್ದಾರಾ ಸೋನು?

ಬಿಗ್​ ಬಾಸ್​ ಕನ್ನಡ ಒಟಿಟಿ ಶೋನಲ್ಲಿ ಎಲ್ಲಾ ಸ್ಪರ್ಧಿಗಳಿಗೆ ಒಂದು ಟಾಸ್ಕ್​ ನೀಡಲಾಗಿತ್ತು. ಈ ವೇಳೆ ಸೋನು ಗೌಡ ಅವರು ಒಂದಷ್ಟು ವಿಚಾರಗಳ ಬಗ್ಗೆ ಓಪನ್​ ಆಗಿ ಮಾತನಾಡಿದ್ದಾರೆ. ಟ್ರೋಲ್​  ವಿಚಾರದಲ್ಲಿ ತಮ್ಮ ನಿಲುವು ಏನು ಎಂಬುದನ್ನು ಅವರು ನೇರವಾಗಿ ಹೇಳಿದ್ದಾರೆ.
Published by:Pavana HS
First published: