Aamir Khan Divorce: ಆಮಿರ್ ಖಾನ್​ಗೆ ತಿನ್ನುವ ಖಾಯಿಲೆ ಇದೆ, ಆತ ಸ್ನಾನ ಮಾಡಲ್ಲ: ಕಿರಣ್ ರಾವ್ !

Aamir Khan - Kiran Rao Split: ಆಮಿರ್ ಖಾನ್ ಮತ್ತು ಕಿರಣ್ ರಾವ್ ನಡುವಿನ ವಿಚ್ಛೇದನಕ್ಕೆ ಕಾರಣ ಏನು ಎಂದು ಅಭಿಮಾನಿಗಳು ಭಾರೀ ತಲೆ ಕೆಡಿಸಿಕೊಂಡಿದ್ದಾರೆ. ಇದರ ನಡುವೆ ಆಮಿರ್ ಖಾನ್​ ಗೆ ಇದ್ದ ಕೆಲ ನ್ಯೂನತೆಗಳ ಬಗ್ಗೆ ಕಿರಣ್ ರಾವ್ ಮಾತನಾಡಿರುವ ತುಣುಕುಗಳು ಹರಿದಾಡುತ್ತಿವೆ.

ಆಮಿರ್ ಖಾನ್ - ಕಿರಣ್ ರಾವ್

ಆಮಿರ್ ಖಾನ್ - ಕಿರಣ್ ರಾವ್

  • Share this:
Aamir Khan - Kiran Rao Divorce: ದಂಪತಿಯ ಮಧ್ಯೆ ಇರುವ ಅನೇಕ ವಿಚಾರಗಳು ಹೊರಜಗತ್ತಿಗೆ ಬರೋದು ಬಹುಶಃ ಅವರು ಬೇರೆಯಾದ್ಮೇಲೇ ಅನ್ಸುತ್ತೆ. ಅಷ್ಟೇ ಅಲ್ಲ, ವಿಚ್ಛೇದನಕ್ಕೆ ಸ್ಪಷ್ಟ ಕಾರಣ ಏನು ಎನ್ನುವುದು ಮುಕ್ಕಾಲು ಪಾಲು ಪ್ರಕರಣಗಳಲ್ಲಿ ಗೊತ್ತೇ ಇರುವುದಿಲ್ಲ. ಆದರೆ ಬಾಲಿವುಡ್​ನ ಸದ್ಯದ ಹಾಟೆಸ್ಟ್ ನ್ಯೂಸ್ ಆದ ಆಮಿರ್ ಖಾನ್ ಮತ್ತು ಕಿರಣ್ ರಾವ್ ನಡುವಿನ ವಿಚ್ಛೇದನಕ್ಕೆ ಕಾರಣ ಏನು ಎಂದು ಅಭಿಮಾನಿಗಳು ಭಾರೀ ತಲೆ ಕೆಡಿಸಿಕೊಂಡಿದ್ದಾರೆ. ಇದರ ನಡುವೆ ಆಮಿರ್ ಖಾನ್​ ಗೆ ಇದ್ದ ಕೆಲ ನ್ಯೂನತೆಗಳ ಬಗ್ಗೆ ಕಿರಣ್ ರಾವ್ ಮಾತನಾಡಿರುವ ತುಣುಕುಗಳು ಹರಿದಾಡುತ್ತಿವೆ. 15 ವರ್ಷ ಜೊತೆಯಾಗಿದ್ದವರು ಹೀಗೆ ಧಿಡೀರಂತೆ ಬೇರೆಯಾಗ್ತಿದ್ದಾರೆ ಎಂದರೆ ಅದರ ಹಿಂದೆ ನಾನಾ ಕಾರಣಗಳಿರಬಹುದು. ಬಹುಶಃ ಆಮಿರ್ ಖಾನ್​ನ ಈ ಅಭ್ಯಾಸಗಳು ಕೂಡಾ ವಿಚ್ಛೇದನಕ್ಕೆ ಕಾರಣವಾಗಿರಬಹುದು ಎನ್ನುವ ಚರ್ಚೆ ನಡೆಯುತ್ತಿದೆ.

ಆಮಿರ್​ ಖಾನ್​ಗೆ ತಿನ್ನುವ ಖಾಯಿಲೆ ಇದ್ಯಂತೆ: ಹೀಗಂತ ಖುದ್ದು ಕಿರಣ್ ರಾವ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದನ್ನು ಪಕ್ಕದಲ್ಲೇ ಇದ್ದ ಆಮಿರ್ ಖಾನ್ ಕೂಡಾ ಒಪ್ಪಿದ್ದರು. ಒಂದು ವೇಳೆ ಡಯೆಟ್​ನಲ್ಲಿದ್ದರೆ ಆಮಿರ್ ಬಹುತೇಕ ಏನನ್ನೂ ತಿನ್ನೋದೇ ಇಲ್ಲವಂತೆ. ಡಯೆಟ್ ಮಾಡ್ತಿಲ್ಲ ಎಂದರೆ ಸಿಕ್ಕ ಸಿಕ್ಕದ್ದನ್ನೆಲ್ಲಾ ತಿನ್ನುತ್ತಾರಂತೆ. ಇದೊಂಥರಾ ತಿನ್ನುವ ಖಾಯಿಲೆ, ಆಮಿರ್​ಗೆ ಈ ಖಾಯಿಲೆ ಇದೆ ಎಂದಿದ್ದಾರೆ  ಕಿರಣ್ ರಾವ್.

ಇದನ್ನೂ ಓದಿ: Aamir Khan and Kiran Rao: ಆಮಿರ್‌ ಖಾನ್- ಕಿರಣ್ ರಾವ್ ಮಾತ್ರ ಅಲ್ಲ, ಬಾಲಿವುಡ್ ನಲ್ಲಿ ಇದೇ ರೀತಿ ಬೇರೆಯಾದವ್ರು ಬೇಕಾದಷ್ಟಿದ್ದಾರೆ..!

ಮತ್ತೊಂದು ವಿಚಾರ ಶುಚಿತ್ವಕ್ಕೆ ಸಂಬಂಧಿಸಿದ್ದು. ಅವಕಾಶ ಸಿಕ್ಕರೆ ಆಮಿರ್ ಸ್ನಾನ ಮಾಡದೆಯೇ ಇದ್ದುಬಿಡುತ್ತಾನೆ ಎಂದಿದ್ದರು ಕಿರಣ್ ರಾವ್. ನಾನು ಕ್ಲೀನಾಗೇ ಇರ್ತೀನಿ, ಸ್ನಾನ ಮಾಡೋಕೆ ಇಷ್ಟ ಇಲ್ಲ ಎಂದು ಆಮಿರ್ ಕೂಡಾ ಒಪ್ಪಿದ್ದಾರೆ. ಅಷ್ಟೇ ಅಲ್ಲ, ಹುಲಿ ಸಿಂಗಳು ಎಂದಿಗೂ ಮುಖ ತೊಳೆಯುವುದಿಲ್ಲ ಎಂದು ತಮ್ಮನ್ನು ತಾವೇ ಹೊಗಳಿಕೊಂಡಿದ್ದಾರೆ ಕೂಡಾ. ದಿನಗಟ್ಟಲೆ ಸ್ನಾನವೇ ಮಾಡದ ಗಂಡನ ಜೊತೆ ಕಿರಣ್ ಇಷ್ಟು ವರ್ಷ ಹೇಗೆ ಸಂಸಾರ ಮಾಡಿದ್ದರೋ ಎನ್ನುವ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದೆ.

ಗಂಡ ಹೆಂಡಿಯ ನಡುವೆಯಷ್ಟೇ ಉಳಿಯುವ ಅನೇಕ ಗುಟ್ಟುಗಳು ಹೀಗೆ ವಿಚ್ಛೇದನದಿಂದ ಹೊರಬರುವಂತಾಗುವುದು ನಿಜಕ್ಕೂ ವಿಪರ್ಯಾಸ. ಆದರೆ ಹೊರಜಗತ್ತಿನ ಸಣ್ಣ ವಿಚಾರ ಎನಿಸುವ ಅನೇಕ ಸನ್ನಿವೇಶಗಳು ಆ ದಂಪತಿಯ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿ ಮಾಡಿರುವ ಸಾಧ್ಯತೆ ಇದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: