ಮನೆಕೆಲಸದಾಕೆ ಮೇಲೆ ಹಲ್ಲೆ : ಬಾಲಿವುಡ್ ನಟಿ ವಿರುದ್ಧ ದೂರು ದಾಖಲು

zahir | news18
Updated:July 3, 2018, 9:37 PM IST
ಮನೆಕೆಲಸದಾಕೆ ಮೇಲೆ ಹಲ್ಲೆ : ಬಾಲಿವುಡ್ ನಟಿ ವಿರುದ್ಧ ದೂರು ದಾಖಲು
zahir | news18
Updated: July 3, 2018, 9:37 PM IST
-ನ್ಯೂಸ್ 18 ಕನ್ನಡ

ಬಾಲಿವುಡ್​ನಲ್ಲಿ ಅಲ್ಲೊಂದು ಇಲ್ಲೊಂದು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ಕಿಮ್ ಶರ್ಮಾ ವಿರುದ್ದ ಮನೆಕೆಲಸದಾಕೆ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಕಿಮ್ ಅವರ ಮನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಸ್ತರ್ ಖೇಸ್ ಎಂಬ ಮಹಿಳೆ ಬಾಲಿವುಡ್ ನಟಿ ಸಂಬಳ ನೀಡದೇ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

31 ಪ್ರಾಯದ ಎಸ್ತರ್ ಏಪ್ರಿಲ್ 27ರಿಂದ ಕಿಮ್ ಅವರ ಮನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಬಟ್ಟೆ ಹೊಗೆಯುವಾಗ ತಿಳಿ ಮತ್ತು ಗಾಢ ಬಣ್ಣದ ಬಟ್ಟೆಗಳನ್ನು ಪ್ರತ್ಯೇಕಿಸಲು ಮರೆತಿದ್ದರು. ಇದರಿಂದ ಬೇರೊಂದು ಬಟ್ಟೆಗೆ ಬಣ್ಣಗಳು ಹರಡಿದೆ. ಈ ಒಂದು ಕಾರಣವನ್ನು ಮುಂದಿಟ್ಟು ಕಿಮ್ ಶರ್ಮಾ ನನ್ನ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೊರ ಹಾಕಿದ್ದಾರೆ. ಅಲ್ಲದೆ ಕೆಲಸದ ಸಂಬಳವನ್ನು ನೀಡಿದೇ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಎಸ್ತರ್ ದೂರಿನಲ್ಲಿ ತಿಳಿಸಿದ್ದಾರೆ.

ಕಿಮ್ ಶರ್ಮಾ ವಿರುದ್ಧ ಖಾರ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323 ಮತ್ತು 504 ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಆದರೆ ಈ ಆರೋಪವನ್ನು ನಿರಾಕರಿಸಿರುವ ನಟಿ ಕಿಮ್ ಶರ್ಮಾ, ಮನೆಕೆಲಸದವಳ ನಿರ್ಲಕ್ಷ್ಯದಿಂದಾಗಿ ತನ್ನ 70 ಸಾವಿರ ರೂ. ಬೆಲೆಯ ಬಟ್ಟೆಗಳು ಹಾಳಾಗಿವೆ ಎಂದು ತಿಳಿಸಿದ್ದಾರೆ.

'ಮೊಹಬ್ಬತೇನ್', 'ತುಮ್ಸೆ ಅಚ್ಚಾ ಕೌನ್ ಹೇ' ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿರುವ ಕಿಮ್ ಶರ್ಮಾ ಹೆಸರು ಈ ಹಿಂದೆ ಕ್ರಿಕೆಟರ್ ಯುವರಾಜ್ ಸಿಂಗ್​ ಹೆಸರಿನೊಂದಿಗೆ ತಳುಕು ಹಾಕಿಕೊಂಡಿತ್ತು.
First published:July 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ