Kim Kardashian: ವಿಚಿತ್ರ ಉಡುಪು ಧರಿಸಿ ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿದ ಕಿಮ್ ಕರ್ದಾಶಿಯಾ

Met Gala: ರಿಯಾಲಿಟಿ ಸ್ಟಾರ್ ತನ್ನ ಮಾಜಿ ಪತಿಯನ್ನು  ಫಾಲೋ  ಮಾಡುತ್ತಿರುವಂತೆ ತೋರುತ್ತಿತ್ತು ಏಕೆಂದರೆ ಕಾನ್ಯೆ ವೆಸ್ಟ್‌ನ ಇತ್ತೀಚಿನ ಹಲವು ಫೋಟೊಗಳನ್ನು ಗಮನಿಸಿದರೆ ಅದರಲ್ಲಿ ಅವರು ಧರಿಸಿರುವ  ಬಟ್ಟೆಗಳು ಅವರ ಮುಖವನ್ನು ಸಂಪೂರ್ಣವಾಗಿ ಮುಚ್ಚಿದೆ.  

ಕಿಮ್ ಕಾರ್ದಶಿಯಾನ್

ಕಿಮ್ ಕಾರ್ದಶಿಯಾನ್

  • Share this:
ಯುಸ್ ಮಾಡೆಲ್ (US Model) ಮತ್ತು ಟೆಲಿವಿಶನ್ ತಾರೆ ಕಿಮ್ ಕರ್ದಾಶಿಯಾ(Kim Kardashian) ವಿಚಿತ್ರವಾದ  ಉಡುಪುಗಳನ್ನು ಧರಿಸುವುದು ಹೊಸತಲ್ಲ. ಇತ್ತೀಚೆಗಷ್ಟೇ  ರಿಯಾಲಿಟಿ ಸ್ಟಾರ್ ನ್ಯೂಯಾರ್ಕ್​ನಲ್ಲಿ ಚರ್ಮದ ಸೂಟ್ ಧರಿಸಿ ತನ್ನ ಮುಖಕ್ಕೆ ಚರ್ಮದ ಮುಖವಾಡ ಧರಿಸಿ, ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿದ್ದಾರೆ. ಮಾಧ್ಯಮವೊಂದರ ಪ್ರಕಾರ ಕಿಮ್ ನ್ಯೂಯಾರ್ಕ್​ಗೆ  ತಾಯಿ ಕ್ರಿಸ್ ಜೆನ್ನರ್, ಸಹೋದರಿ ಕೌರ್ಟ್ನಿ ಕಾರ್ಡಶಿಯಾನ್, ಟ್ರಾವಿಸ್ ಬಾರ್ಕರ್ ಮತ್ತು ಕೋರೆ ಗ್ಯಾಂಬಲ್  ಜೊತೆ ಸೆಪ್ಟೆಂಬರ್ 13 ರಂದು ನಡೆಯಲಿರುವ ಮೆಟ್ ಗಾಲಾಗೆ ಬಂದಿದ್ದರು.

ಕಿಮ್‌ನಿಂದ ದೂರವಾಗಿರುವ ಪತಿ ಕಾನ್ಯೆ ವೆಸ್ಟ್ ಒಂದೆರಡು ವರ್ಷಗಳ ಹಿಂದೆ ಇದೇ ರೀತಿಯ  ಬಟ್ಟೆಯನ್ನು ಧರಿಸುವ ಮೂಲಕ ಸುದ್ದಿ ಮಾಡಿದ್ದರು.  ಕಿಮ್ ಎತ್ತರದ ಕಪ್ಪು ಬೂಟುಗಳು  ಧರಿಸಿದ್ದರು ಮತ್ತು ಕೂದಲಿಗೆ ಜುಟ್ಟವನ್ನು ಹಾಕುವ ಮೂಲಕ  ವಿಲಕ್ಷಣ ರೀತಿಯಲ್ಲಿ ಕಾಣಿಸಿಕೊಂಡಿದ್ದರು.

ಅಲ್ಲದೇ ಕಿಮ್ ಆ ಬಾಡಿಸ್ಯೂಟ್ ಅನ್ನು ಕಪ್ಪು  ಬಣ್ಣದ ಚರ್ಮದ ಟ್ರೆಂಚ್ ಕೋಟ್ ಅಡಿಯಲ್ಲಿ ಧರಿಸಿದ್ದರು ಹಾಗೂ  ಎತ್ತರದ ಕಪ್ಪು ಬೂಟುಗಳನ್ನು ಹಾಕಿ  ಗ್ಲೌಸ್ ಹಾಕಿದ್ದರು. ಹಾಗೆಯೇ  ಬಾಲೆನ್ಸಿಯಾಗ ಬ್ಯಾಗ್‌ ಅನ್ನು ಸಹ ಧರಿಸಿದ್ದರು.  ಮುಂಭಾಗದಲ್ಲಿ ಝಿಪ್ಪರ್  ಹೊಂದಿದ್ದ ಚರ್ಮದ ಮಾಸ್ಕ್​ನಿಂದ  ಕಿಮ್ ತನ್ನ ಮುಖವನ್ನು ಸಂಪೂರ್ಣವಾಗಿ ಮುಚ್ಚಿದ್ದರು. ಪೋನಿಟೇಲ್‌ನಲ್ಲಿ ಮಾಡಲಾಗಿರುವುದರಿಂದ ಮಾಡೆಲ್‌ನ ಕೂದಲು ಮಾತ್ರ  ಕಾಣಿಸುತ್ತಿದೆ.

ಇದನ್ನೂ ಓದಿ: ದೀರ್ಘಕಾಲದ ಗೆಳೆಯನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಯುಎಸ್ ಪಾಪ್ ತಾರೆ ಬ್ರಿಟ್ನಿ ಸ್ಪಿಯರ್ಸ್

ರಿಯಾಲಿಟಿ ಸ್ಟಾರ್ ತನ್ನ ಮಾಜಿ ಪತಿಯನ್ನು  ಫಾಲೋ  ಮಾಡುತ್ತಿರುವಂತೆ ತೋರುತ್ತಿತ್ತು ಏಕೆಂದರೆ ಕಾನ್ಯೆ ವೆಸ್ಟ್‌ನ ಇತ್ತೀಚಿನ ಹಲವು ಫೋಟೊಗಳನ್ನು ಗಮನಿಸಿದರೆ ಅದರಲ್ಲಿ ಅವರು ಧರಿಸಿರುವ  ಬಟ್ಟೆಗಳು ಅವರ ಮುಖವನ್ನು ಸಂಪೂರ್ಣವಾಗಿ ಮುಚ್ಚಿದೆ.

ಕರ್ದಾಶಿಯಾ ಇಂತಹ ವಿಶಿಷ್ಟ ಉಡುಪನ್ನು ಧರಿಸುವುದು ಇದೇ ಮೊದಲಲ್ಲ. ಕೇವಲ ಒಂದು ತಿಂಗಳ ಹಿಂದೆ, ಅವರು ಕಾನ್ಯೆ ವೆಸ್ಟ್‌ನ ಮುಂಬರುವ ಆಲ್ಬಂ 'ಡೊಂಡಾ' ಕಾರ್ಯಕ್ರಮಕ್ಕೆ  ವಿಭಿನ್ನವಾದ ಕಪ್ಪು ಬಾಲೆನ್ಸಿಯಾಗಾ ಉಡುಪಿನಲ್ಲಿ ಕಾಣಿಸಿಕೊಂಡಿದ್ದರು. ಈ  ಉಡುಪು ಅಮೇರಿಕನ್ ಹಾರರ್ ಸಿರಿಸ್​  ರಬ್ಬರ್ ವೋ (ಮೆನ್ ) ನಲ್ಲಿನ ಟ್ವಿಟ್ಟರಟಿಗೆ ಪಾತ್ರವನ್ನು ನೆನಪಿಸಿತ್ತು. ಹಾರರ್ ಪಾತ್ರವು ಸಂಪೂರ್ಣ ಕಪ್ಪು ಲ್ಯಾಟೆಕ್ಸ್ ಕ್ಯಾಟ್‌ಸೂಟ್ ಅನ್ನು ಧರಿಸಿತ್ತು.

ಇದನ್ನೂ ಓದಿ: ಮಾದಕ ಡ್ರೆಸ್​ ತೊಟ್ಟು ಸುದ್ದಿಯಾದ ಹಾಲಿವುಡ್​ ನಟಿ ಮೆಗಾನ್​

ಫ್ಯಾಶನ್ ಮಾಡೆಲ್  ಆಗಾಗ ಅವರ ಫ್ಯಾಷನ್​ ವಿಚಾರವಾಗಿ ಟೀಕೆಗಳನ್ನು ಅನುಭವಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಆಕೆಯ ಡೈಲಿ ಮೇಕಪ್ ರೂಟೀನ್ ವಿಡಿಯೋಗಳು  ಹಾಗೂ ಚಿನ್ನದ ಬಳೆಗಳನ್ನು ತೋರಿಸುವ ವಿಡಿಯೋ ಹೆಚ್ಚು ಜನರನ್ನು ಸೆಳೆದಿತ್ತು.
Published by:Sandhya M
First published: